ಸಾಂದರ್ಭಿಕ ಚಿತ್ರ 
ಆರೋಗ್ಯ

ಬಾತ್‌ರೂಮ್‌ ಅಲೆದಾಟಕ್ಕೆ ಇಲ್ಲಿದೆ ಮುಕ್ತಿ; ಈ ಹಣ್ಣುಗಳು ಪದೇ ಪದೇ ಮೂತ್ರ ವಿಸರ್ಜನೆಯ ಸಮಸ್ಯೆಗೆ ಪರಿಹಾರ ನೀಡಲಿವೆ..Night time urination

ಪ್ರಮುಖ ಮುಖ್ಯಾಂಶಗಳು

  • ಪ್ರತಿದಿನ ಮಲಗಿದ ನಂತರ ಕೆಲವೊಂದು ಜನರಿಗೆ ಮೂತ್ರ ವಿಸರ್ಜನೆ ಮಾಡುವ ಅಭ್ಯಾಸ ಇರುತ್ತದೆ
  • ಈ ಅಭ್ಯಾಸವು ನಿದ್ದೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವುನ್ನು ಹಲವಾರು ಜನರು ಅನುಭವಿಸಿರುತ್ತಾರೆ
  • ಈ ಸ್ಥಿತಿಯು ರಾತ್ರಿಯ ಪಾಲಿಯುರಿಯಾ, ಅತಿಯಾದ ಮೂತ್ರಕೋಶ, ಮಧುಮೇಹದಿಂದ ಉಂಟಾಗಬಹುದು
  • ಮೂತ್ರ ವಿಸರ್ಜನೆಗೆ ಎದ್ದೇಳುವ ಸ್ಥಿತಿಯನ್ನು ವೈದ್ಯಕೀಯ ಭಾಷೆಯಲ್ಲಿ ನೋಕ್ಟೂರಿಯಾ ಎಂದು ಕರೆಯುತ್ತಾರೆ
Night time urination: ಪ್ರತಿದಿನ ಮಲಗಿದ ನಂತರ ಕೆಲವೊಂದು ಜನರಿಗೆ ಮೂತ್ರ ವಿಸರ್ಜನೆ ಮಾಡುವ ಅಭ್ಯಾಸ ಇರುತ್ತದೆ. ಈ ಅಭ್ಯಾಸವು ನಿದ್ದೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವುನ್ನು ಹಲವಾರು ಜನರು ಅನುಭವಿಸಿರುತ್ತಾರೆ. ಈ ಸಮಸ್ಯೆಯನ್ನು ನೋಕ್ಟುರಿಯಾ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯು ರಾತ್ರಿಯ ಪಾಲಿಯುರಿಯಾ, ಅತಿಯಾದ ಮೂತ್ರಕೋಶ, ವಿಸ್ತರಿಸಿದ ಪ್ರಾಸ್ಟೇಟ್ ಅಥವಾ ಮಧುಮೇಹದಿಂದ ಉಂಟಾಗಬಹುದು. ನೀವೇನಾದರೂ ಈ ಸಮಸ್ಯೆಯಿಂದ ಹೊರ ಬರಬೇಕೆಂದು ಪ್ರಯತ್ನಿಸುತ್ತಿದ್ದರೆ, ಈ ಸಲಹೆಗಳನ್ನು ಪಾಲಿಸಿ. ಇದು ರಾತ್ರಿ ವೇಳೆ ಪದೇ ಪದೇ ಮೂತ್ರ ವಿಸರ್ಜನೆಯನ್ನು ತಡೆಯಲು ಸಹಾಯ ಮಾಡುತ್ತದೆ.

ರಾತ್ರಿಯಲ್ಲಿ ಮೂತ್ರ ವಿಸರ್ಜನೆ ಮಾಡಲು ಕಾರಣಗಳು

ರಾತ್ರಿಯ ಸಮಯದಲ್ಲಿ ಪದೇ ಪದೇ ಮೂತ್ರ ವಿಸರ್ಜನೆಗೆ ಎದ್ದೇಳುವ ಸ್ಥಿತಿಯನ್ನು ವೈದ್ಯಕೀಯ ಭಾಷೆಯಲ್ಲಿ 'ನೋಕ್ಟೂರಿಯಾ' (Nocturia) ಎಂದು ಕರೆಯಲಾಗುತ್ತದೆ. ಇದು ಕೇವಲ ನಿದ್ರೆಗೆ ಅಡ್ಡಿಪಡಿಸುವುದಲ್ಲದೆ, ಆರೋಗ್ಯದ ಕೆಲವೊಂದು ಸಮಸ್ಯೆಗಳ ಮೇಲೆ ಸೂಚನೆ ನೀಡುತ್ತದೆ.

ಆರೋಗ್ಯ ಸಮಸ್ಯೆಗಳೇನು?

ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾದಾಗ, ಮೂತ್ರಕೋಶದಲ್ಲಿ ಸೋಂಕು ಉಂಟಾದಾಗ, ಪುರುಷರಲ್ಲಿ ಪ್ರೊಸ್ಟೇಟ್ ಗ್ರಂಥಿ ದೊಡ್ಡದಾದಾಗ, ಮಹಿಳೆಯರಲ್ಲಿ ಗರ್ಭಾಶಯ ಬೆಳೆದಂತೆ ಮೂತ್ರಕೋಶದ ಮೇಲೆ ಒತ್ತಡ ಬೀರುವುದರಿಂದ ಅದು ಮೂತ್ರನಾಳದ ಮೇಲೆ ಒತ್ತಡ ಹೇರುತ್ತದೆ. ಇದರಿಂದ ಮೂತ್ರಕೋಶ ಸಂಪೂರ್ಣ ಖಾಲಿಯಾಗದೆ ಪದೇ ಪದೇ ಮೂತ್ರ ವಿಸರ್ಜಿಸಬೇಕೆನಿಸುತ್ತದೆ. ಈ ಸಮಯದಲ್ಲಿ ಈ ರೀತಿಯ ಹಣ್ಣುಗಳನ್ನು ಸೇವಿಸುವುದರಿಂದ ಈ ಸಮಸ್ಯೆಯನ್ನು ತಡೆಗಟ್ಟಬಹುದು.

* ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಹೇರಳವಾಗಿದೆ. ಇದರ ಸೇವನೆಯು ಮೂತ್ರನಾಳದ ಸ್ನಾಯುಗಳ ಕಾರ್ಯವನ್ನು ಸುಧಾರಿಸಿ, ಮೂತ್ರ ಕೋಶವನ್ನು ಸಂಕುಚಿತಗೊಳ್ಳದಂತೆ ತಡೆಯುತ್ತದೆ. ಇದರಿಂದ ನೀವು ಪದೇ ಪದೇ ಮೂತ್ರ ವಿಸರ್ಜಿಸುವುದನ್ನು ತಡೆಯಬಹುದು.

* ದಾಳಿಂಬೆ

ದಾಳಿಂಬೆಯಲ್ಲಿ ಆಂಟಿ-ಆಕ್ಸಿಡೆಂಟ್‌ಗಳು ಸಮೃದ್ಧವಾಗಿರುತ್ತವೆ. ಇದರ ಸೇವನೆಯು ಮೂತ್ರಪಿಂಡದ ಸೋಂಕನ್ನು ಕಡಿಮೆ ಮಾಡಲು ಮತ್ತು ಮೂತ್ರನಾಳದ ಉರಿಯೂತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ನಿಯಮಿತವಾಗಿ ಸೇವಿಸುವುದಿಂದ ಇದು ಮೂತ್ರಕೋಶದ ಮೇಲಿನ ಒತ್ತಡ ಕಡಿಮೆ ಮಾಡುತ್ತದೆ.

* ಸೇಬು

ಸೇಬಿನಲ್ಲಿರುವ ಫೈಬರ್ ಮತ್ತು ಇತರ ಪೋಷಕಾಂಶಗಳು ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಮೂತ್ರಕೋಶದ ಮೇಲೆ ಒತ್ತಡ ಹೇರುತ್ತದೆ. ಆದರಿಂದ ಸೇಬು ಸೇವನೆಯು ಮೂತ್ರ ವಿಸರ್ಜನೆಯನ್ನು ಸಮತೋಲನಗೊಳಿಸುತ್ತದೆ.

* ಕ್ರ್ಯಾನ್ಬೆರಿ

ಈ ಹಣ್ಣುಗಳ ಸೇವನೆಯು ಮೂತ್ರನಾಳದ ಸೋಂಕಿಗೆ ಸಹಾಯ ಮಾಡುತ್ತದೆ. ಇದು ಮೂತ್ರಕೋಶದಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯದಂತೆ ತಡೆದು, ರಾತ್ರಿ ಹೊತ್ತು ಮೂತ್ರ ವಿಸರ್ಜನೆ ಸಮಸ್ಯೆಯನ್ನು ನಿವಾರಿಸುತ್ತದೆ.

* ಒಣ ದ್ರಾಕ್ಷಿ

ರಾತ್ರಿ ಮಲಗುವ ಮುನ್ನ ಒಣ ದ್ರಾಕ್ಷಿಗಳನ್ನು ಸೇವಿಸುವುದರಿಂದ ಇದು ದೇಹದಲ್ಲಿ ಸಮತೋಲನ ಕಾಪಾಡಲು ಸಹಾಯ ಮಾಡುತ್ತದೆ. ಹಾಗೆಯೇ ಮೂತ್ರಕೋಶದ ಸಾಮರ್ಥ್ಯವನ್ನು ಸುಧಾರಿಸಿ ಮಲಗಿದ ನಂತರ ಮೂತ್ರ ವಿಸರ್ಜನೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಹಣ್ಣುಗಳನ್ನು ಯಾವಾಗ ತಿನ್ನಬೇಕು?

ಈ ಹಣ್ಣುಗಳನ್ನು ಯಾವಾಗಲೂ ಬೆಳಿಗ್ಗೆ ಅಥವಾ ಮಧ್ಯಾಹ್ನ ತಿನ್ನುವುದು ಉತ್ತಮ. ರಾತ್ರಿಯಲ್ಲಿ ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಿ. ಅರ್ಧ ಕಪ್​ ಹಣ್ಣನ್ನು ಮಾತ್ರ ಸೇವಿಸಿ. ಬರೀ ಹಣ್ಣನ್ನು ತಿನ್ನುವುದರ ಜೊತೆಗೆ ಮೊಸರು, ಚೀಸ್, ಕಡಲೆಕಾಯಿ, ಬಾದಾಮಿ ಸೇರಿಸಿ ತಿನ್ನಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಮತ್ತು ಮೂತ್ರ ವಿಸರ್ಜನೆಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನೀವು ಯಾವ ಹಣ್ಣುಗಳನ್ನು ತಪ್ಪಿಸಬೇಕು?

ಅತಿಯಾಗಿ ಕಿತ್ತಳೆ, ನಿಂಬೆಹಣ್ಣು ಮತ್ತು ಟೊಮೆಟೊಗಳಂತಹ ಸಿಟ್ರಸ್ ಹಣ್ಣುಗಳನ್ನು ಸೇವಿಸಬೇಡಿ. ಏಕೆಂದರೆ, ಇವು ಹೆಚ್ಚಿನ ಆಮ್ಲೀಯತೆಯನ್ನು ಹೊಂದಿರುತ್ತವೆ. ಸಂಜೆಯ ವೇಳೆಯಲ್ಲಿ ಆದಷ್ಟು ಕಲ್ಲಂಗಡಿ ಹಣ್ಣನ್ನು ಸೇವಿಸುವ ಅಭ್ಯಾಸ ಬಿಡಿ. ಇದು ದೇಹದಲ್ಲಿ ಹೆಚ್ಚಿನ ನೀರಿನ ಶೇಖರಣೆಯನ್ನು ಮಾಡಿ ಮೂತ್ರ ವಿಸರ್ಜಿಸುವಂತೆ ಮಾಡುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.