- ಉತ್ತಮ ನಿದ್ರೆ ಮಾಡಲು 10-3-2-1 ನಿಯಮ
- ಈ ಹೊಸ ನಿಯಮ ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ತಿಳಿಯಿರಿ
ಬೆಂಗಳೂರು: ಇಂದಿನ ವೇಗದ ಜೀವನದಲ್ಲಿ ಉತ್ತಮ ನಿದ್ದೆಗಾಗಿ ಪ್ರತಿದಿನ ಪರಿತಪಿಸುವಂತೆ ಆಗಿದೆ. ಆದಾಗ್ಯೂ ನಿದ್ದೆಯ ಬಗ್ಗೆ ತಜ್ಞರು ಹೊಸ ಹೊಸ ಅನ್ವೇಷಣೆಗಳು ಮಾಡುತ್ತಿದ್ದಾರೆ. ಇನ್ನು ಇತ್ತೀಚಿಗೆ 10-3-2-1 ನಿದ್ರೆಯ ನಿಯಮ ಎಂದು ಕರೆಯಲ್ಪಡುವ ವೈರಲ್ ಸರಳ ಮಾರ್ಗಸೂಚಿ ಜನಪ್ರಿಯತೆಯನ್ನು ಗಳಿಸುತ್ತಿದೆ.
ಹೌದು, 10-3-2-1 ನಿಯಮವು ಸರಳ ಆದರೆ ಪರಿಣಾಮಕಾರಿ ನಿದ್ರೆಯ ತಂತ್ರವಾಗಿದ್ದು, ಅದು ನಿಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಇದು ನಿಜವಾಗಿಯೂ ಕೆಲಸ ಮಾಡುತ್ತದೆಯೇ ಅಥವಾ ಇದರ ಅರ್ಥವೇನು? ತಜ್ಞರು ಹೇಳೊದೇನು? ಎಂಬುದು ನೋಡೋಣ..
ಇದು ಹೇಗೆ ಕಾರ್ಯನಿರ್ವಹಿಸುತ್ತದೆ?
1.ಮಲಗುವ 10 ಗಂಟೆ ಮೊದಲು ಕೆಫೀನ್ ತಪ್ಪಿಸಿ
ಒಂದು ವಿಶ್ಲೇಷಣೆ ಪ್ರಕಾರ, ಕೆಫೀನ್(ಕಾಫಿ, ಚಹಾ) ನಿಮ್ಮ ನಿದ್ರೆಯ ಅವಧಿಯನ್ನು ಕಡಿಮೆ ಮಾಡುತ್ತದೆ. ನಿದ್ರೆಯ ದಕ್ಷತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ನಿದ್ದೆಗೆ ಜಾರಲು ಸಾಕಾಷ್ಟು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ, ನಿಮ್ಮ ದೇಹವು ವಿಶ್ರಾಂತಿ ಪಡೆಯಲು ಮತ್ತು ನಿದ್ರೆಯ ಹಾರ್ಮೋನ್ ಮೆಲಟೋನಿನ್ ಅನ್ನು ಉತ್ಪಾದಿಸಲು ಕೆಫೀನ್(ಕಾಫಿ, ಚಹಾ) ಅನ್ನು ಕಡಿಮೆ ಮಾಡಬೇಕು. ಮಲಗುವ 10 ಗಂಟೆಗಳ ಮೊದಲು ಈ ಕೆಫೀನ್ ತಪ್ಪಿಸಬೇಕು.
2.ಮಲಗುವ 3 ಗಂಟೆ ಮೊದಲು ಮದ್ಯಪಾನವನ್ನು ತಪ್ಪಿಸಿ
ಮಲಗುವ ಮುನ್ನ ಆಲ್ಕೋಹಾಲ್ ಸೇವನೆಯು ನಿದ್ರೆಯ ರಚನೆಯನ್ನು ಅಡ್ಡಿಪಡಿಸುತ್ತದೆ. ಸ್ಲೀಪ್ ಫೌಂಡೇಶನ್ ಪ್ರಕಾರ, ಮಲಗುವ ಸಮಯಕ್ಕೆ ಹತ್ತಿರದಲ್ಲಿ (3 ಗಂಟೆಗಳ ಒಳಗೆ) ದೊಡ್ಡ ಊಟವನ್ನು ಸೇವಿಸುವುದರಿಂದ ನಿದ್ರೆಯ ಅಡಚಣೆ ಹೆಚ್ಚಾಗುತ್ತದೆ. ಅಲ್ಲದೆ, ನಿದ್ರೆಯ ಮೂರು ಗಂಟೆ ಮೊದಲು ಮದ್ಯಪಾನವನ್ನು ತಪ್ಪಿಸಿ.
3.ಮಲಗುವ 2 ಗಂಟೆ ಮೊದಲು ಕೆಲಸಗಳನ್ನು ಮುಗಿಸಿ
ನಿದ್ರೆಗೆ ಮುನ್ನ ಅರಿವಿನ ಪ್ರಚೋದನೆ, ಅಂದರೆ ಮಾನಸಿಕವಾಗಿ ಉತ್ತೇಜಿಸುವ ಚಟುವಟಿಕೆಗಳು, ಚಿಂತೆ ಅಥವಾ ಕೆಲಸವು ನಿದ್ರೆಯ ಪ್ರಾರಂಭದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದಕ್ಕೆ ಬಲವಾದ ಪುರಾವೆಗಳನ್ನು ಹೊಂದಿದೆ. ಒತ್ತಡವನ್ನು ಕಡಿಮೆ ಮಾಡಲು ಕೆಲಸಗಳನ್ನು ಬೇಗ ಮುಗಿಸಿ.
4.ಮಲಗುವ 1 ಗಂಟೆ ಮೊದಲು ಫೋನ್‌ಗಳು, ಟಿವಿಗಳು ಬಳಕೆ ತಪ್ಪಿಸಿ
ಮಲಗುವ ಸಮಯಕ್ಕೆ ಮುಂಚೆ ನೀಲಿ ಬೆಳಕಿಗೆ ಒಡ್ಡಿಕೊಳ್ಳುವುದನ್ನು(ಪರದೆಗಳು, ಫೋನ್‌ಗಳು, ಟಿವಿಗಳು, ಲ್ಯಾಪ್‌ಟಾಪ್‌ಗಳನ್ನು ಬಳಸುವುದು) ತಪ್ಪಿಸುವುದರಿಂದ ಮೆಲಟೋನಿನ್ ಸಿಗ್ನಲಿಂಗ್ ಅನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ ಮತ್ತು ಉತ್ತಮ ನಿದ್ರೆಯ ಆಕ್ರಮಣವನ್ನು ಬೆಂಬಲಿಸುತ್ತದೆ ಎಂದು ಅಧ್ಯಯನಗಳು ಹೇಳುತ್ತದೆ.
ಈ ನಿಯಮವು ವಿಜ್ಞಾನದಿಂದ ಬೆಂಬಲಿತವಾಗಿದೆ, ಈ ಅಭ್ಯಾಸಗಳು ನಿದ್ರೆಯ ಗುಣಮಟ್ಟ, ಅವಧಿ ಮತ್ತು ಸ್ಥಿರತೆಯನ್ನು ಸುಧಾರಿಸಬಹುದು ಎಂದು ಅಧ್ಯಯನಗಳು ತೋರಿಸುತ್ತವೆ. ಉದಾಹರಣೆಗೆ, ಕೆಫೀನ್ ನಿಮ್ಮ ವ್ಯವಸ್ಥೆಯಲ್ಲಿ 12 ಗಂಟೆಗಳವರೆಗೆ ಉಳಿಯಬಹುದು, ಆದರೆ ಭಾರೀ ಊಟ ಮತ್ತು ಆಲ್ಕೋಹಾಲ್ ನಿದ್ರೆಯ ಮಾದರಿಗಳನ್ನು ಅಡ್ಡಿಪಡಿಸಬಹುದು. 10-3-2-1 ನಿಯಮವು ಮಾಂತ್ರಿಕ ಚಿಕಿತ್ಸೆಯಲ್ಲದಿದ್ದರೂ, ಆರೋಗ್ಯಕರ ನಿದ್ರೆಯ ಅಭ್ಯಾಸವನ್ನು ಸ್ಥಾಪಿಸಲು ಇದು ಸಹಾಯಕವಾದ ಚೌಕಟ್ಟಾಗಿದೆ. ಇದನ್ನು ಒಮ್ಮೆ ಪ್ರಯತ್ನಿಸಿ ಮತ್ತು ಅದು ನಿಮಗೆ ಹೇಗೆ ಕೆಲಸ ಮಾಡುತ್ತದೆ(ಏಜೆನ್ಸೀಸ್).