ಸಾಂದರ್ಭಿಕ ಚಿತ್ರ 
ಆರೋಗ್ಯ

ಮೆದುಳು ಕಂಪ್ಯೂಟರ್‌ಗಿಂತ ವೇಗವಾಗಿ ಕೆಲಸ ಮಾಡಬೇಕೇ? ಸ್ಮರಣಶಕ್ತಿ ಹೆಚ್ಚಿಸಲು ಇಲ್ಲಿವೆ ಸೂಪರ್ ಟಿಪ್ಸ್! Memory power

ಭಾನುಪ್ರಿಯ ಡಿ.ಕೆ

ಪ್ರಮುಖ ಮುಖ್ಯಾಂಶಗಳು

  • ಜೀವನದ ಪ್ರತಿಯೊಂದು ಹಂತದಲ್ಲೂ ಚುರುಕಾದ ಮತ್ತು ಆರೋಗ್ಯಕರ ಮೆದುಳು ಮುಖ್ಯವಾಗಿರುತ್ತದೆ
  • ವಿದ್ಯಾರ್ಥಿಗಳಾಗಲಿ, ಪೋಷಕರಾಗಲಿ ಮೆದುಳು ಸಕ್ರಿಯವಾಗಿದ್ದರೆ ಅನೇಕ ಪ್ರಯೋಜನ ಪಡೆಯಬಹುದು
  • ಮೆದುಳಿನ ಆರೋಗ್ಯವನ್ನು ಬೆಂಬಲಿಸಲು ದುಬಾರಿ ಪೂರಕಗಳ ಅಗತ್ಯವೇನಿಲ್ಲ!
  • ನಿಯಮಿತ ದೈಹಿಕ ಚಟುವಟಿಕೆಯು ಹೃದಯ ಮಾತ್ರವಲ್ಲದೇ, ಮೆದುಳಿನ ಆರೋಗ್ಯವನ್ನು ಬೆಂಬಲಿಸುತ್ತದೆ
Memory power: ಜೀವನದ ಪ್ರತಿಯೊಂದು ಹಂತದಲ್ಲೂ ಚುರುಕಾದ ಮತ್ತು ಆರೋಗ್ಯಕರ ಮೆದುಳು ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳಾಗಲಿ, ವೃತ್ತಿಪರರಾಗಲಿ, ಪೋಷಕರಾಗಲಿ ಮೆದುಳು ಸಕ್ರಿಯವಾಗಿದ್ದರೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಆದಾಗ್ಯೂ, ಅನುವಂಶಿಕತೆಯು ಒಂದು ಪಾತ್ರವನ್ನು ವಹಿಸುವುದಾದರೆ, ದೈನಂದಿನ ಅಭ್ಯಾಸಗಳು ಮೆದುಳನ್ನು ಇನ್ನಷ್ಟು ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ.
ಒಂದು ವಿಷಯವೇನೆಂದರೆ, ಮೆದುಳಿನ ಆರೋಗ್ಯವನ್ನು ಬೆಂಬಲಿಸಲು ದುಬಾರಿ ಪೂರಕಗಳ ಅಗತ್ಯವೇನಿಲ್ಲ. ಬದಲಿಗೆ ದೈನಂದಿನ ಚಟುವಟಿಕೆಗಳನ್ನು ನಿಯಮಿತವಾಗಿ ಅಳವಡಿಸಿಕೊಂಡಾಗ ಅದು, ಅವು ಸ್ಮರಣಶಕ್ತಿ, ಗಮನ ಮತ್ತು ವಯಸ್ಸಿಗೆ ಸಂಬಂಧಿಸಿದ ಅರಿವಿನ ಕುಸಿತವನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಹಾಗಾದ್ರೆ, ಮೆದುಳನ್ನು ಸಕ್ರಿಯಗೊಳಿಸಲು ಯಾವ ರೀತಿಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ನೋಡೋಣ ಬನ್ನಿ...

1.ಪ್ರತಿದಿನ ನಿಮ್ಮ ದೇಹವನ್ನು ಸರಿಸಿ

ನಿಯಮಿತ ದೈಹಿಕ ಚಟುವಟಿಕೆಯು ಹೃದಯ ಮತ್ತು ಸ್ನಾಯುಗಳನ್ನು ಮಾತ್ರವಲ್ಲದೇ, ಮೆದುಳಿನ ಆರೋಗ್ಯವನ್ನು ಬೆಂಬಲಿಸುತ್ತದೆ. ಪ್ರತಿನಿತ್ಯ 30 ನಿಮಿಷಗಳ ಕಾಲ ನಡೆಯುವುದು, ಓಡುವುದು, ಯೋಗ ಮಾಡುವುದು, ಲಘು ವ್ಯಾಯಾಮದಂತಹ ಸರಳ ವಿಷಯವನ್ನು ಅಳವಡಿಸಿಕೊಂಡಾಗ ಮೆದುಳಿಗೆ ರಕ್ತದ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ನೆನಪಿನ ಶಕ್ತಿ ಮತ್ತು ಆಲೋಚನಾ ಶಕ್ತಿಯನ್ನು ಬೆಂಬಲಿಸುತ್ತದೆ. ಈ ರೀತಿ ವ್ಯಾಯಾಮಗಳು ಮಾನಸಿಕ ಸ್ಪಷ್ಟತೆಯನ್ನು ಸುಧಾರಿಸಿ ಒತ್ತಡವನ್ನು ಕಡಿಮೆ ಮಾಡುತ್ತದೆ.

2.ಹೊಸ ವಿಷಯಗಳ ಬಗ್ಗೆ ಅನ್ವೇಷಣೆ

ಪ್ರತಿದಿನ ಒಂದೇ ರೀತಿಯ ದಿನಚರಿಯನ್ನು ಅನುಸರಿಸುವುದರಿಂದ ಇದು ನಿಮ್ಮ ಮೆದುಳನ್ನು ಆಯಾಸಗೊಳ್ಳಬಹುದು. ಹಾಗಾಗಿ ಹೊಸ ಚಟುವಟಿಕೆಗಳೊಂದಿಗೆ ನಿಮ್ಮ ಮನಸ್ಸನ್ನು ಸವಾಲು ಮಾಡುವುದರಿಂದ ಇದು ಹೊಸ ಸಂಪರ್ಕವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಜೊತೆಗೆ ಹೊಸ ಪುಸ್ತಕಗಳನ್ನು ಓದುವುದು, ಬರೆಯುವುದು, ಬೇರೆ ಭಾಷೆಗಳನ್ನು ಕಲಿಯುವ ಅಭ್ಯಾಸವನ್ನು ಮಾಡಿಕೊಂಡಾಗ ಇದು ನಿಮ್ಮ ಮೆದುಳನ್ನು ಇನ್ನಷ್ಟು ಚುರುಕುಗೊಳಿಸುತ್ತದೆ.

3.ಮೆದುಳಿನ ಆರೋಗ್ಯಕ್ಕೆ ಒಳ್ಳೆಯ ಆಹಾರವನ್ನು ಸೇವಿಸಿ

ನೀವು ತಿನ್ನುವ ಆಹಾರವು ನಿಮ್ಮ ಮೆದುಳಿನ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ವಿಟಮಿನ್​, ಕಾರ್ಬೊಹೈಡ್ರೇಟ್​ ಮತ್ತು ಪೌಷ್ಟಿಕಾಂಶಗಳಿಂದ ಕೂಡಿದ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಬೀಜಗಳು ಮತ್ತು ಆರೋಗ್ಯಕರ ಕೊಬ್ಬುಗಳನ್ನು ಒಳಗೊಂಡಿರುವ ಸಮತೋಲಿತ ಆಹಾರವನ್ನು ಸೇವಿಸುವುದರಿಂದ ಇದು ನಿಮ್ಮ ಮೆದುಳನ್ನು ಚುರುಕುಗೊಳಿಸುತ್ತದೆ.
4.ರಾತ್ರಿ ಚೆನ್ನಾಗಿ ನಿದ್ರೆ ಮಾಡುವುದು
ನಿದ್ರೆ ಎಂಬುದು ಮೆದುಳು ವಿಶ್ರಾಂತಿ ಪಡೆಯುವ ಸಮಯವಾಗಿದೆ. ಹಾಗಾಗಿ ಪ್ರತಿನಿತ್ಯ ಸುಮಾರು 7-8 ಗಂಟೆಗಳ ತಾಸು ನಿದ್ರಿಸುವುದರಿಂದ ಮೆದುಳು ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಹಾಗೆಯೇ, ನೀವೇನಾದರೂ ಕಡಿಮೆ ಗುಣಮಟ್ಟದ ನಿದ್ರೆಯನ್ನು ಮಾಡಿದಾಗ ಅದು ಸ್ಮರಣಶಕ್ತಿ, ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಭಾವನಾತ್ಮಕ ನಿಯಂತ್ರಣದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಮಲಗುವ ಮುನ್ನ ಮೊಬೈಲ್ ಫೋನ್​ಗಳು, ಸ್ಕ್ರೀನ್​ಗಳನ್ನು ನೋಡುವ ಅಭ್ಯಾಸವನ್ನು ಕಡಿಮೆ ಮಾಡಿ. ಇದು ಮೆದುಳಿನ ಆರೋಗ್ಯವನ್ನು ಬಲಪಡಿಸುತ್ತದೆ.

5.ಸಾಮಾಜಿಕವಾಗಿ ತೊಡಗಿಸಿಕೊಳ್ಳಿ ಮತ್ತು ಒತ್ತಡವನ್ನು ನಿರ್ವಹಿಸಿ

ನಿಮ್ಮ ಸಮಾಜದಲ್ಲಿರುವ ಇತರರೊಂದಿಗೆ ಉತ್ತಮ ಸಂವಹನ ನಡೆಸುವ ಅಭ್ಯಾಸವನ್ನು ಮಾಡಿಕೊಳ್ಳಿ. ಹಾಗೆಯೇ ಸ್ನೇಹಿತರೊಂದಿಗೆ ಮನಸ್ಸು ಬಿಚ್ಚಿ ಮಾತನಾಡುವುದು, ಕುಟುಂಬದೊಂದಿಗೆ ಸಮಯ ಕಳೆಯುವುದು ಮತ್ತು ನಿಯಮಿತವಾಗಿ ಸಂಭಾಷಣೆ ನಡೆಸುವುದರಿಂದ ಇದು ಮೆದುಳನ್ನು ಸಕ್ರಿಯವಾಗಿರುವಂತೆ ಮಾಡುತ್ತದೆ. ದೀರ್ಘಕಾಲೀನ ಒತ್ತಡವು ಮೆದುಳಿನ ಕೋಶವನ್ನು ಹಾನಿಗೊಳಿಸುತ್ತದೆ. ಹಾಗಾಗಿ ಯಾವಾಗಲೂ ಒತ್ತಡವನ್ನು ನಿರ್ವಹಿಸಿಕೊಳ್ಳಿ.

ಸ್ಥಿರತೆ ಏಕೆ ಮುಖ್ಯ?

ಈ ಎಲ್ಲಾ ಚಟುವಟಿಕೆಗಳನ್ನು ಸಾಂದರ್ಭಿಕವಾಗಿ ಮಾಡುವುದು ಸಹಾಯಕವಾಗಿದ್ದರೂ, ಪ್ರತಿದಿನ ಮಾಡುವುದರಿಂದ ನಿಜವಾದ ವ್ಯತ್ಯಾಸವನ್ನು ಕಾಣಬಹುದಾಗಿದೆ. ಪ್ರತಿನಿತ್ಯ ನೀವು ಇಡುವ ಹೊಸ ಹೆಜ್ಜೆಗಳು ವೃದ್ಯಾಪದವರೆಗೂ ಮಾನಸಿಕ ತೀಕ್ಷ್ಣತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ನಿಮ್ಮ ಮೆದುಳನ್ನು ಚುರುಕಾಗಿಡಲು ನಿಮ್ಮ ಜೀವನಶೈಲಿಯಲ್ಲಿ ಪ್ರಮುಖ ಬದಲಾವಣೆಗಳ ಅಗತ್ಯವಿಲ್ಲ. ನಿಮ್ಮ ಪ್ರತಿನಿತ್ಯದ ಕೆಲವೊಂದು ಅಭ್ಯಾಸಗಳನ್ನು ಅಳವಡಿಸಿಕೊಂಡಾಗ ಇದು ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.