ಸಾಂದರ್ಭಿಕ ಚಿತ್ರ 
ಆರೋಗ್ಯ

ಟೀ ಪ್ರಿಯರೇ ಎಚ್ಚರ! ಇದು ಅಮೃತವಲ್ಲ, ನಿಧಾನವಾಗಿ ಕೊಲ್ಲುವ ವಿಷ! Drinking Tea

Drinking Tea: ಬೆಳಿಗ್ಗೆ ಚಹಾ ಕುಡಿಯುವುದು ಒಂದು ಸಾಮಾನ್ಯ ಅಭ್ಯಾಸ. ಕೆಲವೊಂದಿಷ್ಟು ಜನ ಚಹ ಕುಡಿಯದೇ ಬೇರೆ ಕೆಲಸವನ್ನೇ ಮಾಡುವುದಿಲ್ಲ. ಇನ್ನೂ ಕೆಲವರು ಎದ್ದ ತಕ್ಷಣ ಹಾಸಿಗೆಯಲ್ಲಿ ಚಹಾ ಕುಡಿಯಲು ಇಷ್ಟಪಡುತ್ತಾರೆ. ಆದರೆ, ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು ಹಾನಿಕಾರಕ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಇನ್ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಪಿತ್ತರಸ ವಿಜ್ಞಾನಗಳ ನಿರ್ದೇಶಕ ಮತ್ತು ಲಿವರ್ ತಜ್ಞ ಡಾ. ಶಿವಕುಮಾರ್ ಸರಿನ್, ಬೆಳಿಗ್ಗೆ ಚಹಾ ಕುಡಿಯುವ ಅಭ್ಯಾಸವು ಆರೋಗ್ಯಕ್ಕೆ ಹಾನಿಕಾರಕ ಎಂದು ಬಣ್ಣಿಸಿದ್ದಾರೆ.
ಚಹಾ ಕುಡಿಯುವ ಅಭ್ಯಾಸವನ್ನು ಸಾಂಪ್ರದಾಯಿಕ ಅಭ್ಯಾಸ ಎಂದು ಹಲವಾರು ಮಂದಿ ಬೆಳಿಗ್ಗೆ ಎದ್ದ ಕೂಡಲೇ ಕುಡಿಯುತ್ತಾರೆ. ಈ ರೀತಿಯ ಅಭ್ಯಾಸವು ದೇಹದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ ಎಂದು ಅವರು ವಿವರಿಸಿದ್ದಾರೆ.
ವಾಸ್ತವವಾಗಿ ಕೆಲವೊಂದಿಷ್ಟು ಜನರು ಚಹಾ ಕುಡಿದ ನಂತರವೇ ಮಲ ವಿಸರ್ಜನೆ ಮಾಡುವ ರೂಢಿಯನ್ನಿಟ್ಟುಕೊಂಡಿರುತ್ತಾರೆ. ಈ ಅಭ್ಯಾಸವು ಜೀವನ ಪರ್ಯಂತ ವಾಗಿರುತ್ತದೆ. ಹೀಗಾಗಿ ಕೆಲವೊಮ್ಮೆ ಕೆಲವೊಂದು ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಈ ರೀತಿಯ ಅಭ್ಯಾಸದಿಂದ ಚಹಾ ಕುಡಿದ ನಂತರ ಫ್ರೆಶ್ ಆಗುವುದು ಸಂಪೂರ್ಣವಾಗಿ ತಪ್ಪು.

ಗ್ಯಾಸ್ಟ್ರೋಕೊಲಿಕ್ ಪ್ರತಿವರ್ತನ

ಬೆಳಿಗ್ಗೆ ಎದ್ದಾಗ ಕರುಳಿನ ಚಲನೆಯು ಗ್ಯಾಸ್ಟ್ರೋಕೊಲಿಕ್ ರಿಫ್ಲೆಕ್ಸ್‌ನಿಂದ ಉಂಟಾಗುತ್ತದೆ. ಇದು ನೈಸರ್ಗಿಕ ಪ್ರಕ್ರಿಯೆಯಾಗಿದ್ದರೂ, ಹಾಳು ಹೊಟ್ಟೆಯಲ್ಲಿ ಚಹಾ ಕುಡಿದ ತಕ್ಷಣವೇ ಕರುಳಿನಲ್ಲಿ ಸಂಕೋಚನ ಉಂಟಾಗುತ್ತದೆ. ಇದು ಮಲ ವಿಸರ್ಜನೆಯನ್ನು ಪ್ರೇರೇಪಿಸುತ್ತದೆ. ದೇಹವು ಎಚ್ಚರಗೊಂಡಾಗ ರಿಫ್ಲೆಕ್ಸ್​ ಅನ್ನು ಸಕ್ರಿಯಗೊಳಿಸುತ್ತದೆ. ಈ ಕಾರಣದಿಂದ ಜನರು ನೈಸರ್ಗಿಕ ಕರುಳಿನ ಚಲನೆಯನ್ನು ಅನುಭವಿಸುತ್ತಾರೆ.

ಹೊಟ್ಟೆಯ ಆರೋಗ್ಯ ಹದಗೆಡುತ್ತದೆ

ಬೆಳಿಗ್ಗೆ ಎದ್ದ ತಕ್ಷಣ ಚಹಾ ಸೇವನೆ ಮಾಡುವುದರಿಂದ ಇದು ವ್ಯಸನ ಮತ್ತು ಜೀರ್ಣಕಾರಿ ಸಮಸ್ಯೆಗಳು ಕ್ರಮೇಣ ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತವೆ. ಹಾಗಾಗಿ ನೀವೇನಾದರೂ, ಕರುಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಬಯಸಿದರೆ ಅಥವಾ ಜೀರ್ಣಕ್ರಿಯೆ ಆಗಬೇಕೆಂದರೆ, ನೈಸರ್ಗಿಕ ವಿಧಾನಗಳನ್ನು ಬಳಸಿ ನಿಮ್ಮ ಕರುಳನ್ನು ಶುದ್ಧೀಕರಿಸಿ.

ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದಾಗುವ ಅನಾನುಕೂಲಗಳು

1. ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದು ಏಕೆಂದರೆ, ಇದರಲ್ಲಿರುವ ಟ್ಯಾನಿನ್​ಗಳು ಮತ್ತು ಕೆಫೇನ್​ ಹೊಟ್ಟೆಯ ಒಳಪದರವನ್ನು ಹಾನಿಗೊಳಿಸುತ್ತವೆ.
2. ಚಹಾದಲ್ಲಿರುವ ಟ್ಯಾನಿನ್‌ಗಳು ಹೊಟ್ಟೆಯ ಒಳಪದರವನ್ನು ಕೆರಳಿಸಿ ಎದೆಯುರಿ, ಅನಿಲ ಮತ್ತು ಅಜೀರ್ಣಕ್ಕೆ ಕಾರಣವಾಗುತ್ತವೆ.
3. ಚಹಾದಲ್ಲಿರುವ ಕೆಫೀನ್ ಆಮ್ಲ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರಿಂದ ಆಮ್ಲ ಹಿಮ್ಮುಖವಾಗಿ ಹರಿಯಲು ಪ್ರಾರಂಭಿಸುತ್ತದೆ. ಇದು ದೇಹದಲ್ಲಿ ಕಬ್ಬಿಣ ಮತ್ತು ಕ್ಯಾಲ್ಸಿಯಂ ಹೀರುಕೊಳ್ಳುವಿಕೆಗೆ ಅಡ್ಡಿಪಡಿಸಿ, ರಕ್ತಹೀನತೆಯನ್ನು ಉಂಟು ಮಾಡುತ್ತದೆ.
4. ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ಆಮ್ಲೀಯತೆ, ನಿದ್ರೆಯ ಸಮಸ್ಯೆಗಳು ಮತ್ತು ಅಜೀರ್ಣ ಉಂಟಾಗುತ್ತದೆ. ಇದು ಯಕೃತ್ತಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.