Drink Water Before Brushing 
ಆರೋಗ್ಯ

ಬೆಳಿಗ್ಗೆ ಹಲ್ಲುಜ್ಜದೇ ನೀರು ಕುಡಿಯೋದು ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ?; ದಂತ ವೈದ್ಯರು ಹೇಳೋದೇನು?..Drink Water Before Brushing

ಪ್ರಮುಖ ಮುಖ್ಯಾಂಶಗಳು

  • ಬೆಳಗೆದ್ದು ಬಿಸಿ ನೀರು ಹಲ್ಲುಜ್ಜದೆ ಕುಡಿಯೋದ್ರಿಂದ ಆಗುವ ಪ್ರಯೋಜನವೇನು?.
  • ಹಲ್ಲುಜ್ಜಿದ ತಕ್ಷಣ ನೀರು ಕುಡಿಯೋದ್ರಿಂದಾಗುವ ದುಷ್ಪರಿಣಾಮವೇನು ಗೊತ್ತಾ?.
  • ಹಲ್ಲುಜ್ಜದೆ ನೀರು ಕುಡಿಯೋದ್ರಿಂದ pH ಮಟ್ಟವನ್ನು ಸಮತೋಲಗೊಳಿಸಲು ಸಹಾಯ ಮಾಡುತ್ತದೆ.
Drink Water Before Brushing: ಈ ಹಿಂದೆ ಮನೆಗಳಲ್ಲಿ ಸ್ನಾನ ಮಾಡದೆ ಕಿಚನ್​ಗೆ ಪ್ರವೇಶ ಪಡೆದುಕೊಳ್ಳುವ ಹಾಗಿರಲಿಲ್ಲ. ಜೊತೆಗೆ ಸ್ನಾನ ಮಾಡಿ ಪೂಜೆ ಮಾಡಿ, ಆನಂತರ ಅಡುಗೆ, ಊಟ ಎನ್ನುವ ಪದ್ಧತಿ ಇಲ್ಲ. ಈಗಲೂ ಹಲವರು ಬ್ರಷ್ ಮಾಡದೇ ಏನನ್ನು ತಿನ್ನೋದಿಲ್ಲ, ಕುಡಿಯೋದಿಲ್ಲ. ಕೆಲವರಿಗೆ ಇದು ಆರೋಗ್ಯದ ಬಗ್ಗೆ ಇರುವ ಗಮನವಾದರೆ, ಇನ್ನೂ ಕೆಲವರಿಗೆ ಇದೊಂದು ರೂಢಿಗತ ಸಂಪ್ರದಾಯ.
ಇತ್ತೀಚಿನ ದಿನದಲ್ಲಿ ಹಲವರಿಗೆ ಆರೋಗ್ಯದ ಬಗ್ಗೆ ಹೆಚ್ಚೆಚ್ಚು ಕಾಳಜಿ ಇದೆ. ಕೆಲವರು ಬೆಳಗೆದ್ದ ಕೂಡಲೇ ನೀರು ಕಾಯಿಸಿಕೊಂಡು ಬ್ರಷ್​ ಮಾಡದೆ ಕುಡಿಯುತ್ತಾರೆ. ಹಲ್ಲುಜ್ಜದೆನೇಯೇ ನೀರನ್ನು ಸೇವನೆ ಮಾಡೋದ್ರಿಂದ ಬ್ಯಾಕ್ಟೀರಿಯಾ ಹೊಟ್ಟೆ ಸೇರಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎನ್ನುವುದು ಹಲವರ ನಂಬಿಕೆ. ಆದರೆ ಇದು ತಪ್ಪು. ಅಂತಹ ಸಮಸ್ಯೆ ಕಾಡೋಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು.

ಹಲ್ಲುಜ್ಜದೆ ಬೆಳಗೆದ್ದು ನೀರು ಕುಡಿಯೋದ್ರಿಂದ ಆಗೋದೇನು ತಜ್ಞರು ಏನಂತಾರೆ ಎನ್ನುವ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಇದೆ.

ನಿದ್ದೆ ಮಾಡಿರುವ ಸಮಯದಲ್ಲಿ ನಮ್ಮ ಬಾಯಲ್ಲಿ ಲಾಲಾರಸ ಉತ್ಪಾದನೆಯ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಬಾಯಿ ಒಣಗಿ, ಬಾಯಲ್ಲಿರುವ ಬ್ಯಾಕ್ಟೀರಿಯಾ ಆಹಾರೊಂದಿಗೆ ಪ್ರತಿಕ್ರಿಯಿಸಿ ಆಮ್ಲ ಬಿಡುಗಡೆಯಾಗುವಂತೆ ಮಾಡುತ್ತದೆ. ಇಷ್ಟೇ ಅಲ್ಲದೇ ಬಾಯಿಯಲ್ಲಿನ pHಮಟ್ಟವನ್ನು ಕಡಿಮೆ ಮಾಡುತ್ತದೆ. ಹಲ್ಲನ್ನು ದುರ್ಬಲಗೊಳಿಸುವಂತೆ ಮಾಡುತ್ತದೆ.

ಹಲ್ಲುಜ್ಜದೆ ಬ್ರಷ್ ಮಾಡೋದೆಷ್ಟು ಸರಿ?

ಬೆಳಗ್ಗೆ ಎದ್ದ ಕೂಡಲೇ ಒಂದು ಲೋಟ ಬಿಸಿ ಅಥವಾ ತಣ್ಣೀರು ಕುಡಿಯುವುದರಿಂದ ರಾತ್ರಿಯಿಡೀ ಉತ್ಮತ್ತಿಯಾಗುವ ಆಮ್ಲೀಯತೆ ಕಡಿಮೆ ಮಾಡುತ್ತದೆ. ಬಾಯಿಯ pHಮಟ್ಟವನ್ನು ಸಮತೋಲನಗೊಳಿಸುತ್ತದೆ. ಇದು ಹಲ್ಲ ದಂತ ಕವಚವನ್ನು ಕಾಪಾಡುತ್ತದೆ. ಹೊಟ್ಟೆಯ ಆಮ್ಲ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ ಎನ್ನುತ್ತಾರೆ ವೈದ್ಯರು.
ಹಲ್ಲುಜ್ಜದೆ ನೀರು ಕುಡಿದರೆ ಹೊಟ್ಟೆಗೆ ಬ್ಯಾಕ್ಟೀರಿಯಾ ಪ್ರವೇಶ ಮಾಡುತ್ತದೆ ಎನ್ನುವುದು ಕೇವಲ ನಂಬಿಕೆಯಷ್ಟೆ ನಮ್ಮ ಹೊಟ್ಟೆಯಲ್ಲಿರುವ ಆಮ್ಲಗಳು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ನೀರು ಕುಡಿಯೋದ್ರಿಂದ ಬಾಯಿ ಶುದ್ಧವಾಗುತ್ತದೆ. ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವನ್ನು ಉತ್ತೇಜಿಸುತ್ತದೆ.
ಬೆಳಗೆದ್ದ ಕೂಡಲೇ ನೀರು ಕುಡಿಯೋದು ಲಾಲಾರಸ ಗ್ರಂಥಿಗಳು ಸಕ್ರಿಯವಾಗೋಕೆ ಸಹಾಯ ಮಾಡುತ್ತದೆ. ಲಾಲಾರಸದಲ್ಲಿರುವ ಕ್ಯಾಲ್ಸಿಯಂ ಮತ್ತು ರಂಜಕದಂತಹ ಖನಿಜ ನೈಸರ್ಗಿಕವಾಗಿ ಹಲ್ಲುಗಳನ್ನು ರಕ್ಷಣೆ ಮಾಡುತ್ತದೆ ಎನ್ನಲಾಗಿದೆ.

ಹಲ್ಲುಜ್ಜಿದ ತಕ್ಷಣ ನೀರು ಕುಡಿಯಬಾರದು ಏಕೆ?

ಟೂತ್​ಪೇಸ್ಟ್​ನಲ್ಲಿ ಸಾಮಾನ್ಯವಾಗಿ ಫ್ಲೋರೆಡ್​ ಎನ್ನುವ ಅಶವಿರುತ್ತದೆ ಇದು. ಹಲ್ಲುಗಳ ಮೈಲ್ಮೈನ ರಕ್ಷಣಾತ್ಮಕ ಪದರವನ್ನು ರೂಪಿಸುತ್ತದೆ. ಕೊಳೆಯದಂತೆ ರಕ್ಷಣೆ ಮಾಡುತ್ತದೆ. ಹಲ್ಲುಜ್ಜುದ ತಖ್ಷಣ ನೀರು ಕುಡಿಯುವುದು ಫ್ಲೋರೈಡ್​ ಹೊಟ್ಟೆ ಒಳ ಭಾಗಕ್ಕೆ ಹೋಗುವಂತೆ ಮಾಡಬಹುದು. ಹೀಗಾಗಿ ಹಲ್ಲುಜ್ಜಿದ ನಂತರ 30 ನಿಮಿಷ ಕಾಲ ನೀರು ಅಥವಾ ಯಾವುದೇ ಪಾನೀಯ ಸೇವನೆ ಮಾಡಬರದು ಎಂದು ವೈದ್ಯರು ಹೇಳುತ್ತಾರೆ, (ಏಜೆನ್ಸೀಸ್).