Health benefits of coconut water and ORS
- ನಿರ್ಜಲೀಕರಣ ಸಮಸ್ಯೆ ತೆಂಗಿನಕಾಯಿ ನೀರು ಉತ್ತಮವೋ ಅಥವಾ ಓಆರ್ಎಸ್ ನೀರು ಉತ್ತಮವೋ?.
- ಎಳನೀರನ್ನು ದೈನಂದಿನ ಚಟುವಟಿಕೆಗಳ ನಂತರ ಅಥವಾ ವ್ಯಾಯಾಮದ ನಂತರ ಬಳಸಿ.
- ಅತಿಸಾರ, ನಿರಂತರ ವಾಂತಿಯಾಗಿ ದೇಹದಲ್ಲಿ ನೀರಿನಾಂಶ ಹಾಗೂ ಲವಣ ಕಡಿಮೆಯಾದಾಗ ಓಆರ್ಎಸ್ ಬೆಸ್ಟ್ ಮದ್ದು.
Health benefits of coconut water and ORS:
ಬೇಸಿಗೆಯಾಗಲೀ ಅಥವಾ ಯಾವುದೇ ಸಮಯದಲ್ಲಾಗಲೀ ದೇಹದಲ್ಲಿ ನೀರಿನಾಂಶ ಕಡಿಮೆಯಾಗಿ, ನಿರ್ಜಲೀಕರಣದಂತೆ ಭಾಸವಾದಾಗ ಎಳನೀರು ಕುಡಿದ ಸಂತೃಪ್ತರಾಗೋದು ಸಹಜ. ಆದರೆ, ಕೆಲವರಿಗೆ ಕಾಡುವ ಪ್ರಶ್ನೆ ಎಂದರೆ, ಬಾಯಿ ಒಣಗಿ, ಸುಸ್ತಾದಾಗ ಎಳನೀರು ಕುಡಿಯಬೇಕೋ ಅಥವಾ ಓಆರ್ಎಸ್ ನೀರು ಸೇವನೆ ಮಾಡೋದು ಬೆಸ್ಟೋ ಎನ್ನುವುದು.
ಯಾವ ಸಮಯದಲ್ಲಿ ಎಳನೀರು ಕುಡಿದರೆ ಉತ್ತಮ, ಎಂತಹ ಸಮಯದಲ್ಲಿ ಓಆರ್ಎಸ್ ಸೇವನೆ ಮಾಡಬೇಕು ಎನ್ನುವ ಗೊಂದಲಕ್ಕೆ ಇಲ್ಲಿದೆ ವೈಜ್ಞಾನಿಕ ಉತ್ತರ
ಎಳನೀರು ಮತ್ತು ORS ಮಧ್ಯೆ ಇರುವ ವ್ಯತ್ಯಾಸವೇನು?
ಎಳನೀರು ಮತ್ತು ಓಆರ್ಎಸ್ ಪಾನೀಯ ಎರಡರಲ್ಲಿ ಯಾವುದು ಉತ್ತಮ ಎಂದು ಹೇಳಲಾಗುವುದಿಲ್ಲ. ಎರಡು ಪೇಯಗಳು ತಮ್ಮದೇ ಆದ ಪ್ರತ್ಯೇಕ ರೀತಿಯಲ್ಲಿ ದೇಹಕ್ಕೆ ಸಹಕಾರಿಯಾಗಿ ಕೆಲಸ ಮಾಡುತ್ತವೆ. ದೇಹದ ಸಾಮಾನ್ಯ ನೀರಿನ ಮಟ್ಟವನ್ನು ಕಾಪಾಡಿಕೊಳ್ಳಲು ಎಳನೀರು ಉತ್ತಮ.
ಆದರೆ ಓಆರ್ಎಸ್ ಅನ್ನು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದ್ದು, ಇದು ವೈದ್ಯಕೀಯ ಸೂತ್ರವಾಗಿದೆ. ಇದು ಅತಿಸಾರ, ವಾಂತಿ, ಜ್ವರದಂತಹ ಸಮಸ್ಯೆಗಳು ಕಾಣಿಸಿಕೊಂಡಾಗ ದೇಹ ನಿತ್ರಾಣಗೊಳ್ಳುತ್ತದೆ. ಈ ಹಿನ್ನೆಲೆ ಎಲೆಕ್ಟ್ರೋಲೈಟ್ ಪಾನೀಯಗಳು ದೇಹದ ಶಕ್ತಿ ಮರುಪೂರಣಗೊಳಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ
ಯಾವಾಗ ಯಾವ ನೀರು ಕುಡಿಯೋದು ಉತ್ತಮ?
ಎಳನೀರಿನಲ್ಲಿರುವ ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಹಾಗೂ ಆಂಟಿಆಕ್ಸಿಡೆಂಟ್‌ಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ದೈನಂದಿನ ಚಟುವಟಿಕೆಗಳ ನಂತರ ಅಥವಾ ವ್ಯಾಯಾಮದ ನಂತರ ದೇಹವನ್ನು ಹೈಡ್ರೇಟ್ಗೊಳಿಸುವ ಸಲುವಾಗಿ ಬಯಸಿದರೆ ಎಳನೀರು ಉತ್ತಮ ಆಯ್ಕೆ.
ಓಆರ್ಎಸ್ ಯಾವಾಗ ಕುಡಿಯಬೇಕು?
ಅತಿಸಾರ, ನಿರಂತರ ವಾಂತಿಯಾದರೆ ದೇಹದಲ್ಲಿ ನೀರಿನ ಅಂಶ, ಲವಣಗಳು ಕಡಿಮೆಯಾಗಿ ದೇಹ ನಿತ್ರಾಣಗೊಳ್ಳುತ್ತದೆ. ಇಂತಹ ಸಮಯದಲ್ಲಿ ವೈದ್ಯರು ಓಆರ್ಎಸ್ ಅನ್ನು ಕುಡಿಯಲು ಶಿಫಾರಸು ಮಾಡುತ್ತಾರೆ. ಸೋಡಿಯಂ, ಗ್ಲೂಕೋಸ್ ಮತ್ತು ಎಲೆಕ್ಟ್ರೋಲೈಟ್‌ಗಳ ನಿಖರವಾದ ಪ್ರಮಾಣವಿದ್ದು, ದೇಹವನ್ನು ಚೇತಸಿಕೊಳ್ಳುವಂತೆ ಮಾಡಲು ಸಹಾಯ ಮಾಡುತ್ತದೆ ಎನ್ನಲಾಗಿದೆ.
ಎಳನೀರಿನಿಂದಾಗುವ ಪ್ರಯೋಜನಗಳೇನು?
ಎಳನೀರು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಮತ್ತು ಉರಿಯೂತದ ನಿವಾರಕವಾಗಿದೆ. ಆದಾಗ್ಯೂ, ಮೂತ್ರಪಿಂಡದ ತೊಂದರೆ ಇರುವವರು ಅಥವಾ ಪೊಟ್ಯಾಶಿಯಮ್ ಸೇವನೆಯ ಮೇಲೆ ನಿರ್ಬಂಧ ಹೊಂದಿರುವವರು ವೈದ್ಯರ ಸಲಹೆ ಇಲ್ಲದೆ ಎಳನೀರನ್ನು ಹೆಚ್ಚು ಸೇವಿಸಬಾರದು, (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.