Weight Loss journey (ಚಿತ್ರ Instagram)
- ಇಂದಿನ ಡಿಜಿಟಲ್ ಯುಗದಲ್ಲಿ ತೂಕ ಇಳಿಸುವ ಬಗ್ಗೆ ದಿನಕ್ಕೊಂದು ಹೊಸ ಮಾಹಿತಿ ಅಥವಾ 'ಡಯಟ್ ಪ್ಲಾನ್'ಗಳು ಬರುತ್ತಿರುತ್ತವೆ
- ಒಂದು ಕಡೆ 'ಕೀಟೋ' ಎಂದರೆ, ಇನ್ನೊಂದು ಕಡೆ 'ಇಂಟರ್ಮಿಟೆಂಟ್ ಫಾಸ್ಟಿಂಗ್' ಎನ್ನಲಾಗುತ್ತದೆ
- ಈ ಗೊಂದಲದಲ್ಲಿ ತೂಕ ಇಳಿಸುವ ಉತ್ಸಾಹಕ್ಕಿಂತ ಹೆಚ್ಚಾಗಿ ಮಾನಸಿಕ ಆಯಾಸವೇ ಜಾಸ್ತಿಯಾಗುತ್ತದೆ
Weight Loss: ಇಂದಿನ ಡಿಜಿಟಲ್ ಯುಗದಲ್ಲಿ ತೂಕ ಇಳಿಸುವ ಬಗ್ಗೆ ದಿನಕ್ಕೊಂದು ಹೊಸ ಮಾಹಿತಿ ಅಥವಾ 'ಡಯಟ್ ಪ್ಲಾನ್'ಗಳು ಬರುತ್ತಿರುತ್ತವೆ. ಒಂದು ಕಡೆ 'ಕೀಟೋ' ಎಂದರೆ, ಇನ್ನೊಂದು ಕಡೆ 'ಇಂಟರ್ಮಿಟೆಂಟ್ ಫಾಸ್ಟಿಂಗ್' ಎನ್ನಲಾಗುತ್ತದೆ. ಈ ಗೊಂದಲದಲ್ಲಿ ತೂಕ ಇಳಿಸುವ ಉತ್ಸಾಹಕ್ಕಿಂತ ಹೆಚ್ಚಾಗಿ ಮಾನಸಿಕ ಆಯಾಸವೇ ಜಾಸ್ತಿಯಾಗುತ್ತದೆ.
ಆದಾಗ್ಯೂ, ತೂಕ ಇಳಿಸಿಕೊಳ್ಳುವ ಪ್ರಕ್ರಿಯೆ ಸುಲಭದ್ದೇನಲ್ಲ. ಅದಕ್ಕೆ ಅದರದ್ದೇ ಆದ ನೀತಿ ನಿಯಮಗಳು ಇರುತ್ತವೆ. ಈ ನಿಯಮಗಳು ಕೆಲವೊಮ್ಮೆ ಆಯಾಸವೆನಿಸಬಹುದು. ಒಂದು ದಿನ ಕಾರ್ಬೋಹೈಡ್ರೇಟ್‌ಗಳನ್ನು ಕಡಿಮೆ ಮಾಡುವ ಬಗ್ಗೆ, ಇನ್ನೊಂದು ದಿನ ವ್ಯಾಯಾಮದ ಬಗ್ಗೆ. ಹೆಚ್ಚಿನವರು ಈ ಅಭ್ಯಾಸಗಳನ್ನು ಅನುಸರಿಸುವುದನ್ನೇ ಬಿಟ್ಟುಬಿಡುತ್ತಾರೆ.
ಇತ್ತೀಚೆಗೆ ರಿದ್ಧಿ ಅಗರ್ವಾಲ್ ಎಂಬ ಯುವತಿಯು ಯಾವುದೇ ಕಠಿಣ ಮಾರ್ಗಗಳಿಲ್ಲದೇ, ಸರಳ ಅಭ್ಯಾಸಗಳಿಂದ 36 ಕೆಜಿ ತೂಕ ಇಳಿಸಿಕೊಂಡಿರುವ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಹಾಗಾಗಿ ಯಾರಾದರೂ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಇವರ ಸಲಹೆಗಳನ್ನು ಬಳಸಿಕೊಳ್ಳಿ.
1. ನಡೆಯುವುದು
ನಡೆಯುವುದು ಆರೋಗ್ಯಕ್ಕೆ ಒಳ್ಳೆಯ ವ್ಯಾಯಾಮ ಎಂದು ಹೇಳಲಾಗುತ್ತದೆ. ಆದರೆ, ಜಿಮ್ ಮತ್ತು 'ಹೈ ಇಂಟೆನ್ಸಿಟಿ' ವರ್ಕೌಟ್‌ಗಳ ಅಬ್ಬರದಲ್ಲಿ ನಡಿಗೆಯನ್ನು ನಾವು ಮರೆಯುತ್ತಿದ್ದೇವೆ. ಹಾಗಾಗಿ ಪ್ರತಿದಿನ 30-45 ನಿಮಿಷಗಳ ಕಾಲ ನಡೆಯುವ ಅಭ್ಯಾಸದಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ ಮತ್ತು ಕ್ಯಾಲೊರಿಗಳು ವೇಗವಾಗಿ ದಹಿಸಲ್ಪಡುತ್ತವೆ ಎಂದು ಹೇಳಿದ್ದಾರೆ.
2. ನೀರು
ದೇಹಕ್ಕೆ ಸಾಕಷ್ಟು ನೀರು ಕುಡಿಯುವುದು ಸರಳವೆನಿಸುತ್ತದೆ. ಆದರೆ, ಇದು ದೇಹದಲ್ಲಿ ಸಾಕಷ್ಟು ವ್ಯತ್ಯಾಸವನ್ನುಂಟು ಮಾಡುತ್ತದೆ. ದಿನಕ್ಕೆ 3- 4 ಲೀಟರ್ ನೀರು ಕುಡಿಯುವುದರಿಂದ ಹಂಬಲ ಕಡಿಮೆಯಾಗಿ ಶಕ್ತಿ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ರಿದ್ಧಿ ತಿಳಿಸಿದ್ದಾರೆ.
3. ಪ್ರೋಟೀನ್
ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುವಲ್ಲಿ ಮತ್ತು ಸ್ನಾಯುಗಳನ್ನು ಬಲಿಷ್ಟವಾಗಿರಿಸುವಲ್ಲಿ ಪ್ರೋಟೀನ್ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ರಿದ್ಧಿ ದಿನಕ್ಕೆ ಕನಿಷ್ಟ 100 ಗ್ರಾಂ ಪ್ರೊಟೀನ್ ತಿನ್ನುವ ಗುರಿಯನ್ನು ಹೊಂದಿದ್ದರು. ಈ ಅಭ್ಯಾಸವು ಹೊಟ್ಟೆಯನ್ನು ತುಂಬಿಸಿ ಕಡುಬಯಕೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಸ್ನಾಯುವು ವಿಶ್ರಾಂತಿಯಲ್ಲಿರುವುದರಿಂದ ಹೆಚ್ಚು ಕ್ಯಾಲೋರಿಯನ್ನು ಸುಡುತ್ತದೆ.
4. ಉದ್ದೇಶಪೂರ್ವಕ ಬೆಳಗಿನ ಸಮಯಗಳು
ಇದು ಮನಸ್ಥಿತಿಗೆ ಸಂಬಂಧಿಸಿದೆ. ರಿದ್ಧಿ ಪ್ರತಿದಿನ ಎದ್ದ ನಂತರ 30 ನಿಮಿಷಗಳ ಕಾಲ ಮೊಬೈಲ್ ಮುಟ್ಟದೇ ಆ ಸಮಯವನ್ನು ವ್ಯಾಯಾಮ, ಯೋಗ ಮತ್ತು ಪ್ರಾರ್ಥಿಸಲು ತೆಗೆದುಕೊಂಡರು. ಈ ಅಭ್ಯಾಸವು ದೇಹವನ್ನು ದಂಡಿಸಲು ಸಹಾಯವಾದ್ದರಿಂದ ತೂಕ ಇಳಿಸಿಕೊಳ್ಳಲು ಸಹಾಯ ಮಾಡಿತು ಎಂದು ಹೇಳಿದ್ದಾರೆ.
5. ಫೈಬರ್
ಫೈಬರ್ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹಾಗಾಗಿ ದಿನಕ್ಕೆ ಮೂರು ತರಕಾರಿಗಳನ್ನು ತಿನ್ನುವ ಅಭ್ಯಾಸ ಮಾಡಿಕೊಂಡರು. ಇದು ಹೊಟ್ಟೆ ತುಂಬಿಸುತ್ತದೆ ಮತ್ತು ದೇಹವು ಕಾರ್ಬೋಹೈಡ್ರೇಟ್‌ಗಳನ್ನು ಸಂಸ್ಕರಿಸಲು ಸುಲಭಗೊಳಿಸುತ್ತದೆ. ಇದು ಕಡುಬಯಕೆಗಳನ್ನು ತಪ್ಪಿಸಿ ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದರು.
ಈ ತೂಕ ಇಳಿಸಿಕೊಳ್ಳುವ ಪ್ರಯಾಣವು ಎಂದಿಗೂ ನೋಟದ ಬಗ್ಗೆಯಾಗಿರಲಿಲ್ಲ. ಅದು ಆರೋಗ್ಯದ ಬಗ್ಗೆ. ಅದು ಶಾಂತಿಯ ಬಗ್ಗೆ. ಅದು ನನಗೆ ಸಂಪೂರ್ಣವಾಗಿ ಬದುಕಲು ಅವಕಾಶ ನೀಡುವುದರ ಬಗ್ಗೆ ಎಂದು ರಿದ್ಧಿ ಹೇಳಿದರು (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.