teaspoon of ghee in warm water can unlock these health benefits 
ಆರೋಗ್ಯ

ನಿತ್ಯ ಬೆಚ್ಚಗಿನ ನೀರಿಗೆ ತುಪ್ಪ ಹಾಕಿ ಕುಡಿಯಿರಿ; ಈ ಆರೋಗ್ಯಕರ​ ಲಾಭ ಸಿಗೋದು ಗ್ಯಾರಂಟಿ ..Ghee Benefits

ಮಮತಾ

ಪ್ರಮುಖ ಮುಖ್ಯಾಂಶಗಳು

  • ನಿತ್ಯ ಖಾಲಿ ಹೊಟ್ಟೆಯಲ್ಲಿ ತುಪ್ಪ ಮತ್ತು ಬೆಚ್ಚಗಿನ ನೀರು ಕುಡಿಯೋದ್ರಿಂದ ಏನಾಗುತ್ತದೆ?
  • ತೂಕ ಇಳಿಕೆ, ಮೆಮೋರಿ ಪವರ್​, ಕರುಳಿನ ಆರೋಗ್ಯ ಕಾಪಾಡಲು ಸಹಕಾರಿ.
  • ತುಪ್ಪವು ಆಯುರ್ವೇದ, ಧಾರ್ಮಿಕ ಮತ್ತು ಅಡುಗೆಗೆ ಬಳಸಲಾಗುತ್ತದೆ

teaspoon of ghee in warm water can unlock these health benefits: 

ಅನಾದಿ ಕಾಲದಿಂದಲೂ ತುಪ್ಪವೊಂದು ಆಯುರ್ವೇದಿಕ್​ ಮದ್ದು..ಭಾರತೀಯ ಅಡುಗೆ, ಪೂಜೆಗಳಲ್ಲಿ ಪ್ರಮುಖ ಸ್ಥಾನವನ್ನು ಇದು ಪಡೆದುಕೊಂಡಿದೆ. ತುಪ್ಪವು ಜೀವ ಸತ್ವ, ರೋಗನಿರೋಧಕ ಮತ್ತು ಆರೋಗ್ಯಕರ ಕೊಬ್ಬಿನಿಂದಾಗಿ  ಕೂಡಿದೆ. ತುಪ್ಪದಲ್ಲಿ ಪರ್ಓಟೀನ್​ ಮತ್ತು ಕಾರ್ಬೋಹೈಡ್ರೇಟ್ಸ್​ ಇರೋದಿಲ್ಲ.  ತುಪ್ಪದಿಂದ ಸಿಗುವ ಲಾಭವನ್ನು ನಿಮ್ಮದಾಗಿಸಿಕೊಳ್ಳಲು ಅದನ್ನು ಮಿತವಾಗಿ ಹಿತವಾಗಿ ಸೇವನೆ ಮಾಡಬೇಕು. 

ಬೆಚ್ಚಗಿನ ನೀರು ಕಾಯಿಸಿ, ಅದಕ್ಕೆ ಒಂದು ಚಮಷ ತುಪ್ಪ ಹಾಕಿ  ನಿತ್ಯ ನೀರು ಕುಡಿಯುವುದರಿಂದ ಇದು ನಿಮ್ಮ ಜೀರ್ಣಕ್ರಿಯೆಯನ್ನು ಹಾಗೂ   ರೋಗನಿರೋಧಕ ಶಕ್ತಿಯನ್ನು ಹಾಗೂ ಹೃದಯ, ಮೆದುಳಿನ ಆರೋಗ್ಯವನ್ನು  ಪೋಷಣೆ ಮಾಡಲು ಅದ್ಭುತ ಮಾರ್ಗವಾಗಿದೆ. ನಿತ್ಯ ಖಾಲಿ ಹೊಟ್ಟೆಯಲ್ಲಿ 200 ಮಿ.ಲೀಟರ್​ ನೀರಿಗೆ ಒಂದು ಚಮಚ  ತುಪ್ಪ  ಸೇರಿಸಿ ಬೆರಸಿ ನಿತ್ಯ ಕುಡಿಯಿರಿ. ಇದರಿಂದಾಗುವ ಲಾಭದ ಬಗ್ಗೆ ಮಾಹಿತಿ ಇಲ್ಲಿದೆ. 

ಕರುಳಿನ ಚಲನೆಗೆ ಸಹಕಾರಿ

ನಿತ್ಯ ತುಪ್ಪ ಬೆರೆಸಿದ ನೀರು ಕುಡಿಯುವುದು ನಿಮ್ಮ ಕರುಳಿನ ಚಲನೆಗೆ ಸಹಾಯ ಮಾಡುತ್ತದೆ. ಇದರಲ್ಲಿರುವ ಬ್ಯುಟರಿಕ್​ ಆಮ್ಲ ನಿಮ್ಮ ಮಲವನ್ನು ಮೃದುಗೊಳಿಸುತ್ತದೆ. ಹಾಗೂ ಮಲಬದ್ಧತೆಗೆ ಸಂಬಂಧಿಸಿದ ಸಮಸ್ಯೆಯಿಂದ ದೂರ ಇರಲು ಈ ನೀರು ಸಹಕಾರಿ.

ತೂಕ ಇಳಿಕೆಗೆ ಮದ್ದು

ತುಪ್ಪ ಬೊಜ್ಜು ಹೆಚ್ಚಿಸುವ ಕೊಬ್ಬು ಎಂದು ಹೇಳಲಾಗುತ್ತದೆ. ಆದರೆ, ಸಮಿತ ಪ್ರಮಾಣದಲ್ಲಿ ಇದರ ಸೇವನೆ ಮಾಡುವುದರಿಂದ  ಹೊಟ್ಟೆ ತುಂಬಿದಂತೆ ಭಾಸವಾಗಿ ಅನಗತ್ಯ ಆಹಾರ ಸೇವನೆ ಮಾಡೋದನ್ನು ತಪ್ಪಿಸುತ್ತದೆ.  ತುಪ್ಪವು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ ಇದರಲ್ಲಿರುವ ಲಿನೋಲಿಕ್ ಆಮ್ ಮೊಂಡುತನದ ಕೊಬ್ಬನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. 

ಮೆಮೋರಿ ಪವರ್ ಹೆಚ್ಚಿಸುತ್ತದೆ

ಮೇಧ್ಯ ರಸಾಯನ ಎಂದು ಪರಿಗಣಿಸಲಾಗುವ ಹಸುವಿನ ತುಪ್ಪ ವಯಸ್ಕರು ಮತ್ತು ಮಕ್ಕಳಲ್ಲಿ ಮಾನಸಿಕ ಜಾಗರೂಕತೆ ಮತ್ತು ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಮೆದುಳಿಗೆ ಟಾನಿಕ್ ಇದ್ದಂತೆ. ಒತ್ತಡವನ್ನು ಶಾಂತಗೊಳಿಸುವಂತೆ ಮಾಡುತ್ತದೆ. ಒತ್ತಡ ಹೆಚ್ಚಾದಾಗ ಕಾಡುವ ಆತಂಕ ಹಾಗೂ ಮೆದುಳಿನ ಅಸ್ವಸ್ಥತೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. 

ಚರ್ಮದ ಹೊಳಪು ಹೆಚ್ಚಿಸುತ್ತದೆ

ತುಪ್ಪವು ಚರ್ಮವನ್ನು  ಹೈಡ್ರೈಟ್​ ಆಗಿಡಲು ಸಹಾಯ ಮಾಡುತ್ತದೆ. ಆ ಮೂಲಕ  ಅದರ ನೈಸರ್ಗಿಕ ಹೊಳಪನ್ನು ಹೆಚ್ಚಿಸುತ್ತದೆ.  ಕೊಬ್ಬಿನಾಮ್ಲಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಇದು ಚರ್ಮವನ್ನು ಪೋಷಿಸಲು ಮತ್ತು ರಕ್ಷಿಸಲು ಸಹಕಾರಿ, (ಏಜೆನ್ಸೀಸ್).