Silent Diet Mistakes Make Period Cycle More Painful 
ಆರೋಗ್ಯ

ಮುಟ್ಟಿನ ಸಮಯದಲ್ಲಿ ಈ 5 ತಪ್ಪುಗಳನ್ನು ಮಾಡಬೇಡಿ; ಇವು ಹೊಟ್ಟೆ ನೋವು, ಆಯಾಸಕ್ಕೆ ಇನ್ನಷ್ಟು ಕಾರಣವಾಗಬಹುದು..Period Cycle

ಪ್ರಮುಖ ಮುಖ್ಯಾಂಶಗಳು

  • ಮುಟ್ಟಿನ ಸಮಯದಲ್ಲಿ ಈ ಆಹಾರ ಸೇವನೆ ಮಾಡೋದು ಬಿಟ್ಟುಬಿಡಿ.
  • ಕಾಫಿ-ಟೀ, ಚಾಕೋಲೇಟ್​ ತಿನ್ನುವುದು ಹೊಟ್ಟೆ ನೋವಿಗೆ ಕಾರಣವಾಗುತ್ತದೆ.
  • ಎಳ್ಳುಂಡೆ, ಹಲೀಮ್ ಬೀಜ, ಅಜ್ವಾನ ಕುದಿಸಿದ ನೀರು ಮುಟ್ಟಿನ ಸಮಯದಲ್ಲಿ ಹೊಟ್ಟೆಗೆ ಮದ್ದು.

Silent Diet Mistakes Make Period Cycle More Painful: ಪ್ರತಿ ತಿಂಗಳು ಸಾವಿರಾರು ಮಹಿಳೆಯರು ಮುಟ್ಟಿನ ಸಮಯದಲ್ಲಿ ನೋವು ಅನುಭವಿಸುತ್ತಾರೆ. ಹೊಟ್ಟೆ ಉಬ್ಬರ..ಹೊಟ್ಟೆ ತುಂಬಿದೆ ಎನ್ನುವಂತೆ ಭಾಸವಾಗುವುದು. ಹೊಟ್ಟೆ ನೋವು, ಸ್ನಾಯು ಸೆಳೆತ ಹಾಗೂ ಅಸ್ವಸ್ಥೆಯಿಂದ ಬಳಲಬಹುದು. ಈ ಸಮಯದಲ್ಲಿ ದೇಹವು ಹೆಚ್ಚು ಪೌಷ್ಠಿಕಾಂಶವನ್ನು ಬೇಡುತ್ತದೆ. ಹೀಗಾಗಿ ಮುಟ್ಟಿನ ಸಮಯದಲ್ಲಿ ತಪ್ಪಾದ ಆಹಾರ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳುವುದನ್ನು ತಪ್ಪಿಸಬೇಕು ಎಂದು ದೆಹಲಿ ಮೂಲದ ಪ್ರಸಿದ್ಧ ಕ್ಲಿನಿಕಲ್ ಪೌಷ್ಟಿಕತಜ್ಞೆ ಲೊವ್ನೀತ್ ಬಾತ್ರಾ ಹೇಳಿದ್ದಾರೆ.

ಲೊವ್ನೀತ್ ಬಾತ್ರಾ ಅವರ ಪ್ರಕಾರ ಮುಟ್ಟಾದಾಗ ನಾವು ಮಾಡುವ 5 ಸಾಮಾನ್ಯ ತಪ್ಪುಗಳು ಅಸ್ವಸ್ಥೆ, ಆಯಾಸಕ್ಕೆ ಕಾರಣವಾಗಬಹುದು ಹೀಗಾಗಿ..ಈ ಸಮಯದಲ್ಲಿ ಈ ಆಹಾರವನ್ನು ಬಿಟ್ಟುಬಿಡುವುದು ಒಳ್ಳೆಯದು ಎಂದು ಹೇಳಿದ್ದಾರೆ. ಈ ಬಗ್ಗೆ ಇನ್​​ಸ್ಟಾಗ್ರಾಮ್​​ನಲ್ಲಿ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ.

ಕಾರ್ಬೋಹೈಡ್ರೇಟ್​ ಫುಡ್​ ತಿನ್ನದೇ ಇರುವುದು

ಮುಟ್ಟಿನ ಸಮಯದಲ್ಲಿ ಮಾನಸಿಕವಾಗಿ ಸಾಕಷ್ಟು ಏರುಪೇರನ್ನು ಅನುಭವಿಸುತ್ತೇವೆ. ಕ್ರಮೇಣ ಮೂಡ್​ಸ್ವಿಂಗ್ಸ್ ಕಾಡುತ್ತದೆ. ಹೀಗಾಗಿ ದೇಹಕ್ಕೆ ಕಾರ್ಬೋಹೈಡ್ರೇಟ್​ ಅಂಶದ ಅವಶ್ಯಕತೆ ಇರುತ್ತದೆ,. ಆದರೆ ಸಂಪೂರ್ಣ ಈ ಅಂಶವನ್ನು ದೇಹಕ್ಕೆ ನೀಡದೆ ಬಿಟ್ಟು ಬಿಡುವುದರಿಂದ ಆಯಾಸ ಮತ್ತು ಯಾರು ಏನೇ ಮಾತನಾಡಿದರೂ ಸಹ ಕಿರಿಕಿರಿ ಕಾಡಬಹುದು. ಮುಟ್ಟಿನ ಸಮಯದಲ್ಲಿ ಸಣ್ಣ ಬಟ್ಟಲಲ್ಲಿ ಬಾಜ್ರಾ ಖಿಚಡಿ ಅಥವಾ ರಾಜ್‌ಗಿರಾವನ್ನು ಸೇವನೆ ಮಾಡಿ.

ಆಯಾಸ ಎಂದು ಚಹಾ ಮತ್ತು ಕಾಫಿ ಕುಡಿತ ಬೇಡ

ನೋವು ಮತ್ತು ಆಯಾಸವನ್ನು ಕಡಿಮೆ ಮಾಡಲು ಅನೇಕರು ಚಹಾ ಅಥವಾ ಕಾಫಿಯನ್ನು ಹೆಚ್ಚು ಕುಡಿಯುತ್ತಾರೆ. ಆದರೆ ಇದರಲ್ಲಿರುವ 'ಟ್ಯಾನಿನ್' ಅಂಶವು ಕಬ್ಬಿಣಾಂಶದ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ ಮತ್ತು ರಕ್ತನಾಳಗಳನ್ನು ಸಂಕುಚಿತಗೊಳಿಸಿ ಸೆಳೆತವನ್ನುಹೆಚ್ಚಿಸುತ್ತದೆ.: ಇದಕ್ಕೆ ಬದಲಾಗಿ ಗರ್ಭಕೋಶದ ಸ್ನಾಯುಗಳನ್ನು ಸಡಿಲಗೊಳಿಸುವ 'ಓಮ ಕಾಳು' ಹಾಕಿದ ಬೆಚ್ಚಗಿನ ನೀರನ್ನು ಕುಡಿಯಿರಿ.

ಸಂಸ್ಕರಿಸಿದ ಚಾಕೋಲೇಟ್ ತಿನ್ನುವುದು

ಮುಟ್ಟಾದಾಗ ಹೆಚ್ಚು ಚಾಕೋಲೇಟ್ ಸೇವನೆ ಮಾಡಬೇಕು ಎಂದು ಎನಿಸೋದು ದೇಹದಲ್ಲಿ ಮೆಗ್ನೀಶಿಯಮ್​ ಕಡಿಮೆಯಾದಾಗ. ಆದರೆ ಸಂಸ್ಕರಿಸಿದ ಚಾಕೋಲೇಟ್ ಅಥವಾ ಸಿಹಿ ತಿಂದರೆ ದೇಹದಲ್ಲಿ ರಕ್ತದ ಮಟ್ಟವನ್ನು ಏರಿಕೆ ಮಾಡಿ, ನೋವನ್ನು ಉಲ್ಬಣಿಸುತ್ತದೆ. ಚಾಕೋಲೇಟ್​ ಬದಲು ಹುರಿದ ಕಡಲೆ ಅಥವಾ ಎಳ್ಳಿನ ಉಂಡೆ ತಿನ್ನಿ.

ಸುಲಭ ಜೀರ್ಣವಾಗುವ ಆಹಾರ ಸೇವಿಸಿ

ಮುಟ್ಟಿನ ಸಮಯದಲ್ಲಿ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವನೆ ಮಾಡಬೇಕು. ಹೀಗಾಗಿ ಸಲಾಡ್​ ಅಥವಾ ಕೋಲ್ಡ್​ ಪದಾರ್ಥಗಳನ್ನು ತಿನ್ನುವ ಬದಲಾಗಿ ದಾಲ್​ನಿಂದ ತಯಾರಿಸಿದ ಆಹಾರವನ್ನು ಸೇವಿಸಿ.

ಅತಿಯಾದ ಆಯಾಸ ನಿರ್ಲಕ್ಷ್ಯ ಬೇಡ

ಮುಟ್ಟಿನ ಸಮಯದಲ್ಲಿ ಅತಿಯಾದ ಆಯಾಸವಾಗುತ್ತಿದ್ದರೆ, ಇದ್ದಿದ್ದೇ ಎಂದು ನಿರ್ಲಕ್ಷ್ಯ ಮಾಡಬೇಡಿ. ಇದು ಹೆಚ್ಚು ರಕ್ತಸ್ರಾವವಾಗಿ ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾದಾಗ ಕಾಡುವ ಸಮಸ್ಯೆ. ಹೀಗಾಗಿ halim seeds ಬೀಜಗಳನ್ನು ಕುದಿಸಿದ ನೀರಿಗೆ ಹಾಕಿ ಕುಡಿಯಿರಿ. ಇದು ಕೆಂಪು ರಕ್ತಕಣಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, (ಏಜೆನ್ಸೀಸ್).