- ಒತ್ತಡದ ಬದುಕಿಗೆ ಮುಕ್ತಿ ಕೊಡಲು ಸಣ್ಣ ಮಾರ್ಗಗಳನ್ನು ಫಾಲೋ ಮಾಡಿ ಸಾಕು.
- ಪುಸ್ತಕ ಓದುವುದು, ಸಂಗೀತ ಕೇಳುವುದು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ.
- ನಾಳಿನ ಕೆಲಸದ ಬಗ್ಗೆ ಇಂದೇ ಯೋಚಿಸಿ, ತಯಾರಿಟ್ಟುಕೊಂಡು ಮಲಗುವುದು ಒಳ್ಳೆ ಅಭ್ಯಾಸ.
ಆಧುನಿಕ ಜಗತ್ತಿನಲ್ಲಿ ಹೆಚ್ಚಿನ ಸ್ಕ್ರೀನ್ ಟೈಂಗಳು ಮಾನಸಿಕ ಆರೋಗ್ಯದ ಮೇಲೆ ಹೆಚ್ಚು ಒತ್ತಡವನ್ನು ಹೇರುತ್ತಿದೆ. ಹೀಗಾಗಿ ಸಮಸ್ಯೆ ಎಂದು ಎನಿಸಿದಾಗ ಅದರ ಜೊತೆಗೆ ಕಾದಾಡಾದೆ ದುಡುಕಿ ಸಾಯುವ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಥವಾ ಡಿಪ್ರೆಷನ್ಗೆ ಜಾರುವುದು ಸಾಮಾನ್ಯವಾಗಿ ಬದಲಾಗಿದೆ. ಹೀಗಾಗಿ, ನಿಮ್ಮ ಸಮಯವನ್ನು ನಿಮಗೆ ಕೊಟ್ಟುಕೊಳ್ಳಿ. ಜೊತೆಗೆ ಕೆಲವೊಂದು ಉತ್ತಮ ಅಭ್ಯಾಸಗಳನ್ನು ಹಂತ ಹಂತವಾಗಿ ರೂಢಿ ಮಾಡಿಕೊಳ್ಳುವುದರಿಂದ ಒತ್ತಡದ ಬದುಕಿಗೆ ಗುಡ್ ಬಾಯ್ ಹೇಳುವಂತೆ ಮಾಡಿಸಬಹುದು.
ಒತ್ತಡ ಮುಕ್ತ ಹಾಗೂ ನೆಮ್ಮದಿ ಜೀವನ ನಡೆಸಲು ನಾವು ಮಾಡಬೇಕಾದ ಕೆಲಸವೇನು? ಯಾವುದನ್ನು ಬಿಡಬೇಕು ಯಾವ ಕೆಲಸಗಳನ್ನು ನಮ್ಮ ಜೀವನ ಅವಿಭಾಜ್ಯ ಅಂಗವಾಗಿ ಬದಲಿಸಿಕೊಳ್ಳಬೇಕು. ಒತ್ತಡದಲ್ಲೂ ಕೂಲ್ ಆಗಿರುವ ಮನೋಭಾವ ಬೆಳಸಿಕೊಳ್ಳೋದು ಹೇಗೆ ಎನ್ನುವ ಪ್ರಶ್ನೆಗೆ ಈ ಲೇಖನದಲ್ಲಿ ಡಿಟೇಲ್ಸ್ ನೀಡಲಾಗಿದೆ.
ಈ ಅಭ್ಯಾಸ ರೂಢಿಸಿಕೊಳ್ಳಿ
ಬೆಳೆಗೆದ್ದ ತಕ್ಷಣ ಮೊಬೈಲ್ ನೋಡೋದು ಬಿಡಿ
ಮುಂಜಾನೆ ಎದ್ದ ಕೂಡಲೇ ಮಾಡುವ ಕೆಲಸ ಎಂದರೆ ಮೊಬೈಲ್ ನೋಡುವುದು. ಇದರಿಂದ ಸ್ಕ್ರೀನ್ಗೆ ಅಡಿಕ್ಟ್ ಆಗಿ ಒಂದು ಗಂಟೆ ರೀಲ್ಸ್ ನೋಡುತ್ತಾ ಕೂರುತ್ತೇವೆ. ನಂತರ ಆಫೀಸಿಗೆ ಸಮಯವಾಯ್ತು ಎಂದು ಹರಿಬರಿಯಲ್ಲಿ ಮನೆ ಬಿಡುತ್ತೇವೆ. ದಿನ ಪೊರ್ತಿ ಕಿರಿಕಿರಿಯಾಗುವಂತೆ ಈ ಸ್ವಭಾವ ಮಾಡುತ್ತದೆ. ಹೀಗಾಗಿ ಎದ್ದ ಕೂಡಲೇ ಹಲ್ಲುಜ್ಜಿ ನೀರು ಕುಡಿದು ಸ್ನಾನ ಮಾಡಿ ದೇವರಿಗೆ ಪ್ರಾರ್ಥನೆ ಮಾಡಿ. ಅಲ್ಲಿ ಅಂಟಿಸುವ ದೂಪ, ಅಗರಬತ್ತಿ ವಾಸನೆಯೂ ಆಧ್ಯಾತ್ಮಿಕ ಲೋಕಕ್ಕೆ ಕರೆದೊಯ್ಯುವಂತೆ ಮಾಡುತ್ತದೆ.
ಲ್ಯಾಪ್ಟಾಪ್, ಮೊಬೈಲ್, ಸೋಶಿಯಲ್ ಮೀಡಿಯಾ ಇದು ಮಾನಸಿಕ ಒತ್ತಡವನ್ನು ಹೆಚ್ಚು ಮಾಡುತ್ತದೆ. ಹೀಗಾಗಿ ಒಂದೆರಡು ಗಂಟೆಗಳ ಕಾಲ ಯಾವುದನ್ನು ಬಳಕೆ ಮಾಡದೆ ಬಿಟ್ಟುಬಿಡಿ. ಆ ಸಮಯದಲ್ಲಿ ನಿಮ್ಮಿಷ್ಟದ ಪುಸ್ತಕ ಓದಿ.. ಸಂಗೀತ ಕೇಳಿ ಅಥವಾ ನೃತ್ಯ ಮಾಡುವ ಅಭ್ಯಾಸ ಮಾಡಿಕೊಳ್ಳುವುದು ಸರಿಯಾದ ಮಾರ್ಗ.
ತಿಂಗಳುಗಟ್ಟಲೇ ನಿರಂತರವಾಗಿ ದುಡಿಯುವ ಬದಲಾಗಿ ಕೊಂಚ ಬ್ರೇಕ್ ತೆಗೆದುಕೊಳ್ಳಿ. ನೀವು ವಾಸವಿರುವ ಸ್ಥಳದಿಂದ ದೂರದ ಊರುಗಳಿಗೆ ಟ್ರಾವೆಲ್ ಮಾಡುವ ಅಭ್ಯಾಸ ಮಾಡಿಕೊಳ್ಳಿ. ನಿಮ್ಮಿಷ್ಟ ಗೆಳೆಯ ಅಥವಾ ಗೆಳತಿಯೊಂದಿಗೆ ಪ್ರಯಾಣಿಸುವುದರಿಂದ ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ನೀವು ನಿತ್ಯ ಮಲಗುವ ಮುನ್ನ ನಾಳೆಯ ಬಗ್ಗೆ ಯೋಚಿಸಿ. ಯಾವ ಅಡುಗೆ ಮಾಡಿಕೊಳ್ಳಬೇಕು. ಯಾವ ಬಟ್ಟೆ ಧರಿಸಬೇಕು. ಎಷ್ಟು ಗಂಟೆಗೆ ಏಳಬೇಕು. ಊಟದ ಬ್ರೇಕ್, ಯಾವ ಕೆಲಸ ಮಾಡಿಕೊಳ್ಳಬೇಕು ಎನ್ನುವ ಯೋಜನೆಯನ್ನು ಹೂಡಿಕೊಳ್ಳಿ ಇದರಿಂದಾಗಿ ಬೆಳಗೆದ್ದು ಎಲ್ಲದಕ್ಕೂ ಚಿಂತಿಸುತ್ತಾ ಕೂರುವ ಅಗತ್ಯ ಇರೋದಿಲ್ಲ.
ನಿತ್ಯ ವಾಕಿಂಗ್, ಯೋಗ, ಧ್ಯಾನ ಮಾಡುವ ಅಭ್ಯಾಸ ಮಾಡಿಕೊಳ್ಳಿ ನಡೆದಷ್ಟು ಹೊತ್ತು ನಿಮ್ಮ ಮನಸ್ಸನ್ನು ಹಗುರ ಮಾಡುತ್ತದೆ. ಹೀಗಾಗಿ ವೈದ್ಯರು ಸಹ ವಾಕ್ ಮಾಡುವುದನ್ನು ಹಲವರಿಗೆ ಸಜೆಸ್ಟ್ ಮಾಡುತ್ತಾರೆ. ವಾಕ್ ಮಾಡಲು ನಿತ್ಯ ಆಗದೇ ಇದ್ದರು ಸಹ ಒಂದು ದಿನ ಧ್ಯಾನ, ಮತ್ತೊಂದು ದಿನ ಯೋಗಾಭ್ಯಾಸ ಮಾಡೋದು ವಾಡಿಕೆಯಲ್ಲಿರಲಿ, (ಏಜೆನ್ಸೀಸ್).