Summer Health: ಬೇಸಿಗೆಯ ಬಿಸಿಲು ಶುರುವಾಗುತ್ತಿದ್ದಂತೆ ದೇಹವನ್ನು ಹೈಡ್ರೇಟ್ ಆಗಿಡುವುದು ಬಹಳ ದೊಡ್ಡ ಸವಾಲಾಗಿ ನಿರ್ಮಾಣವಾಗುತ್ತದೆ. ಆದಾಗ್ಯೂ, ಅಂಗಡಿಗಳಲ್ಲಿ ಸಿಗುವ ತಂಪು ಪಾನೀಯಗಳಲ್ಲಿ ಹೆಚ್ಚಾಗಿ ಸಕ್ಕರೆ ಮತ್ತು ಸಂರಕ್ಷಕಗಳನ್ನು ಹೊಂದಿರುತ್ತವೆ. ಇದು ಬಾಯಾರಿಕೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಆದರೆ ಹಣ್ಣುಗಳು, ಗಿಡಮೂಲಿಕೆಗಳು ಮತ್ತು ಮಸಾಲೆಗಳನ್ನು ಬಳಸಿ ಮನೆಯಲ್ಲಿಯೇ ತಯಾರಿಸಬಹುದಾದ ಪಾನೀಯಗಳು ದೇಹದ ಉಷ್ಟಣತೆಯನ್ನು ನಿಯಂತ್ರಿಸುವುದರ ಜೊತೆಗೆ ದೇಹಕ್ಕೆ ಉಲ್ಲಾಸವನ್ನೂ ನೀಡುತ್ತವೆ. ಹಾಗಾಗಿ ಬೇಸಿಗೆಯ ಶಾಖದಿಂದ ಪಾರಾಗಲು ನೀವೇನಾದರೂ ಯೋಚಿಸುತ್ತಿದ್ದರೆ, ಈ ಪಾನೀಯಗಳನ್ನು ಇಂದೇ ಮಾಡಿ ಕುಡಿಯಿರಿ.
ಅಪ್ಪೆ ಹುಳಿ
ಮಾವಿನ ಕಾಯಿಯಿಂದ ತಯಾರಿಸಿದ ಈ ಪಾನೀಯವು ಎಲೆಕ್ಟ್ರೋಲೈಟ್ಗಳಿಂದ ಸಮೃದ್ಧವಾಗಿದೆ. ಬೇಸಿಗೆಯಲ್ಲಿ ಇದನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಪಡೆಯಬಹುದು. ಮಾವಿನಕಾಯಿಯನ್ನು ಕುದಿಸಿ ಅವುಗಳ ತಿರುಳನ್ನು ಹೊರತೆಗೆಯಿರಿ. ಇದಕ್ಕೆ ನೀರು, ಹುರಿದ ಜೀರಿಗೆ ಪುಡಿ, ಕಪ್ಪು ಉಪ್ಪು ಮತ್ತು ಸ್ವಲ್ಪ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ತಣ್ಣಗಾದ ನಂತರ ಸೇವಿಸಿರಿ.
ಮಸಾಲ ಮಜ್ಜಿಗೆ
ಇದೊಂದು ಭಾರತೀಯ ಮನೆಗಳಲ್ಲಿ ಬಳಸುವ ಪಾನೀಯವಾಗಿದೆ. ಮೊಸರನ್ನು ನೀರಿನೊಂದಿಗೆ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ ಅದಕ್ಕೆ ಉಪ್ಪು, ಹುರಿದ ಜೀರಿಗೆ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. ಕುಡಿಯಿರಿ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ನಿಂಬೆ ಪಾನಕ
ನಿಂಬೆ ಪಾನಕವು ವಿಟಮಿನ್ ಸಿ ಯಿಂದ ಸಮೃದ್ಧವಾಗಿದ್ದು, ಒಂದು ತ್ವರಿತ ಪಾನೀಯವಾಗಿದೆ. ತಾಜಾ ನಿಂಬೆ ರಸಕ್ಕೆ ನೀರು, ಸಕ್ಕರೆ ಮತ್ತು ಒಂದು ಚಿಟಿಕೆ ಉಪ್ಪು ಸೇರಿಸಿ. ಇದಕ್ಕೆ ಪುದೀನ ಎಲೆಗಳು ಅಥವಾ ಕೊತ್ತಂಬರಿ ಸೊಪ್ಪು ಸೇರಿಸಿ ಕುಡಿಯುವುದರಿಂದ ದೇಹವನ್ನು ಹೈಡ್ರೇಟ್ ಆಗಿರಿಸಬಹುದು.
ತೆಂಗಿನ ನೀರಿನ ಮಾಕ್‌ಟೇಲ್
ಖನಿಜಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ಬೇಸಿಗೆಗೆ ಸೂಕ್ತವಾದ ಪಾನೀಯವಾಗಿದೆ. ಹಾಗಾಗಿ ತೆಂಗಿನ ನೀರಿಗೆ ಸ್ವಲ್ಪ ನಿಂಬೆ ರಸ ಮತ್ತು ಪುದೀನ ಎಲೆಗಳನ್ನು ಸೇರಿಸಿ ಐಸ್ ಬಳಸಿ ಸೇವಿಸುವುದರಿಂದ ಬೇಸಿಗೆಯಲ್ಲಿ ಉತ್ತಮ ಪ್ರಯೋಜನವನ್ನು ಪಡೆಯಬಹುದು.
ಕಲ್ಲಂಗಡಿ ಜ್ಯೂಸ್
ಕಲ್ಲಂಗಡಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಇರುವುದರಿಂದ ಇದು ದೇಹವನ್ನು ಹೈಡ್ರೇಟ್ ಮಾಡುತ್ತದೆ. ಹಾಗಾಗಿ ತಾಜಾ ಕಲ್ಲಂಗಡಿಯನ್ನು ತುಂಡು ಮಾಡಿ ಮಿಕ್ಸಿ ಮಾಡಿ ಸೋಸಿ. ಅದಕ್ಕೆ ಪುದೀನ ಎಲೆಗಳು ಅಥವಾ ಸ್ವಲ್ಪ ಕಪ್ಪು ಉಪ್ಪು ಸೇರಿಸಿ ತಣ್ಣಗಿರುವಾಗಲೇ ಸೇವಿಸಿರಿ. ಇದರಿಂದ ಉತ್ತಮ ಆರೋಗ್ಯ ಪ್ರಯೋಜನವನ್ನು ಪಡೆಯಬಹುದು (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.