Water Bottles (ಸಾಂದರ್ಭಿಕ ಚಿತ್ರ)
Water Bottles: ಪ್ರತಿಯೊಬ್ಬ ಮನುಷ್ಯನಿಗೂ ನೀರು ಅತೀ ಅಮೂಲ್ಯವಾದದ್ದು, ಇದು ಪ್ರತಿಯೊಬ್ಬರ ದೇಹವನ್ನು ಹೈಡ್ರೇಟ್ ಮಾಡುತ್ತದೆ. ಆದಾಗ್ಯೂ, ನೀವು ಬಳಸುವ ನೀರಿನ ಬಾಟಲಿಗಳು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದರೆ, ನೀವು ನಂಬುತ್ತೀರಾ.. ಜಿಮ್ ಬ್ಯಾಗ್ಗಳಿಂದ ಹಿಡಿದು ಆಫೀಸ್ ಟೇಬಲ್ವರೆಗೂ ನೀರಿನ ಬಾಟಲ್ಗಳು ಇದ್ದೇ ಇರುತ್ತವೆ. ಜನರು ಬಾಟಲಿಗಳನ್ನು ಖರೀದಿಸುವಾಗ ಅವುಗಳ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಬದಲಿಗೆ ಅದನ್ನು ತೆಗೆದುಕೊಂಡು ಹೋಗಲು ಸುಲಭವಾಗಿದಿಯೇ ಎಂದು ಯೋಚಿಸುತ್ತಾರೆ.
ಆದರೆ, ಬಾಟಲಿಯನ್ನು ಯಾವ ವಸ್ತುವಿನಿಂದ ತಯಾರಿಸಲಾಗುತ್ತದೆ ಅಥವಾ ಅದು ದೀರ್ಘಕಾಲೀನ ಶೇಖರಣೆಗೆ ಸುರಕ್ಷಿತವಾಗಿದೆಯೇ ನೀವೇನಾದರೂ ಯೋಚಿಸಿದ್ದೀರಾ. ಇದರಿಂದ ಉಂಟಾಗುವ ಸಮಸ್ಯೆಗಳನ್ನು ಬಗ್ಗೆ ತಿಳಿದಿದಿಯೇ? ಹಾಗಿದ್ದರೆ, ನೀರಿನ ಬಾಟಲಿಗಳಿಂದ ಉಂಟಾಗುವ ಸಮಸ್ಯೆಗಳೇನು? ಯಾವ ಬಾಟಲಿಯನ್ನು ಬಳಸಬೇಕು ಎಂಬುದನ್ನು ನಾವಿಂದು ತಿಳಿಸಲಿದ್ದೇವೆ.
ಬಾಟಲಿಗಳನ್ನು ತಯಾರಿಸಲು ಬಳಸುವ ವಸ್ತುಗಳು ಹಾನಿಕಾರಕ ರಾಸಾಯನಿಕಗಳನ್ನು ಸೋರಿಕೆ ಮಾಡಬಹುದು. ಇದು ರುಚಿಯನ್ನು ಬದಲಾಯಿಸುವುದಲ್ಲದೇ, ನಿಮ್ಮ ದೇಹಕ್ಕೆ ಬ್ಯಾಕ್ಟೀರಿಯಾಗಳನ್ನು ಕಳುಹಿಸುತ್ತದೆ. ಆದರಿಂದ ನೀವು ನೀರು ಕುಡಿಯಲು ಯಾವ ಬಾಟಲಿಗಳು ಮುಖ್ಯ ಎಂಬುದನ್ನು ತಿಳಿಯೋಣ ಬನ್ನಿ...
ಪ್ಲಾಸ್ಟಿಕ್ ಬಾಟಲಿ
ಪ್ಲಾಸ್ಟಿಕ್ ಬಾಟಲಿಯಿಂದ ನೀರು ಕುಡಿಯುವುದು ಇಂದಿನ ದಿನಗಳಲ್ಲಿ ಅನಿವಾರ್ಯವಾದರೂ, ಇದು ದೀರ್ಘಕಾಲದ ದೃಷ್ಟಿಯಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಪ್ಲಾಸ್ಟಿಕ್ ತಯಾರಿಕೆಯಲ್ಲಿ ಬಳಸುವ ಬಿಸ್ಫೆನಾಲ್-ಎ (BPA) ಮತ್ತು ಫ್ತಾಲೇಟ್‌ಗಳು ನೀರಿನಲ್ಲಿ ಬೆರೆಯುತ್ತವೆ. ವಿಶೇಷವಾಗಿ ಬಾಟಲಿಯು ಬಿಸಿಲಿನಲ್ಲಿ ಅಥವಾ ಕಾರಿನೊಳಗೆ ಬಿಸಿಯಾದಾಗ ಈ ರಾಸಾಯನಿಕಗಳ ಬಿಡುಗಡೆ ವೇಗವಾಗಿರುತ್ತದೆ. ಇವು ದೇಹ ಸೇರಿದರೆ ಹಾರ್ಮೋನ್‌ಗಳ ಸಮತೋಲನ ತಪ್ಪುತ್ತದೆ. ಇದರ ಸೇವನೆಯು ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.
ಗಾಜಿನ ಬಾಟಲಿ
ಗಾಜಿನ ಬಾಟಲಿಗಳು ನೀರಿನ ನಿಜವಾದ ರುಚಿಯನ್ನು ಉಳಿಸಿಕೊಳ್ಳುತ್ತವೆ ಎಂದು ಅಧ್ಯಯನಗಳು ತಿಳಿಸಿವೆ. ಇದರರ್ಥ ಗಾಜಿನ ಬಾಟಲಿಯಲ್ಲಿ ಯಾವುದೇ ರಂಧ್ರಗಳಿರುವುದಿಲ್ಲ. ಹಾಗಾಗಿ ಇದಕ್ಕೆ ಯಾವುದೇ ಬ್ಯಾಕ್ಟೀರಿಯಾಗಳು ಅಂಟಿಕೊಳ್ಳುವುದಿಲ್ಲ. ಇದರಲ್ಲಿರುವ ನೀರು ಯಾವಾಗಲೂ ತಾಜಾ ಮತ್ತು ಶುದ್ಧ ರುಚಿಯಿಂದ ಕೂಡಿರುತ್ತದೆ. ಜೊತೆಗೆ ಬಿಸಿ ನೀರಿನಲ್ಲಿ ಕುದಿಸಿ ಕ್ರಿಮಿನಾಶಕ ಮಾಡುವುದು ಸುಲಭ.
ಸ್ಟೀಲ್ ಬಾಟಲಿ
ಸ್ಟೀಲ್ ಬಾಟಲಿಗಳು ಬಾಳಿಕೆ ಬರುವಂತವು. ಇದು ಹಗುರವಾಗಿರುವುದರ ಜೊತೆಗೆ ಪ್ಲಾಸ್ಟಿಕ್ನಿಂದ ಮುಕ್ತಿ ಪಡೆದುಕೊಂಡಿರುತ್ತವೆ. ಈ ನೀರನ್ನು ದೀರ್ಘಕಾಲದವರೆಗೆ ಬಿಸಿಯಾಗಿ ಅಥವಾ ತಂಪಾಗಿ ಇಡುತ್ತವೆ. ಇದು BPA-ಮುಕ್ತವಾಗಿದ್ದು, ಗಾಜಿನ ಬಾಟಲಿಗಳಿಗಿಂತ ಅವುಗಳನ್ನು ಸ್ವಚ್ಛಗೊಳಿಸಲು ಸ್ವಲ್ಪ ಕಷ್ಟವಾಗಬಹುದು. ಸರಿಯಾಗಿ ಸ್ವಚ್ಛಗೊಳಿಸದೇ ಇದ್ದರೆ, ಇದು ಲೋಹಿಯ ರುಚಿ ಮತ್ತು ವಾಸನೆಯನ್ನು ಬಾಟಲಿ ಹೊಂದುತ್ತದೆ.
ತಾಮ್ರದ ಬಾಟಲಿ
ತಾಮ್ರವು ಆಂಟಿಮೈಕ್ರೊಬಿಯಲ್ ಆಗಿದ್ದು ಇದು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ತಾಮ್ರದ ಬಾಟಲಿಯಲ್ಲಿ ದೀರ್ಘಕಾಲದವರೆಗೆ ನೀರನ್ನು ಸಂಗ್ರಹಿಸಿದರೆ, ಅದರಿಂದ ಅತಿಯಾದ ತಾಮ್ರ ಸೋರಿಕೆಯಾಗಿ, ತಾಮ್ರವು ವಿಷವಾಗಿ ಪರಿವರ್ತನೆಯಾಗಬಹುದು. ಈ ಸಂದರ್ಭದಲ್ಲಿ ಅದರಿಂದ ನೀರು ಕುಡಿಯುವುದರಿಂದ ಇದು ಯಕೃತ್ತು ಮತ್ತು ಮೂತ್ರಪಿಂಡದ ಸಮಸ್ಯೆಗಳಿಗೆ ಕಾರಣವಾಗುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.