ಸಾಂದರ್ಭಿಕ ಚಿತ್ರ 
ಆರೋಗ್ಯ

ಚಳಿಗಾಲದ ಶೀತ ಗಾಳಿಯಿಂದಾಗಿ ಕೈಗಳು ಒಣಗುತ್ತಿವೆಯೇ? ಅವುಗಳನ್ನು ಸರಿಪಡಿಸಲು ಈ ಸಲಹೆಗಳನ್ನು ಆಯ್ಕೆ ಮಾಡಿಕೊಳ್ಳಿ...Dry Hands

ಪ್ರಮುಖ ಮುಖ್ಯಾಂಶಗಳು

  • ಚಳಿಗಾಲ ಪ್ರಾರಂಭವಾಗುತ್ತಿದ್ದಂತೆಯೇ ಕೈಗಳು ಒಣಗಲು ಆರಂಭಿಸುತ್ತವೆ
  • ಇದು ಚರ್ಮದ ತಡೆಗೋಡೆಯನ್ನೇ ತೆಗೆದುಹಾಕುವ ಕೆಲಸವನ್ನು ಮಾಡುತ್ತದೆ
  • ಚರ್ಮದೊಳಗೆ ನೀರನ್ನು ಉಳಿಸಿಕೊಳ್ಳುವ ರಕ್ಷಣಾತ್ಮಕ ಕವಚವನ್ನೇ ಇದು ದುರ್ಬಲಗೊಳಿಸುತ್ತದೆ
  • ಇದರಿಂದ ಚರ್ಮವು ಒಣಗುವುದು, ಕಿರಿಕಿರಿ ಉಂಟಾಗಿ ಸೋಂಕಿಗೆ ತಿರುಗುತ್ತದೆ
Dry Hands: ಚಳಿಗಾಲ ಪ್ರಾರಂಭವಾಗಿದೆ. ಕೈಗಳು ಒಣಗಲು ಪ್ರಾರಂಭಿಸಿ ಚರ್ಮವು ತೇವಾಂಶವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ. ಇದು ಚರ್ಮದ ತಡೆಗೋಡೆಯನ್ನೇ ತೆಗೆದುಹಾಕುವ ಕೆಲಸವನ್ನು ಮಾಡುತ್ತದೆ. ಸರಳವಾಗಿ ಹೇಳುವುದಾದರೆ, ಚರ್ಮದೊಳಗೆ ನೀರನ್ನು ಉಳಿಸಿಕೊಳ್ಳುವ ರಕ್ಷಣಾತ್ಮಕ ಕವಚವನ್ನೇ ಇದು ದುರ್ಬಲಗೊಳಿಸುತ್ತದೆ. ಇದರಿಂದ ಚರ್ಮವು ಒಣಗುವುದು, ಕಿರಿಕಿರಿ ಉಂಟಾಗಿ ಸೋಂಕಿಗೆ ತಿರುಗುತ್ತದೆ.
ಮೊದಲನೆಯದಾಗಿ, ಕಡಿಮೆ ಆರ್ದ್ರತೆಯು ಚರ್ಮದ ಜಲಸಂಚಯನವನ್ನು ಕಡಿಮೆ ಮಾಡುತ್ತದೆ. ಇದು ಹೊರಗಿನ ಚರ್ಮದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಲಿಪಿಡ್ ಪದರವನ್ನು ಬದಲಾಯಿಸುತ್ತದೆ. ಪದೇ ಪದೇ ಕೈಗಳನ್ನು ತೊಳೆಯುವುದು, ಸಾಬೂನುಗಳು, ಬಿಸಿನೀರು ಮತ್ತು ಘರ್ಷಣೆಯು ತಡೆಗೋಡೆಯನ್ನು ಮತ್ತಷ್ಟು ಹಾನಿಗೊಳಿಸುತ್ತದೆ. ಹಾಗಾಗಿ ಈ ಬಿರುಕು ಚರ್ಮದಿಂದ ನೀವೇನಾದರೂ, ಮುಕ್ತಿಯನ್ನು ಪಡೆಯಲು ಬಯಸಿದರೆ, ಈ ಸಲಹೆಗಳನ್ನು ಅನುಸರಿಸಿ...

1. ಅಧಿಕ ಬಿಸಿನೀರನ್ನು ಬಳಸುವುದು ಕಡಿಮೆ ಮಾಡಿ

ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಆದಷ್ಟು ಜನರು ಎಲ್ಲದಕ್ಕೂ ಬಿಸಿ ನೀರನ್ನು ಬಸಲಾರಂಭಿಸುತ್ತಾರೆ. ಇದರ ಬಳಕೆಯು ನೈಸರ್ಗಿಕ ಎಣ್ಣೆಗಳನ್ನು ತ್ವರಿತವಾಗಿ ತೆಗೆದುಹಾಕುತ್ತದೆ. ಹಾಗಾಗಿ ಬೆಚ್ಚಗಿನ ನೀರಿನಿಂದ ಕೈಗಳನ್ನು ತೊಳೆಯುವುದನ್ನು ನಿಲ್ಲಿಸಿ. ಇದು ಹಾನಿಯನ್ನು ತಡೆಯುತ್ತದೆ.

2. ಮೃದವಾದ ಸೋಪುಗಳನ್ನು ಬಳಸಿ

ಚರ್ಮಕ್ಕೆ ತೊಂದರೆ ನೀಡುವಂತಹ ಸಾಬೂನುಗಳನ್ನು ಬಳಸುವುದರಿಂದ ಇದು ನಿಮ್ಮ ಚರ್ಮಕ್ಕೆ ಹಾನಿಯನ್ನುಂಟು ಮಾಡುತ್ತದೆ. ಹಾಗಾಗಿ ನಿಮ್ಮ ಚರ್ಮಕ್ಕೆ ಸೂಕ್ತವಾಗುವ ಮೃದುವಾದ ಸಾಬೂನುಗಳನ್ನು ಬಳಸಿ ತೊಳೆಯುವುದರಿಂದ ಇದು ಚರ್ಮವನ್ನು ಸೌಮ್ಯವಾಗಿಸುತ್ತದೆ.

3. ಕೈ ತೊಳೆದ ತಕ್ಷಣ ಮಾಯಿಶ್ಚರೈಸ್ ಮಾಡಿ

ಕೆಲವು ಜನರು ಅನೇಕ ಬಾರಿ ಕೈಗಳು, ಮುಖ, ಕಾಲುಗಳನ್ನು ತೊಳೆಯುತ್ತಿರುತ್ತಾರೆ. ಇದರಿಂದ ಚರ್ಮದಲ್ಲಿರುವ ಎಣ್ಣೆ ಅಂಶವು ಸಂಪೂರ್ಣವಾಗಿ ಹೋಗುವುದರಿಂದ ಇದು ತೇವಾಂಶವನ್ನು ಕಾಪಾಡುವುದಿಲ್ಲ. ಹಾಗಾಗಿ ನಿಮ್ಮ ಚರ್ಮವು ಒಣಗಿದ 2-3 ನಿಮಿಷಗಳ ಒಳ್ಳೆಯ ಮಾಯಿಶ್ಚರೈಸ್ ತೆಗೆದುಕೊಂಡು ಮಸಾಜ್​ ಮಾಡಿ. ಇದು ಚಳಿಗಾಲದಲ್ಲಿ ನಿಮ್ಮ ರಕ್ಷಣೆಯನ್ನು ಮಾಡುತ್ತದೆ.

4. ಕೈಗಳಿಗೆ ಸೂಕ್ತವಾದ ಕ್ರೀಮ್ ಬಳಸಿ

ಕ್ರೀಮ್‌ಗಳು ಅಥವಾ ದಪ್ಪವಾದ ಮುಲಾಮುಗಳು ಹಗುರವಾದ ಲೋಷನ್‌ಗಳಿಗಿಂತ ಹೆಚ್ಚಿನ ಲಿಪಿಡ್‌ಗಳು ಮತ್ತು ಆಕ್ಲೂಸಿವ್‌ಗಳನ್ನು ಹೊಂದಿರುತ್ತವೆ. ಹಾಗಾಗಿ ಅವುಗಳನನ್ನು ಬಿರುಕು ಬಿಟ್ಟ ಮತ್ತು ತುಂಬಾ ಒಣಗಿದ ಕೈಗಳಿಗೆ ಹಚ್ಚುವುದರಿಂದ ವೇಗವಾಗಿ ಸರಿಪಡಿಸಲು ಸಹಾಯವಾಗುತ್ತದೆ.

5. ಮನೆಗೆಲಸಕ್ಕೆ ಕೈಗವಸುಗಳನ್ನು ಧರಿಸಿ

ಪಾತ್ರೆ ತೊಳೆಯುವ ಹಾಗೂ ಬಟ್ಟೆ ತೊಳೆಯುವ ಕಠಿಣ ಮಾರ್ಜಕಗಳನ್ನು ಬಳಸುವುದರಿಂದ ಇದು ಕೈಗಳಲ್ಲಿ ಚರ್ಮ ಸುಲಿಯುವಂತೆ ಮಾಡುತ್ತದೆ. ಹಾಗಾಗಿ ರಾತ್ರಿ ವೇಳೆಯಲ್ಲಿ ನೀವು ಆದಷ್ಟು ನಿಮ್ಮ ಚರ್ಮಕ್ಕೆ ಸೂಕ್ತವಾಗುವಂತಹ ಮಾಯಿಶ್ಚರೈಸರ್ ಹಚ್ಚಿರಿ. ಇದು ನಿಮ್ಮ ಚರ್ಮವನ್ನು ಕಾಪಾಡಲು ಸಹಾಯ ಮಾಡುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.