ಸಾಂದರ್ಭಿಕ ಚಿತ್ರ 
ಆರೋಗ್ಯ

ಬೆಳಿಗ್ಗೆ ಎದ್ದ ತಕ್ಷಣ ಈ ಸರಳ ಕ್ರಮ ಅನುಸರಿಸಿ; ಮಲಬದ್ಧತೆ ಮತ್ತು ಹೊಟ್ಟೆ ಉಬ್ಬರಕ್ಕೆ ಗುಡ್ ಬೈ ಹೇಳಿ! Constipation Remedies

ಪ್ರಮುಖ ಮುಖ್ಯಾಂಶಗಳು

  • ಮಲಬದ್ಧತೆ ಎನ್ನುವುದು ಕಳಪೆ ಆಹಾರ ಪದ್ಧತಿ ಅಥವಾ ಜೀವನಶೈಲಿಯಿಂದ ಉಂಟಾಗುವ ಜೀರ್ಣಕಾರಿ ಸಮಸ್ಯೆ
  • ಕರುಳು ಆಹಾರದಿಂದ ಅತಿಯಾದ ನೀರನ್ನು ಹೀರಿಕೊಂಡಾಗ ಮಲವು ಗಟ್ಟಿಯಾಗಿ ಮಲಬದ್ಧತೆ ಉಂಟಾಗುತ್ತದೆ
  • ಮೂಲವ್ಯಾಧಿ, ಗುದನಾಳದ ಕ್ಯಾನ್ಸರ್ ಅಥವಾ ಕೊಲೊನ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ
Constipation Remedies: ಮಲಬದ್ಧತೆ ಎನ್ನುವುದು ಕಳಪೆ ಆಹಾರ ಪದ್ಧತಿ ಅಥವಾ ಜೀವನಶೈಲಿಯಿಂದ ಉಂಟಾಗುವ ಜೀರ್ಣಕಾರಿ ಸಮಸ್ಯೆಯಾಗಿದೆ. ಇದು ಆಹಾರವು ಕರುಳಿನಲ್ಲಿ ಅತಿ ನಿಧಾನವಾಗಿ ಚಲಿಸಿದಾಗ ಅಥವಾ ಕರುಳು ಆಹಾರದಿಂದ ಅತಿಯಾದ ನೀರನ್ನು ಹೀರಿಕೊಂಡಾಗ ಮಲವು ಗಟ್ಟಿಯಾಗಿ ಮಲಬದ್ಧತೆ ಉಂಟಾಗುತ್ತದೆ. ಇದು ಜನರು ಹೊರಗಿನಿಂದ ಹೆಚ್ಚಿನ ಆಹಾರವನ್ನು ತಿನ್ನುತ್ತಾರೆ. ಈ ಸಮಸ್ಯೆಯಿಂದ ಮಲವು ಬೇಗನೆ ಹೊರಬರುವುದನ್ನು ತಡೆಯುತ್ತದೆ. ಇದರಿಂದ ಜನರು ಗಂಟೆಗಟ್ಟಲೆ ಕೂತು ಶೌಚಾಲಯದಲ್ಲಿ ಕಷ್ಟಪಡುತ್ತಾರೆ.
ಮಲಬದ್ಧತೆ (Constipation) ಸಾಮಾನ್ಯ ಸಮಸ್ಯೆಯಂತೆ ಕಂಡುಬಂದರೂ, ಇದು ಗುದನಾಳದಲ್ಲಿನ ನರಗಳಿಗೆ ಒತ್ತಡವನ್ನುಂಟು ಮಾಡುತ್ತದೆ. ಇದು ಮೂಲವ್ಯಾಧಿ, ಗುದನಾಳದ ಕ್ಯಾನ್ಸರ್ ಅಥವಾ ಕೊಲೊನ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ನೀವೇನಾದರೂ, ಈ ಸಮಸ್ಯೆಯಿಂದ ಬಳಲುತ್ತಿದ್ದರೆ, ತ್ವರಿತವಾಗಿ ತೊಡೆದು ಹಾಕಲು ಈ ರೀತಿಯ ಪಾನೀಯಗಳನ್ನು ಟ್ರೈ ಮಾಡಿ...

ಬಿಸಿ ನೀರು

ಬಿಸಿ ನೀರು ಕುಡಿಯುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ ಏಕೆಂದರೆ ಇದು ಕರುಳಿನ ಚಲನೆ ಯನ್ನು ಉತ್ತೇಜಿಸುತ್ತದೆ. ಇದು ಆಹಾರದ ಅವಶೇಷಗಳನ್ನು ಕರಗಿಸಿ, ಮಲವನ್ನು ಮೃದುಗೊಳಿಸುತ್ತದೆ. ಜೊತೆಗೆ ಜೀರ್ಣಕ್ರಿಯಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿ, ಮಲವಿಸರ್ಜನೆಯನ್ನು ಸುಗಮಗೊಳಿಸುತ್ತದೆ. ಹಾಗಾಗಿ ನಿಯಮಿತವಾಗಿ ಸೇವಿಸುವುದರಿಂದ ಇದು ಆರೋಗ್ಯಕ್ಕೆ ಉತ್ತಮವಾಗಿದೆ.

ನೆಲ್ಲಿಕಾಯಿ ರಸ

ನೆಲ್ಲಿಕಾಯಿ ರಸವು ಹೆಚ್ಚಿನ ನಾರಿನಂಶ ಹೊಂದಿರುವುದರಿಂದ ಇದರ ನಿಯಮಿತ ಸೇವನೆಯು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಇದು ಮಲವನ್ನು ಮೃದುಗೊಳಿಸಿ, ಕರುಳಿನ ಚಲನೆಯನ್ನು ಸುಗಮಗೊಳಿಸುತ್ತದೆ. ಜೊತೆಗೆ ಜೀರ್ಣಕ್ರಿಯಾ ಕಿಣ್ವಗಳನ್ನು ಉತ್ತೇಜಿಸಿ, ಹೊಟ್ಟೆಯಲ್ಲಿ ಆಹಾರ ಸರಿಯಾಗಿ ಜೀರ್ಣವಾಗುವಂತೆ ಸಹಾಯ ಮಾಡುತ್ತದೆ. ಹಾಗಾಗಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 2 ಚಮಚ ನೆಲ್ಲಿಕಾಯಿ ರಸವನ್ನು ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯಿರಿ.

ಅಲೋವೆರಾ ರಸ

ಅಲೋವೆರಾ ರಸವು ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಶುದ್ಧ ಅಲೊವೆರಾ ರಸವನ್ನು ಬಿಸಿ ನೀರಿನಲ್ಲಿ ಸೇರಿಸಿ ಕುಡಿಯುವುದರಿಂದ ಇದು ಹೊಟ್ಟೆಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಜೊತೆಗೆ ಕರುಳಿನಲ್ಲಿ ನೀರಿನ ಪ್ರಮಾಣ ಹೆಚ್ಚಿಸಿ, ಮಲವನ್ನು ಮೃದುಗೊಳಿಸುತ್ತದೆ.

ಹಾಲು ಮತ್ತು ತುಪ್ಪ

ಹಾಲು ಮತ್ತು ತುಪ್ಪ ಕುಡಿಯುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ ಏಕೆಂದರೆ ತುಪ್ಪವು ನೈಸರ್ಗಿಕ ಲೂಬ್ರಿಕಂಟ್ ಆಗಿ ಕಾರ್ಯನಿರ್ವಹಿಸಿ, ಕರುಳನ್ನು ತೇವಗೊಳಿಸುತ್ತದೆ. ಇದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ. ಹಾಗೆಯೇ, ಬಿಸಿ ಹಾಲು ಜೀರ್ಣಕ್ರಿಯಾ ವ್ಯವಸ್ಥೆಯನ್ನು ಉತ್ತೇಜಿಸುವುದರ ಜೊತೆಗೆ ವಾತ ದೋಷವನ್ನು ಸಮತೋಲನಗೊಳಿಸುತ್ತದೆ. ಇದು ಕರುಳಿನ ಶುಷ್ಕತೆಯನ್ನು ಕಡಿಮೆ ಮಾಡಿ, ಮಲವಿಸರ್ಜನೆಯನ್ನು ಸುಗಮಗೊಳಿಸುತ್ತದೆ.

ಅಗಸೆ ಮತ್ತು ಬಿಸಿನೀರು

ಅಗಸೆ ಬೀಜ ಮತ್ತು ಬಿಸಿ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ. ಏಕೆಂದರೆ, ಅಗಸೆಯಲ್ಲಿ ಹೆಚ್ಚಿನ ಕರಗುವ ಮತ್ತು ಕರಗದ ನಾರಿನಾಂಶ ಇರುತ್ತದೆ. ಇದನ್ನು ಬಿಸಿ ನೀರಿನಲ್ಲಿ ಸೇವಿಸಿ ಕುಡಿಯುವುದರಿಂದ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಜೊತೆಗೆ ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.