ಬೆಂಗಳೂರು: ಹವಾಮಾನದಲ್ಲಿ ಬದಲಾವಣೆಯಾದಾಗ ಅಥವಾ ರೋಗನಿರೋಧಕ ಶಕ್ತಿ ಕಡಿಮೆಯಾದಾಗ ಶೀತ, ಕೆಮ್ಮು ಮತ್ತು ಗಂಟಲು ನೋವು ನಮ್ಮನ್ನು ಕಾಡುವುದು ಸಾಮಾನ್ಯ. ಅನೇಕರು ತಕ್ಷಣವೇ ಆ್ಯಂಟಿಬಯೋಟಿಕ್ ಅಥವಾ ಕೆಮ್ಮಿನ ಸಿರಪ್‌ಗಳ ಮೊರೆ ಹೋಗುತ್ತಾರೆ. ಆದರೆ, ಪ್ರತಿ ಬಾರಿ ರಾಸಾಯನಿಕಯುಕ್ತ ಔಷಧಿಗಳನ್ನು ಸೇವಿಸುವುದು ದೀರ್ಘಕಾಲದ ದೃಷ್ಟಿಯಿಂದ ಆರೋಗ್ಯಕ್ಕೆ ಹಿತವಲ್ಲ ಎಂದು ತಜ್ಞರು ಅಭಿಪ್ರಯವಾಗಿದೆ.
ಹೌದು, ನಮ್ಮ ಪೂರ್ವಜರು ಬಳಸುತ್ತಿದ್ದ ನೈಸರ್ಗಿಕ ಮನೆಮದ್ದುಗಳು ಕೇವಲ ರೋಗದ ಲಕ್ಷಣಗಳನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ, ದೇಹದ ರೋಗನಿರೋಧಕ ಶಕ್ತಿಯನ್ನು (Immunity) ಒಳಗಿನಿಂದಲೇ ಬಲಪಡಿಸುತ್ತವೆ. ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವ ಶುಂಠಿ, ಜೇನುತುಪ್ಪ, ತುಳಸಿ ಮತ್ತು ಮೆಣಸಿನಂತಹ ಪದಾರ್ಥಗಳಲ್ಲಿರುವ ಔಷಧೀಯ ಗುಣಗಳು ಯಾವುದೇ ಅಡ್ಡಪರಿಣಾಮವಿಲ್ಲದೆ ಶೀತ-ಕೆಮ್ಮಿನಿಂದ ನಮಗೆ ಮುಕ್ತಿ ನೀಡಬಲ್ಲವು.
ಕೆಲವು ಸರಳ ಮನೆಮದ್ದುಗಳು..
ಶುಂಠಿ ಮತ್ತು ಜೇನುತುಪ್ಪ: ಹಸಿ ಶುಂಠಿಯ ರಸಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಗಂಟಲು ನೋವು ಮತ್ತು ಕೆಮ್ಮು ತಕ್ಷಣ ಕಡಿಮೆಯಾಗುತ್ತದೆ. ಇದರಲ್ಲಿರುವ ಆಂಟಿ-ಇನ್ಫ್ಲಮೇಟರಿ ಗುಣಗಳು ವೈರಸ್ ವಿರುದ್ಧ ಹೋರಾಡುತ್ತವೆ.
ಬಿಸಿ ನೀರಿನ ಹಬೆ (Steam): ಮೂಗು ಕಟ್ಟಿಕೊಂಡಿದ್ದರೆ ಅಥವಾ ಶೀತ ಜಾಸ್ತಿಯಾಗಿದ್ದರೆ, ಬಿಸಿ ನೀರಿಗೆ ಸ್ವಲ್ಪ ಪುದೀನಾ ಎಣ್ಣೆ ಅಥವಾ ನೀಲಗಿರಿ ಎಣ್ಣೆ ಹಾಕಿ ಹಬೆ ತೆಗೆದುಕೊಳ್ಳುವುದು ಅತ್ಯಂತ ಪರಿಣಾಮಕಾರಿ.
ಉಪ್ಪು ನೀರಿನ ಗಾರ್ಗ್ಲಿಂಗ್: ಗಂಟಲು ಕೆರೆತವಿದ್ದರೆ, ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಹಾಕಿ ಮುಕ್ಕಳಿಸುವುದರಿಂದ (Gargling) ಗಂಟಲಿನಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.
ಹಳದಿ ಹಾಲು: ರಾತ್ರಿ ಮಲಗುವ ಮುನ್ನ ಬಿಸಿ ಹಾಲಿಗೆ ಒಂದು ಚಿಟಿಕೆ ಹಳದಿ ಪುಡಿ ಮತ್ತು ಕಾಳುಮೆಣಸಿನ ಪುಡಿ ಬೆರೆಸಿ ಕುಡಿಯುವುದರಿಂದ ಶರೀರದ ನೋವು ಕಡಿಮೆಯಾಗಿ ಶೀತ ಬೇಗ ವಾಸಿಯಾಗುತ್ತದೆ.
ತುಳಸಿ ಕಷಾಯ: ತುಳಸಿ ಎಲೆಗಳು, ಲವಂಗ ಮತ್ತು ಶುಂಠಿ ಹಾಕಿ ಕುದಿಸಿದ ಕಷಾಯವು ಕೆಮ್ಮಿಗೆ ಅತ್ಯುತ್ತಮ ಮದ್ದು,(ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.