ಸಾಂದರ್ಭಿಕ ಚಿತ್ರ  
ಆರೋಗ್ಯ

ಬೊಜ್ಜಿಗೆ ಸೆಮಾಗ್ಲುಟೈಡ್​ನಂತಹ ಪುರಾವೆ ಆಧರಿತ ಚಿಕಿತ್ಸೆ ಅಗತ್ಯವೇ ಹೊರತು ಸಾಮಾಜಿಕ ಮಾಧ್ಯಮದ ಹ್ಯಾಕ್​ಗಳಲ್ಲ

Obesity : ದಿಢೀರ್ ಎಂದು ಬೊಜ್ಜು ಕರಗಿಸುವ ಉಪಾಯಗಳು ಫಲ ನೀಡಲಿಲ್ಲವೇ? ಈ ಮಾಹಿತಿ ಮಹಾಪೂರದಲ್ಲಿ ಯಾವುದು ಉತ್ತಮ ಮಾಹಿತಿ ಎಂದು ಕಂಡುಕೊಳ್ಳುವುದೇ ಸವಾಲಾಗಿರುತ್ತದೆ. ಆದ್ದರಿಂದ ಬೊಜ್ಜು ಕರಗಿಸಲು ಪುರಾವೆ ಆಧರಿತ ಚಿಕಿತ್ಸೆಗಳು ಹಾಗೂ ವಾರಕ್ಕೆ ಒಮ್ಮೆ ನೀಡಬಲ್ಲ ಸೆಮಾಗ್ಲುಟೈಡ್ ನೈಜ, ಸುಸ್ಥಿರ ಪರಿಹಾರವಾಗಿದೆ ಎಂದು ಅರ್ಥ ಮಾಡಿಕೊಳ್ಳಬೇಕಾಗಿದೆ.
ಬೊಜ್ಜು ಸಂಕೀರ್ಣ ರೋಗವಾಗಿದ್ದು ಅದು ಇಚ್ಛಾಶಕ್ತಿಯ ಕೊರತೆಯಲ್ಲ. ಇದು ಹೇಗೆ ಕೆಲಸ ಮಾಡುತ್ತದೆ ಎಂದು ಅರಿಯಲು ನಿಮ್ಮ ದೇಹದ ಹಲವು ಸ್ಥಳಗಳಿಗೆ ಮೆದುಳು ಹೇಗೆ ಸಂಕೇತಗಳನ್ನು ಕಳುಹಿಸುತ್ತದೆ ಎಂದು ಅರ್ಥ ಮಾಡಿಕೊಳ್ಳಬೇಕು. ಜಿ.ಎಲ್.ಪಿ.-1ರಂತಹ (ಗ್ಲೂಕೊಗಾನ್ ರೀತಿಯ ಪೆಪ್ಟೈಡ್-1) ಹಸಿವಿನ ಹಾರ್ಮೋನುಗಳಲ್ಲಿ ಕೆಲವು ನೀವು ಎಷ್ಟು ಆಹಾರ ತಿನ್ನಬೇಕು ಎನ್ನುವುದನ್ನು ನಿಯಂತ್ರಿಸಲು ನೆರವಾಗುತ್ತವೆ ಅವು ನಿಮ್ಮ ಮೆದುಳಿಗೆ ಹೊಟ್ಟೆ ತುಂಬಿದೆ ಎಂದು ಹೇಳುತ್ತವೆ.
ಬೊಜ್ಜಿನ ಜನರಲ್ಲಿ ಈ ಸಂಕೇತ ವ್ಯವಸ್ಥೆ ಕುಂಠಿತವಾಗಿರುತ್ತದೆ. ಸೆಮಾಗ್ಲುಟೈಡ್ ನಿಮ್ಮ ದೇಹದ ಸಹಜ ಜಿ.ಎಲ್.ಪಿ.-1 ಹಾರ್ಮೋನಿನಂತೆಯೇ ಕೆಲಸ ಮಾಡುತ್ತದೆ. ಇದು ಹೊಟ್ಟೆ ತುಂಬಿರುವ ಸಂಕೇತಗಳನ್ನು ಉಳಿಸುತ್ತದೆ, ಅದು ನಿಮ್ಮ ಹಸಿವು ಕಡಿಮೆ ಮಾಡುತ್ತದೆ, ಇದರಿಂದ ನೀವು ಕೆಲವೇ ಕ್ಯಾಲೊರಿಗಳನ್ನು ಸೇವಿಸುತ್ತೀರಿ ಮತ್ತು ತೂಕ ಇಳಿಸಿಕೊಳ್ಳುತ್ತೀರಿ. ಇದು ವಿಜ್ಞಾನ ಬೆಂಬಲಿತ ಸಾಧನವಾಗಿದೆ. ಅದನ್ನು ಕಡಿಮೆ ಕ್ಯಾಲೊರಿಯ ಆಹಾರದೊಂದಿಗೆ ಮತ್ತು ಹೆಚ್ಚಿನ ದೈಹಿಕ ಚಟುವಟಿಕೆಯೊಂದಿಗೆ ಬಳಸಿದಾಗ ಸೆಮಾಗ್ಲುಟೈಡ್ ಜನರಿಗೆ ಅವರ ತೂಕ ಇಳಿಸಲು ಮತ್ತು ಹೊಟ್ಟೆ ತುಂಬಿದಂತೆ ಇರಲು ನೆರವಾಗುತ್ತದೆ. ಭಾರತದಲ್ಲಿ ವಯಸ್ಕರಿಗೆ ಮತ್ತು 18 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದವರಿಗೆ ತೀವ್ರವಾದ ತೂಕ ನಿರ್ವಹಣೆಗೆ ಸೆಮಾಗ್ಲುಟೈಡ್ ಅನುಮೋದನೆಯಾಗಿದೆ.
ಈ ಕುರಿತು ಮಣಿಪಾಲ್ ಹಾಸ್ಪಿಟಲ್ ವೈಟ್ ಫೀಲ್ಡ್ ಕನ್ಸಲ್ಟೆಂಟ್ ಎಂಡೋಕ್ರಿನಾಲಜಿಸ್ಟ್ ಮತ್ತು ಡಬಾಬಿಟಾಲಜಿಸ್ಟ್ ಡಾ.ಅನೂಶಾ ಹಂದ್ರಾಳ್ , “ಇಂದು ಯುವ ವಯಸ್ಕರು ಆ‍ನ್ಲೈನ್ ನಲ್ಲಿ ದೊರೆಯುವ ತಪ್ಪು ಮಾಹಿತಿಯಲ್ಲಿ ಕಳೆದು ಹೋಗಿದ್ದಾರೆ. ಅವರಿಗೆ ನಾನು ಸದಾ ಟ್ರೆಂಡ್ ಗಳಿಂದ ದೂರವಿರ ಮತ್ತು ವೈದ್ಯರೊಂದಿಗೆ ಮಾತನಾಡಿ ಎಂದು ಸಲಹೆ ನೀಡುತ್ತೇನೆ. ನಮಗೆ ಅನುಕೂಕರ, ಪರಿಣಾಮಕಾರಿ ಮತ್ತು ವಿಜ್ಞಾನದ ಬೆಂಬಲದ ಚಿಕಿತ್ಸೆಗಳು ಲಭ್ಯವಿವೆ. ಸೆಮಾಗ್ಲುಟೈಡ್ ನಂತಹ ವಾರಕ್ಕೊಮ್ಮೆ ಸೇವಿಸುವ ಆಯ್ಕೆಗಳು ನಿತ್ಯ ಔಷಧ ಸ್ವೀಕರಿಸುವ ಹೊರೆಯನ್ನು ನಿವಾರಿಸುತ್ತವೆ ಮತ್ತು ಜೀವನಶೈಲಿ ಬದಲಾವಣೆಗಳೊಂದಿಎ ಸಂಯೋಜಿಸಿದಾಗ ಅವರಿಗೆ ತಮ್ಮ ಆರೋಗ್ಯದ ಅರ್ಥಪೂರ್ಣ, ದೀರ್ಘಾವಧಿ ನಿಯಂತ್ರಣ ತೆಗೆದುಕೊಳ್ಳುವ ಅವಕಾಶ ನೀಡುತ್ತವೆ” ಎಂದರು.
ಬೊಜ್ಜಿಗೆ ಸೆಮಾಗ್ಲುಟೈಡ್ ಬಳಕೆಯು ತೂಕ ಇಳಿಸುವುದು ಮಾತ್ರವಲ್ಲದೆ ನಿಮ್ಮ ಹೃದಯವನ್ನೂ ರಕ್ಷಿಸುತ್ತದೆ. ಇದಕ್ಕೆ ಸದೃಢ ಕ್ಲಿನಿಕಲ್ ಪುರಾವೆಯಿದೆ. ಸೆಮಾಗ್ಲುಟೈಡ್ ಹೃದಯಾಘಾತ ಮತ್ತು ಪಾರ್ಶ್ವವಾಯುಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಮತ್ತೊಂದು ಅಧ್ಯಯನದಲ್ಲಿ ಇಂಜೆಕ್ಟಬಲ್ ಸೆಮಾಗ್ಲುಟೈಡ್ ಶೇ.57ರಷ್ಟು ಹೃದಯಾ‍ಘಾತ ಕಡಿಮೆ ಮಾಡುತ್ತದೆ ಎಂದು ತೋರಿಸಿದೆ.
ಮಧುಮೇಹದಂತೆಯೇ ಬೊಜ್ಜು ಕೂಡಾ ಗಂಭೀರ ಸ್ಥಿತಿಯಾಗಿದ್ದು ಜೀವನಪೂರ್ಣ ನಿರ್ವಹಣೆಯ ಅಗತ್ಯವಿರುತ್ತದೆ. ಆದ್ದರಿಂದ ಔಷಧವನ್ನು ಜೀವನಶೈಲಿ ಬದಲಾವಣೆಗಳೊಂದಿಗೆ ಸಂಯೋಜಿಸುವುದರಲ್ಲಿ ಯಶಸ್ಸು ಇದೆ.