Alcohol hangover: ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಅನೇಕರು ಪಾರ್ಟಿ ಮಾಡುವುದಂತೂ ಸತ್ಯ. ಈ ವೇಳೆ ಮದ್ಯಪಾನ ಮಾಡುವುದು ಹೇಗೆ ಮಾಡುತ್ತಾರೋ, ಅದೇ ರೀತಿ ಆ ಹ್ಯಾಂಗ್ ಓವರ್ನಿಂದ ಹೊರ ಬರಲು ಅಷ್ಟೇ ಪ್ರಯತ್ನಿಸುತ್ತಾರೆ. ಹಾಗಾಗಿ ನೀವೇನಾದರೂ ಹ್ಯಾಂಗ್ ಓವರ್ನಿಂದ ಹೊರ ಬರಲು ಪ್ರಯತ್ನಿಸುತ್ತಿದ್ದರೆ, ನಿಮಗೆ ಈ ಪಾನೀಯಗಳು ಸಹಾಯ ಮಾಡಬಹುದು.
ಹ್ಯಾಂಗೊವರ್ ಅನ್ನು ತೊಡೆದುಹಾಕುವುದು ಹೇಗೆ?
ಮದ್ಯಪಾನವು ದೇಹಕ್ಕೆ ತುಂಬಾ ಹಾನಿಕಾರಕ ಎಂದು ಎಲ್ಲರಿಗೂ ತಿಳಿದಿರುವಂತಹ ಮಾಹಿತಿ. ಇದಲ್ಲದೇ ಇದು ಯಕೃತ್ನ್ನು ಹಾನಿಗೊಳಿಸುತ್ತದೆ. ಹಾಗಾಗಿ ಆದಷ್ಟು ಮದ್ಯಪಾನದಿಂದ ದೂರ ಇರುವುದು ಉತ್ತಮ. ಆದಾಗ್ಯೂ, ಆದಷ್ಟು ಜನರು ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯಪಾನ ಮಾಡೇ ಮಾಡುತ್ತಾರೆ. ಈ ಸಂದರ್ಭದಲ್ಲಿ ಅದರ ಹ್ಯಾಂಗೊವರ್ನಿಂದಾಗಿ ಹೊರ ಬರಲು ಈ ಪಾನೀಯಗಳನ್ನು ಕುಡಿಯಿರಿ.
ತೆಂಗಿನ ನೀರು ಅತ್ಯಗತ್ಯ
ಹ್ಯಾಂಗ್ ಓವರ್ ಹೆಚ್ಚಾದಾಗ ತೆಂಗಿನ ನೀರನ್ನು ಕುಡಿಯುವುದು ಉತ್ತಮವಾಗಿದೆ. ಈ ಪಾನೀಯವು ಆರೋಗ್ಯವಾಗಿಡಲು ಸಹಾಯ ಮಾಡುವುದರ ಜೊತೆಗೆ ಹ್ಯಾಂಗ್ ಓವರ್ನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಉತ್ತಮ ಪ್ರಮಾಣದ ಎಲೆಕ್ಟ್ರೋಲೈಟ್‌ಗಳನ್ನು ಹೊಂದಿರುವುದರಿಂದ ಇದು ದೇಹದಲ್ಲಿ ಖನಿಜ ಸಮತೋಲನವು ಪುನಃಸ್ಥಾಪನೆಯಾಗುತ್ತದೆ.
ಪೇರಳೆ ಹಣ್ಣಿನ ರಸ ಸೇವಿಸಿ
ಮತ್ತಿನ ಅಮಲಿನಲ್ಲಿದ್ದರೆ, ನೀವು ಪೇರಳೆ ರಸವನ್ನು ಕುಡಿಯಿರಿ. ಇದು ದೇಹಕ್ಕೆ ಪ್ರಯೋಜನ ನೀಡುವುದರ ಜೊತೆಗೆ ಹ್ಯಾಂಗ್ ಓವರ್ನಿಂದ ಹೊರ ಬರಲು ಸಹಾಯ ಮಾಡುತ್ತದೆ. ಹಾಗಾಗಿ ಅತಿಯಾಗಿ ಮದ್ಯಪಾನ ಮಾಡಿದ ನಂತರ ಸೇವಿಸುವುದು ಉತ್ತಮವಾಗಿದೆ.
ಹೆಚ್ಚು ನೀರನ್ನು ಕುಡಿಯಿರಿ
ಪೌಷ್ಟಿಕ ತಜ್ಞೆ ಸೂಚಿಸುವಂತೆ ಮದ್ಯಪಾನ ಮಾಡುವುದರಿಂದ ದೇಹದಲ್ಲಿ ನಿರ್ಜಲೀಕರಣದ ಅಪಾಯ ಹೆಚ್ಚಾಗುತ್ತದೆ. ಇದರಿಂದ ಸಮಸ್ಯೆಗಳು ಹೆಚ್ಚಾಗಬಹುದು. ಹಾಗಾಗಿ ಈ ಸಮಸ್ಯೆಯನ್ನು ಪರಿಹರಿಸಲು ಅತಿಯಾಗಿ ನೀರು ಕುಡಿಯುವುದನ್ನು ಮಾಡಿರಿ. ಹ್ಯಾಂಗ್ ಓವರ್ನಲ್ಲಿದ್ದಾಗ ಹೆಚ್ಚು ನೀರು ಕುಡಿಯುವುದರಿಂದ ನಿಮ್ಮ ದೇಹ ಮತ್ತೆ ಸಹಜ ಸ್ಥಿತಿಗೆ ಮರಳುತ್ತದೆ. ಜೊತೆಗೆ ಹ್ಯಾಂಗ್ ಓವರ್ನಿಂದ ದೂರಾಗುತ್ತದೆ.
ನಿಂಬೆ ಪಾನಕ ಕುಡಿಯಬೇಡಿ
ಅನೇಕ ಜನರು ಹ್ಯಾಂಗ್ ಓವರ್ನಿಂದ ಹೊರಬರಲು ನಿಂಬೆ ನೀರನ್ನು ಕುಡಿಯುತ್ತಾರೆ. ಇದು ತಪ್ಪಾದ ಹಂತ. ಏಕೆಂದರೆ, ನಿಂಬೆಯಲ್ಲಿ ಸಿಟ್ರಿಕ ಆಮ್ಲವಿರುತ್ತದೆ. ಇದರಿಂದ ಆರೋಗ್ಯಕ್ಕೆ ಹೆಚ್ಚಿನ ಸಮಸ್ಯೆಗಳಾಗುವುದು ಹೆಚ್ಚಾಗುತ್ತದೆ. ಇದರಿಂದ ವಾಂತಿ ಬರುವುದು, ಹೊಟ್ಟೆ ನೋವಿನ ಅನುಭವವನ್ನು ಹೆಚ್ಚಾಗುತ್ತದೆ. ಹಾಗಾಗಿ ಹ್ಯಾಂಗ್ ಓವರ್ ಹೆಚ್ಚಾದಾಗ ನಿಂಬೆ ರಸದ ಬದಲಿಗೆ ಮೇಲಿನ ಪಾನೀಯಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.