ಸಾಂದರ್ಭಿಕ ಚಿತ್ರ 
ಆರೋಗ್ಯ

ತೂಕ ಇಳಿಸಬೇಕೆ? ಬೆಳ್ಳಂಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಸೇವಿಸಿ; ಬೆಣ್ಣೆಯಂತೆ ಕರಗುತ್ತೆ ಬೊಜ್ಜು! Weight loss

ಪ್ರಮುಖ ಮುಖ್ಯಾಂಶಗಳು

  • ತೂಕ ಇಳಿಸಿಕೊಳ್ಳುವ ಪ್ರಕ್ರಿಯೆಯು ಸುಲಭದ ಮಾತೇನಲ್ಲ ಎಂಬುದು ಎಲ್ಲರಿಗೂ ತಿಳಿದಿದೆ
  • ಈ ಪ್ರಕ್ರಿಯೆಗೆ ಆಹಾರ ಕ್ರಮಗಳ ಮೇಲೆ ಹೆಚ್ಚು ನಿಯಂತ್ರಣದಲ್ಲಿರಬೇಕಾಗುತ್ತದೆ
  • ಕೆಲವೊಂದು ಅಭ್ಯಾಸಗಳು ತೂಕ ಇಳಿಸುವ ಪ್ರಯಾಣದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ
  • ಬೆಳಗಿನ ಸಮಯ ಆಹಾರವನ್ನು ತಪ್ಪಿಸುವುದರಿಂದ ತೂಕವು ಹೆಚ್ಚಾಗುತ್ತದೆ
Weight loss: ತೂಕ ಇಳಿಸಿಕೊಳ್ಳುವ ಪ್ರಕ್ರಿಯೆಯು ಸುಲಭದ ಮಾತೇನಲ್ಲ. ಈ ಪ್ರಕ್ರಿಯೆಗೆ ಆಹಾರ ಕ್ರಮಗಳ ಮೇಲೆ ನಿಯಂತ್ರಣದಲ್ಲಿರಬೇಕಾಗುತ್ತದೆ. ಕೆಲವೊಂದು ಅಭ್ಯಾಸಗಳು ತೂಕ ಇಳಿಸುವ ಪ್ರಯಾಣದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ. ಆದಾಗ್ಯೂ, ಖಾಲಿ ಹೊಟ್ಟೆಯಲ್ಲಿ ಆಹಾರಗಳನ್ನು ಸೇವಿಸಿದಾಗ, ಚಯಾಪಚಯ ಕ್ರಿಯೆಗಳನ್ನು ಚುರುಕುಗೊಳಿಸಲು ಸಹಾಯ ಮಾಡುತ್ತದೆ. ಇದು ಹಸಿವನ್ನು ನಿಗ್ರಹಿಸುವುದರ ಜೊತೆಗೆ ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳನ್ನು ನೀಡುತ್ತದೆ.
ಅಂದಹಾಗೇ, ಪೌಷ್ಟಿಕ ತಜ್ಞೆ ನೇಹಾ ಪರಿಹಾರ್ ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಸಹಾಯ ಮಾಡುವ ಆಹಾರಗಳ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಹಾಗೆಯೇ ತಮ್ಮ ಪೋಸ್ಟ್​ನಲ್ಲಿ ವರ್ಷಾಂತ್ಯದ ತೂಕ ಹೆಚ್ಚಾಗುವುದು ಒಮ್ಮೆ ಅತಿಯಾಗಿ ತಿನ್ನುವುದರಿಂದ ಆಗುವುದಿಲ್ಲ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಬೆಳಗಿನ ಸಮಯ ಆಹಾರವನ್ನು ತಪ್ಪಿಸುವುದರಿಂದ ತೂಕವು ಹೆಚ್ಚಾಗುತ್ತದೆ. ಇದರಿಂದ ನಾವು ಬಯಸುವ ಕಡು ಬಯಕೆಗಳು ಹೆಚ್ಚಾಗುತ್ತವೆ, ಶಕ್ತಿ ಹೆಚ್ಚಾಗುತ್ತದೆ, ಕೊಬ್ಬಿನ ಶೇಖರಣೆ ಜಾಸ್ತಿಯಾಗುತ್ತದೆ. ಆದಾಗ್ಯೂ, ಕೊಬ್ಬು ನಷ್ಟ ಮತ್ತು ಹೊಟ್ಟೆಯನ್ನು ಚಪ್ಪಟೆಗೊಳಿಸಬೇಕೆಂದರೆ, ನಿಮ್ಮ ಖಾಲಿ ಹೊಟ್ಟೆಯಲ್ಲಿ ಈ ರೀತಿಯ ಆಹಾರಗಳನ್ನು ಸೇವಿಸಬೇಕು ಎಂದು ನೇಹಾ ತಿಳಿಸಿದ್ದಾರೆ.

1. ನೆನೆಸಿದ ಬಾದಾಮಿ / ವಾಲ್ನಟ್ಸ್

ಯಾವುದೇ ವ್ಯಕ್ತಿಯು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಪ್ರತಿನಿತ್ಯ ನೆನೆಸಿದ ಬಾದಾಮಿ ಮತ್ತು ವಾಲ್ನಟ್​ಗಳನ್ನು ಸೇವಿಸಿರಿ ಎಂದು ಫಿಟ್ನೆಸ್​ ತರಬೇತುದಾರರು ಸಲಹೆ ನೀಡುತ್ತಾರೆ. ಇವು ದೇಹಕ್ಕೆ ಪ್ರೊಟೀನ್​, ಫೈಬರ್ ಮತ್ತು ಚಯಾಪಚಯವನ್ನು ಹೆಚ್ಚಿಸುವ ಆರೋಗ್ಯಕರ ಕೊಬ್ಬಿನಿಂದ ಕೂಡಿರುತ್ತವೆ. ಈ ಬೀಜಗಳು ಬೆಳಗಿನ ಜಾವದ ಹಸಿವಿನ ಹಂಬಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ದೀರ್ಘಕಾಲದ ನಿರಂತರ ಶಕ್ತಿಯನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ.

2. ನೆಲ್ಲಿಕಾಯಿ

ಖಾಲಿ ಹೊಟ್ಟೆಯಲ್ಲಿ ಸಿಹಿಯಾಗಿರುವ ನೆಲ್ಲಿಕಾಯಿಯನ್ನು ಸೇವಿಸುವುದರಿಂದ ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಅದರ ಜೊತೆಗೆ ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವ ಮೂಲಕ, ಜೀರ್ಣಕ್ರಿಯೆಯನ್ನು ಸುಧಾರಿಸಿ, ಅತಿಯಾಗಿ ಹಸಿವಾಗುವುದನ್ನು ತಡೆಯುತ್ತದೆ. ಇದರಿಂದ ಕಡುಬಯಕೆಗಳು ತಪ್ಪಿ, ತೂಕ ನಿರ್ವಹಣೆ ಮಾಡಲು ಸಹಾಯವಾಗಬಹುದು.

3. ಬ್ರೆಜಿಲ್ ಕಾಯಿ

ಬ್ರೆಜಿಲ್ ಬೀಜಗಳು ಸೆಲೆನಿಯಮ್, ಪ್ರೋಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿದೆ. ಇದು ಚಯಾಪಚಯ ಕ್ರಿಯೆಗಳನ್ನು ಹೆಚ್ಚಿಸುವುದರ ಜೊತೆಗೆ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ಇದು ಥೈರಾಯ್ಡ್ ಕಾರ್ಯವನ್ನು ಬೆಂಬಲಿಸಿ, ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತವೆ. ಜೊತೆಗೆ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ. ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಈ ಕಾಯಿಯನ್ನು ನೀರಿನಲ್ಲಿ ನೆನಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿರಿ.

4. ಬೆಚ್ಚಗಿನ ಅರಿಶಿನ, ಕರಿಮೆಣಸು ನೀರು

ತೂಕ ಇಳಿಸಿಕೊಳ್ಳಲು ಅರಿಶಿನ ಮತ್ತು ಕರಿಮೆಣಸಿನೊಂದಿಗೆ ಬೆಚ್ಚಗಿನ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಿಯಮಿತವಾಗಿ ತೂಕವನ್ನು ಇಳಿಸಿಕೊಳ್ಳಬಹುದು. ಇದು ಆರೋಗ್ಯಕರ ಜೀವನಶೈಲಿಯೊಂದಿಗೆ ಸೇರಿಕೊಂಡಾಗ ಇದು ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ಮಾಡುತ್ತದೆ. ಇದರಿಂದ ದೇಹವು ತೂಕವನ್ನು ಇಳಿಸಿಕೊಂಡು ಸದೃಢವಾಗಿ ಕಾಣಿಸಿಕೊಳ್ಳಬಹುದು.

5. ಚಿಯಾ ಬೀಜದ ನೀರು

ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಚಿಯಾ ಬೀಜದ ನೀರನ್ನು ಕುಡಿಯುವುದರಿಂದ ಇದು ತೂಕವನ್ನು ನಿರ್ಣಯಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ನೇರವಾಗಿ ಸುಡುವುದಿಲ್ಲ. ಬದಲಿಗೆ ಕ್ಯಾಲೋರಿ ಕೊರತೆಯನ್ನು ಬೆಂಬಲಿಸಿ ಜೀರ್ಣಕ್ರಿಯೆಗೆ ಸಹಾಯಕವಾಗಿ ಕಾರ್ಯನಿರ್ವಹಿಸುತ್ತದೆ.
ಫಿಟ್‌ನೆಸ್ ತಜ್ಞರು ಈ ಬೆಳಗಿನ ದಿನಚರಿಯನ್ನು ಪ್ರತಿನಿತ್ಯ ಅಭ್ಯಾಸ ಮಾಡಬೇಕೆಂದು ಹೇಳುತ್ತಾರೆ. ಏಕೆಂದರೆ, ಒಂದು ದಿನ ಮಾಡುವುದು ಮತ್ತೊಂದು ದಿನ ಬಿಡುವುದನ್ನು ಮಾಡಬಾರದು ಇವು ದೇಹಕ್ಕೆ ಯಾವುದೇ ರೀತಿಯಲ್ಲೂ ಪ್ರಯೋಜನ ನೀಡುವುದಿಲ್ಲ. ಹಾಗಾಗಿ 30-90 ದಿನಗಳವರೆಗೆ ಈ ಅಭ್ಯಾಸವನ್ನು ಮಾಡಿದಾಗ ಇದು ನಿಯಮಿತವಾಗಿ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.