- ಪ್ರತಿಯೊಂದು ಮನುಷ್ಯ ಜೀವಿಯೂ ಸಾವಿಗೆ ಹೆದರೇ ಹೆದರುತ್ತಾರೆ
- ಸಾವಿನ ದಿನಾಂಕವನ್ನು ಯಾರೂ ಕೂಡ ಊಹಿಸಲು ಸಾಧ್ಯವಿಲ್ಲ
- ಸಾಯುವ ಮುನ್ನ ಮಾನವನು ನುಂಗುವ ಸಾಮರ್ಥ್ಯವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತಾನೆ
Death Symptoms: ಪ್ರತಿಯೊಂದು ಮನುಷ್ಯ ಜೀವಿಯೂ ಸಾವಿಗೆ ಹೆದರೇ ಹೆದರುತ್ತಾರೆ. ಸಾವಿನ ದಿನಾಂಕವನ್ನು ಯಾರೂ ಕೂಡ ಊಹಿಸಲು ಸಾಧ್ಯವಿಲ್ಲ. ಯಾರಾದರೂ ಯಾವಾಗ ಮತ್ತು ಹೇಗೆ ಸಾಯುತ್ತಾರೆ? ಊಹಿಸಲು ಅಸಾಧ್ಯವಾದ ವಿಷಯ. ಆದರೆ ಸಾವನ್ನೂ ಕೂಡಾ ಸೂಚಿಸುವ ಕೆಲವು ಲಕ್ಷಣಗಳಿವೆ. ಅಮೆರಿಕದ ಪ್ರಸಿದ್ಧ ಹಾಸ್ಪಿಸ್ ನರ್ಸ್ ಜೂಲಿ ಮೆಕ್‌ಫ್ಯಾಡೆನ್ ಕಳೆದ ಕೆಲವು ವರ್ಷಗಳಿಂದ ಸಾಯುತ್ತಿರುವ ರೋಗಿಗಳನ್ನು ನೋಡಿಕೊಳ್ಳುತ್ತಿದ್ದು, ಮನುಷ್ಯನ ಸಾಯುವ 24 ಗಂಟೆಗಳ ಮೊದಲು ದೇಹವು ತೋರಿಸುವ 3 ಲಕ್ಷಣಗಳನ್ನು ವಿವರಿಸಿದ್ದಾರೆ.
ಯಾವುದೇ ವ್ಯಕ್ತಿಯು ಸಾಯುವ ಮುನ್ನ ಆತನು ನುಂಗುವ ಸಾಮರ್ಥ್ಯವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತಾನೆ. ಇದರಿಂದ ಗಂಟಲು ಮತ್ತು ಬಾಯಿಯಲ್ಲಿ ಲಾಲಾರಸ ಮತ್ತು ಲೋಳೆಯು ಸಂಗ್ರಹವಾಗುತ್ತದೆ. ಇದು ಉಸಿರಾಡುವಾಗ ಉಬ್ಬಸದಂತ ಶಬ್ದವನ್ನು ಮಾಡುತ್ತದೆ. ಈ ಶಬ್ದ ಕೇಳಲು ಅಹಿತಕರವಾಗಿದ್ದರೂ, ರೋಗಿಗೆ ಯಾವುದೇ ರೀತಿಯ ಅನುಭವವಾಗುವುದಿಲ್ಲ ಎಂದು ವಿವರಿಸಿದ್ದಾರೆ.
ಕೆಲವೊಮ್ಮೆ ಉಸಿರಾಟವು ತುಂಬಾ ನಿಧಾನವಾಗಿ, ಅನಿಯಮಿತ ಮತ್ತು ಆಳವಾಗಿ ಉಸಿರಾಟ ಆಗುತ್ತದೆ. ಕೆಲವೊಮ್ಮೆ ಉಸಿರಾಟವು 10-20 ಸೆಕೆಂಡುಗಳ ಕಾಲ ಸಂಪೂರ್ಣವಾಗಿ ನಿಂತುಹೋದಂತೆ ಭಾಸವಾಗುತ್ತದೆ. ನಂತರ ಮೊದಲನೇ ಸ್ಥಿತಿಗೆ ಬರುತ್ತದೆ. ಈ ಪ್ರಕ್ರಿಯೆಯು ದೇಹದ ನೈಸರ್ಗಿಕ ಪ್ರಕ್ರಿಯೆಯಾಗಿದ್ದರೂ, ಜೀವಿಗೆ ಯಾವುದೇ ತೊಂದರೆ ಆಗುವುದಿಲ್ಲ. ವ್ಯಕ್ತಿ ಸಾಯುವ ಕೆಲವು ಗಂಟೆಗಳ ಮೊದಲು ಬಾಯಿ ಮತ್ತು ಗಂಟಲಿನಲ್ಲಿ ಲಾಲಾರಸ ಸಂಗ್ರಹವಾಗುತ್ತದೆ. ಇದರಿಂದ ಉಸಿರಾ ನಡೆಸಲು ಸ್ವಲ್ಪ ಕಷ್ಟವಾಗಬಹುದು.
ಕೆಲವು ರೋಗಿಗಳು ಸಾಯುವ ಕೊನೆಯ ಸಮಯದಲ್ಲಿ ಉಸಿರಾಡಲು ತುಂಬಾ ಕಷ್ಟ ಪಡುತ್ತಾರೆ. ಇದು ನೋಡುಗರಿಗೆ ತುಂಬಾ ದುಃಖಕರವಾದಂತೆ ಭಾಸವಾಗುತ್ತದೆ. ಆದರೆ ವೈದ್ಯಕೀಯ ಸಂಶೋಧನೆಯ ಪ್ರಕಾರ, ಸಾಯುವ ವ್ಯಕ್ತಿಯ ಮೆದುಳು ಇನ್ನು ಆತನ ನೋವನ್ನು ಗ್ರಹಿಸುವುದಿಲ್ಲ. ಇದರರ್ಥ ರೋಗಿಯು ಬದುಕುವುದು ಇನ್ನು ಕೆಲವೇ ಗಂಟೆಗಳು ಮಾತ್ರ ಎಂದು ತಿಳಿಸುತ್ತದೆ. ಈ ಚಿಹ್ನೆಗಳು ರೋಗಿಗಳ ಕುಟುಂಬಗಳಲ್ಲಿ ಭಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.