Child Sleep Safety: ಭಾರತದಲ್ಲಿ ಶೀತಮಾನ ಗಾಳಿಯು ತನ್ನದೇ ಆದ ಪಥದಲ್ಲಿ ಸಾಗುತ್ತಿದೆ. ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಲೇ ಇದಿಯೇ ಹೊರತು ಕಡಿಮೆ ಅಂತೂ ಆಗಿಲ್ಲ. ಈ ಸಮಯದಲ್ಲಿ ಪೋಷಕರಿಗೆ ತಮ್ಮ ಮಕ್ಕಳನ್ನು ಚಳಿಯಿಂದ ರಕ್ಷಿಸಿಕೊಳ್ಳುವುದು ದೊಡ್ಡ ಸವಾಲಾಗಿ ಮಾರ್ಪಟ್ಟಿರುತ್ತದೆ. ಇದರಿಂದ ಅವರು ಮಕ್ಕಳನ್ನು ಕಾಳಜಿ ವಹಿಸುವ ಸಲುವಾಗಿ ತಲೆಯಿಂದ ಕಾಲಿನವರೆಗೆ ಮುಚ್ಚಿಕೊಳ್ಳುವಂತೆ ಸಲಹೆ ನೀಡುತ್ತಾರೆ. ಈ ರೀತಿ ಮಾಡುವುದು ಸರಿಯೇ? ಹಾಗಿದ್ದರೆ, ಈ ಬಗ್ಗೆ ವೈದ್ಯರ ಸೂಚನೆಯೇನು...
ನಿಮ್ಮ ಮಗು ಮಲಗುವಾಗ ಟೋಪಿ ಧರಿಸಬೇಕೇ?
ಮಕ್ಕಳ ವೈದ್ಯರ ಪ್ರಕಾರ, ಮಲಗುವಾಗ ಟೋಪಿ ಧರಿಸುವುದನ್ನು ಸಾಮಾನ್ಯವಾಗಿ ಕೆಟ್ಟ ಅಭ್ಯಾಸ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಕೆಲವೊಂದು ವೈಜ್ಞಾನಿಕ ಕಾರಣಗಳಿವೆ. ಹೇಗೆಂದರೆ, ಮಕ್ಕಳ ದೇಹವು ವಯಸ್ಕರ ದೇಹಕ್ಕಿಂತ ಭಿನ್ನವಾಗಿರುತ್ತದೆ. ನವಜಾತ ಶಿಶು ಹಾಗೂ ಮಕ್ಕಳ ದೇಹದಲ್ಲಿ ಕಂದು ಕೊಬ್ಬನ್ನು ಉತ್ಪಾದಿಸುವ ಮೂಲಕ ಅವರನ್ನು ತಂಪಾಗಿಸುತ್ತದೆ. ಏಕೆಂದರೆ, ಶಿಶುಗಳು ವಯಸ್ಕರಂತೆ ದೇಹವನ್ನು ನಿಯಂತ್ರಂದಲ್ಲಿಡಲು ಸಾಧ್ಯವಾಗುವುದಿಲ್ಲ. ಈ ಕೊಬ್ಬು ಕುತ್ತಿಗೆ, ಭುಜಗಳು ಮತ್ತು ಬೆನ್ನಿನ ಮೇಲೆ ಕೇಂದ್ರೀಕೃತವಾಗಿರುತ್ತದೆ.
ವಯಸ್ಸಿನೊಂದಿಗೆ ಕಡಿಮೆಯಾಗುತ್ತದೆ
ಶಿಶುಗಳು ತಮ್ಮ ತಲೆಯ ಮೂಲಕ ತಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತಾರೆ. ಹಾಗಾಗಿ ಅವರು ನಿದ್ರಿಸುವಾಗ ತಲೆಗೆ ಟೋಪಿ ಹಾಕುವುದರಿಂದ ದೇಹದಿಂದ ಉಷ್ಣಾಂಶ ಹೊರ ಬರಲು ಸಾಧ್ಯವಾಗುವುದಿಲ್ಲ. ಇದರಿಂದ ದೇಹವು ಹೆಚ್ಚು ಬಿಸಿಯಾಗಲು ಪ್ರಾರಂಭಿಸುತ್ತದೆ. ಇದರಿಂದ ಮಗುವಿನ ದೇಹದಲ್ಲಿ ಹಠಾತ್ನೇ ಶಿಶು ಸಾವಿನ ಸಿಂಡ್ರೋಮ್ ಕಾರಣವಾಗುತ್ತದೆ. ಈ ಸಮಸ್ಯೆಯಿಂದ ಮಗು ಅಧಿಕವಾಗಿ ಬಿಸಿಯಾಗಲು ಪ್ರಾರಂಭಿಸುತ್ತದೆ.
ಉಸಿರುಗಟ್ಟುವಿಕೆಯ ಭಯ
ಶಿಶುಗಳು ನಿದ್ದೆ ಮಾಡುವಾಗ ಅವರ ತೋಳುಗಳು ಮತ್ತು ಕಾಲುಗಳನ್ನು ಚಲಿಸುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇದರಿಂದ ನೀವು ಹಾಕಿದ ಟೋಪಿ ಮುಖದ ಮೇಲೆ ಅಥವಾ ಮೂಗಿನ ಮೇಲೆ ಬೀಳಬಹುದು. ಇದು ಮಗುವಿನ ಉಸಿರಾಟಕ್ಕೆ ತೊಂದರೆಯನ್ನು ನೀಡಬಹುದು.
ಮಲಗಿದಾಗ ಮಗುವಿಗೆ ಸಾಕ್ಸ್ ಹಾಕಿಸೋದು ಸುರಕ್ಷಿತವೇ?
ಟೋಪಿ ಧರಿಸುವುದಕ್ಕಿಂತ ಸಾಕ್ಸ್ ಧರಿಸುವುದು ಹೆಚ್ಚು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಮನೆಯ ಕೋಣೆಯು ತುಂಬಾ ತಂಪಾಗಿದ್ದರೆ, ಮಗುವಿಗೆ ಸಾಕ್ಸ್ ಹಾಕಿಸಿ ಮಲಗಿಸುವುದು ಉತ್ತಮ. ಏಕೆಂದರೆ, ಬೆಚ್ಚಗಿನ ಪಾದಗಳು ಮಗುವಿಗೆ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಆದಾಗ್ಯೂ, ಸಾಕ್ಸ್ ತುಂಬಾ ಬಿಗಿಯಾಗಿದ್ದರೆ, ಮಗುವಿನ ಪಾದದಲ್ಲಿ ರಕ್ತ ಸಂಚಾರವಾಗುವುದು ಕಷ್ಟವಾಗುತ್ತದೆ. ಇದರಿಂದ ಮಗುವಿನ ಆರೋಗ್ಯದಲ್ಲಿ ಕೆಲವೊಂದು ಪರಿಣಾಮ ಬೀರಬಹುದು (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.