ಸಾಂದರ್ಭಿಕ ಚಿತ್ರ 
ಆರೋಗ್ಯ

ಅರಿಶಿನ ಹಾಲು ಆರೋಗ್ಯಕ್ಕೆ ಅಮೃತ ಅಂದುಕೊಂಡಿದ್ದೀರಾ? ಈ ಕಾಯಿಲೆ ಇದ್ದವರು ಅಪ್ಪಿತಪ್ಪಿಯೂ ಕುಡಿಯಬೇಡಿ! Turmeric milk

Turmeric milk: ಪ್ರತಿದಿನ ಹಾಲು ಕುಡಿಯುವುದನ್ನು ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಕರೆಯಲಾಗುತ್ತದೆ. ಪ್ರತಿದಿನ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುವುದರ ಜೊತೆಗೆ ಕೀಲು ನೋವು ನಿವಾರಿಸಬಹುದು ಎಂದು ಹೇಳಲಾಗುತ್ತದೆ. ಆದಾಗ್ಯೂ, ಅರಿಶಿನ ಹಾಲನ್ನು ಕುಡಿಯುವುದರಿಂದ ದೇಹಕ್ಕೆ ಇನ್ನಷ್ಟು ಆರೋಗ್ಯಕರ ಅಂಶವನ್ನು ಪಡೆಯಬಹುದು ಎಂದು ಹೇಳುತ್ತಾರೆ.
2017 ರಲ್ಲಿ ಫುಡ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಅರಿಶಿನದಲ್ಲಿರುವ ಕರ್ಕ್ಯುಮಿನ್ ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ ಎಂದು ತಿಳಿಸಿದೆ. ಆದಾಗ್ಯೂ, ಅರಿಶಿನ ಹಾಲು ಎಲ್ಲರಿಗೂ ಪ್ರಯೋಜನಕಾರಿಯಲ್ಲ ಎಂದು ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ. ಹಾಗಿದ್ದರೆ, ಯಾವ ಜನರು ಅರಿಶಿನ ಹಾಲನ್ನು ಕುಡಿಯಬಾರದು ಎಂದು ತಿಳಿಯೋಣ ಬನ್ನಿ...

ಪಿತ್ತಕೋಶದ ಸಮಸ್ಯೆ ಇರುವವರು

ಅರಿಶಿನವು ದೇಹದಲ್ಲಿ ಪಿತ್ತರಸ ಉತ್ಪಾದನೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಪಿತ್ತಜನಾಕಾಂಗದಲ್ಲಿ ಕಲ್ಲು ಅಥವಾ ಪಿತ್ತರಸ ನಾಳಗಳ ಸಮಸ್ಯೆ ಇರುವಂತವರು ಅರಿಶಿನದ ಹಾಲನ್ನು ಕುಡಿದರೆ, ನೋವು ಮತ್ತು ಅಸ್ವಸ್ಥತೆ ಹೆಚ್ಚಾಗುತ್ತದೆ. ಆದರಿಂದ ಈ ಸಮಸ್ಯೆ ಇರುವವರು ಈ ಹಾಲನ್ನು ಕುಡಿಯಬಾರದು.

ರಕ್ತ ತೆಳುಗೊಳಿಸುವ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವವರು

ಅರಿಶಿನದಲ್ಲಿರುವ ಕರ್ಕ್ಯುಮಿನ್ ಸಂಯುಕ್ತದ ಬಗ್ಗೆ ಆದಷ್ಟು ಜಾಗರೂಕರಾಗಿರಬೇಕು. ಏಕೆಂದರೆ, ಇದು ರಕ್ತ ತೆಳುವಾಗುವಂತೆ ಕಾರ್ಯನಿರ್ವಹಿಸುತ್ತದೆ. ನೀವು ಈಗಾಗಲೇ ವಾರ್ಫರಿನ್, ಆಸ್ಪಿರಿನ್ ಮತ್ತು ಕ್ಲೋಪಿಡೋಗ್ರೆಲ್ ನಂತಹ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅರಿಶಿನ ಹಾಲನ್ನು ಕುಡಿಯಬೇಡಿ. ಇದು ರಕ್ತಸ್ರಾವ ಅಥವಾ ಮೂಗೇಟುಗಳ ಅಪಾಯ ಹೆಚ್ಚಿಸುತ್ತದೆ.

ಕಬ್ಬಿಣದ ಕೊರತೆ ಇರುವವರಿಗೆ

ಅರಿಶಿನವು ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವವರು, ಹಿಮೋಗ್ಲೋಬಿನ್​ ಕಡಿಮೆ ಇರುವಂತಹವರು ಪ್ರತಿದಿನ ಅರಿಶಿನ ಹಾಲನ್ನು ಕುಡಿಯುವುದರಿಂದ ಇದು ಹಾನಿಗೊಳಿಸಬಹುದು.

ಮೂತ್ರಪಿಂಡದ ಕಲ್ಲಿನ ಸಮಸ್ಯೆ ಇರುವವರು

ಅರಿಶಿನವು ಆಕ್ಸಲೇಟ್‌ಗಳನ್ನು ಹೊಂದಿದ್ದು, ಇದು ಕ್ಯಾಲ್ಸಿಯಂನೊಂದಿಗೆ ಸೇರಿ ಮೂತ್ರಪಿಂಡದ ಕಲ್ಲುಗಳನ್ನು ರೂಪಿಸುತ್ತದೆ. ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವವರು ಅರಿಶಿನ ಹಾಲನ್ನು ಕುಡಿಯುವುದರಿಂದ ಇದು ಆರೋಗ್ಯಕ್ಕೆ ಹಾನಿಯಾಗಬಹುದು.ಹಾಗಾಗಿ ಈ ಜನರು ಅರಿಶಿನ ಹಾಲನ್ನು ಕುಡಿಯುವುದನ್ನು ತಪ್ಪಿಸಬೇಕು.

ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು

ಈ ಮಹಿಳೆಯರು ಅರಿಶಿನವನ್ನು ಸಾಮಾನ್ಯವಾಗಿ ಸಣ್ಣ ಪ್ರಮಾಣದಲ್ಲಿ ಸೇವಿಸಿದರೆ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಗರ್ಭಾವಸ್ಥೆಯಲ್ಲಿ ಮತ್ತು ಹಾಲುಣಿಸುವ ಸಮಯದಲ್ಲಿ ಪ್ರತಿದಿನ ಹೆಚ್ಚಿನ ಪ್ರಮಾಣದಲ್ಲಿ ಅರಿಶಿನವನ್ನು ಸೇವಿಸುವುದು ಉರಿಯೂತವನ್ನು ಹೆಚ್ಚಿಸುತ್ತದೆ. ಇದರಿಂದ ದೇಹವು ಹೆಚ್ಚಿನ ಮಿತಿಯನ್ನು ಕಳೆದುಕೊಳ್ಳಬಹುದು (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.