- ಸಂಗಾತಿಯ ಗೊರಕೆಯಿಂದ ದಂಪತಿಗಳ ನಡುವೆ ಮಾನಸಿಕ ಒತ್ತಡ ಹೆಚ್ಚುತ್ತಿದೆ.
- ಪಕ್ಕಕ್ಕೆ ತಿರುಗಿ ಮಲಗುವುದು ಮತ್ತು ತೂಕ ಇಳಿಸಿಕೊಳ್ಳುವುದು ಗೊರಕೆಗೆ ಸರಳ ಮದ್ದು
- ಧೂಮಪಾನ ಮತ್ತು ಮದ್ಯಪಾನ ತ್ಯಜಿಸುವುದು ಉತ್ತಮ ನಿದ್ರೆಗೆ ಪೂರಕ.
Snoring solutions: ಗೊರಕೆ ಸೊಳ್ಳೆ ಮಾಡುವ ಶಬ್ಧಕ್ಕಿಂತ ಹೆಚ್ಚಾಗಿ ಕಾಡುವ ಸಮಸ್ಯೆಯಾಗಿದೆ. ಬಸ್, ಟ್ರೈನ್, ವಿಮಾನ ಸಾರ್ವಜನಿಕ ಸ್ಥಳ ಅಂತೆಲ್ಲ ನೋಡೋದಿಲ್ಲ. ಇನ್ನು ರಾತ್ರಿ ಪಕ್ಕದಲ್ಲಿ ಮಲಗುವವರು ಮನೆಯ ಮೇಲ್ಛಾವಣಿಯೇ ಕಿತ್ತು ಹೋಗುವಂತೆ ಶಬ್ಧ ಮಾಡುತ್ತಾರೆ. ಕೆಲವೊಬ್ಬರು ಇದನ್ನು ಸಾಮಾನ್ಯ ಸಂಗತಿ ಎಂದು ಅನ್ನಿಸಿ ಸುಮ್ಮನಾದರೆ, ಇನ್ನು ಕೆಲವರು ಆಡಿಕೊಂಡು ನಗಾಡುತ್ತಾರೆ. ಇದ್ರಿಂದ ಇರಿಸು ಮುರಿಸು ಉಂಟಾಗುತ್ತದೆ. ಈ ಹಿಂದೆಯೆಲ್ಲ ಹೆಚ್ಚು ದೈಹಿಕ ಶ್ರಮದಿಂದಾಗಿ, ರಾತ್ರಿ ಸಮಯದಲ್ಲಿ ಗೊರಕೆ( Snoring solutions) ಹೊಡೆಯುತ್ತಾರೆ ಎಂದು ಹೇಳೋದು ಉಂಟು. ಆದ್ರೆ ವೈಜ್ಞಾನಿಕವಾಗಿ ಹಾಗಿಲ್ಲ.
ಗೊರಕೆಯಿಂದ ಸಂಬಂಧ ಎಷ್ಟರ ಮಟ್ಟಿಗೆ ಹಾಳಾಗುತ್ತದೆ. ಇದ್ರಿಂದ ಅವರು ಅನುಭವಿಸುವ ಸಮಸ್ಯೆ ಏನು. ಬಿರುಕು ಉಂಟಾಗುವುದು ಹೇಗೆ ಅನ್ನೋದನ್ನು ಆನಂದ್ ರವಿಚಂದ್ರನ್ ನಿರ್ದೇಶನದ ಜಿವಿ ಪ್ರಕಾಶ್ ಕುಮಾರ್ ಮತ್ತು ಐಶ್ವರ್ಯ ರಾಜೇಶ್ ನಟನೆಯ ಡಿಯರ್ ಎನ್ನುವ ತಮಿಳು ಸಿನಿಮಾದಲ್ಲಿ ತೋರಿಸಲಾಗಿದೆ.
ಗೊರಕೆಗೆ ಕಾರಣವೇನು?
ನಿದ್ರೆ ಮಾಡುವಾಗ ಗಂಟಲಿನ ಸ್ನಾಯು ಸಡಿಲಗೊಂಡು ಶ್ವಾಸನಾಳ ಕಿರಿದಾಗುತ್ತದೆ. ಕುತ್ತಿಗೆಯಲ್ಲಿ ಕಾಣಿಸುವ ಬೊಜ್ಜು ಉಸಿರಾಟದ ಮಾರ್ಗ ಒತ್ತುವುದು, ಬೆನ್ನಿನ ಮೇಲೆ ಮಲಗದಿದಾಗ ನಾಲಿಗೆ ಹಿಮ್ಮುಕವಾಗಿ ಬಿದ್ದಾಗ ಈ ಗೊರಕೆ ಕಾಣಿಸಿಕೊಳ್ಳುತ್ತದೆ. ಮೂಗಿನ ಹೊಳ್ಳೆಯಲ್ಲಿ ಗಾಳಿ ಸಂಚಾರದಲ್ಲಿ ವ್ಯತ್ಯಯ ಉಂಟಾದಾಗ ಹಾಗೂ ಸೈನಸ್, ಅಲರ್ಜಿಯಿದ್ದರೆ, ಮಲಗುವ ಮುನ್ನ ಆಲ್ಕೋಹಾಲ್ ಸೇವನೆ ಮಾಡಿದ್ದರೆ ಗೊರಕೆ ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ವೈದ್ಯರು.
ಗೊರಕೆಯನ್ನು ನಿಲ್ಲಿಸಲು ಏನು ಮಾಡಬೇಕು?
- ನಿಮ್ಮ ಸಂಬಂಧಿಕರು ಅಥವಾ ಪ್ರೀತಿಪಾತ್ರರು ಗೊರಕೆ ಹೊಡೆಯುತ್ತಿದ್ದರೆ ಅವರ ಮಲಗುವ ಭಂಗಿಯನ್ನು ಬದಲಾಯಿಸಿ.
- ನಿಮ್ಮ ದೇಹಕ್ಕೆ ಸರಿಸಮಾನವಾಗಿ ತೂಕವನ್ನು ಕಾಪಾಡಿಕೊಳ್ಳುವುದು ಗೊರಕೆ ಹೊಡೆಯುವುದನ್ನು ತಪ್ಪಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ.
- ಮಲಗುವ ಮುನ್ನ ಮದ್ಯಪಾನ ಮಾಡುವುದನ್ನು ತಪ್ಪಿಸಿಸುವುದರಿಂದ ಇದು ಗಂಟಲಿನ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ.
- ಮೂಗಿನ ಮಾರ್ಗಗಳನ್ನು ಸ್ಪಷ್ಟವಾಗಿ ಇರಿಸಲು ಸಲೈನ್ ಸ್ಪ್ರೇಗಳು ಅಥವಾ ಆರ್ದ್ರಕವನ್ನು ಬಳಸಿ.
- ಧೂಮಪಾನ ಮಾಡುವುದನ್ನು ಬಿಡುವುದರಿಂದ ಇದು ವಾಯುಮಾರ್ಗಗಳನ್ನು ಉಬ್ಬಿಸುತ್ತದೆ ಇದರಿಂದ ಗೊರಕೆಯನ್ನು ನಿಲ್ಲಿಸಬಹುದು.
- ನಿದ್ದೆ ಮಾಡುವಾಗ ತಲೆ ಆಕಾಶದ ಮುಖವಾಗಿ ನೋಡುವಂತೆ ಇರಲಿ ಇವು ವಾಯುಮಾರ್ಗಗಳು ತೆರೆದಿರಲು ಸಹಾಯ ಮಾಡುತ್ತದೆ.
ಯಾವಾಗ ವೈದ್ಯರನ್ನು ಭೇಟಿ ಮಾಡಬೇಕು?
ಗೊರಕೆಯು ಅತಿಯಾಗಿ ಉಸಿರು ಕಟ್ಟುವಂತಿದ್ದರೆ ಅಥವಾ ಹಗಲಿನಲ್ಲಿ ಅತಿಯಾದ ಆಯಾಸವಾಗುತ್ತಿದ್ದರೆ, ಇದು 'ಸ್ಲೀಪ್ ಅಪ್ನಿಯಾ' ಎಂಬ ಗಂಭೀರ ಕಾಯಿಲೆಯ ಲಕ್ಷಣವಾಗಿರಬಹುದು. ಇಂತಹ ಸಂದರ್ಭದಲ್ಲಿ ವೈದ್ಯಕೀಯ ಸಲಹೆ ಅತ್ಯಗತ್ಯ, (ಏಜೆನ್ಸೀಸ್).