ಸಾಂದರ್ಭಿಕ ಚಿತ್ರ 
ಆರೋಗ್ಯ

ಸಕ್ಕರೆ ಕೇವಲ ರುಚಿಯಲ್ಲ, ಅದು ಮೆದುಳನ್ನು ದಾಸನನ್ನಾಗಿಸುವ ಒಂದು ವ್ಯಸನ! ಹೇಗಂತೀರಾ? ಇಲ್ಲಿದೆ ಸಂಪೂರ್ಣ ಮಾಹಿತಿ Sugar intake

ಪ್ರಮುಖ ಮುಖ್ಯಾಂಶಗಳು

  • ಪ್ರತಿನಿತ್ಯ ತಿನ್ನುವಂತಹ ಸಿಹಿತಿಂಡಿಗಳು, ಪಾನೀಯಗಳಲ್ಲಿ ಹೆಚ್ಚಾಗಿ ಸಕ್ಕರೆ ಅಂಶ ಇರುವುದನ್ನು ನಾವು ನೋಡಿರಬಹುದು
  • ಸಕ್ಕರೆ ಮೆದುಳಿನಲ್ಲಿ ಸಂತೋಷವನ್ನು ತರುವ ನರಪ್ರೇಕ್ಷಕ ಡೋಪಮೈನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ
  • ಹೆಚ್ಚಿನ ಸಕ್ಕರೆಯನ್ನು ಸೇವಿಸುವುದರಿಂದ ಅದು ಸ್ಮರಣಶಕ್ತಿ, ಕಲಿಕೆ ಮತ್ತು ಭಾವನಾತ್ಮಕ ನಿಯಂತ್ರಣದ ಮೇಲೆ ಪ್ರಭಾವ ಬೀರುತ್ತದೆ
Sugar intake: ನಾವು ಪ್ರತಿನಿತ್ಯ ತಿನ್ನುವಂತಹ ಸಿಹಿತಿಂಡಿಗಳು, ಪಾನೀಯಗಳು, ಪ್ಯಾಕ್ ಮಾಡಿದ ಆಹಾರ ಪದಾರ್ಥಗಳಲ್ಲಿ ಹೆಚ್ಚಾಗಿ ಸಕ್ಕರೆ ಅಂಶ ಇರುವುದನ್ನು ನಾವು ನೋಡಿರಬಹುದು. ಇದು ಕ್ಷಣಿಕವಾಗಿ ಹೊಟ್ಟೆಯನ್ನು ತುಂಬಿದ ಭಾವನೆಯನ್ನು ನೀಡಿದರು ಕೂಡಾ ಕಾಲಾನಂತರದಲ್ಲಿ ಈ ಆಹಾರಗಳು ಮೆದುಳಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ ಎಂದು ತಜ್ಙರು ಎಚ್ಚರಿಸಿದ್ದಾರೆ.
ಸಂಶೋಧನೆಗಳ ಪ್ರಕಾರ, ಸಕ್ಕರೆ ಮೆದುಳಿನಲ್ಲಿ  ಸಂತೋಷವನ್ನು ತರುವ ನರಪ್ರೇಕ್ಷಕ ಡೋಪಮೈನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಆದಾಗ್ಯೂ, ಈ ತಾತ್ಕಾಲಿಕ ಆನಂದದಾಯಕ ಅನುಭವವು  ಜನರನ್ನು ಇನ್ನಷ್ಟು ಸಕ್ಕರೆ ಪದಾರ್ಥವನ್ನು ಸೇವಿಸುವಂತೆ ಮಾಡುತ್ತದೆ. ಇದರಿಂದ ಈ ಆಹಾರದ ನಿಯಂತ್ರಣ ಮಾಡಲು ಸ್ವಲ್ಪ ಕಷ್ಟಕರವೆನಿಸಬಹುದು. 

ಸಕ್ಕರೆ ಮೆದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ

ಜನರು ಹೆಚ್ಚಿನ ಸಕ್ಕರೆಯನ್ನು ಸೇವಿಸುವುದರಿಂದ ಅದು ಸ್ಮರಣಶಕ್ತಿ, ಕಲಿಕೆ ಮತ್ತು ಭಾವನಾತ್ಮಕ ನಿಯಂತ್ರಣದಂತಹ ಪ್ರಮುಖ ಮೆದುಳಿನ ಕಾರ್ಯಗಳ ಮೇಲೆ ತೊಂದರೆ ಉಂಟು ಮಾಡುತ್ತದೆ. ಆದಾಗ್ಯೂ, ಮೆದುಳಿನ 'ಪ್ರತಿಫಲ ಕೇಂದ್ರ'ಗಳ ಮೇಲಿನ ಅತಿಯಾದ ಒತ್ತಡವು ಏಕಾಗ್ರತೆಯನ್ನು ಹಾನಿಗೊಳಿಸುವುದರ ಜೊತೆಗೆ ಅರಿವಿನ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ಮೆದುಳಿನ ನರಗಳ ಕಾರ್ಯವು ನಿಧಾನಗೊಳ್ಳುತ್ತದೆ ಮತ್ತು ನೆನಪಿನ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ.

ಸಕ್ಕರೆ ತಿನ್ನುವುದರಿಂದ ಸೋಮಾರಿಯಾಗುವುದು ಏಕೆ?

ನಾವು ಸಕ್ಕರೆ ಅಂಶವಿರುವ ಆಹಾರವನ್ನು ಹೆಚ್ಚಾಗಿ ತಿಂದಾಗ, ರಕ್ತದಲ್ಲಿನ ಸಕ್ಕರೆ ಮಟ್ಟವು ಹಠಾತ್ತಾಗಿ ಏರುತ್ತದೆ. ಅದನ್ನು ನಿಯಂತ್ರಿಸಲು ನಮ್ಮ ದೇಹವು ಅತಿಯಾದ ಇನ್ಸುಲಿನ್ ಅನ್ನು ಬಿಡುಗಡೆ ಮಾಡುತ್ತದೆ. ಈ ಇನ್ಸುಲಿನ್ ರಕ್ತದಲ್ಲಿನ ಸಕ್ಕರೆಯನ್ನು ಅತಿ ವೇಗವಾಗಿ ಕಡಿಮೆ ಮಾಡುತ್ತದೆ. ಸಕ್ಕರೆ ಮಟ್ಟ ಒಮ್ಮೆಲೇ ಕುಸಿದಾಗ (Crash), ಮೆದುಳಿಗೆ ಶಕ್ತಿಯ ಕೊರತೆ ಉಂಟಾಗಿ ನಿದ್ರೆ ಮತ್ತು ಸೋಮಾರಿತನವನ್ನು ಅನುಭವಿಸಬೇಕಾಗುತ್ತದೆ.

ಮೆದುಳಿನ ಯಾವ ಭಾಗಗಳು ಪರಿಣಾಮ ಬೀರುತ್ತವೆ?

ವೈಶಾಲಿಯ ಮ್ಯಾಕ್ಸ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಕ ಡಾ. ಗೌರವ್ ಬಾತ್ರಾ ಅವರ ಪ್ರಕಾರ, ಸಕ್ಕರೆಯು ಪ್ರಿಫ್ರಂಟಲ್ ಕಾರ್ಟೆಕ್ಸ್ ಮೇಲೆ ಪರಿಣಾಮ ಬೀರುತ್ತದೆ, ಇದು ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಗಮನ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಜೊತೆಗೆ 'ಹಿಪೊಕ್ಯಾಂಪಸ್' ಸ್ಮರಣಶಕ್ತಿ ಮತ್ತು ಕಲಿಕೆಗೆ ಸಹಾಯ ಮಾಡುತ್ತದೆ. 
ಆದಾಗ್ಯೂ, ನೀವೇನಾದರೂ, ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಸೇರಿಸುವುದರಿಂದ ಮೆದುಳಿನ ಕಾರ್ಯ ಕುಂಠಿತಗೊಳ್ಳುತ್ತದೆ. ಮತ್ತು ನೆನಪಿನ ಶಕ್ತಿಯನ್ನು ಕಡಿಮೆ ಮಾಡಲು ಪ್ರಾರಂಭಿಸುತ್ತದೆ.

ದೀರ್ಘಕಾಲೀನ ಮೆದುಳಿನ ಆರೋಗ್ಯ

ತಜ್ಞರು ಹೇಳುವಂತೆ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿಲ್ಲದಿದ್ದರೆ ಮೆದುಳಿನಲ್ಲಿರುವ ರಕ್ತನಾಳಗಳು ಮತ್ತು ನರ ಕೋಶಗಳಿಗೆ ಹಾನಿಯಾಗುತ್ತದೆ. ಸಮಯ ಕಳೆದಂತೆ ಇದು  ಪಾರ್ಶ್ವವಾಯು, ಬುದ್ಧಿಮಾಂದ್ಯತೆ ಮತ್ತು ಆಲ್ಝೈಮರ್ ಕಾಯಿಲೆಯಂತಹ ಗಂಭೀರ ಸಮಸ್ಯೆಗಳಿಗೆ ತುತ್ತಾಗಬೇಕಾಗುತ್ತದೆ. 
ಸಂಕ್ಷಿಪ್ತವಾಗಿ ಹೇಳುವುದಾದರೆ, ಆರೋಗ್ಯಕರ ಆಹಾರ ಆಯ್ಕೆಗಳನ್ನು ಮಾಡುವುದರಿಂದ ಮೆದುಳಿನ ಆರೋಗ್ಯವನ್ನು ರಕ್ಷಿಸಲು ಮತ್ತು ಭವಿಷ್ಯದ ನರವೈಜ್ಞಾನಿಕ ಅಪಾಯಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ (ಏಜೆನ್ಸೀಸ್). 
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.