ಪುರುಷರೇ ಎಚ್ಚರ.. 35 ದಾಟುತ್ತಿದ್ದೀರಾ..? ನಿಮ್ಮ ಹೃದಯದ ಮೇಲೆ ಈಗಲೇ ಕಣ್ಣಿಡಿ
Heart Attack at 35: ಹೃದಯದ ಕಾಯಿಲೆಗಳು ಸಾಮಾನ್ಯವಾಗಿ 50 ಅಥವಾ 60 ವರ್ಷ ದಾಟಿದ ಮೇಲೆ ಬರುತ್ತವೆ ಎಂಬುದು ಹಳೆಯ ಮಾತು. ಆದರೆ, ಸುಮಾರು 5,000 ಜನರ ಮೇಲೆ ನಡೆಸಲಾದ ಹೊಸ ವೈಜ್ಞಾನಿಕ ಅಧ್ಯಯನವು ಆಘಾತಕಾರಿ ಮಾಹಿತಿಯನ್ನು ಹೊರಹಾಕಿದೆ. ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ಹೃದಯದ ಕಾಯಿಲೆಯ ಅಪಾಯದ ಮೈಲಿಗಲ್ಲುಗಳು ಕೇವಲ 35ನೇ ವಯಸ್ಸಿನಿಂದಲೇ ತೀವ್ರವಾಗಿ ಹೆಚ್ಚಾಗುತ್ತಿವೆ.
ಸಂಶೋಧನೆಯ ಪ್ರಮುಖ ಅಂಶಗಳು
ಅಧ್ಯಯನದ ಪ್ರಕಾರ, 35 ರಿಂದ 45 ವರ್ಷದೊಳಗಿನ ಪುರುಷರಲ್ಲಿ ಹೃದಯಾಘಾತಕ್ಕೆ ಕಾರಣವಾಗುವ ಅಂಶಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ. ಮಹಿಳೆಯರಲ್ಲಿ ಹಾರ್ಮೋನ್ ರಕ್ಷಣೆ (ಈಸ್ಟ್ರೊಜೆನ್) ಇರುವ ಕಾರಣ ಅವರಿಗೆ ಈ ಅಪಾಯವು ಸಾಮಾನ್ಯವಾಗಿ ಋತುಬಂಧದ ನಂತರ ಅಂದರೆ 50ರ ನಂತರ ಕಾಣಿಸಿಕೊಳ್ಳುತ್ತದೆ. ಆದರೆ ಪುರುಷರಿಗೆ ಅಂತಹ ಯಾವುದೇ ನೈಸರ್ಗಿಕ ರಕ್ಷಣೆ ಇಲ್ಲದಿರುವುದು ಈ ಯಂಗ್ ಏಜ್ ರಿಸ್ಕ್ ಬ್ರೇಕ್ ಆಗಲು ಕಾರಣವಾಗಿದೆ.
ಅಪಾಯಕ್ಕೆ ಕಾರಣವಾಗುವ 3 ಪ್ರಮುಖ ಅಂಶಗಳು
ಸದ್ದಿಲ್ಲದ ರಕ್ತದೊತ್ತಡ: 30ರ ಹರೆಯದ ಪುರುಷರಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಆರಂಭದಲ್ಲೇ ಗುರುತಿಸದೆ ಇರುವುದು ದೊಡ್ಡ ಅಪಾಯವಾಗಿ ಪರಿಣಮಿಸುತ್ತಿದೆ.
ಕೊಲೆಸ್ಟ್ರಾಲ್ ಮಟ್ಟದಲ್ಲಿ ಏರಿಕೆ: ಇಂದಿನ ಸಂಸ್ಕರಿಸಿದ ಆಹಾರ ಪದ್ಧತಿಯಿಂದಾಗಿ 35 ದಾಟುವಷ್ಟರಲ್ಲಿ ರಕ್ತನಾಳಗಳಲ್ಲಿ ಬ್ಲಾಕ್ ನಿರ್ಮಾಣವಾಗುವ ಪ್ರಕ್ರಿಯೆ ಆರಂಭವಾಗುತ್ತಿದೆ.
ಒತ್ತಡದ ಜೀವನಶೈಲಿ: ವೃತ್ತಿಜೀವನದ ಉತ್ತುಂಗಕ್ಕೇರಲು ಪಡುವ ಹಪಹಪಿ ಮತ್ತು ಮಾನಸಿಕ ಒತ್ತಡವು ಹೃದಯದ ಸ್ನಾಯುಗಳನ್ನು ದುರ್ಬಲಗೊಳಿಸುತ್ತಿವೆ.
ಮಹಿಳೆಯರಿಗಿಂತ ಪುರುಷರು ಏಕೆ ಹೆಚ್ಚು ಸಾಫ್ಟ್ ಟಾರ್ಗೆಟ್..?
ಅಧ್ಯಯನದ ವರದಿಯ ಪ್ರಕಾರ, ಪುರುಷರು ತಮ್ಮ ಆರೋಗ್ಯದ ಸಣ್ಣಪುಟ್ಟ ವ್ಯತ್ಯಾಸಗಳನ್ನು ನಿರ್ಲಕ್ಷಿಸುವ ಸಾಧ್ಯತೆ ಹೆಚ್ಚುಗಿದೆ. ನಾನು ಇನ್ನೂ ಯುವಕ, ನನಗೇನೂ ಆಗುವುದಿಲ್ಲ ಎಂಬ ಅತಿಯಾದ ಆತ್ಮವಿಶ್ವಾಸವು ಅಂತಿಮವಾಗಿ ಐಸಿಯು ವರೆಗೆ ಕರೆದೊಯ್ಯುತ್ತಿದೆ.
35ನೇ ವಯಸ್ಸು ಎಂಬುದು ಕೇವಲ ಅಂಕಿಅಂಶವಲ್ಲ, ಇದು ನಿಮ್ಮ ಹೃದಯದ ಸರ್ವಿಸಿಂಗ್ ಆರಂಭಿಸಬೇಕಾದ ಎಚ್ಚರಿಕೆಯ ಗಂಟೆಯಾಗಿದೆ ತಜ್ಞ ವೈದ್ಯರ ಅಭಿಮತವಾಗಿದೆ,(ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ.