Diljit Dosanjh: ದಿಲ್ಜಿತ್ ದೋಸಾಂಜ್ ಎರಡನೇ ಬಾರಿಗೆ ನಿರ್ದೇಶಕನಾಗಿ ಇಮ್ತಿಯಾಜ್ ಅಲಿ ಅವರೊಂದಿಗೆ ಸಹಯೋಗ ನಡೆಸಲು ಸಜ್ಜಾಗಿದ್ದಾರೆ. ಇವರು ಈ ಹಿಂದೆ ಅಮರ್ ಸಿಂಗ್ ಚಮ್ಕಿಲಾ ಚಿತ್ರಕ್ಕಾಗಿ ಕೈಜೋಡಿಸಿದ್ದಾರೆ. ಇವರು ಈಗಾಗಲೇ ತಮ್ಮ ಸದೃಢ ಮೈಕಟ್ಟಿನಿಂದ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ್ದು, ಅವರ ಶಿಸ್ತು ಬದ್ಧ ಜೀವನಶೈಲಿಯು ಬೆಳಿಗ್ಗೆ 4:30 ಯಿಂದ ಪ್ರಾರಂಭವಾಗುತ್ತದೆ ಎಂದು ತಿಳಿಸಿದ್ದಾರೆ.
ದಿಲ್ಜಿತ್ ದೋಸಾಂಜ್ ಅವರ ವರ್ಕೌಟ್
ನಟ ದಿಲ್ಜಿತ್ ದೋಸಾಂಜ್ ತನ್ನ ದಿನಚರಿಯನ್ನು ಮೊದಲು ಕೋಳಿ ಗೂಡಿಗೆ ಹೋಗುವುದರ ಮೂಲಕ ಪ್ರಾರಂಭಿಸುತ್ತಾನೆ. ಇದರರ್ಥ ಕೋಳಿ ಮೊಟ್ಟೆ ಇಟ್ಟಿದಿಯೋ? ಇಲ್ಲವೋ? ಎಂದು ನೋಡಲು ಎಂದಿದ್ದಾರೆ. ಏಕೆಂದರೆ ಕೋಳಿ ಮೊಟ್ಟೆ ಇಡದಿದ್ದರೆ, ಅವನು ಉಪಹಾರಕ್ಕೆ ಭೋಜನ ತಿನ್ನಬೇಕಾಗುತ್ತದೆ ಎಂದು ತಮಾಷೆ ಮಾಡಿಕೊಂಡಿದ್ದಾರೆ.
ಇದಾದ ಬಳಿಕ ನಟ, ವ್ಯಾಯಾಮ ದಿನಚರಿಯಲ್ಲಿ ತೊಡಗಿಕೊಳ್ಳುತ್ತಾರಂತೆ ಇದರ ಅನುಸಾರ ಮೆಟ್ಟಿಲುಗಳನ್ನು ಹತ್ತಿ ಇಳಿಯುವ ಮೂಲಕ ಬೆಚ್ಚಗಾಗುತ್ತಾರೆ. ನಂತರ ಅವರು ಪುಷ್-ಅಪ್ಗಳು, ಜಂಪಿಂಗ್ ಜ್ಯಾಕ್‌ಗಳು, ಎದೆಯ ಪ್ರೆಸ್ ಮತ್ತು ಕೋಬ್ರಾ ಸ್ಟ್ರೆಚ್ ಸೇರಿದಂತೆ ಹಲವಾರು ವ್ಯಾಯಾಮಗಳನ್ನು ಮಾಡುತ್ತಾರಂತೆ. ಅವರ ಟ್ರೇಡ್ ಮಾರ್ಕ್ ಹಾಸ್ಯದಲ್ಲಿ ಪುನರಾವರ್ತನೆಗಳ ಸಂಖ್ಯೆ 1001, 12005 ಮತ್ತು 36501 ಎಂದು ಅವರು ಹೇಳಿಕೊಳ್ಳುತ್ತಾರೆ.
ದಿಲ್ಜಿತ್ ದೋಸಾಂಜ್ ಅವರ ಆಹಾರ ಪದ್ಧತಿ
ವ್ಯಾಯಾಮದ ನಂತರ, ದಿಲ್ಜಿತ್ ದೋಸಾಂಜ್ ಒಂದು ಲೋಟ ಹಸಿರು ರಸವನ್ನು ಸೇವಿಸಿ ನಂತರ ಒಂದು ಬಟ್ಟಲು ತಾಜಾ ಹಣ್ಣುಗಳು ಹಾಗೂ ಒಂದು ಚಮಚ ಪ್ರೊಟೀನ್ ಸೇವಿಸುವುದಾಗಿ ತಿಳಿಸಿದ್ದಾರೆ.
ಇದಾದ ಬಳಿಕ ಅವರು ಶೂಟಿಂಗ್ ಸೆಟ್ಗೆ ತೆರಳುತ್ತಾರೆ. ಇಲ್ಲಿ ಇಮ್ತಿಯಾಜ್ ಅಲಿಯೊಂದಿಗೆ ಮಾತನಾಡುತ್ತಿರುವುದು ಕಂಡುಬರುತ್ತದೆ. ಈ ವೇಳೆ ನಿರ್ದೇಶಕರು ದಿಲ್ಜಿತ್ಗೆ ಹೃದಯಸ್ಪರ್ಶಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ. ಈ ಜಗತ್ತಿನಲ್ಲಿ ಅನೇಕ ನಟರಿದ್ದಾರೆ, ಆದರೆ ನೀವು ನನ್ನ ಸ್ವಂತ ನಟರಂತೆ. ಅದಕ್ಕಾಗಿಯೇ ನಾನು ನಿಮ್ಮನ್ನು ಮತ್ತೆ ಆಯ್ಕೆ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಸಿನಿಮಾ ನಿರ್ದೇಶನವು 7 ಗಂಟೆಗೆ ಮುಗಿಸಬೇಕಿತ್ತು. ಆದರೆ, ಶೂಟಿಂಗ್ ರಾತ್ರಿ 8:30 ರವರೆಗೆ ನಡೆಯಿತು ಎಂದು ದಿಲ್ಜಿತ್ ಬಹಿರಂಗಪಡಿಸಿದ್ದಾರೆ. ಇಮ್ತಿಯಾಜ್ ಅಲಿಯಂತಹ ಅದ್ಭುತ ವ್ಯಕ್ತಿಗಾಗಿ ಹೆಚ್ಚುವರಿ ಕೆಲಸ ಮಾಡಲು ತನಗೆ ಅಭ್ಯಂತರವಿಲ್ಲ ಎಂದು ನಟ ತಿಳಿಸಿದರು (ಏಜೆನ್ಸೀಸ್).