Parenting Tips (ಸಾಂದರ್ಭಿಕ ಚಿತ್ರ)
- ಇತ್ತೀಚಿನ ದಿನಗಳಲ್ಲಿ ಮಕ್ಕಳು ಎಥೇಚ್ಛವಾಗಿ ಮೊಬೈಲ್ ಬಳಸುವುದನ್ನು ನಾವು ನೋಡಿರುತ್ತೇವೆ
- ಅತಿಯಾದ ಮೊಬೈಲ್ ಬಳಕೆಯೂ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದಿರುವಂತಹ ಮಾಹಿತಿ
- ದೀರ್ಘವಾಗಿ ಮೊಬೈಲ್ಗಳನ್ನು ನೋಡುವುದರಿಂದ ನರಮಂಡಲದ ನರಗಳು ಅತಿಯಾದ ಒತ್ತಡಕ್ಕೆ ಒಳಗಾಗುತ್ತವೆ
Parenting Tips: ಇತ್ತೀಚಿನ ದಿನಗಳಲ್ಲಿ ಮಕ್ಕಳು ಎಥೇಚ್ಛವಾಗಿ ಮೊಬೈಲ್ ಬಳಸುವುದನ್ನು ನಾವು ನೋಡಿರುತ್ತೇವೆ. ಅತಿಯಾದ ಮೊಬೈಲ್ ಬಳಕೆಯೂ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದಿರುವಂತಹ ಮಾಹಿತಿ. ಇವುಗಳಿಂದ ಹೊರಸೂಸುವ ವಿಕಿರಣವು ನೇರವಾಗಿ ಕಣ್ಣುಗಳ ಮೇಲೆ ಬೀಳುವುದರಿಂದ ದೃಷ್ಟಿ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ.
ಎರಡನೆಯದಾಗಿ ಯಾವ ಮಕ್ಕಳು ದೀರ್ಘವಾಗಿ ಮೊಬೈಲ್ಗಳನ್ನು ನೋಡಲು ಬಯಸುತ್ತಾರೋ ಅವರ ನರಮಂಡಲದ ನರಗಳು ಅತಿಯಾದ ಒತ್ತಡಕ್ಕೆ ಒಳಗಾಗುತ್ತವೆ. ಇದರಿಂದ ಮಕ್ಕಳಿಗೆ ಪದೇ ಪದೇ ತಲೆನೋವು, ಕಣ್ಣಿನ ಆಯಾಸ ಮತ್ತು ನಿದ್ರೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಆದಾಗ್ಯೂ, ನಿಮ್ಮ ಮಕ್ಕಳ ಈ ಅಭ್ಯಾಸವನ್ನು ನೀವೇನಾದರೂ ಸುಧಾರಿಸಲು ಬಯಸುತ್ತಿದ್ದರೆ, ಮೊದಲು ನಿಮ್ಮಿಂದಲೇ ಬದಲಾವಣೆಯನ್ನು ಪ್ರಾರಂಭಿಸಬೇಕು.
ಪ್ರತಿಯೊಬ್ಬ ಮಕ್ಕಳೂ ಕೂಡಾ ತಂದೆ-ತಾಯಿಯಿಂದ ಪ್ರೇರೇಪಿತರಾಗುತ್ತಾರೆ. ಮೊದಲು ನೀವು ಫೋನ್ ಬಳಕೆಯನ್ನು ಕಡಿಮೆ ಮಾಡುವುದನ್ನು ಮಾಡಿ. ಜೊತೆಗೆ ಊಟ ಮಾಡುವಾಗ ಮತ್ತು ಮಲಗುವಾಗ ಮೊಬೈಲ್ ಬಳಸುವುದನ್ನು ನಿಲ್ಲಿಸಿ. ಮಕ್ಕಳು ನಿಮ್ಮನ್ನು ನೋಡಿದಾಗ ಫೋನ್ಗಳಿಂದ ದೂರ ಇರುತ್ತಾರೆ.
ನಿಮ್ಮ ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಪ್ರಾರಂಭಿಸಿ. ನೀವು ಈ ರೀತಿ ಮಾಡಿದಾಗ ಮಾತ್ರ ನಿಮ್ಮ ಮಕ್ಕಳು ಕೂಡಾ ಅಭ್ಯಾಸವನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಅವರಿಗೆ ಹೊಸದನ್ನು ಕಲಿಸುವ ಪುಸ್ತಕಗಳನ್ನು ಕೊಡಬೇಕು. ಇದರಿಂದ ಆಸಕ್ತಿ ಹೆಚ್ಚಾಗುವುದರ ಜೊತೆಗೆ ಜ್ಞಾನವು ಹೆಚ್ಚಾಗುತ್ತದೆ.
ಮಕ್ಕಳಿಗಾಗಿ ಓದುವ ಮೂಲೆ
ನಿಮ್ಮ ಮಕ್ಕಳಿಗೆ ಓದುವ ಅಭ್ಯಾಸವನ್ನು ಮೂಡಿಸಲು ನೀವು ಪ್ರಯತ್ನಿಸುತ್ತಿದ್ದರೆ, ಮನೆಯ ಒಂದು ಮೂಲೆಯಲ್ಲಿ ಗಾಳಿ ಮತ್ತು ಬೆಳಕು ಚೆನ್ನಾಗಿ ಬರುವಂತಹ, ಗದ್ದಲವಿಲ್ಲದ ಜಾಗವನ್ನು ಆರಿಸಿ. ಅವರಿಗೆ ಇಷ್ಟವಾಗುವ ಚಿತ್ರಕಥೆಗಳು, ಸಾಹಸ ಕಥೆಗಳು ಮತ್ತು ಜ್ಞಾನದಾಯಕ ಪುಸ್ತಕಗಳನ್ನು ಅವರ ಕೈಗೆ ಎಟುಕುವಂತೆ ಜೋಡಿಸಿಡಿ. ನಂತರ ಆ ಮೂಲೆಯನ್ನು ಸ್ವಲ್ಪ ಬಣ್ಣದ ದೀಪಗಳು ಅಥವಾ ಗಿಡಗಳಿಂದ ಅಲಂಕರಿಸಿದರೆ ಮಕ್ಕಳಿಗೆ ಅಲ್ಲಿ ಕುಳಿತು ಓದಲು ಆಸಕ್ತಿ ಹೆಚ್ಚಾಗುತ್ತದೆ.
ಇದಲ್ಲದೇ ಮಕ್ಕಳಿಗೆ ಮಲಗುವ ಮುನ್ನ ಮೊಬೈಲ್ ಕೊಡುವ ಬದಲಿಗೆ ಪುಸ್ತಕವನ್ನು ನೀಡಿ. ಈ ರೀತಿ ಮಾಡುವುದರಿಂದ ನಿದ್ರೆ ಸುಧಾರಿಸುವುದರ ಜೊತೆಗೆ ಓದುವ ಹವ್ಯಾಸವು ಅವರಲ್ಲಿ ಮೂಡುತ್ತದೆ. ಈ ಕಾರಣದಿಂದ ಬೆಳಿಗ್ಗೆ ಬೇಗನೆ ಏಳುತ್ತಾರೆ.
ಬಾಲ್ಯದಿಂದಲೇ ಓದುವ ಅಭ್ಯಾಸ ಬೆಳೆಸಿಕೊಳ್ಳಿ.
ಬಾಲ್ಯದಲ್ಲಿ ಕಲಿತ ಅಭ್ಯಾಸಗಳು ಜೀವಿತಾವಧಿಯಲ್ಲಿ ಉಳಿಯುತ್ತವೆ ಎಂದು ಹೇಳಲಾಗುತ್ತದೆ. ಹಾಗಾಗಿ ಬಾಲ್ಯದಿಂದಲೇ ಓದುವ ಅಭ್ಯಾಸವನ್ನು ರೂಡಿಸಿಕೊಳ್ಳಿ. ನಿಮಗೆ ಯಾವ ಪುಸ್ತಕಗಳು ಇಷ್ಟ ಅದನ್ನೇ ಓದಿರಿ. ಜೊತೆಗೆ ನಿಮ್ಮ ಮಗುವಿಗೆ ಇಂಗ್ಲಿಷ್ ಕಲಿಸುತ್ತಿದ್ದರೆ ಅದಕ್ಕೆ ಸಂಬಂಧ ಪಟ್ಟ ಪುಸ್ತಕಗಳನ್ನು ಓದಲು ಕೊಡಿ. ಇದರಿಂದ ಮಕ್ಕಳ ಏಕಾಗ್ರತೆ ಹೆಚ್ಚಾಗುತ್ತದೆ ಜೊತೆಗೆ ಮೊಬೈಲ್ ಬಳಸುವುದನ್ನು ನಿಲ್ಲಿಸಿ ಓದಿನ ಕಡೆ ಗಮನಕೊಡುತ್ತಾರೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.