Digestion: ಇಂದಿನ ದಿನಗಳಲ್ಲಿ ಕೆಲವೊಂದು ಜನರು ಜಠರದುರಿತ, ವಾಯು, ಜೀರ್ಣಕಾರಿ ಸಮಸ್ಯೆಗಳು ಅಥವಾ ಆಯಾಸದಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆಗಳಿಗೆ ಅನೇಕ ರೀತಿಯ ಔಷಧಗಳನ್ನು ತೆಗೆದುಕೊಂಡರೂ ಯಾವುದೇ ರೀತಿಯಲ್ಲೂ ಪ್ರಯೋಜನಗಳನ್ನು ಪಡೆಯದೇ ಮತ್ತೆ ನರಳಲು ಪ್ರಾರಂಭಿಸುತ್ತಾರೆ.
AIIMS, ಹಾರ್ವರ್ಡ್ ಮತ್ತು ಸ್ಟ್ಯಾನ್‌ಫೋರ್ಡ್ ತರಬೇತಿ ಪಡೆದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೌರಭ್ ಸೇಥಿ ಅವರು ಕರುಳು ಮತ್ತು ಯಕೃತ್ತನ್ನು ಆರೋಗ್ಯಕರವಾಗಿಡಲು ಆಹಾರಗಳ ಸರಿಯಾದ ಸಂಯೋಜನೆ ಎಷ್ಟು ಮುಖ್ಯ ಎಂಬುದನ್ನು ತಿಳಿಸಿದ್ದಾರೆ. ಅವರ ಪ್ರಕಾರ, ಕೆಲವು ಆಹಾರಗಳನ್ನು ಒಟ್ಟಿಗೆ ಸೇವಿಸುವುದರಿಂದ ಜೀರ್ಣಕ್ರಿಯೆ ಹೆಚ್ಚಾಗುತ್ತದೆ ಹಾಗೂ ಯಕೃತ್ ಉತ್ತಮವಾಗುತ್ತದೆ ಎಂದು ಹೇಳಿದ್ದಾರೆ.
ಸೇಬು ಮತ್ತು ಕಡಲೆಕಾಯಿ
ಸೇಬು ಮತ್ತು ಕಡಲೆಕಾಯಿ ಮಿಶ್ರಣವನ್ನು ತಿನ್ನುವುದರಿಂದ ಇದು ದೇಹಕ್ಕೆ ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳು ಸಿಗುತ್ತವೆ. ಇದರ ಪರಿಣಾಮವಾಗಿ, ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ. ಹಾಗೆಯೇ ಹೊಟ್ಟೆಯು ತುಂಬಿದಂತೆ ಭಾಸವಾಗುತ್ತದೆ. ಇದರಿಂದ ಸೇವಿಸಿದ ಆಹಾರವು ಜೀರ್ಣವಾಗುತ್ತದೆ. ಇದರಿಂದ ಯಾವುದೇ ಸಮಸ್ಯೆಯು ಬರುವುದಿಲ್ಲ.
ಅರಿಶಿನ ಮತ್ತು ಕರಿಮೆಣಸು
ಈ ಎರಡು ಆಹಾರ ಪದಾರ್ಥಗಳ ಪ್ರಯೋಜನಗಳು ಬಹಳ ಹಿಂದಿನಿಂದಲೂ ತಿಳಿದಿದೆ. ಅರಿಶಿನದ ಕರ್ಕ್ಯುಮಿನ್ ಪ್ರಬಲ ಉರಿಯೂತ ನಿವಾರಕವಾಗಿದೆ. ಇದನ್ನು ಕರಿಮೆಣಸು ಜೊತೆಯಲ್ಲಿ ಸೇವಿಸಿದಾಗ ಸಂಧಿವಾತ, ಕೀಲು ನೋವು, ಮಧುಮೇಹ ಮತ್ತು ಹೃದ್ರೋಗದಂಥ ಸಮಸ್ಯೆಗಳಲ್ಲಿ ಪರಿಹಾರ ನೀಡುತ್ತದೆ. ಹಾಗೆಯೇ ಎರಡೂ ಮಸಾಲೆಗಳು ದೇಹದ ಕೋಶಗಳನ್ನು ಫ್ರೀ ರ್ಯಾಡಿಕಲ್‌ಗಳ ಹಾನಿಯಿಂದ ರಕ್ಷಿಸುತ್ತವೆ. ಇದರಿಂದ ವಯಸ್ಸಾದಂಥ ಚಿಹ್ನೆಗಳು ಕಡಿಮೆಯಾಗಿ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ.
ಟೊಮೆಟೊ ಮತ್ತು ಆಲಿವ್ ಎಣ್ಣೆ
ಟೊಮ್ಯಾಟೊದಲ್ಲಿ ಇರುವ ಲೈಕೋಪೀನ್ ಕೊಬ್ಬಿನಲ್ಲಿ ಕರಗುವಂತದ್ದು, ಆದ್ದರಿಂದ ಆಲಿವ್ ಎಣ್ಣೆಯೊಂದಿಗೆ ಸೇವಿಸಿದಾಗ ಅದರ ಹೀರಿಕೊಳ್ಳುವಿಕೆ ಬಹಳಷ್ಟು ಹೆಚ್ಚುತ್ತದೆ. ಇದು ದೇಹದಲ್ಲಿ ಉತ್ಕರ್ಷಣ ನಿರೋಧಕ ಚಟುವಟಿಕೆಯನ್ನು ಬಲಪಡಿಸುತ್ತದೆ. ಆಲಿವ್ ಎಣ್ಣೆಯ ಮೊನೊಅನ್‌ಸ್ಯಾಚುರೇಟೆಡ್ ಫ್ಯಾಟ್‌ಗಳು ಮತ್ತು ಲೈಕೋಪೀನ್ ಒಟ್ಟಿಗೆ ಕೆಟ್ಟ ಕೊಲೆಸ್ಟ್ರಾಲ್ (LDL) ಕಡಿಮೆ ಮಾಡಿ, ಕೊಲೆಸ್ಟ್ರಾಲ್ನ್ನು ನಿಯಂತ್ರಿಸುತ್ತದೆ. ಹಾಗೆಯೇ ಹೃದ್ರೋಗ ಮತ್ತು ಸ್ಟ್ರೋಕ್ ಅಪಾಯ ಕಡಿಮೆಯಾಗುತ್ತದೆ.
ಮೊಸರು ಮತ್ತು ಹಣ್ಣುಗಳು
ಕರುಳಿನ ಆರೋಗ್ಯಕ್ಕೆ ರಕ್ಷಿಸಿಕೊಳ್ಳಲು ಮೊಸರು ಮತ್ತು ಹಣ್ಣುಗಳು ಅತ್ಯಂತ ಪ್ರಯೋಜನಕಾರಿಯಾಗಿದೆ. ಮೊಸರಿನಲ್ಲಿ ಇರುವ ಪ್ರೋಬಯಾಟಿಕ್ಸ್ ಮತ್ತು ಹಣ್ಣುಗಳಲ್ಲಿರುವ ಪ್ರೀಬಯಾಟಿಕ್ ಫೈಬರ್ ಒಟ್ಟಿಗೆ ಕೆಲಸ ಮಾಡಿ ಸಿನರ್ಜಿಸ್ಟಿಕ್ ಪ್ರಭಾವವನ್ನು ಉಂಟುಮಾಡುತ್ತವೆ. ಇವು ದೇಹಕ್ಕೆ ಒಳ್ಳೆಯ ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ. ಜೊತೆಗೆ ಹೊಟ್ಟೆ ಉಬ್ಬರ, ಅಜೀರ್ಣ, IBS ಕಡಿಮೆಯಾಗಿ ಜೀರ್ಣಾಂಗ ಆರೋಗ್ಯ ಸುಧಾರಿಸುತ್ತದೆ.
ಪಾಲಕ್ ಮತ್ತು ನಿಂಬೆ ರಸ
ಪಾಲಕ್ ಸೊಪ್ಪು ಮತ್ತು ನಿಂಬೆ ರಸ ಒಟ್ಟಿಗೆ ಸೇವಿಸುವುದು ಅದ್ಭುತ ಆರೋಗ್ಯ ಪ್ರಯೋಜನವನ್ನು ಪಡೆಯಬಹುದು. ಪಾಲಕ್‌ನಲ್ಲಿ ಇರುವ ನಾನ್-ಹೀಮ್ ಐರನ್ ಹೀರಿಕೊಳ್ಳುವಿಕೆಯನ್ನು ನಿಂಬೆಯಲ್ಲಿರುವ ವಿಟಮಿನ್ ಸಿ 3-5 ಪಟ್ಟು ಹೆಚ್ಚಿಸುತ್ತದೆ. ಇದು ವಿಟಮಿನ್ ಸಿ ಮತ್ತು ಪಾಲಕ್‌ನ ಆಂಟಿಆಕ್ಸಿಡೆಂಟ್‌ಗಳು, ಸೋಂಕುಗಳಿಂದ ರಕ್ಷಣೆ ನೀಡುತ್ತವೆ. ಶೀತ, ಜ್ವರದಂಥ ಸಮಸ್ಯೆಗಳನ್ನು ಕಡಿಮೆ ಮಾಡಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.