natural Face Skincare tips For Rainy Season
- ಮಳೆಗಾಲದಲ್ಲಿ ಕಾಡುವ ಚರ್ಮದ ಸಮಸ್ಯೆಗೆ ಮುಕ್ತಿ ಕೊಡೋದು ಹೇಗೆ?
- ಕಾಂತಿಯುಕ್ತ ಚರ್ಮಕ್ಕೆ ಯಾವ ನೈಸರ್ಗಿಕ ಫೇಸ್ ಪ್ಯಾಕ್ ಬಳಸಿದರೆ ಸೂಕ್ತ?
- ಆಲೂಗಡ್ಡೆ, ಜೇನುತುಪ್ಪ, ಅರಿಶಿನದ ಫೇಸ್ ಪ್ಯಾಕ್ ಮನೆಯಲ್ಲಿಯೇ ಟ್ರೈ ಮಾಡಿ.
Natural Face Skincare tips For Rainy Season:
ಮಳೆಗಾಲದಲ್ಲಿ ಚರ್ಮ ಸುಕ್ಕುಗಟ್ಟಂತಾಗುವುದು ಅಥವಾ ಒರಟಾಗುವುದು ಮಾಮೂಲು. ಮಂಕು ವಾತವರಣದಿಂದ ಮುಖದ ಮೇಲೆ ಕೂರುವ ಧೂಳು ಮುಖದ ಅಂದ ಮಾಡಲು ಎಡೆ ಮಾಡಿಕೊಡುತ್ತದೆ. ಮೊಡವೆ, ಕಪ್ಪು ಚುಕ್ಕೆಗಳು ಮೂಡುತ್ತದೆ. ಇಂತಹ ಸಮಸ್ಯೆಯನ್ನು ಮನೆಯಲ್ಲಿರುವ ಅಡುಗೆ ಪದಾರ್ಥಗಳಿಂದಲೇ ಹೋಗಲಾಡಿಸಬಹುದು. ಅದು ಹೇಗೆ ಎನ್ನುವುದಕ್ಕೆ ಮಾಹಿತಿ ಈ ಲೇಖನದಲ್ಲಿ ಇದೆ.
ಜೇನುತುಪ್ಪ
ಜೇನುತುಪ್ಪದಲ್ಲಿರುವ ಉತ್ಕರ್ಷಣಾ ನಿರೋಧಕ ಗುಣ ಚರ್ಮವನ್ನು ತೇವಾಂಶದಿಂದ ಕೂಡಿರಲು ಸಹಾಯ ಮಾಡುತ್ತದೆ. ಒಂದು ಚಮಚ ತುಪ್ಪವನ್ನು ಕೈಗೆ ಹಾಕಿಕೊಂಡು ಮೃದುವಾಗಿ ಮುಖದ ಮೇಲೆ ಮಸಾಜ್ ಮಾಡಿ ನಂತರ ಬೆಚ್ಚಗಿನ ನೀರಿನಿಂದ ತೊಳೆದು ಮೃದು ಟವಲ್ನಿಂದ ಮುಖ ಒರೆಸಿಕೊಳ್ಳುವ ಅಭ್ಯಾಸವು ಮುಖದ ಕಾಂತಿಯನ್ನು ಹೆಚ್ಚಿಸಲು ಸಹಾಯ ಮಾಡಬಹುದು.
ಹಾಲು
ಹಾಲಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ಸತ್ತ ಚರ್ಮದ ನಿರ್ಮೂಲನೆ ಮತ್ತು ಒಡಕಾಗಿರುವ ಚರ್ಮದ ದುರಸ್ತಿಗೆ ಸಹಕಾರಿಯಾಗುರತ್ತದೆ, ಇಷ್ಟೇ ಅಲ್ಲದೇ ಚರ್ಮವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ. ಹೀಗಾಗಿ ಹಸಿ ಹಾಲನ್ನು ಹತ್ತಿಯಲ್ಲಿ ಅದ್ದಿ ಮುಖವನ್ನು ಮೃದುವಾಗಿ ಮಸಾಜ್ ಮಾಡಿಕೊಳ್ಳಿ. 10ರಿಂದ 15 ನಿಮಿಷ ಬಿಟ್ಟು ಮುಖ ತೊಳೆದುಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಬಹುದು.
ಟೊಮ್ಯಾಟೋ ಪ್ಯಾಕ್
ನೀವು ತರಕಾರಿ ಹಚ್ಚುವಾಗ ಅರ್ಧ ಭಾಗವನ್ನು ಫೇಸ್ ಪ್ಯಾಕ್ಗಾಗಿ ಎತ್ತಿಡಿ. ಟೊಮ್ಯಾಟೋವನ್ನು ಹಚ್ಚಿ ಫೇಸ್ ಪ್ಯಾಕ್ ಮಾಡಿಕೊಳ್ಳುವುದರಿಂದ ಚರ್ಮದಲ್ಲಿ ಜೀವ ಸತ್ವ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸೂಕ್ಷ್ಮ ಚರ್ಮ ಹೊಂದಿದ್ದರೆ ವೈದ್ಯರ ಅನುಮತಿ ಪಡೆಯೋದು ಅಗತ್ಯ.
ಆಲೂಗಡ್ಡೆ
ಆಲೂಗಡ್ಡೆಯಲ್ಲಿರುವ ವಿಟಮಿನ್ ಚರ್ಮದ ಮೃದುತ್ವಕ್ಕೆ ಕಾರಣವಾಗುತ್ತದೆ. ಆಲೂಗಡ್ಡೆಯಿಂದ ರಸವನ್ನು ಹೊರಕ್ಕೆ ತೆಗೆದು, ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿಕೊಂಡು 10ರಿಂದ 15 ನಿಮಿಷಗಳ ಕಾಲ ಬಿಟ್ಟು ನಂತರ ನೀರಿನಿಂದ ತೊಳೆಯುವ ಅಭ್ಯಾಸ ಮಾಡಿಕೊಳ್ಳುವುದರಿಂದ. ಮೊಡವೆ ತಡೆಯುವುದು ಹಾಗೂ ಚರ್ಮದಕಾಂತಿಗೆ ಸಹಯಾ ಮಾಡುತ್ತದೆ, (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.