ಸಾಂದರ್ಭಿಕ ಚಿತ್ರ 
ಆರೋಗ್ಯ

ಹೊಟ್ಟೆ ಕೊಬ್ಬು ಕರಗಿಸಲು ಈ 3 ಸೂತ್ರಗಳನ್ನು ಫಾಲೋ ಮಾಡಿ; ಸೆಲೆಬ್ರಿಟಿ ಕೋಚ್ ಬಿಚ್ಚಿಟ್ಟ ಸೀಕ್ರೆಟ್ ಏನು ಗೊತ್ತಾ? Fat Loss

ಪ್ರಮುಖ ಮುಖ್ಯಾಂಶಗಳು

  • ತೂಕ ಇಳಿಸಿಕೊಳ್ಳುವುದು ಸುಲಭವಾದ ಮಾತೇನಲ್ಲ ಅದಕ್ಕೆ ಪೂರ್ವ ತಯಾರಿ ಅವಶ್ಯಕ
  • ತೂಕ ಇಳಿಸಿಕೊಳ್ಳಲು ಹಲವಾರು ಜನರು ಅನೇಕ ರೀತಿಯಲ್ಲಿ ವರ್ಕೌಟ್​ ಮಾಡುತ್ತಾರೆ
  • ಕೊಬ್ಬನ್ನು ಕಳೆದುಕೊಳ್ಳುವುದು ಕ್ಯಾಲೋರಿಗಳನ್ನು ಸುಡುವುದಕ್ಕಿಂತ ಹೆಚ್ಚು ಸಂಕೀರ್ಣವಾಗಿದೆ
Fat Loss: ತೂಕ ಇಳಿಸಿಕೊಳ್ಳುವುದು ಸುಲಭವಾದ ಮಾತೇನಲ್ಲ. ತೂಕ ಇಳಿಸಿಕೊಳ್ಳಲು ಹಲವಾರು ಜನರು ಅನೇಕ ರೀತಿಯಲ್ಲಿ ವರ್ಕೌಟ್​ ಮಾಡುತ್ತಾರೆ. ಹಾಗೆಯೇ ಮತ್ತೆ ಆಕಾರ ಪಡೆಯುವ ವಿಷಯಕ್ಕೆ ಬಂದಾಗ, ಅನೇಕ ಜನರು ಗಂಟೆಗಟ್ಟಲೆ ಓಡುವುದು ಅಥವಾ ಅತಿಯಾದ ವ್ಯಾಯಾಮದೊಂದಿಗೆ ತಮ್ಮ ದೇಹವನ್ನು ಮಿತಿಗೊಳಿಸಿಕೊಳ್ಳಲು ಇದೊಂದೇ ಪರಿಹಾರ ಎಂದು ಭಾವಿಸುತ್ತಾರೆ. ಆದರೆ, ಕೊಬ್ಬನ್ನು ಕಳೆದುಕೊಳ್ಳುವುದು ಕ್ಯಾಲೋರಿಗಳನ್ನು ಸುಡುವುದಕ್ಕಿಂತ ಹೆಚ್ಚು ಸಂಕೀರ್ಣವಾಗಿದೆ ಎಂಬುದು ಆದಷ್ಟು ಜನರಿಗೆ ತಿಳಿದಿರುವುದಿಲ್ಲ.
ಪುಣೆ ಮೂಲದ ಫಿಟ್‌ನೆಸ್ ತರಬೇತುದಾರರೊಬ್ಬರು ತೂಕ ಇಳಿಸಿಕೊಳ್ಳುವ ಮೂರು ಪರಿಣಾಮಕಾರಿ ಸಲಹೆಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ವೀಡಿಯೊದಲ್ಲಿ ಹಂಚಿಕೊಂಡಿದ್ದಾರೆ. ಅವರು ಸೂಚಿಸಿದಂತೆ 50 ಕಿಮೀ ಓಡಿದಾಗ, ನಿಮ್ಮ ಹೊಟ್ಟೆ ಕರಗಬಹುದೇ ಹೊರತು, ಹೆಚ್ಚಾದ ಕೊಬ್ಬನ್ನು ಕರಗಿಸಲು ಸಾಧ್ಯವಾಗುವುದಿಲ್ಲ. ಹಾಗೆಯೇ ನೀವು ಆಸ್ಪತ್ರೆಗೆ ಹೋಗುತ್ತೀರಿ, ಜಿಮ್​ನಲ್ಲಿ ವರ್ಕೌಟ್​ ಮಾಡುತ್ತೀರಿ. ಬಹುತೇಕ ಜನರು ತಪ್ಪಾಗಿ ವರ್ಕೌಟ್​ ಮಾಡುತ್ತಾರೆ ಹಾಗಾಗಿ ಅವರ ದೇಹದಲ್ಲಿ ಕೊಬ್ಬು ಕೊರಗುವುದಿಲ್ಲ ಎಂದಿದ್ದಾರೆ. ಈ ಸಂದರ್ಭದಲ್ಲಿ ಹೃದಯ ಮತ್ತು ಕೊಬ್ಬು ನಷ್ಟದ ನಡುವಿನ ಸಂಬಂಧ ಏನು ಎಂಬುದನ್ನು ಅವರು ಹಂಚಿಕೊಂಡಿದ್ದಾರೆ.
ಫಿಟ್ನೆಸ್ ತಜ್ಞರ ಪ್ರಕಾರ, ಕ್ಯಾಲೊರಿಗಳನ್ನು ಸುಡುವುದು ಯಾವಾಗಲೂ ಕೊಬ್ಬು ನಷ್ಟಕ್ಕೆ ಸಮನಾಗಿರುವುದಿಲ್ಲ. ಏಕೆಂದರೆ, ನಮ್ಮ ಹಾರ್ಮೋನುಗಳ ನಿಯಂತ್ರಣ, ಸ್ನಾಯುವಿನ ದ್ರವ್ಯರಾಶಿ ಧಾರಣ ಮತ್ತು ಒಟ್ಟಾರೆ ಶಕ್ತಿಯ ಸಮತೋಲನ ಸೇರಿದಂತೆ ಹಲವು ವಿಚಾರಗಳು ಈ ಅಂಶದಲ್ಲಿ ಪಾತ್ರ ನಿರ್ವಹಿಸುತ್ತದೆ ಎಂದು ಹೇಳಿದ್ದಾರೆ.

ತ್ವರಿತ ಕೊಬ್ಬು ನಷ್ಟಕ್ಕೆ ಮೂರು ಹಂತಗಳು

1. ವಲಯ 2 ಕಾರ್ಡಿಯೋ

ಅನೀಶ್ ಪಲೇಶಾ ಅವರು ಸೂಚಿಸುವಂತೆ ದೀರ್ಘಾವಧಿಯವರೆಗೆ ಕಡಿಮೆ ತೀವ್ರತೆಯ ಕಾರ್ಡಿಯೋ ವ್ಯಾಯಾಮಗಳನ್ನು ಮಾಡಲು ಶಿಫಾರಸ್ಸು ಮಾಡಿದ್ದಾರೆ. ಹೃದಯ ಬಡಿತವು ಗರಿಷ್ಠ 60–70 ಪ್ರತಿಶತದಷ್ಟು ಇರಬೇಕು. ಹಾಗೆಯೇ ಈ ಹಂತದಲ್ಲಿ ನಡೆಯುವುದು, ಓಡುವುದು ಮತ್ತು ಸೈಕಲ್​ ಮಾಡುವುದು ಸೇರಿವೆ.

2. ಸರ್ಕ್ಯೂಟ್ ತರಬೇತಿಯನ್ನು ಅಭ್ಯಾಸ ಮಾಡಿ

ಫಿಟ್​ನೆಸ್​ ತರಬೇತುದಾರರು ಸೂಚಿಸುವಂತೆ ನೀವು ಕೆಲಸದ ಒತ್ತಡದಲ್ಲಿದ್ದರೆ ಅಥವಾ ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿದ್ದರೆ, ಮಧ್ಯಂತರ ತರಬೇತಿಯನ್ನು ಸೇರಿಸಿಕೊಳ್ಳಲು ಶಿಫಾರಸ್ಸು ಮಾಡಿದ್ದಾರೆ. ಇದರ ಪ್ರಕಾರ, 10 ನಿಮಿಷಗಳ ಕಾಲ ಬ್ಯಾಟಲ್ ರೋಪ್‌ಗಳು, ಬರ್ಪೀಸ್ ಅಥವಾ ಬಾಕ್ಸ್ ಜಂಪ್‌ಗಳಂತಹ ವ್ಯಾಯಾಮ ಮಾಡಲು ತಿಳಿಸಿದ್ದಾರೆ. ಇದು ಹೆಚ್ಚುವರಿ ಕ್ಯಾಲೋರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

3. ಸಾಮರ್ಥ್ಯ ತರಬೇತಿ ಕಡ್ಡಾಯವಾಗಿದೆ

ಫಿಟ್​ನೆಸ್​ ತರಬೇತುದಾರ ಸೂಚಿಸಿದಂತೆ, ನೀವು ಸ್ನಾಯುಗಳನ್ನು ಬಲಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಸಾಮರ್ಥ್ಯ ತರಬೇತಿ ಕಡ್ಡಾಯವಾಗಿದೆ. ಇದು ನಿಮ್ಮ ಚಯಾಪಚಯ ದರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೊತೆಗೆ ಶಾಶ್ವತ ಕೊಬ್ಬಿನ ನಷ್ಟ, ಕಡಿಮೆ ಕೊಬ್ಬು ಸಂಗ್ರಹ, ಉತ್ತಮ ಹಾರ್ಮೋನುಗಳ ನಿಯಂತ್ರಣವನ್ನು ಮಾಡುತ್ತದೆ ಎಂದು ತಿಳಿಸಿದ್ದಾರೆ.
ಫಿಟ್‌ನೆಸ್ ತರಬೇತುದಾರ ಸೂಚಿಸಿದಂತೆ ಸುಸ್ಥಿರ ತೂಕ ನಷ್ಟಗೊಳಿಸಲು ಸ್ಮಾರ್ಟ್ ತರಬೇತಿ, ಕ್ಯಾಲೋರಿ ಕೊರತೆಯನ್ನು ಕಾಪಾಡಿಕೊಳ್ಳುವುದು ಮತ್ತು ಶಕ್ತಿ ತರಬೇತಿಗೆ ಆದ್ಯತೆ ನೀಡುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.