- ನಿಮ್ಮ ಹೊಟ್ಟೆಯ ಬೊಜ್ಜು ಕಡಿಮೆಯಾಗಲು ವ್ಯಾಯಾಮ ಮಾತ್ರ ಸಾಲೋದಿಲ್ಲ
- ಹೊಟ್ಟೆ ಬೊಜ್ಜು ಕಡಿಮೆ ಮಾಡಿಕೊಳ್ಳಲು ಏನು ಮಾಡಬೇಕು?
- ಹಾಲಿನ ಪದಾರ್ಥ, ಉಪ್ಪು ಸೇವೆನೆ, ತಿಂದ ತಕ್ಷಣ ಮಲಗುವುದು ಹೊಟ್ಟೆ ಬೊಜ್ಜು ಹೆಚ್ಚಳಕ್ಕೆ ಕಾರಣ
Belly Fat: ಕರೀನಾ ಕಪೂರ್, ಶಿಲ್ಪಾ ಶೆಟ್ಟಿಯಂತೆ ನಮ್ಮ ಹೊಟ್ಟೆ ಕಾಣಬೇಕು, ಸೀರೆಯುಟ್ಟಾಗ ದೇಹದ ಸ್ಲಿಮ್ನೆಸ್ ಚಂದ ಕಾಣ್ಬೇಕು ಎನ್ನುವುದು ಎಲ್ಲ ಹುಡುಗಿಯರ ಆಶಯ. ಗ್ರೀನ್ ಟೀ, ಬ್ಲಾಕ್ ಕಾಫಿ, ಬೆಳಗೆದ್ದ ಕೂಡಲೇ ಬಿಸಿ ನೀರಿಗೆ ಜೇನುತುಪ್ಪ ಹೀಗೆ ಎಲ್ಲ ಪ್ರಯೋಗ ಮಾಡಿಯಾದರೂ ಬೊಜ್ಜು ಮಾತ್ರ ಕಡಿಮೆಯಾಗ್ತಿಲ್ಲ ಎಂದು ಪೆಚ್ಚು ಮೊರೆ ಹಾಕೋದು ಮಾಮೂಲು. ಆದರೆ, ಈ ಸಮಸ್ಯೆಗೆ ವ್ಯಾಯಾಮ ಮಾಡೋದು ಮಾತ್ರ ಪರಿಹಾರವಲ್ಲ ಬದಲಾಗಿ, ನಮ್ಮ ದೈನಂದಿನದ ಕೆಲವು ಕೆಟ್ಟ ಅಭ್ಯಾಸಗಳು ಹೊಟ್ಟೆಯ ಬೊಜ್ಜು ಇನ್ನಷ್ಟು ವೃದ್ಧಿಸೋಕೆ ಸಹಾಯ ಮಾಡುತ್ತದೆ ಎನ್ನುತ್ತಾರೆ ನ್ಯೂಟ್ರಿಷಿಯನ್ ಸಾಕ್ಷಿ ಲಲ್ವಾನಿ.
ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಾಕ್ಷಿ ನಿಮಗೆ ಹೊಟ್ಟೆಯ ಕೊಬ್ಬು ವೃದ್ಧಿಯಾಗೋದು ಕಡಿಮೆಯಾಗಬೇಕು ಎಂದರೆ, ಈ ನಿಯಮವನ್ನು ಫಾಲೋ ಮಾಡಿ ಎಂದಿದ್ದಾರೆ. ಜೊತೆಗೆ ಹೊಟ್ಟೆಯ ಬೊಜ್ಜು ಹೆಚ್ಚಾಗಲು ಆಹಾರ, ವ್ಯಾಯಾಮ ಕಾರಣವಲ್ಲ. ನೀವು ದಿನಿತ್ಯ ಮಾಡುವ ಕೆಲವು ತಪ್ಪುಗಳು ಎಂದು ಹೇಳಿದ್ದಾರೆ. ಹೊಟ್ಟೆ ಬೊಜ್ಜು ಕರಗಿಸೋಕೆ ಏನು ಮಾಡಬೇಕು ಅನ್ನೋದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ಗಬಗಬ ಎಂದು ತಿನ್ನುವುದು
ನಿಮ್ಮ ಹೊಟ್ಟೆ ತುಂಬಿದೆ ಎಂದು ಮೆದುಳಿಗೆ ಹೊಟ್ಟೆ ಆದೇಶ ನೀಡಲು ಕನಿಷ್ಟ 20 ನಿಮಿಷ ಬೇಕು. ಈ ಪ್ರೋಸೆಸ್ನಲ್ಲಿ ಕೆಲವರು ಗಬಗಬನೇ ಊಟ ತಿಂದು ಅಗತ್ಯಕ್ಕಿಂತ ಹೆಚ್ಚು ತಿಂದು ಕ್ಯಾಲೋರಿ ಹೆಚ್ಚಿಸಿಕೊಳ್ಳುತ್ತಾರೆ. ಬೇಗ ತಿನ್ನುವಾಗ ನೀವು ಹೆಚ್ಚಾಗಿ ಉಸಿರಾಡಿ, ಗಾಳಿ ದೇಹದ ಒಳಗೆ ಹೋಗುವಂತೆ ಮಾಡುತ್ತದೆ. ನಂತರ ಹೊಟ್ಟೆ ಉಬ್ಬರ ಸಂಭವಿಸುತ್ತದೆ ಎಂದಿದ್ದಾರೆ.
ಮಲಬದ್ಧತೆಯೂ ಕಾರಣ
ಕರುಳಿನ ಚಲನೆ ಕಡಿಮೆಯಾದಾಗ ಕೂತಲ್ಲೇ ಕುಳಿತಾಗ ಮಲಬದ್ಧತೆ ಕಾಡುತ್ತದೆ. ಇದು ಹೊಟ್ಟಯ ಊತಕ್ಕೆ ಕಾರಣವಾಗಬಹುದು. ಈ ಸಮಸ್ಯೆ ಗುಣಪಡಿಸಿಕೊಳ್ಳಲು ಹೆಚ್ಚು ಫೈಬರ್ವುಳ್ಳ ಹಣ್ಣು, ಕಾಯಿ, ತರಕಾರಿಗಳನ್ನು ಸೇವಿಸಿ. ಹೆಚ್ಚೆಚ್ಚು ನೀರು ಕುಡಿಯೋದನ್ನ ಮರೆಯಬೇಡಿ ಎಂದು ಹೇಳಿದ್ದಾರೆ
ಉಪ್ಪು ಮತ್ತು ಸಂಸ್ಕರಿಸಿದ ಆಹಾರ ಸೇವನೆ
ಉಪ್ಪು ಹೆಚ್ಚು ದೇಹಕ್ಕೆ ಸೇರಿದಾಗ, ಒಳಗಿರುವ ಸೋಡಿಯಂ ಅನ್ನು ಡೈಜೆಸ್ಟ್ ಮಾಡಿಕೊಳ್ಳಲು ಹೆಚ್ಚು ನೀರನ್ನು ಕೇಳುತ್ತೆ ಇದು ಹೊಟ್ಟೆ ಉಬ್ಬರಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ. ಇನ್ನು ಚಿಪ್ಸ್, ಕರಿದ ತಿಂಡಿಗಳು ಹೆಚ್ಚು ಉಪ್ಪಿನಕಾಯಿ ತಿನ್ನುವುದನ್ನು ಕಡಿಮೆ ಮಾಡಿ ಎನ್ನುತ್ತಾರೆ ಸಾಕ್ಷಿ.
ಹಾಲು ಸೇವನೆ, ಐಸ್ಕ್ರೀಂ ಕಡಿಮೆ ಮಾಡಿ
ಬ್ರೀ, ರಿಕ್ಟೋಟಾ ಮತ್ತು ಕ್ರೀಮ್ನಂತಹ ಮೃದುವಾದ ಚೀಸ್ ತಿನ್ನೋದನ್ನು ತಪ್ಪಿಸಬೇಕು. ಲ್ಯಾಕ್ಟೋಸ್ ಅಧಿಕವಾಗಿರುವ ಹಾಲಿನಂತಹ ಕ್ರೀಮ್ಗಳು ಹೊಟ್ಟಯ ಬೊಜ್ಜು ಹೆಚ್ಚಳಿಕೆಗೆ ಕಾರಣ ಎಂದು ಸಾಕ್ಷಿ ಎಚ್ಚರಿಕೆ ನೀಡಿದ್ದಾರೆ.
ಊಟವಾದ ನಂತರ ಮಲಗಬೇಡಿ
ಊಟದ ನಂತರ ಆಹಾರವೂ ಸರಳವಾಗಿ ನಿಧಾನವಾಗಿ ಜೀರ್ಣಕ್ರಿಯೆಯನ್ನು ಆರಂಭಿಸುತ್ತದೆ. ತಿಂದ ತಕ್ಷಣ ಯಾವುದೇ ಚಲನೆ ಇಲ್ಲದೆ ಮಲಗುವುದು ಹೊಟ್ಟೆಯುಬ್ಬರವನ್ನು ಉಂಟುಮಾಡುತ್ತದೆ ಎಂದು ಸಾಕ್ಷಿ ಲಲ್ವಾನಿ ತಮ್ಮ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ, (ಏಜೆನ್ಸೀಸ್)