ಸಾಂದರ್ಭಿಕ ಚಿತ್ರ 
ಆರೋಗ್ಯ

ಫಿಟ್ನೆಸ್ ಚಾಲೆಂಜ್: ಜಿಮ್ ಅನಿವಾರ್ಯವಲ್ಲ, ಈ ಸಣ್ಣ ಬದಲಾವಣೆಗಳಿಂದಲೇ 8 ಕೆಜಿ ತೂಕ ಇಳಿಸಿ! Weight loss

ಭಾನುಪ್ರಿಯ ಡಿ.ಕೆ
Weight loss: ಇಂದಿನ ಜಗತ್ತಿನಲ್ಲಿ, ಅನಾರೋಗ್ಯಕರ ಜೀವನಶೈಲಿ, ಕಳಪೆ ಆಹಾರ ಪದ್ಧತಿ ಮತ್ತು ಹೆಚ್ಚಿದ ಒತ್ತಡದಿಂದಾಗಿ ತೂಕ ಹೆಚ್ಚಾಗುವುದು ಸಾಮಾನ್ಯವಾಗಿದೆ. ಒಮ್ಮೆ ತೂಕ ಹೆಚ್ಚಾದರೆ, ಅದನ್ನು ಕಳೆದುಕೊಳ್ಳುವುದು ಸಾಮಾನ್ಯವೇನಲ್ಲ. ತೂಕ ಇಳಿಸಿಕೊಳ್ಳಲು ನಿರಂತರ ಶಿಸ್ತು ಬದ್ಧ ಪ್ರಯತ್ನದ ಅಗತ್ಯ ಹೆಚ್ಚಿರುತ್ತದೆ.
ಫಿಟ್ನೆಸ್ ತರಬೇತುದಾರ ಟಕೈ ರಶೀದ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ತೂಕ ಇಳಿಸಿಕೊಳ್ಳಲು ಕೆಲವೊಂದು ಸಲಹೆಯನ್ನು ಹಂಚಿಕೊಂಡಿದ್ದಾರೆ. ಕೊಬ್ಬನ್ನು ಕಳೆದುಕೊಳ್ಳುವುದು ಅದೃಷ್ಟದ ವಿಷಯವಲ್ಲ, ಬದಲಿಗೆ ಸರಿಯಾದ ಯೋಜನೆ, ಶಿಸ್ತು ಮತ್ತು ಪ್ರತಿದಿನ ಸಣ್ಣ, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮುಖ್ಯ ಎಂದು ಬರೆದಿದ್ದಾರೆ.
ತೂಕ ಇಳಿಸಿಕೊಳ್ಳಲು ನೀವೇನಾದರೂ ಪ್ರಯತ್ನಿಸುತ್ತಿದ್ದರೆ, ಅವರು ಸೂಚಿಸುವ ಶಿಸ್ತು ಬದ್ಧ ಯೋಜನೆಯಿಂದ ಮೂರು ತಿಂಗಳಲ್ಲಿ ಕನಿಷ್ಟ 20 ಕೆಜಿ ತೂಕ ಇಳಿಸಿಕೊಳ್ಳಬಹುದು ಎಂದು ಹೇಳಿದ್ದಾರೆ. ಹಾಗಾದ್ರೆ, ಅವರು ನೀಡಿದ ಸಲಹೆಗಳು ಏನು ಎಂದು ನೋಡೋಣ ಬನ್ನಿ...

1.ಸಕ್ಕರೆ ಪಾನೀಯಗಳನ್ನು ತಪ್ಪಿಸಿ

ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಮೊದಲು ನೀವು ಕುಡಿಯುವ ಸೋಡಾ, ಸಿಹಿಗೊಳಿಸಿದ ಪಾನೀಯಗಳು, ಆಲ್ಕೋಹಾಲ್‌ನಂತಹ ಸಕ್ಕರೆ ಪಾನೀಯಗಳನ್ನು ಸೇವಿಸುವ ಅಭ್ಯಾಸವನ್ನು ಇಂದೇ ನಿಲ್ಲಿಸಿ. ಅದರ ಬದಲಾಗಿ ಗ್ರೀನ್​ ಟೀ, ನಿಂಬೆ ನೀರು, ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.

2. ಕಾರ್ಬೋಹೈಡ್ರೇಟ್‌ಗಳನ್ನು ಕಡಿಮೆ ಮಾಡಿ

ಸಂಸ್ಕರಿಸಿದ ಆಹಾರಗಳಾದ ಬಿಳಿ ಬ್ರೆಡ್, ಪೇಸ್ಟ್ರಿ, ಕರಿದ ತಿಂಡಿಗಳು ಮತ್ತು ಹೆಚ್ಚು ಅನ್ನ ಸೇವಿಸುವುದರಿಂದ ತೂಕ ಹೆಚ್ಚಾಗುತ್ತದೆ. ಹಾಗಾಗಿ ಇಂತಹ ಆಹಾರಗಳನ್ನು ಸೇವಿಸುವುದನ್ನು ನಿಲ್ಲಿಸಿ. ಅದರ ಬದಲಾಗಿ, ನಿಮ್ಮ ಆಹಾರದಲ್ಲಿ ಪ್ರೋಟೀನ್, ಹಸಿರು ತರಕಾರಿಗಳು ಮತ್ತು ಓಟ್ಸ್‌ನಂತಹ ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳನ್ನು ಸೇರಿಸಿ ತಿನ್ನುವ ಅಭ್ಯಾಸವನ್ನು ಮಾಡಿಕೊಳ್ಳಿ. ಇದರಿಂದ ತೂಕ ಇಳಿಸಿಕೊಳ್ಳಬಹುದು.

3. ತಡರಾತ್ರಿಯ ತಿಂಡಿಗಳನ್ನು ತಪ್ಪಿಸಿ

ನೀವೇನಾದರೂ ರಾತ್ರಿ ವೇಳೆ ಬಿಸ್ಕತ್ತು ಅಥವಾ ಜ್ಯೂಸ್ ಸೇವಿಸುವ ಅಭ್ಯಾಸವನ್ನು ಮಾಡಿಕೊಂಡರೆ, ಇದರಿಂದ ಹೊಟ್ಟೆಯ ಕೊಬ್ಬು ಹೆಚ್ಚಾಗಬಹುದು. ಇದು ನಿಮ್ಮ ತೂಕ ಮತ್ತು ಆಕಾರವನ್ನು ತಪ್ಪಿಸಬಹುದು. ಹಾಗಾಗಿ ನೀವೇನಾದರೂ ರಾತ್ರಿ ಸಮಯದಲ್ಲಿ ತಿನ್ನಬೇಕು ಎಂಬ ಹಂಬಲ ನಿಮ್ಮಲ್ಲಿದ್ದರೆ, ಊಟವನ್ನು ಮಾಡಿ. ನಂತರ ನೀರನ್ನು ಮಾತ್ರ ಸೇವಿಸಿ.

4. ಆಹಾರ ಸೇವನೆಯನ್ನು ಮಿತಿಗೊಳಿಸಿ

ಹೊರಗೆ ಲಭ್ಯವಿರುವ ಫಾಸ್ಟ್ ಫುಡ್ ನಿಮಗೆ ರುಚಿಕರವಾಗಿರಬಹುದು, ಆದರೆ ಅದನ್ನು ಅತಿಯಾಗಿ ಸೇವಿಸುವುದರಿಂದ ತೂಕ ಹೆಚ್ಚಾಗಬಹುದು. ಹಾಗಾಗಿ ನೀವೇನಾದರೂ, ಈ ರೀತಿಯ ಆಹಾರವನ್ನು ಸೇವಿಸುತ್ತಿದ್ದರೆ, ಇಂದೇ ನಿಲ್ಲಿಸಿ. ಅದರ ಬದಲಿಗೆ ಮನೆಯಲ್ಲಿ ಬೇಯಿಸಿದ ತಾಜಾ ಆಹಾರವನ್ನು ಸೇವಿಸಿ ಇದು ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ.

5. ನಿಮ್ಮನ್ನು ನೀವು ಚಟುವಟಿಕೆಯಿಂದ ಇಟ್ಟುಕೊಳ್ಳಿ

ಊಟ ಆದ ನಂತರ ಕನಿಷ್ಟ 30 ನಿಮಿಷಗಳ ಕಾಲ ಓಡಾಡುಡುವುದು, ಮೆಟ್ಟಿಲುಗಳನ್ನು ಹತ್ತಿ, ನಡೆಯುವ ಅಭ್ಯಾಸವನ್ನು ಮಾಡಿಕೊಳ್ಳಿ. ಇದು ನಿಮ್ಮನ್ನು ಆರೋಗ್ಯವಾಗಿರಿಸುವುದರ ಜೊತೆಗೆ ನಿಮ್ಮ ತೂಕವನ್ನು ಹೆಚ್ಚಿಸದಂತೆ ತಡೆಯುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.