Goji Berries For Eye Health
Goji Berries For Eye Health :
ಹಿಂದೆಯಲ್ಲಾ ವಯಸ್ಸಾಗುತ್ತಾ ಕಣ್ಣು ಮಂಜಾಗುವುದು, ಸರಿಯಾಗಿ ಕಾಣದೆ ಇರುವ ಸಮಸ್ಯೆಯನ್ನು ಹಲವರು ಎದುರಿಸುತ್ತಿದ್ದರು. ಆದರೆ, ಕಾಲಕ್ರಮೇಣ ಬದಲಾದ ಆಹಾರ ಪದ್ಧತಿ ಹಾಗೂ ಮೊಬೈಲ್, ಟಿವಿ ಬಳಕೆಯು ಕಣ್ಣಿನ ದೃಷ್ಟಿ ದೋಷಕ್ಕೆ ಕಾರಣವಾಗಿದೆ.
ಆರರಿಂದ - ಎಂಟು ವರ್ಷದ ಮಕ್ಕಳು ಸಹ ಈಗ ಕನ್ನಡಕ ಧರಿಸುವ ಸ್ಥಿತಿ ಇದೆ. ಕಣ್ಣಿನ ಸಮಸ್ಯೆ ಸಣ್ಣದಿರುವಾಗ ಸರಿಯಾದ ರೀತಿಯಲ್ಲಿ ಕ್ರಮ ಕೈಗೊಳ್ಳೋದು ದೊಡ್ಡ ರೋಗಕ್ಕೆ ಮುಕ್ತಿ ಕೊಡುವಂತೆ ಎಂದು ಹಿರಿಯರು ಹೇಳಿದ್ದಾರೆ. ಅದರಂತೆ ಕಣ್ಣಿಗೆ ಸ್ನೇಹಿಯಾಗಿರುವ ಹಣ್ಣು ಗೋಜಿ ಬೆರ್ರಿ ಅಥವಾ 'ವುಲ್ಫ್ ಬೆರ್ರಿ' ಸೇವನೆಯ ಅಭ್ಯಾಸ ಮಾಡಿಕೊಳ್ಳಿ
ಹೌದು, 'ವುಲ್ಫ್ ಬೆರ್ರಿ'ಯಲ್ಲಿರುವ ಕಿತ್ತಳೆಯ ಕೆಂಪು ಬಣ್ಣದ ಹಣ್ಣಾಗಿದ್ದು, ಏಷ್ಯಾ ಮೂಲದ ಸಸಿ. ಇದರಲ್ಲಿರುವ ಉತ್ಕರ್ಷಣ ನಿರೋಧಕ, ಖನಿಜ ಹಾಗೂ ವಿಟಮಿನ್ ಸಿ ಮತ್ತು ಎ ರೋಗನಿರೋಧಕ ಶಕ್ತಿಯು ನಿಮ್ಮ ದೇಹದ ಆರೋಗ್ಯ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ದೃಷ್ಟಿ ದೋಷ ತಡೆಯುವ ಮದ್ದು
ಗೋಜಿ ಬೆರ್ರಿಯಲ್ಲಿ ಉತ್ಕರ್ಷಣ ನಿರೋಧಕ, ಲುಟೀನ್ ಜಿಯಾಕ್ಸಾಂಥಿನ್ ಸಮೃದ್ಧವಾಗಿದೆ. ಇವು ಕಣ್ಣುಗಳನ್ನು ಬ್ಲೂರೇಸ್ಗಳಿಂದ ರಕ್ಷಿಸುತ್ತದೆ. ದಿನಕ್ಕೆ 5 ಎಸಳನ್ನು ತಿಂದರೆ ದೃಷ್ಟಿ ದೋಷದಲ್ಲಿ ಕಾಡುವ ಸಮಸ್ಯೆಯನ್ನು ಇದು ದೂರ ಮಾಡುತ್ತದೆ. ದೃಷ್ಟಿ ಸುಧಾರಣೆಗೆ ನಿಧಾನವಾಗಿ ಸಹಾಯ ಮಾಡುತ್ತದೆ ಎನ್ನಲಾಗಿದೆ.
ಕೆಲವೊಮ್ಮೆ ಬಿಸಿಲಿನಲ್ಲಿ ನಿಂತಾಗ ತಲೆ ಸುತ್ತುವಂತೆ ಆಗುವ ಸಮಸ್ಯೆಯನ್ನು ಇದು ತಡೆಯುತ್ತದೆ. ಬಿಸಿಲಿನಿಂದ ನಿಮ್ಮನ್ನು ಹಾಗೂ ನಿಮ್ಮ ಕಣ್ಣು, ಚರ್ಮವನ್ನು ಈ ಹಣ್ಣುಗಳು ತಿನ್ನುವ ಮೂಲಕ ಕಾಪಾಡಿಕೊಳ್ಳಬಹುದಾಗಿದೆ.
ಚರ್ಮದ ಸುಕ್ಕು ತಡೆಯಲು ಸಹಕಾರಿ
ಗೋಜಿ ಬೆರ್ರಿಯು ನೋಡಲು ಸಣ್ಣ ಟೊಮ್ಯಾಟೋ ಹಣ್ಣುಗಳಂತೆ ಕಾಣುತ್ತವೆ. ಇದರಲ್ಲಿರುವ ಕೊಬ್ಬಿನಾಮ್ಲವು ಚರ್ಮಕ್ಕೆ ಒಳ್ಳೆಯದು. ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ. ಇನ್ನು ಇವು ಚರ್ಮದ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಚರ್ಮಕ್ಕೆ ಹಾನಿ ಮಾಡು ರಾಡಿಕಲ್ಗಳಿಂದ ರಕ್ಷಣೆ ಮಾಡುತ್ತದೆ. ನಿಮ್ಮ ಆಹಾರದಲ್ಲಿ ಈ ಡ್ರೈ ಫ್ರೂಟ್ ಸೇರಿಸಿಕೊಳ್ಳುವುದರಿಂದ ಪೋಷಕಾಂಶದ ಪ್ರಮಾಣ ಏರಿಕೆಯಾಗುತ್ತದೆ.
ತಿನ್ನೋದು ಹೇಗೆ?
'ವುಲ್ಫ್ ಬೆರ್ರಿ' ಹಣ್ಣುಗಳು ಸಾಮಾನ್ಯವಾಗಿ ಹುಳಿ ಇರುವ ಕಾರಣ ಇದನ್ನು ಜ್ಯೂಸ್ಗಳು ಅಥವಾ ಸ್ಮೂತಿಗಳಲ್ಲಿ ಬಳಕೆ ಮಾಡಲಾಗುತ್ತದೆ. ಹಣ್ಣುಗಳ ಸಲಾಡ್ನೊಂದಿಗೆ ಅಥವಾ ನೇರವಾಗಿ ತಿಂಡಿ ತಿನ್ನುವ ಹಾಗೆ ಐದಾರು ಎಸಳನ್ನು ತಿಂದರೆ ಸಾಕಾಗುತ್ತದೆ. ಯಕೃತ್ತು ಮತ್ತು ಮೂತ್ರಪಿಂಡ ಆರೋಗ್ಯಕ್ಕಾಗಿ ಅನಾದಿ ಕಾಲದಿಂದಲೂ ಚೀನಾದಲ್ಲಿ ಇದನ್ನು ಔಷಧಿ ತಯಾರಿಕೆಗಾಗಿ ಬಳಕೆ ಮಾಡಲಾಗುತ್ತಿದೆ ಎನ್ನಲಾಗಿದೆ.
'ವುಲ್ಫ್ ಬೆರ್ರಿ' ಬೆಲೆ ಎಷ್ಟು?
ಗೋಜಿ ಬೆರ್ರಿ ಒಣ ಹಣ್ಣುಗಳ ಹೋಲ್ಸೇಲ್ ದರದಲ್ಲಿ ಪ್ರತಿ ಕೆಜಿಗೆ 950 ರೂಪಾಯಿಯಿಂದ 1200ರೂಪಾಯಿವರೆಗೂ ಮಾರಾಟಕ್ಕೆ ಸಿಗಲಿದೆ. ಇನ್ನೂ 100 ಗ್ರಾಂ ಪ್ಯಾಕೆಟ್ಗೆ 200ರಿಂದ 400 ರೂಪಾಯಿ ಶುಲ್ಕವಿರಲಿದೆ. ಸಾಮಾನ್ಯವಾಗಿ ಬೆಲೆಗಳು ಆಯಾ ಬ್ರಾಂಡ್ಗಳ ಮೇಲೆ ನಿಗದಿಯಾಗಿರುತ್ತದೆ, (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯು ಜಾಗೃತಿ ಉದ್ದೇಶಕ್ಕಾಗಿ ಮಾತ್ರ. ನೀವು ಯಾವುದೇ ಸಮಸ್ಯೆಗಳನ್ನು ಅನುಭವಿಸಿದರೆ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.