ಸಾಂದರ್ಭಿಕ ಚಿತ್ರ 
ಆರೋಗ್ಯ

ನಿಮ್ಮ ಫ್ರಿಡ್ಜ್​ನಿಂದ ದುರ್ವಾಸನೆ ಬರುತ್ತಿದೆಯೇ? ಮನೆಯಲ್ಲೇ ಇರುವ ಈ ವಸ್ತುಗಳಲ್ಲಿದೆ ಅದ್ಭುತ ಪರಿಹಾರ... Fridge smell

ಪ್ರಮುಖ ಮುಖ್ಯಾಂಶಗಳು

  • ಬೇಸಿಗೆ ಹತ್ತಿರ ಬರುತ್ತಿದ್ದಂತೆಯೇ ಮನೆಯ ಫ್ರಿಜ್ಡ್​ಗಳ ಬಳಕೆ ಹೆಚ್ಚಾಗುತ್ತದೆ
  • ಫ್ರಿಜ್ಡ್ ಹಣ್ಣು, ತರಕಾರಿ, ಉಳಿದ ಆಹಾರ ಪದಾರ್ಥಗಳನ್ನು ಕೆಡದಂತೆ ತಡೆಯುತ್ತದೆ
  • ಆಹಾರಗಳನ್ನು ಒಟ್ಟಿಗೆ ಇಡುವುದರಿಂದ ಕೆಲವೊಮ್ಮೆ ವಿಚಿತ್ರ ವಾಸನೆ ಬರಲಾರಂಭಿಸುತ್ತದೆ
Fridge smell: ಬೇಸಿಗೆ ಹತ್ತಿರ ಬರುತ್ತಿದ್ದಂತೆಯೇ ಮನೆಯ ಫ್ರಿಜ್ಡ್​ಗಳ ಬಳಕೆ ಹೆಚ್ಚಾಗುತ್ತದೆ. ಹಣ್ಣು, ತರಕಾರಿ, ಹಾಲು ಹಾಗೂ ಉಳಿದ ಆಹಾರ ಪದಾರ್ಥಗಳನ್ನು ಕೆಡದಂತೆ ಇಡಲು ನಾವು ಫ್ರಿಡ್ಜ್ ಅನ್ನು ಅವಲಂಬಿಸುತ್ತೇವೆ. ಆದರೆ, ಪದೇ ಪದೇ ಫ್ರಿಡ್ಜ್ ತೆರೆಯುವುದು ಮತ್ತು ವಿವಿಧ ರೀತಿಯ ಆಹಾರಗಳನ್ನು ಒಟ್ಟಿಗೆ ಇಡುವುದರಿಂದ ಕೆಲವೊಮ್ಮೆ ವಿಚಿತ್ರ ವಾಸನೆ ಬರಲಾರಂಭಿಸುತ್ತದೆ. ಆದಾಗ್ಯೂ,  ಮನೆಗೆ ಅತಿಥಿಗಳು ಬಂದಾಗ ಫ್ರಿಡ್ಜ್ ತೆರೆದ ಕೂಡಲೇ ಬರುವ ಈ ದುರ್ಗಂಧ ನಿಮ್ಮನ್ನು ಮುಜುಗರಕ್ಕೀಡು ಮಾಡಬಹುದು.
ಈ ಸಮಸ್ಯೆ ಸಾಮಾನ್ಯ ಎಂದು ನಿರ್ಲಕ್ಷಿಸಬೇಡಿ. ಕೆಟ್ಟ ವಾಸನೆ ಹೆಚ್ಚಾಗಿ ಹಾಳಾದ ಆಹಾರ, ಚೆಲ್ಲಿದ ದ್ರವಗಳು, ಸ್ವಚ್ಛಗೊಳಿಸದ ಫ್ರಿಜ್ಡ್​ನಿಂದ ಬರುತ್ತದೆ. ಈ ದುರ್ಗಂಧದಿಂದ ನೀವು ಸೋತು ಹೋಗಿದ್ದೀರಾ? ಆದಾಗ್ಯೂ, ಯಾವುದೇ ರಾಸಾಯನಿಕಗಳನ್ನು ಬಳಸದೇ ನೀವೇನಾದರೂ ಫ್ರಿಜ್ಡ್​ನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕೆಂದರೆ, ಈ ಸಲಹೆಗಳನ್ನು ಪಾಲಿಸಿ..

ಸ್ವಚ್ಛಗೊಳಿಸಲು ಹೀಗೆ ಮಾಡಿ

*  ನಿಮ್ಮ ರೆಫ್ರಿಜರೇಟರ್ ಅನ್ನು ಸ್ವಚ್ಛಗೊಳಿಸಲು, ಮೊದಲು ಅದರಲ್ಲಿರುವ ಎಲ್ಲಾ ಪದಾರ್ಥಗಳನ್ನು ಖಾಲಿ ಮಾಡಿ. ಎಲ್ಲಾ ಆಹಾರ ಮತ್ತು ಪಾನೀಯಗಳನ್ನು ತೆಗೆದುಹಾಕಿ ಮತ್ತು ಹಾಳಾದ ಅಥವಾ ಅವಧಿ ಮೀರಿದ ವಸ್ತುಗಳನ್ನು ಪರಿಶೀಲಿಸಿ ತೆಗೆದುಹಾಕಿ. 
*  ಫ್ರಿಡ್ಜ್ ನಲ್ಲಿ ಸಂಗ್ರಹಿಸಿಟ್ಟಿರುವ ಹಾಳಾದ ಮತ್ತು ಅವಧಿ ಮೀರಿದ  ವಸ್ತುಗಳನ್ನು ತಕ್ಷಣವೇ ಎಸೆಯಿರಿ, ಏಕೆಂದರೆ ಇವು ವಾಸನೆಗೆ ದೊಡ್ಡ ಕಾರಣಗಳಾಗಿವೆ.
*  ಮೊದಲು ರೆಫ್ರಿಜರೇಟರ ಸ್ವಿಚ್​ನ್ನು ಆಫ್​ ಮಾಡಿ ನಂತರ ಪ್ರತಿಯೊಂದು ಮೂಲೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಶೆಲ್ಫ್‌ಗಳು ಮತ್ತು ಡ್ರಾಯರ್‌ಗಳನ್ನು ತೆಗೆದುಹಾಕಿ. ಇದರಿಂದ ವಾಸನೆಯನ್ನು ಕಡಿಮೆ ಮಾಡಬಹುದು.

ಮನೆಯಲ್ಲಿ ಸಿಗುವ ಪದಾರ್ಥ ಬಳಸಿ ಫ್ರಿಜ್ಡ್​ ಸ್ವಚ್ಛ ಮಾಡುವುದು ಹೇಗೆ?

1. ಅಡುಗೆ ಸೋಡಾ 

ಫ್ರಿಡ್ಜ್‌ನ ವಾಸನೆಯನ್ನು ಹೀರಿಕೊಳ್ಳಲು ಅಡುಗೆ ಸೋಡಾ ಅತ್ಯುತ್ತಮ ಮದ್ದು. ಒಂದು ಬೌಲ್​ಗೆ ಅಡುಗೆ ಸೋಡಾ ಹಾಕಿ ಸ್ವಲ್ಪ ನೀರನ್ನು ಸೇರಿಸಿ ಮಿಕ್ಸ್​ ಮಾಡಿ ಮಿಷನ್​ನ ಮೂಲೆಯನ್ನು ಚೆನ್ನಾಗಿ ಒರೆಸಿರಿ.

2. ನಿಂಬೆ ಹಣ್ಣು

ನಿಂಬೆ ಹಣ್ಣನ್ನು ಅರ್ಧಕ್ಕೆ ಕತ್ತರಿಸಿ ಫ್ರಿಡ್ಜ್‌ನ ವಿವಿಧ ತಟ್ಟೆಗಳಲ್ಲಿ ಇಡಿ. ನಿಂಬೆಯ ನೈಸರ್ಗಿಕ ಸುವಾಸನೆಯು ಕೆಟ್ಟ ವಾಸನೆಯನ್ನು ತೊಲಗಿಸಲು ಸಹಾಯ ಮಾಡುತ್ತದೆ. ಅಥವಾ, ಒಂದು ಬೌಲ್ ನೀರಿನಲ್ಲಿ ನಿಂಬೆ ರಸ ಬೆರೆಸಿ ಫ್ರಿಡ್ಜ್  ಒಳಗಿನ ಭಾಗವನ್ನು ಒರೆಸಿರಿ. ಇದರಿಂದ ಕೆಟ್ಟ ವಾಸನೆ ದೂರ ಆಗುತ್ತದೆ.  

3. ಕಾಫಿ ಪುಡಿ

ಕಾಫಿ ಪುಡಿಯ ಸುವಾಸನೆ ತುಂಬಾ ಗಾಢವಾಗಿರುತ್ತದೆ. ಹಾಗಾಗಿ 2 ಚಮಚ ಕಾಫಿ ಪುಡಿಯನ್ನು ಒಂದು ಸಣ್ಣ ತಟ್ಟೆಯಲ್ಲಿ ಹಾಕಿ ಫ್ರಿಜ್ಡ್​ನ 2 ಬದಿಯಲ್ಲಿ ಇರಿಸಿ. ಇದರ ಸುವಾಸನೆಯು ಕೆಟ್ಟ ವಾಸನೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ಅಡಿಗೆ ಸೋಡಾ-ನಿಂಬೆ ಸ್ಕ್ರಬ್ ಮಾಡುವುದು ಹೇಗೆ?

ಒಂದು ಬಟ್ಟಲಿಗೆ ಅಡಿಗೆ ಸೋಡಾ, ವಿನೆಗರ್ ಮತ್ತು ನಿಂಬೆಹಣ್ಣು ಸೇರಿಸಿ ಅದಕ್ಕೆ ಬೆಚ್ಚಗಿನ ನೀರನ್ನು ಸುರಿಯಿರಿ. ನಂತರ ಅದಕ್ಕೆ ಒಂದು ಅಥವಾ ಎರಡು ಚಮಚ ಅಡಿಗೆ ಸೋಡಾ ಸೇರಿಸಿ ಮಿಕ್ಸ್​ ಮಾಡಿ. ನಂತರ ನಿಮ್ಮ ಫ್ರಿಜ್ಡ್​ನ ಮೂಲೆ ಮೂಲೆಗೆ ಹಚ್ಚಿ ಸ್ವಚ್ಛಗೊಳಿಸಿ ಇದರಿಂದ ನಿಮ್ಮ ರೆಫ್ರಿಜರೇಟರ್​ನಲ್ಲಿ ದುರ್ವಾಸನೆ ಮತ್ತು ಕಲೆಗಳನ್ನು ಸುಲಭವಾಗಿ ತೆಗೆದುಹಾಕಲು ಸಹಾಯ ಮಾಡುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.