- ತೂಕ ಇಳಿಸುವ ಪ್ರಯಾಣವು ಇತರರನ್ನು ತಮ್ಮದೇ ಆದ ಪ್ರಯಾಣವನ್ನು ಪ್ರಾರಂಭಿಸಲು ಸಹಾಯ ಮಾಡುತ್ತದೆ
- ಹೆಚ್ಚಿನ ಜನರು ತೂಕವನ್ನು ಕಳೆದುಕೊಳ್ಳಲು ಏನು ಮಾಡಬೇಕೆಂದು ಹೆಣಗಾಡುತ್ತಿರುತ್ತಾರೆ
- ದುಬೈನ ಮಹಿಳೆಯೊಬ್ಬರು ಕೇವಲ 7 ತಿಂಗಳಲ್ಲಿ ಸುಮಾರು 12 ಕೆಜಿ ತೂಕ ಇಳಿಸಿಕೊಂಡಿದ್ದಾರೆ
- ಸತತ ಪ್ರಯತ್ನದ ನಂತರ 12 ಕೆಜಿ ತೂಕ ಕಡಿಮೆಯಾಗಿದೆ ಎಂದು ಬರೆದುಕೊಂಡಿದ್ದಾರೆ
Weight Loss: ತೂಕ ಇಳಿಸಿಕೊಳ್ಳುವುದು ಸುಲಭದ ಮಾತೇನಲ್ಲ. ಆದರೆ, ಈ ಪ್ರಯಾಣವು ಇತರರನ್ನು ತಮ್ಮದೇ ಆದ ಪ್ರಯಾಣವನ್ನು ಪ್ರಾರಂಭಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ಜನರು ತೂಕವನ್ನು ಕಳೆದುಕೊಳ್ಳಲು ಏನು ಮಾಡಬೇಕೆಂದು ಹೆಣಗಾಡುತ್ತಿರುತ್ತಾರೆ. ಆದಾಗ್ಯೂ, ದುಬೈನ ಮಹಿಳೆಯೊಬ್ಬರು ಕೇವಲ 7 ತಿಂಗಳಲ್ಲಿ ಸುಮಾರು 12 ಕೆಜಿ ತೂಕ ಇಳಿಸಿಕೊಳ್ಳುವ ಮೂಲಕ ರಹಸ್ಯವೊಂದನ್ನು ಹಂಚಿಕೊಂಡಿದ್ದು, ತೂಕ ಇಳಿಸಿಕೊಳ್ಳುವವರಿಗೆ ಇದು ಸ್ಪೂರ್ತಿಯಾಗಬಹುದು.
ಶೆರ್ರಿ ಪೀಟರ್ ಎಂಬ ಯುವತಿಯು ತನ್ನ ರೂಪಾಂತರದ ಮೊದಲು ಮತ್ತು ನಂತರದ ಚಿತ್ರಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸತತ ಪ್ರಯತ್ನದ ನಂತರ 12 ಕೆಜಿ ತೂಕ ಕಡಿಮೆಯಾಗಿದೆ ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಪೋಸ್ಟ್ನಲ್ಲಿ ಆಕಾರ ಪಡೆಯಲು ಅನುಸರಿಸಿದ ಫಿಟ್‌ನೆಸ್ ದಿನಚರಿಯನ್ನು ವಿವರಿಸಿದ್ದಾರೆ.
1. ಪ್ರತಿದಿನ 10 ಸಾವಿರ ಹೆಜ್ಜೆಗಳು
ತೂಕ ಇಳಿಸಿಕೊಳ್ಳಲು ಮುಖ್ಯವಾಗಿ ಪ್ರತಿದಿನ 10,000 ಹೆಜ್ಜೆ ನಡೆಯುವುದನ್ನು ಅಭ್ಯಾಸ ಮಾಡಿಕೊಂಡೆ. ಇದು ದಿನಕ್ಕೆ ಸುಮಾರು 300–500 ಹೆಚ್ಚುವರಿ ಕ್ಯಾಲೊರಿಗಳನ್ನು ಸುಡುತ್ತದೆ. ನಾನು ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಈ ಅಭ್ಯಾಸವನ್ನು ಅಳವಡಿಸಿಕೊಂಡಿದ್ದೇನೆ ಎಂದು ಶೆರ್ರಿ ಬರೆದಿದ್ದಾರೆ.
2. ವಾರಕ್ಕೆ 4-5 ದಿನಗಳು ತೂಕ ಮತ್ತು ಪೈಲೇಟ್ಸ್
ವಾರದಲ್ಲಿ 4–5 ದಿನಗಳು ತೂಕ ಎತ್ತುವ ವ್ಯಾಯಾಮ, ಸಾಮರ್ಥ್ಯ ತರಬೇತಿಯನ್ನು ಪಡೆದುಕೊಂಡೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುವುದರ ಜೊತೆಗೆ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಈ ಅಭ್ಯಾಸವನ್ನು ಪ್ರತಿದಿನ ಮಾಡುತ್ತೇನೆ ಎಂದರು.
3. ವಾರಕ್ಕೆ ಎರಡು ಬಾರಿ ಎಮ್‌ಸ್ಕಲ್ಪ್ಟ್ ನಿಯೋ
ಎಮ್‌ಸ್ಕಲ್ಪ್ಟ್ ನಿಯೋ ಎಂಬುದು ಶಸ್ತ್ರಚಿಕಿತ್ಸೆ ಇಲ್ಲದೆ ದೇಹದ ಆಕಾರವನ್ನು ಸುಧಾರಿಸುವ ಅತ್ಯಾಧುನಿಕ ಚಿಕಿತ್ಸೆಯಾಗಿದೆ. ಇದು 30 ನಿಮಿಷಗಳ ಅವಧಿಗಳಲ್ಲಿ ದೇಹದಲ್ಲಿ ಹೆಚ್ಚಾದ ಕೊಬ್ಬನ್ನು ಸುಡುವುದರ ಜೊತೆಗೆ ಸ್ನಾಯುಗಳನ್ನು ನಿರ್ಮಿಸುತ್ತದೆ. ಹೊಟ್ಟೆ, ಪೃಷ್ಠ, ತೋಳುಗಳು, ಕರುಗಳು ಮತ್ತು ತೊಡೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
ಪರಿಣಾಮಕಾರಿ ತೂಕ ನಷ್ಟವು ಹೆಚ್ಚಿನ ಫೈಬರ್ ಮತ್ತು ಪೋಷಕಾಂಶ-ದಟ್ಟವಾದ ಆಹಾರಗಳ ಮೇಲೆ ಕೇಂದ್ರೀಕರಿಸುತ್ತದೆ. ಆದಾಗ್ಯೂ, ದೇಹವನ್ನು ಹೆಚ್ಚಾಗಿ ಹೈಡ್ರೇಟ್ ಆಗಿರಿಸಲು ಹೆಚ್ಚಾಗಿ ನೀರು ಸೇವಿಸಿ. ಜೊತೆಗೆ ಸಂಸ್ಕರಿಸಿದ ಕಾರ್ಬೊಹೈಡ್ರೇಟ್ಗಳ ಸೇವನೆಯನ್ನು ಮಿತಗೊಳಿಸಬೇಕು. ಬಯಕೆಗಳು ಜಾಸ್ತಿಯಾದಾಗ ಗ್ರೀನ್ ಟೀ ಸೇವನೆಯು ಉತ್ತಮವಾಗಿದೆ ಎಂದು ಶೆರ್ರಿ ತಿಳಿಸುತ್ತಾರೆ.
5. ಮದ್ಯಪಾನ ತ್ಯಜಿಸುವುದು
ಕ್ಯಾಲೋರಿ ಸೇವನೆ ಜೊತೆಗೆ ಆಲ್ಕೋಹಾಲ್ ಸೇವನೆಯನ್ನು ಕಡಿಮೆ ಮಾಡುವುದರಿಂದ ತೂಕವನ್ನು ಇಳಿಸಿಕೊಳ್ಳಲು ಸಹಾಯವಾಗುತ್ತದೆ. ಇದರಿಂದ ನೂರಾರು ಕ್ಯಾಲೋರಿಗಳನ್ನು ಉಳಿಸುತ್ತೀರಿ. ಆಲ್ಕೋಹಾಲ್ ಬದಲಿಗೆ ಪೈಲೇಟ್ಸ್, ಜಿಮ್ ಮತ್ತು ನಡೆಯುವ ಅಭ್ಯಾಸವನ್ನು ಮಾಡುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯ ಮಾಡಿತು ಎಂದು ತಿಳಿಸಿದ್ದಾರೆ.
ಹೆಚ್ಚು ನಡೆಯುವುದು ಮತ್ತು ಕಡಿಮೆ ತಿನ್ನುವುದು ತೂಕ ಇಳಿಸಿಕೊಳ್ಳಲು ನೇರ ಮಾರ್ಗ ಎಂದು ಹೆಚ್ಚಿನ ಜನರಿಗೆ ತಿಳಿದಿದ್ದರೂ, ಶೆರ್ರಿ ಅವರಂತಹ ನಿಜವಾದ ತೂಕ ಇಳಿಸುವ ಕಥೆಗಳನ್ನು ಗಮನಿಸಿದಾಗ ಅಗತ್ಯವಾದ ಪ್ರೇರಣೆಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿದುಬರುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.