ಸಾಂದರ್ಭಿಕ ಚಿತ್ರ 
ಆರೋಗ್ಯ

ಸಿಜೇರಿಯನ್ ತಪ್ಪಿಸಲು ಸರಳ ದಾರಿ: ಪ್ರತಿದಿನ ಈ 2 ವ್ಯಾಯಾಮ ಮಾಡಿದರೆ ಸಾಮಾನ್ಯ ಹೆರಿಗೆ ಖಚಿತ! Pregnancy period

Pregnancy period: ತಾಯ್ತನ ಎನ್ನುವುದು ಕೇವಲ ಒಂದು ಪದವಲ್ಲ, ಅದು ಈ ಪ್ರಪಂಚದ ಅತ್ಯಂತ ಪವಿತ್ರವಾದ ಭಾವನೆ. ತಾಯ್ತನದ ಮಧುರತೆ ಮತ್ತು ತಾಯಿಯ ಮಮತೆಯನ್ನು ಎಲ್ಲರಿಂದಲೂ ಊಹಿಸಲು ಸಾಧ್ಯವಿಲ್ಲ. ಒಂದು ಮಗುವು ಭೂಮಿಗೆ ಬರಬೇಕೆಂದರೆ, ಮಹಿಳೆಯೊಬ್ಬಳು ತನ್ನ ಜೀವವನ್ನೇ ಪಣಕ್ಕಿಡಬೇಕಾಗುತ್ತದೆ.
ಮಹಿಳೆಯರು ಇಂದಿನ ದಿನಗಳಲ್ಲಿ ಸಾಮಾನ್ಯ ಹೆರಿಗೆಯಾಗಬೇಕೆಂದು ಬಯಸುತ್ತಾರೆ. ಇದು ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಸಾಮಾನ್ಯ ಹೆರಿಗೆಯಾಗಬೇಕೆಂದರೆ, ದೈಹಿಕ ಸಿದ್ಧತೆ ಮತ್ತು ಸರಿಯಾದ ಆರೈಕೆ ಬೇಕಾಗಿರುತ್ತದೆ.
ಹೆರಿಗೆಯಾಗುವ ಮೊದಲು ಮಹಿಳೆಯರು ವೈದ್ಯರು ಸೂಚಿಸಿದಂತೆ ಗರ್ಭಾವಸ್ಥೆಯಲ್ಲಿ ಕೆಲವೊಂದು ಮುನ್ನಚ್ಚರಿಕೆಗಳನ್ನು ಪಾಲಿಸಬೇಕಾಗುತ್ತದೆ. ಈ ಎಲ್ಲಾ ಸೂಚನೆಗಳು ಸಾಮಾನ್ಯ ಹೆರಿಗೆಯ ಸಾಧ್ಯತೆಯನ್ನು ಪ್ರೇರೇಪಿಸುತ್ತದೆ. ಹಾಗಾಗಿ ಮುಂಬೈ ಮೂಲದ ಸ್ತ್ರೀರೋಗ ತಜ್ಞರೊಬ್ಬರು ಡಾ. ಆಶಿಕ್ ಅಲಿ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊದಲ್ಲಿ ಇದನ್ನು ವಿವರಿಸಿದ್ದಾರೆ.

ವಿಡಿಯೋದಲ್ಲೇನಿದೆ?

ವೈದ್ಯರು ಸೂಚಿಸುವಂತೆ ಯಾವುದೇ ಮಹಿಳೆಯು ತಾನು ಗರ್ಭಾವಸ್ಥೆಯಲ್ಲಿದ್ದಾಗ 38 ವಾರಗಳ ಗರ್ಭಧಾರಣೆಯ ನಂತರ ಬಾತುಕೋಳಿ ನಡಿಗೆ ವ್ಯಾಯಾಮ ಮತ್ತು ಬಟರ್‌ಫ್ಲೈ ವ್ಯಾಯಾಮಗಳನ್ನು ಪ್ರಾರಂಭಿಸಬೇಕು ಎಂದು ಹೇಳುತ್ತಾರೆ. ಪ್ರತಿಯೊಬ್ಬ ಗರ್ಭಿಣಿ ಮಹಿಳೆಯ ಆರೋಗ್ಯವು ವಿಭಿನ್ನವಾಗಿರುತ್ತದೆ. ಹಾಗಾಗಿ ಯಾವುದೇ ವ್ಯಾಯಾಮವನ್ನು ಮಾಡುವಾಗ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಈ ವ್ಯಾಯಾಮಗಳು ಎಷ್ಟು ಪ್ರಯೋಜನಕಾರಿ?

ತಜ್ಞರ ಪ್ರಕಾರ, ಬಾತುಕೋಳಿ ಮತ್ತು ಬಟರ್​ ಫ್ಲೈ ವ್ಯಾಯಾಮಗಳು ದೇಹವನ್ನು ಆಂತರಿಕವಾಗಿ ಬಲಪಡಿಸಲು ಮತ್ತು ಸಾಮಾನ್ಯ ಹೆರಿಗೆಗೆ ಪ್ರೋತ್ಸಾಹಿಸುತ್ತದೆ. ಈ ವ್ಯಾಯಾಮಗಳು ಸರಳವಾಗಿದ್ದರೂ, ಶ್ರೋಣಿಯ ಪ್ರದೇಶದ ಮೇಲೆ ಕಾರ್ಯನಿರ್ವಹಿಸುವುದರಿಂದ ಇದು ಸಾಮಾನ್ಯ ಹೆರಿಗೆಗೆ ಸಹಾಯಕ ಎಂದು ಹೇಳಲಾಗುತ್ತದೆ.

ಬಾತುಕೋಳಿ ನಡಿಗೆ

ಬಾತುಕೋಳಿ ನಡಿಗೆಯನ್ನು ಮಾಡುವುದರಿಂದ ಇದು ತೊಡೆ, ಸೊಂಟ ಮತ್ತು ಶ್ರೋಣಿಯ ಸ್ನಾಯುಗಳನ್ನು ಬಲಪಡಿಸುತ್ತದೆ. ಹೊಟ್ಟೆಯ ಕೆಳಭಾಗದಲ್ಲಿ ನಮ್ಯತೆಯನ್ನು ಹೆಚ್ಚಿಸಿ ಮಗು ಹೊರಬರುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ನಿಯಮಿತವಾಗಿ ಈ ವ್ಯಾಯಾಮವನ್ನು ಮಾಡುವುದರಿಂದ ಹೆರಿಗೆ ನೋವನ್ನು ನಿಭಾಯಿಸಬಹುದು.

ಬಟರ್‌ಫ್ಲೈ ವ್ಯಾಯಾಮ

ಬಟರ್‌ಫ್ಲೈ ವ್ಯಾಯಾಮವು ಹೊಟ್ಟೆ ಕೆಳಗೆ ಇರುವ ಸ್ನಾಯುಗಳನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ. ಮತ್ತು ಸೊಂಟದಲ್ಲಿನ ಬಿಗಿತವನ್ನು ಕಡಿಮೆ ಮಾಡುತ್ತದೆ. ಈ ವ್ಯಾಯಾಮವು ರಕ್ತ ಪರಿಚಲನೆಯನ್ನು ಸುಧಾರಿಸಿ, ದೇಹದ ಕೆಳಭಾಗದಲ್ಲಾದ ನಮ್ಯತೆಯನ್ನು ಹೆಚ್ಚಿಸುತ್ತದೆ. ಇದರಿಂದ ಮಗು ಸರಿಯಾದ ಸ್ಥಾನಕ್ಕೆ ಚಲಿಸಲು ಸಹಾಯ ಮಾಡುತ್ತದೆ. ಈ ವ್ಯಾಯಾಮವು ಮನಸ್ಸಿಗೆ ಶಾಂತಿ ನೀಡುತ್ತದೆ.
ಸಾಮಾನ್ಯ ಹೆರಿಗೆಯನ್ನು ಬಯಸುವ ಮಹಿಳೆಯರು ಆದಷ್ಟು, ಪ್ರೋಟೀನ್, ಕಬ್ಬಿಣ, ಕ್ಯಾಲ್ಸಿಯಂ, ಫೈಬರ್ ಮತ್ತು ಸಾಕಷ್ಟು ನೀರು, ಪೌಷ್ಟಿಕ ಆಹಾರಗಳನ್ನು ಸೇವಿಸಬೇಕು. ಇದು ತಾಯಿ ಮತ್ತು ಮಗುವನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ.
ಭಾರೀ ರಕ್ತಸ್ರಾವ, ತೀವ್ರ ನೋವು, ಅಕಾಲಿಕವಾಗಿ ನೀರು ಒಡೆದು ಹೋಗುವುದು ಅಥವಾ ಮಗುವಿನ ಚಲನೆ ಕಡಿಮೆಯಾಗುವುದು ಇಂತಹ ಚಿಹ್ನೆಗಳು ಕಂಡುಬಂದರೆ, ಮೊದಲು ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳಿ (ಏಜೆನ್ಸೀಸ್​).