Weight Loss Journey (ಸಾಂದರ್ಭಿಕ ಚಿತ್ರ)
- ತೂಕ ಇಳಿಸುವ ಬಗ್ಗೆ ದಿನಕ್ಕೊಂದು ಹೊಸ ಮಾಹಿತಿ ಅಥವಾ 'ಡಯಟ್ ಪ್ಲಾನ್'ಗಳು ಬರುತ್ತಿರುತ್ತವೆ
- ಒಂದು ಕಡೆ 'ಕೀಟೋ' ಎಂದರೆ, ಇನ್ನೊಂದು ಕಡೆ 'ಇಂಟರ್ಮಿಟೆಂಟ್ ಫಾಸ್ಟಿಂಗ್' ಎನ್ನಲಾಗುತ್ತದೆ
- ಈ ಗೊಂದಲದಲ್ಲಿ ತೂಕ ಇಳಿಸುವ ಉತ್ಸಾಹಕ್ಕಿಂತ ಹೆಚ್ಚಾಗಿ ಮಾನಸಿಕ ಆಯಾಸವೇ ಜಾಸ್ತಿ
Weight Loss Journey: ಇಂದಿನ ಡಿಜಿಟಲ್ ಯುಗದಲ್ಲಿ ತೂಕ ಇಳಿಸುವ ಬಗ್ಗೆ ದಿನಕ್ಕೊಂದು ಹೊಸ ಮಾಹಿತಿ ಅಥವಾ 'ಡಯಟ್ ಪ್ಲಾನ್'ಗಳು ಬರುತ್ತಿರುತ್ತವೆ. ಒಂದು ಕಡೆ 'ಕೀಟೋ' ಎಂದರೆ, ಇನ್ನೊಂದು ಕಡೆ 'ಇಂಟರ್ಮಿಟೆಂಟ್ ಫಾಸ್ಟಿಂಗ್' ಎನ್ನಲಾಗುತ್ತದೆ. ಈ ಗೊಂದಲದಲ್ಲಿ ತೂಕ ಇಳಿಸುವ ಉತ್ಸಾಹಕ್ಕಿಂತ ಹೆಚ್ಚಾಗಿ ಮಾನಸಿಕ ಆಯಾಸವೇ ಜಾಸ್ತಿಯಾಗುತ್ತದೆ.
ಆದಾಗ್ಯೂ, ತೂಕ ಇಳಿಸಿಕೊಳ್ಳುವ ಪ್ರಕ್ರಿಯೆ ಸುಲಭದ್ದೇನಲ್ಲ. ಅದಕ್ಕೆ ಅದರದ್ದೇ ಆದ ನೀತಿ ನಿಯಮಗಳು ಇರುತ್ತವೆ. ಈ ನಿಯಮಗಳು ಕೆಲವೊಮ್ಮೆ ಆಯಾಸವೆನಿಸಬಹುದು. ಒಂದು ದಿನ ಕಾರ್ಬೋಹೈಡ್ರೇಟ್‌ಗಳನ್ನು ಕಡಿಮೆ ಮಾಡುವ ಬಗ್ಗೆ, ಇನ್ನೊಂದು ದಿನ ವ್ಯಾಯಾಮದ ಬಗ್ಗೆ. ಹೆಚ್ಚಿನವರು ಈ ಅಭ್ಯಾಸಗಳನ್ನು ಅನುಸರಿಸುವುದನ್ನೇ ಬಿಟ್ಟುಬಿಡುತ್ತಾರೆ.
ಇತ್ತೀಚೆಗೆ ಮಲ್ಲಿಕಾ ಫತೇಪುರಿಯಾ ಎಂಬ ಯುವತಿಯು 90 ಕೆಜಿ ಇಂದ 55 ಕೆಜಿ ಗೆ ತೂಕ ಇಳಿಸಿಕೊಂಡಿರುವ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆದಾಗ್ಯೂ, ಅವರ 35 ಕೆಜಿ ತೂಕ ಇಳಿಸಿಕೊಳ್ಳಲು ಅವರಿಗೆ ಸಹಾಯ ಮಾಡಿದರ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನೀವೇನಾದರೂ, ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಮಲ್ಲಿಕಾ ಅವರ ಈ ನಿಯಮಗಳನ್ನು ಅನುಸರಿಸಿ..
ತೂಕ ಇಳಿಸಿಕೊಳ್ಳಲು ಮಲ್ಲಿಕಾ ಮಾಡುವುದನ್ನು ನಿಲ್ಲಿಸಿದ ಎಲ್ಲದರ ವಿವರ ಇಲ್ಲಿದೆ..
1. ಆಹಾರಕ್ರಮ ಅನುಸರಿಸುವುದು
ಪ್ರತಿ ಬಾರಿ ಕೂಡಾ ಕಟ್ಟುನಿಟ್ಟಿನ ಆಹಾರ ಕ್ರಮವನ್ನು ಅನುಸರಿಸಿದಾಗಲೂ ಅವರು ಸ್ವಲ್ಪ ತೂಕ ಇಳಿಸಿಕೊಳ್ಳುವುದರಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಆದಾಗ್ಯೂ, ಈ ರೀತಿಯ ನಿಯಮಗಳನ್ನು ಅರ್ಧಕ್ಕೆ ನಿಲ್ಲಿಸಬಾರದು. ಬದಲಾಗಿ ತೂಕ ಇಳಿಸುವುದನ್ನು ನೆನಪಿನಲ್ಲಿಟ್ಟುಕೊಂಡು ಅಭ್ಯಾಸವನ್ನು ಮುಂದುವರೆಸಿದಾಗ ದೇಹದಲ್ಲಿ ಬದಲಾವಣೆಗಳನ್ನು ಕಾಣಬಹುದು ಎಂದು ಹೇಳುತ್ತಾರೆ.
2. ಕಾರ್ಬೋಹೈಡ್ರೇಟ್ ಸೇವನೆ ನಿಲ್ಲಿಸುವುದು
ಪ್ರತಿನಿತ್ಯದ ಆಹಾರ ಕ್ರಮದಲ್ಲಿ ಬ್ರೆಡ್, ಅನ್ನ ಅಥವಾ ಪಾಸ್ತಾದಂತಹ ಆಹಾರಗಳನ್ನು ತ್ಯಜಿಸುವುದನ್ನು ಅವರು ತೆಗೆದುಕೊಂಡರು. ಈ ಆಹಾರಗಳು ದೇಹದಲ್ಲಿ ಹೆಚ್ಚುವರಿ ಬೊಜ್ಜನ್ನು ಶೇಖರಿಸುತ್ತವೆ. ಹಾಗಾಗಿ ನಿಯಮಿತ ಆಹಾರದಲ್ಲಿ ಸಂಪೂರ್ಣ ಕಾರ್ಬೋಹೈಡ್ರೇಟ್ ಸೇವನೆಯನ್ನು ನಿಲ್ಲಿಸಿದರು.
3. ಬಲವಂತವಾಗಿ ನೀರಸ ಊಟಗಳನ್ನು ತಿನ್ನುವುದು
ಆಹಾರವು ಆರೋಗ್ಯಕರವಾಗಿಯೂ ಇರಬೇಕು ಮತ್ತು ನಾಲಿಗೆಗೆ ರುಚಿಯಾಗಿಯೂ ಇರಬೇಕು. ಅಂದರೆ, ಅತಿಯಾದ ಎಣ್ಣೆ ಅಥವಾ ಮಸಾಲೆ ಇಲ್ಲದಿದ್ದರೂ, ಅದನ್ನು ಇಷ್ಟಪಟ್ಟು ತಿನ್ನುವಂತೆ ತಯಾರಿಸಿ ಸೇವಿಸಬೇಕು ಎಂಬುದನ್ನು ಅರಿತುಕೊಂಡ ಫತೇಪುರಿಯಾ ಎಲ್ಲವನ್ನೂ ಮಿತವಾಗಿ ಮತ್ತು ಆನಂದವಾಗಿ ಸವಿಯಲು ಆರಂಭಿಸಿದರು. ಇದು ದೇಹದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಹಾಯ ಮಾಡಿತು ಎಂದರು.
4. ಅತಿಯಾದ ವ್ಯಾಯಾಮ
ಮಲ್ಲಿಕಾ ಪ್ರಕಾರ ತೂಕ ಇಳಿಸಲು ತೀವ್ರವಾದ ದೈನಂದಿನ ವ್ಯಾಯಾಮಗಳು ಅಗತ್ಯವೆಂದು ಭಾವಿಸುತ್ತಿದ್ದರು. ಹಾಗಾಗಿ ಪ್ರತಿನಿತ್ಯ ನಡಿಗೆ, ಶಕ್ತಿ ತರಬೇತಿ ಮತ್ತು ನಿಯಮಿತ ಆಹಾರ ಸೇವಿಸುವುದನ್ನು ಅಭ್ಯಾಸ ಮಾಡಿಕೊಂಡರು. ಇದು ತೂಕವನ್ನು ನಿಯಂತ್ರಿಸಲು ಸಹಾಯ ಮಾಡಿತು ಎಂದಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ತೂಕ ಇಳಿಸುವುದು ಎಂದರೆ "ಒಳ್ಳೆಯ ಆಹಾರವನ್ನು ತ್ಯಜಿಸುವುದು ಅಥವಾ ನಿಮ್ಮನ್ನು ನೀವು ದುಃಖಿತರನ್ನಾಗಿ ಮಾಡಿಕೊಳ್ಳುವುದು" ಎಂದರ್ಥವಲ್ಲ. ಅವರ ಪ್ರಯಾಣವು ಸ್ಥಿರತೆ ಮತ್ತು ಸಮತೋಲನವು ವಿಪರೀತಗಳಿಗಿಂತ ಹೆಚ್ಚು ಮುಖ್ಯ ಎಂದು ತೋರಿಸುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.