ಚಿತ್ರ Instagram 
ಆರೋಗ್ಯ

ತಮನ್ನಾ ಫಿಟ್‌ನೆಸ್ ಸೀಕ್ರೆಟ್ ಔಟ್: ತೂಕ ಇಳಿಸುವವರು ಈ ಒಂದು ಆಹಾರವನ್ನು ಮುಟ್ಟಲೇಬೇಡಿ ಎಂದ ಸಿದ್ಧಾರ್ಥ್ ಸಿಂಗ್! Weight Loss

ಪ್ರಮುಖ ಮುಖ್ಯಾಂಶಗಳು

  • ಸೆಲೆಬ್ರಿಟಿ ಫಿಟ್‌ನೆಸ್ ತರಬೇತುದಾರ ಸಿದ್ಧಾರ್ಥ್ ಸಿಂಗ್ ತಮನ್ನಾ ಭಾಟೀಯಾ ಸೇರಿದಂತೆ ಇತರ ಪ್ರಸಿದ್ಧ ವ್ಯಕ್ತಿಗಳಿಗೆ ತರಬೇತಿ ನೀಡಿದ್ದಾರೆ
  • ಸುಸ್ಥಿರ ಕೊಬ್ಬು ನಷ್ಟದ ಮೇಲೆ ಹೆಚ್ಚಿನ ತೀವ್ರತೆಯ ವ್ಯಾಯಾಮ ಅವಧಿಗಳಿಗೆ ಹೆಸರುವಾಸಿದ ಸಿದ್ಧಾರ್ಥ್
  • ಫ್ರೆಂಚ್​ ಫ್ರೈ ನಿಮ್ಮ ತೂಕ ಪ್ರಯಾಣಕ್ಕೆ ಅಡ್ಡಿಯಾಗುವುದರ ಜೊತೆಗೆ ಆರೋಗ್ಯಕ್ಕೂ ಹಾನಿಕಾರಕ
Weight Loss: ಸೆಲೆಬ್ರಿಟಿ ಫಿಟ್‌ನೆಸ್ ತರಬೇತುದಾರ ಸಿದ್ಧಾರ್ಥ್ ಸಿಂಗ್ ತಮನ್ನಾ ಭಾಟೀಯಾ ಸೇರಿದಂತೆ ಇತರ ಪ್ರಸಿದ್ಧ ವ್ಯಕ್ತಿಗಳಿಗೆ ತರಬೇತಿ ನೀಡಿದ್ದು, ತೂಕ ಇಳಿಸುವ ಪ್ರಯಾಣಕ್ಕೆ ಉತ್ತಮವಾದ ಒಳನೋಟಗಳನ್ನು ಹಂಚಿಕೊಂಡಿದ್ದಾರೆ. ಸುಸ್ಥಿರ ಕೊಬ್ಬು ನಷ್ಟದ ಮೇಲೆ ಹೆಚ್ಚಿನ ತೀವ್ರತೆಯ ವ್ಯಾಯಾಮ ಅವಧಿಗಳಿಗೆ ಹೆಸರುವಾಸಿಯಾದ ಇವರು ಯಾವಾಗಲೂ ಎಚ್ಚರಿಕೆಯಿಂದ ಆಹಾರ ಸೇವಿಸುವುದು ಮತ್ತು ಪೋಷಣೆಗಯ ಬಗ್ಗೆ ಸುಳಿವುಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.
ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ ವಿಡಿಯೋವೊಂದರಲ್ಲಿ ತೂಕ ಇಳಿಸಿಕೊಳ್ಳಲು ನೀವೇನಾದರೂ ಪ್ರಯತ್ನಿಸುತ್ತಿದ್ದರೆ, ಜೀವನದಿಂದ ಈ ಒಂದು ಆಹಾರವನ್ನು ದೂರ ಮಾಡಬೇಕೆಂದು ತಿಳಿಸಿದ್ದಾರೆ.

ಒಂದೇ ಕೆಟ್ಟ ಆಹಾರ

ವಿಡಿಯೋದಲ್ಲಿ ಒಂದು ಗ್ಲಾಸ್​ನಲ್ಲಿ ಫ್ರೆಂಚ್​ ಫ್ರೈಸ್​ ತುಂಬಿರುವುದನ್ನು ತೋರಿಸುತ್ತಾ, ನೀವು ತೂಕ ಇಳಿಸಿಕೊಳ್ಳಲು ಏನಾದರೂ ಬಯಸಿದರೆ, ನಿಮ್ಮ ಫಿಟ್​ನೆಸ್​ ಪ್ರಯಾಣದಲ್ಲಿ ಹೊಂದಬಹುದಾದ ಏಕೈಕ ಆಹಾರ ಈ ಬಾಕ್ಸ್​ ನಲ್ಲಿದೆ. ಆಲೂಗಡ್ಡೆಯನ್ನು ಸೀಳಾಗಿ ಕತ್ತರಿಸಿ, ಒಣಗಿಸಿ ಅದನ್ನು ಗೋಲ್ಡನ್​ ಬಣ್ಣವಾಗುವವರೆಗೂ ಆಳವಾಗಿ ಕರಿದ ಫ್ರೆಂಚ್ ಫ್ರೈಗಳು ನಿಸ್ಸಂದೇಹವಾಗಿ ಅತ್ಯಂತ ಜನಪ್ರಿಯ ತಿಂಡಿ ವಸ್ತುಗಳಲ್ಲಿ ಸೇರಿವೆ. ಈ ಆಹಾರ ನಿಮ್ಮ ತೂಕ ಪ್ರಯಾಣಕ್ಕೆ ಅಡ್ಡಿಯಾಗುವುದರ ಜೊತೆಗೆ ಆರೋಗ್ಯಕ್ಕೂ ಹಾನಿಕಾರಕ ಎಂದು ಹೇಳಿದ್ದಾರೆ.
ಮುಂದುವರೆಸುತ್ತಾ, ಫ್ರೆಂಚ್​ ಫ್ರೈನಲ್ಲಿನ ಎಣ್ಣೆಯ ಸ್ಪಾಂಜ್​ ಪರಿಣಾಮವನ್ನು ವಿವರಿಸುತ್ತಾ, ಇದು ಎಲ್ಲಾ ಎಣ್ಣೆಯನ್ನು ಹೀರಿಕೊಂಡು ಸ್ಪಂಜಿನಂತಿದೆ. ಅದನ್ನು ನೀವು ಸೇವಿಸಿದಾಗ ಪೂರ್ತಿ ಎಣ್ಣೆ ನಿಮ್ಮ ದೇಹದೊಳಗೆ ಸೇರುತ್ತದೆ. ಇದನ್ನು ಹೈಪರ್‌ಪೇಲಟಬಲ್ ಎಂದು ಕರೆಯುತ್ತಾರೆ ಎಂದಿದ್ದಾರೆ.
ಇವುಗಳಲ್ಲಿ ಉಪ್ಪು, ಕೊಬ್ಬು (ಎಣ್ಣೆ) ಮತ್ತು ಕಾರ್ಬೋಹೈಡ್ರೇಟ್‌ಗಳ ಮಿಶ್ರಣವು ಮಿದುಳಿನಲ್ಲಿ 'ಡೋಪಮೈನ್' ಎಂಬ ರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ. ಇದರಿಂದಾಗಿ ನಾವು ಒಂದು ಫ್ರೈ ತಿಂದರೆ ಸಾಲದು, 50 ತಿನ್ನಬೇಕು ಎನಿಸುತ್ತದೆ. ಇವುಗಳನ್ನು ತಿನ್ನುವಾಗ ನಮಗೆ ಹೊಟ್ಟೆ ತುಂಬಿದ ಅನುಭವ ತಕ್ಷಣಕ್ಕೆ ಆಗುವುದಿಲ್ಲ. ಆದರೆ, ದೇಹಕ್ಕೆ ಅವಶ್ಯಕತೆಗಿಂತ ಹೆಚ್ಚಿನ ಕ್ಯಾಲೊರಿಗಳು ಸೇರ್ಪಡೆಯಾಗುತ್ತವೆ ಎಂದು ವಿವರಿಸಿದ್ದಾರೆ.
ಸಿದ್ಧಾರ್ಥ್ ಫ್ರೆಂಚ್ ಫ್ರೈಸ್‌ಗಳನ್ನು ಕೇವಲ ಅನಾರೋಗ್ಯಕರ ಎಂದು ಕರೆಯದೆ, ಅವುಗಳನ್ನು ಒಂದು "ವಿಷವರ್ತುಲ" ಎಂದು ಕರೆದಿದ್ದಾರೆ. ನೀವೇನಾದರೂ ಆರೋಗ್ಯಕರ ಜೀವನವನ್ನು ನಡೆಸಬೇಕೆಂದರೆ, ಇಂದಿನಿಂದಲೇ ಫ್ರೆಂಚ್​ ಫ್ರೈಗಳನ್ನು ತಿನ್ನುವುದನ್ನು ನಿಲ್ಲಿಸಿ. ಇವುಗಳಿಂದ ದೇಹಕ್ಕೆ ಸ್ವಲ್ಪವೂ ಪ್ರಯೋಜನ ಇರುವುದಿಲ್ಲ. ಹಾಗಾಗಿ ಈ ರೀಲ್ಸ್​ ಅನ್ನು ಫ್ರೆಂಚ್ ಫ್ರೈಸ್ ಇಷ್ಟಪಡುವಂತಹ ವ್ಯಕ್ತಿಗೆ ಕಳುಹಿಸಿ ಎಂದಿದ್ದಾರೆ.
ತರಬೇತುದಾರ, ಫ್ರೆಂಚ್ ಫ್ರೈಗಳನ್ನು "ಹೈಪರ್-ಟೇಟಬಲ್" ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಆದಾಗ್ಯೂ, ಇದನ್ನು ಅತಿಯಾಗಿ ತಿನ್ನುವುದರಿಂದ ದೇಹದಲ್ಲಿ ಕೊಬ್ಬು ಜಾಸ್ತಿಯಾಗುತ್ತದೆ. ತೂಕ ಇಳಿಸಿಕೊಳ್ಳಲು ನಿರ್ಧರಿಸಿದರೆ ಇದನ್ನು ಸಂಪೂರ್ಣವಾಗಿ ನಿಲ್ಲಿಸಿ ಎಂದು ಹೇಳಿದ್ದಾರೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.