Weight Loss journey ನೇಹಾ ಪರಿಹಾರ್(ಚಿತ್ರ Instagram)
- ತೂಕ ಇಳಿಸಿಕೊಳ್ಳುವ ಪ್ರಕ್ರಿಯೆ ಎಲ್ಲರಿಗೂ ಸುಲಭದ ಮಾತೇನಲ್ಲ. ಪ್ರತಿಯೊಬ್ಬರ ದೇಹವು ವಿಭಿನ್ನವಾಗಿರುತ್ತದೆ
- ಆಹಾರದಲ್ಲಿ ಸಂಯೋಜನೆ, ದೈಹಿಕ ಚಟುವಟಿಕೆ ಸೇರಿದಂತೆ ಕೆಲವೊಂದು ಅಭ್ಯಾಸಗಳನ್ನು ಅನುಸರಿಸಬೇಕು
- ಜನರು ವೇಗವಾಗಿ ತೂಕ ಇಳಿಸಿಕೊಳ್ಳುವ ಸಲುವಾಗಿ ಔಷಧಗಳ ಮೊರೆ ಹೋಗುತ್ತಾರೆ
Weight Loss: ತೂಕ ಇಳಿಸಿಕೊಳ್ಳುವ ಪ್ರಕ್ರಿಯೆ ಎಲ್ಲರಿಗೂ ಸುಲಭದ ಮಾತೇನಲ್ಲ. ಪ್ರತಿಯೊಬ್ಬರ ದೇಹವು ವಿಭಿನ್ನವಾಗಿರುತ್ತದೆ. ಅದಕ್ಕೆ ತಕ್ಕಂತೆ ಆಹಾರದಲ್ಲಿ ಸಂಯೋಜನೆ, ದೈಹಿಕ ಚಟುವಟಿಕೆ ಸೇರಿದಂತೆ ಕೆಲವೊಂದು ಅಭ್ಯಾಸಗಳನ್ನು ಅನುಸರಿಸಬೇಕು. ಆದಾಗ್ಯೂ, ಜನರು ವೇಗವಾಗಿ ತೂಕ ಇಳಿಸಿಕೊಳ್ಳುವ ಸಲುವಾಗಿ ಔಷಧಗಳ ಮೊರೆ ಹೋಗುತ್ತಾರೆ. ಕೆಲವೊಂದಿಷ್ಟು ಜನ ಚುಚ್ಚು ಮದ್ದುಗಳನ್ನು ತೆಗೆದುಕೊಳ್ಳುತ್ತಾರೆ. ಇದೆಲ್ಲವೂ ತೂಕ ಇಳಿಸಿಕೊಳ್ಳಲು ಸಹಾಯ ಮಾಡಿದರೂ, ಕ್ಷಣಿಕವಾಗಿರುತ್ತದೆ.
ಅಂದಹಾಗೇ, ಯಾವುದೇ ರೀತಿಯಲ್ಲೂ ತೀವ್ರ ಕ್ರಮಗಳನ್ನು ತೆಗೆದುಕೊಳ್ಳದೇ ತೂಕ ಇಳಿಸಿಕೊಳ್ಳಲು ನೀವೇನಾದರೂ ಪ್ರಯತ್ನಿಸುತ್ತಿದ್ದರೆ, ನೇಹಾ ಪರಿಹಾರ್ ಅವರ ಈ ಸಲಹೆಗಳನ್ನು ತೆಗೆದುಕೊಳ್ಳಿ. ಇವರು ಯಾವುದೇ ತರಬೇತಿ ಇಲ್ಲದೇ, ಮನೆಯಲ್ಲೇ 22 ಕೆಜಿ ತೂಕ ಇಳಿಸಿಕೊಂಡಿರುವುದಾಗಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ನೇಹಾ ತೂಕ ಇಳಿಸಿಕೊಳ್ಳಲು ಮಾಡಿದ್ದೇನು?
ಕಡಿಮೆ ಬದಲಿಗೆ ಹೆಚ್ಚು ಆಹಾರ ಸೇವನೆ
ತೂಕ ಇಳಿಸಿಕೊಳ್ಳಲು ಅನೇಕ ಜನರು ಊಟ ಬಿಡುವುದನ್ನು ನೋಡಿರುತ್ತೇವೆ. ಆದರೆ ನೇಹಾ ಇದಕ್ಕೆ ವಿರುದ್ಧವಾಗಿ ಮಾಡಿದ್ದು, ತಮ್ಮ ಆಹಾರ ಸೇವನೆಯನ್ನು ಹೆಚ್ಚಿಸಿಕೊಂಡರು. ಸ್ವತಃ ಹಸಿವಿನಿಂದ ಬಳಲುವುದನ್ನು ನಿಲ್ಲಿಸಿದರು. ಜೊತೆಗೆ 3 ಆರೋಗ್ಯಕರ ಆಹಾರಗಳನ್ನು ಸೇರಿಸಿಕೊಂಡರು. ತಮ್ಮ ಎಲ್ಲಾ ಊಟದಲ್ಲಿ ಫೈಬರ್, ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಬಯಾಟಿಕ್ಗಳು ಇರುವುದನ್ನು ಖಚಿತಪಡಿಸಿಕೊಂಡರು. ಅನ್ನ ಸೇರಿದಂತೆ ಎಲ್ಲಾ ಆಹಾರವನ್ನು ಸೇವಿಸಲು ಪ್ರಾರಂಭಿಸಿದರು.
30 ನಿಮಿಷಗಳ ನಡಿಗೆ
ತೂಕ ಇಳಿಸಿಕೊಳ್ಳಲು ಇಚ್ಚಿಸಿದ ಅವರು ಜಿಮ್ಗೆ ಹೋಗಲಿಲ್ಲ. ಬದಲಿಗೆ ಊಟ ಮಾಡಿದ ನಂತರ ಸುಮಾರು 30 ನಿಮಿಷಗಳ ಕಾಲ ನಡೆಯುವ ಅಭ್ಯಾಸವನ್ನು ಮಾಡಿಕೊಂಡರು. ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ವೇಳೆ ಊಟ ಮಾಡಿದ ನಂತರ ನಡೆಯುವುದನ್ನು ಆರಂಭಿಸಿದರು. ಇದು ಅವರಿಗೆ ಯಾವುದೇ ಜಿಮ್ ಉಪಕರಣಗಳಿಲ್ಲದೇ ತೂಕ ಇಳಿಸಿಕೊಳ್ಳಲು ಸಹಾಯ ಮಾಡಿತು.
ಕಡುಬಯಕೆಗಳನ್ನು ನಿಲ್ಲಿಸಲಿಲ್ಲ
ಫಿಟ್‌ನೆಸ್ ತರಬೇತುದಾರರು ಯಾವಾಗಲೂ ಆರೋಗ್ಯಕರವಾದ ಆಹಾರವನ್ನು ಸೇವಿಸುತ್ತಿರಲಿಲ್ಲ. ಬದಲಾಗಿ 80/20 ನಿಯಮವನ್ನು ಅನುಸರಿಸಿದರು. ಅಂದರೆ, ಶೇ. 80 ರಷ್ಟು ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವುದು ಮತ್ತು ಉಳಿದ ಶೇ. 20 ರಷ್ಟು ನಿಮಗೆ ಇಷ್ಟವಾದ ಆಹಾರವನ್ನು ಸವಿಯುವುದನ್ನು ಪ್ರಾರಂಭಿಸಿದರು. ಇದು ಮಾನಸಿಕವಾಗಿ ಹತೋಟಿಯಲ್ಲಿಡಲು ಸಹಾಯ ಮಾಡುತ್ತದೆ ಎಂದು ನಂಬಿದ್ದರು.
ಬೇಗ ಊಟ ಮಾಡುವುದು
ಆರಂಭಿಕ ಭೋಜನವು ದೇಹವು ಆಹಾರವನ್ನು ಜೀರ್ಣಿಸಿಕೊಳ್ಳಲು ಮತ್ತು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಆದರಿಂದ ಪ್ರತಿದಿನ 6 ರಿಂದ 7 ಗಂಟೆಯ ನಡುವೆ ದಿನದ ಊಟವನ್ನು ಮಾಡುವುದರಿಂದ ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸಿ, ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ಇದರಿಂದ ಕೊಬ್ಬು ನಷ್ಟವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಸೂಚಿಸುತ್ತಾರೆ.
ಈ ಕಾರಣದಿಂದಾಗಿ ನೇಹಾ ಪರಿಹಾರ್ ರಾತ್ರಿ 7:30 ರ ಸುಮಾರಿಗೆ ನಿರಂತರವಾಗಿ ಊಟ ಮಾಡುತ್ತಿದ್ದರು. ಇದು ಅವರ ನಿದ್ರೆ ಮತ್ತು ಶಕ್ತಿಯ ಚಕ್ರಗಳಲ್ಲಿ ಸುಧಾರಣೆ ಕಂಡುಬರಲು ಸಹಾಯ ಮಾಡಿತು. ಜೊತೆಗೆ ಕರುಳಿಗೆ ವಿಶ್ರಾಂತಿ ಪಡೆಯಲು ಸಮಯ ಸಿಕ್ಕಾಗ, ಅದು ತೂಕ ನಷ್ಟ ಮತ್ತು ಹಾರ್ಮೋನುಗಳ ಸಮತೋಲನಕ್ಕೆ ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದರು (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.