Packing food: ಕೆಲಸಕ್ಕಾಗಲಿ ಅಥವಾ ಶಾಲೆ ಆಗಲಿ ಜನರು ಮನೆಯಿಂದ ಹೊರಗೆ ಹೋಗುವಾಗ ಯಾವಾಗಲೂ ಟಿಫನ್ ಬಾಕ್ಸ್ ಕೊಂಡುಯ್ಯುವುದನ್ನು ಮರೆಯುವುದಿಲ್ಲ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಗಾಜು, ಉಕ್ಕು ಮತ್ತು ಪ್ಲಾಸ್ಟಿಕ್ ಟಿಫಿನ್‌ಗಳನ್ನು ಹೆಚ್ಚಾಗಿ ಆಹಾರವನ್ನು ಪ್ಯಾಕ್ ಮಾಡಲು ಬಳಸಲಾಗುತ್ತದೆ. ಆದರೆ, ಟಿಫಿನ್ ಬಾಕ್ಸ್ನಲ್ಲಿರುವ ಕೆಲವೊಂದು ವಸ್ತುಗಳು ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರಬಹುದು ಎಂದಾದರೂ ಯೋಚಿಸಿದ್ದೀರಾ?
ನಿಮ್ಮ ಆಹಾರವನ್ನು ತಪ್ಪಾದ ಪಾತ್ರೆಯಲ್ಲಿ ಸಂಗ್ರಹಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗಬಹುದು. ಏಕೆಂದರೆ, ಇದರಲ್ಲಿ ರಾಸಾಯನಿಕಗಳು ಸೋರಿಕೆಯಾಗಬಹುದು ಜೊತೆಗೆ ದೇಹದಲ್ಲಿ ಹಾರ್ಮೋನುಗಳ ಏರಿಳಿತ ಉಂಟಾಗಬಹುದು. ಇದರಿಂದ ಜೀರ್ಣಕಾರಿ ಸಮಸ್ಯೆ, ಕ್ಯಾನ್ಸರ್ ಅಪಾಯ ಹೆಚ್ಚಾಗಬಹುದು. ಹಾಗಾಗಿ ಯಾವ ಬಾಕ್ಸ್ ಉತ್ತಮ ಎಂದು ನಾವಿಂದು ತಿಳಿಸಲಿದ್ದೇವೆ..
ಸ್ಟೀಲ್ ಟಿಫಿನ್
ಹೆಚ್ಚಿನ ಜನರು ಆಹಾರ ಕೊಂಡೊಯ್ಯಲು ಸ್ಟೀಲ್ ಬಾಕ್ಸ್ಗಳನ್ನು ಬಳಸುತ್ತಾರೆ. ಇದು ನಿಂಬೆ ಹಣ್ಣಿನಿಂದ ಮಾಡಿದ ಆಹಾರಗಳು, ಪಲ್ಯದಂತಹ ಆಮ್ಲೀಯ ಆಹಾರಗಳೊಂದಿಗೆ ಪ್ರತಿಕ್ರಿಯಿಸುವುದಿಲ್ಲ. ಇದು ವಿಷಕಾರಿ ಅಂಶಗಳನ್ನು ಬಿಡುಗಡೆ ಮಾಡುವುದಿಲ್ಲ. ಹಾಗೆಯೇ ಈ ಬಾಕ್ಸ್ ಆಹಾರದ ರುಚಿಯನ್ನು ಬದಲಾಯಿಸುವುದಿಲ್ಲ. ಇದನ್ನು ಸ್ವಚ್ಛಗೊಳಿಸುವುದು ಕೂಡಾ ಸುಲಭ. ಹಾಗಾಗಿ ಈ ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗುತ್ತದೆ.
ಗ್ಲಾಸ್ ಟಿಫಿನ್
ಗಾಜಿನ ಪಾತ್ರೆಗಳು ಆಹಾರದೊಂದಿಗೆ ರಾಸಾಯನಿಕವಾಗಿ ವರ್ತಿಸುವುದಿಲ್ಲ. ಹಾಗಾಗಿ ಇವುಗಳನ್ನು ಸುರಕ್ಷಿತ ಎಂದು ಹೇಳಲಾಗುತ್ತದೆ. ಈ ಗಾಜಿನ ಬಾಕ್ಸ್ಗಳಲ್ಲಿ ಆಹಾರವು ಸ್ಪಷ್ಟವಾಗಿ ಗೋಚರಿಸುತ್ತದೆ ಮತ್ತು ಅವು ರಂಧ್ರಗಳಿರುವುದಿಲ್ಲ. ಅಂದರೆ ನೀರು, ಎಣ್ಣೆ ಅಥವಾ ಆಹಾರ ಕಣಗಳು ವಸ್ತುವಿನೊಳಗೆ ಭೇದಿಸುವುದಿಲ್ಲ. ಇದು ಬ್ಯಾಕ್ಟೀರಿಯಾಗಳು ಬೆಳೆಯುವುದನ್ನು ತಡೆಯುತ್ತದೆ.
ಸ್ಟೀಲ್ ಟಿಫಿನ್ vs ಗ್ಲಾಸ್ ಟಿಫಿನ್: ಯಾವುದು ಉತ್ತಮ?
ನೀವು ಪ್ರತಿದಿನ ಕಚೇರಿ ಅಥವಾ ಶಾಲೆಗೆ ಆಹಾರವನ್ನು ಕೊಂಡೊಯ್ಯಬೇಕಾದರೆ, ಉಕ್ಕಿನ ಪಾತ್ರೆಯನ್ನು ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ. ಇದು ಹಗುರ ಮತ್ತು ಬಲವಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ ರಾಸಾಯನಿಕ ಸೋರಿಕೆ ಮಾಡುವುದಿಲ್ಲ. ಆದಾಗ್ಯೂ ಉಕ್ಕು ದೈನಂದಿನ ಬಳಕೆ ಮತ್ತು ಪ್ರಯಾಣಕ್ಕೆ ಹೆಚ್ಚು ಪ್ರಾಯೋಗಿಕವಾಗಿದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.