Ghee with hot rice benefits
Ghee with hot rice benefits:
ಮಕ್ಕಳು ಸಣ್ಣವರಿದ್ದಾಗ.. ಮೂಳೆ ಗಟ್ಟಿಯಾಗಲು, ಅಡುಗೆ ಮಾಡಿಕೊಳ್ಳಲು ಬ್ಯಾಚುಲರ್ಸ್ಗೆ ಬೋರ್ ಆದಾಗ ತಿನ್ನಲು ಸಿಗುವ ಬಿಸಿ ಅನ್ನ ತುಪ್ಪದ ಬಗ್ಗೆ ಒಂದು ಗೊತ್ತಿಲ್ಲದ ವಿಚಾರ ಇದೆ. ತುಪ್ಪದಲ್ಲಿರುವ ಕೊಬ್ಬು, ವಿಟಮಿನ್ ಎ, ಇ ಹಾಗೂ ಕೆ, ಬ್ಯುಟೈರಿಕ್ ಆಮ್ಲ ನಿಮ್ಮ ದೇಹದ ಆರೋಗ್ಯವನ್ನು ಕಾಪಾಡುತ್ತದೆ. ಹೀಗಾಗಿ ಇದನ್ನು ಅನ್ನದ ಮೂಲಕ ಸೇವನೆ ಮಾಡುತ್ತೇವೆ. ಬಿಸಿ ಅನ್ನದೊಂದಿಗೆ ತುಪ್ಪ ಬೆರೆಸಿ ತಿನ್ನುವ ಭಾರತದವರ ಈ ಪದ್ಧತಿ ವೈವೈಜ್ಞಾನಿಕವಾಗಿ ಏನನ್ನು ಹೇಳುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ.
ಬಿಸಿ ತುಪ್ಪದೊಂದಿಗೆ ಅನ್ನ ಅದಕ್ಕೊಂದಿಷ್ಟು ಚಿಟಿಕೆ ಉಪ್ಪು ಹಾಕಿ ತಿನ್ನುವುದು ಸಖತ್ ರುಚಿಯನ್ನು ನೀಡುತ್ತದೆ. ಈ ಪುರಾತನ ವಾಡಿಕೆಗೆ ಸದ್ಯ ಆಧುನಿಕ ಅಧ್ಯಯನವೊಂದು ತಿರುವನ್ನು ಕೊಟ್ಟಿದೆ. ಬಿಸಿ ಅನ್ನಕ್ಕೆ ತುಪ್ಪ ಹಾಕಿ ತಿನ್ನುವುದು ಜೀರ್ಣಕ್ರಿಯೆ, ರಕ್ತದಲ್ಲಿ ಸಕ್ಕರೆ ಮಟ್ಟ ಏರಿಕೆಯನ್ನು ತಡೆಯುವುದು ಕಡಿಮೆ ಮಾಡುತ್ತದೆ.
ಜೀವಸತ್ವ ಹೀರಿಕೊಳ್ಳಲು ಸಹಾಯ
ಕೊಬ್ಬು ಹಾಗೂ ವಿಟಮಿನ್ ಎಡಿ ಹಾಗೂ ಇ ಮತ್ತು ಕೆ ತುಪ್ಪದಲ್ಲಿರುತ್ತದೆ. ಇದು ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಹಾಗೂ ಕರುಳಿನ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಅಲ್ಲದೇ ಮಲಬದ್ಧತೆಯಂತಹ ಸಮಸ್ಯೆಗಳನ್ನು ಕ್ಷಣಾರ್ಧದಲ್ಲಿ ದೂರ ಮಾಡಲು ಇದು ಸಹಾಯ ಮಾಡುತ್ತದೆ.
ಕಾರ್ಬೋಹೈಡ್ರೇಟ್ ಹೀರಿಕೊಳ್ಳುತ್ತೆ
ಬಿಳಿ ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್ ಅಂಶ ಹೆಚ್ಚಾಗಿದೆ ಎನ್ನುವುದು ಗೊತ್ತಿರುವುದೇ. ಹೀಗಾಗಿ ಹೆಚ್ಚು ಅನ್ನ ಸೇವಿಸಬೇಡಿ ಎಂದು ಆಗಾಗ್ಗೆ ವೈದ್ಯರು ತಾಕೀತು ಮಾಡುತ್ತಾರೆ.
ತೂಕ ಇಳಿಕೆಗೆ ಸಹಕಾರಿ
ತುಪ್ಪದ ಜೊತೆಗೆ ಬಿಸಿ ಅನ್ನ ತಿನ್ನುವುದರಿಂದ ಹೆಚ್ಚು ಊಟ ಮಾಡಿದಂತೆ ಭಾಸವಾಗುತ್ತದೆ. ಹೀಗಾಗಿ ಕಂಡ ಕಂಡಲ್ಲಿ ಸಿಕ್ಕ ಜಂಕ್ಫುಡ್ ಅನ್ನು ತಿನ್ನುವುದು ಕಡಿಮೆ ಮಾಡಬಹುದು. ಇದರಿಂದ ಜೀರ್ಣಾಂಗಕ್ಕೆ ಕಿರಿಕಿರಿತಯಾಗುವಂತಹ ಸಮಸ್ಯೆಗಳು ಎದುರಾಗೋದಿಲ್ಲ. ಇದು ಹೆಚ್ಚು ತೃಪ್ತಿ ನೀಡುತ್ತದೆ.
ಕರುಳಿನ ಆರೋಗ್ಯ ಕಾಪಾಡತ್ತೆ ತುಪ್ಪ
ತುಪ್ಪದಲ್ಲಿರುವ ಬ್ಯುಟೈರೇಟ್ ಎಂಬ ಶಾರ್ಟ್ ಚೈನ್ ಫ್ಯಾಟಿ ಆಸಿಡ್ ಕರುಳಿ ಜೀವ ಕೋಶಕ್ಕೆ ಶಕ್ತಿ ನೀಡಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಅನ್ನದೊಂದಿಗೆ ತುಪ್ಪ ಸೇವನೆ ಜೀರ್ಣಕ್ರಿಯೆ ವೇಗವನ್ನು ಸಮತೋಲನದಲ್ಲಿಡುವಂತೆ ಮಾಡುತ್ತದೆ. ಗ್ಲೆಸಿಮಿಕ್ ಲೋಡ್ ಕಡಿಮೆ ಮಾಡಿ ರಕ್ತದಲ್ಲಿ ಸಕ್ಕರೆ ಮಟ್ಟ ಏರಿಕೆಯಾಗುವುದನ್ನು ತಡೆಯುತ್ತದೆ, (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂ
ದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.