ನಿಮ್ಮ ಬೆಳಗ್ಗಿನ ಈ 5 ಅಭ್ಯಾಸಗಳೇ ಕಿಡ್ನಿ ಆರೋಗ್ಯಕ್ಕೆ ಪೆಟ್ಟು ಕೊಡುತ್ತಿದೆ ಎಚ್ಚರ! ಈ ಅಭ್ಯಾಸಗಳಿದ್ದರೆ ಇಂದೇ ಬಿಟ್ಟುಬಿಡಿ | Kidney Health  
ಆರೋಗ್ಯ

ನಿಮ್ಮ ಬೆಳಗ್ಗಿನ ಈ 5 ಅಭ್ಯಾಸಗಳೇ ಕಿಡ್ನಿ ಆರೋಗ್ಯಕ್ಕೆ ಪೆಟ್ಟು ಕೊಡುತ್ತಿದೆ ಎಚ್ಚರ! ಈ ಅಭ್ಯಾಸಗಳಿದ್ದರೆ ಇಂದೇ ಬಿಟ್ಟುಬಿಡಿ | Kidney Health

ಜೀರ್ಣಾಂಗ ವ್ಯವಸ್ಥೆಯಿಂದ ಹೊರಬರುವ ತ್ಯಾಜ್ಯ ಉತ್ಪನ್ನಗಳಿಂದ ಹೆಚ್ಚುವರಿ ದ್ರವವನ್ನು ತೆಗೆದುಹಾಕುವುದು ಮಾತ್ರವಲ್ಲದೇ, ಮೂತ್ರವನ್ನು ಉತ್ಪಾದಿಸುವಲ್ಲಿ ಮತ್ತು ದೇಹದಲ್ಲಿ ರಕ್ತವನ್ನು ಶುದ್ಧೀಕರಿಸುವಲ್ಲಿ ಮೂತ್ರಪಿಂಡಗಳು ಪ್ರಮುಖ ಪಾತ್ರವಹಿಸುತ್ತವೆ.

Kidney Health: ಮೂತ್ರಪಿಂಡಗಳು ಅಥವಾ ಕಿಡ್ನಿ ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ನಮ್ಮ ಮನೆಗಳಲ್ಲಿ ಹೇಗೆ ವಾಟರ್​ ಪ್ಯೂರಿಯಿಫೈಯರ್​​ಗಳು ಕೆಲಸ ಮಾಡುತ್ತವೆಯೋ, ಮೂತ್ರಪಿಂಡಗಳು ಸಹ ನಮ್ಮೊಳಗಿನ ಬೇಡದ್ದನ್ನು ಶುದ್ಧಿಕರಿಸುವುದರಲ್ಲಿ ಎತ್ತಿದೈ. ರಕ್ತದಿಂದ ಯೂರಿಯಾದಂತಹ ತ್ಯಾಜ್ಯಗಳನ್ನು ಫಿಲ್ಟರ್ ಮಾಡುವ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಆದರೆ, ಬೆಳಗ್ಗೆ ಸೇರಿದಂತೆ ದಿನದಲ್ಲಿ ನಮ್ಮದೇ ಕೆಲವು ಅಭ್ಯಾಸಗಳು ಕಿಡ್ನಿಗೆ ಪೆಟ್ಟು ನೀಡಿ, ಅನಾರೋಗ್ಯದಿಂದ ನರಳುವಂತೆ ಮಾಡುತ್ತದೆ ಎಂಬುದು ಅನೇಕರಿಗೆ ಇಂದಿಗೂ ತಿಳಿದಿಲ್ಲ.

ಜೀರ್ಣಾಂಗ ವ್ಯವಸ್ಥೆಯಿಂದ ಹೊರಬರುವ ತ್ಯಾಜ್ಯ ಉತ್ಪನ್ನಗಳಿಂದ ಹೆಚ್ಚುವರಿ ದ್ರವವನ್ನು ತೆಗೆದುಹಾಕುವುದು ಮಾತ್ರವಲ್ಲದೇ, ಮೂತ್ರವನ್ನು ಉತ್ಪಾದಿಸುವಲ್ಲಿ ಮತ್ತು ದೇಹದಲ್ಲಿ ರಕ್ತವನ್ನು ಶುದ್ಧೀಕರಿಸುವಲ್ಲಿ ಮೂತ್ರಪಿಂಡಗಳು ಪ್ರಮುಖ ಪಾತ್ರವಹಿಸುತ್ತವೆ. ಕಿಡ್ನಿಗಳ ಆರೋಗ್ಯಕ್ಕೆ ಏನು ಬೇಕೋ, ಅದನ್ನೆಲ್ಲ ನಾವು ಮಾಡಲು ಮುಂದಾಗುತ್ತೇವೆ. ಆದ್ರೆ, ಅದರ ಆರೋಗ್ಯ ಕಡೆದಿರಲು ಏನು ಮಾಡಬಾರದು ಎಂಬುದನ್ನು ತಿಳಿಯುವುದು ಕೂಡ ಅಷ್ಟೇ ಮುಖ್ಯ. ಬೆಳಗ್ಗೆ ಎದ್ದಾಗ ನಮ್ಮ ಕೆಲವು ಅಭ್ಯಾಸಗಳು ಮೂತ್ರಪಿಂಡದ ಆರೋಗ್ಯದ ಮೇಲೆ ಹೇಗೆಲ್ಲ ಪರಿಣಾಮ ಬೀರುತ್ತವೆ ಎಂಬುದಕ್ಕೆ ಉತ್ತರ ಇಲ್ಲಿದೆ ನೋಡಿ.

ಬೆಳಗ್ಗಿನ ಸಮಯದಲ್ಲಿ ತಪ್ಪಿಸಬೇಕಾದ 5 ಬೇಡದ ಅಭ್ಯಾಸಗಳು

1. ಖಾಲಿ ಹೊಟ್ಟೆಗೆ ಕಾಫಿ/ ಟೀ ಬೇಡ: ಅನೇಕರು ಬೆಳಗ್ಗೆ ಎದ್ದ ಕೂಡಲೇ ಮೊದಲು ಕುಡಿಯುವುದೇ ಬಿಸಿ ಬಿಸಿಯಾದ ಕಾಫಿ ಅಥವಾ ಟೀ. ಇದೇ ನೀವು ಮಾಡುವ ಮೊದಲ ಮಿಸ್ಟೇಕ್​. ಇದನ್ನು ಸೇವಿಸುವ ಮೊದಲು ನೀರು ಕುಡಿಯಬೇಕು. ಕಾರಣ, ರಾತ್ರಿಯಿಡೀ ಮಲಗುವುದರಿಂದ ದೇಹದಲ್ಲಿ ಸ್ವಲ್ಪ ನಿರ್ಜಲೀಕರಣ ಉಂಟಾಗಿರುತ್ತದೆ.

2. ಮೂತ್ರ ವಿಸರ್ಜಿಸಿ: ಮೂತ್ರವನ್ನು ಹೆಚ್ಚು ಹೊತ್ತು ಹಿಡಿದಿಟ್ಟುಕೊಳ್ಳುವುದು ಒಳ್ಳೆಯದಲ್ಲ. ಇದರಿಂದ, ಮೂತ್ರ ವಿಸರ್ಜನೆ ಮಾಡಬೇಕೆಂದು ಅನಿಸಿದರೆ ತಡಮಾಡದೆ ಮೂತ್ರ ವಿಸರ್ಜಿಸಿ. ಅದರಲ್ಲೂ, ಬೆಳಗ್ಗೆ ಎದ್ದಾಗ. ನಿದ್ರೆ ಬರುತ್ತಿದೆ ಎಂದು ಮುಂದೂಡಬೇಡಿ.

3. ಪೇನ್​ ಕಿಲರ್ಸ್​ ಬೇಡ: ನಿಮಗೆ ತಲೆನೋವಿನಂತಹ ಸಮಸ್ಯೆಗಳಿದ್ದರೆ, ವೈದ್ಯರನ್ನು ಸಂಪರ್ಕಿಸದೆ ನೀವು ಆಗಾಗ್ಗೆ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ಆದಷ್ಟು ತಪ್ಪಿಸಬೇಕು. ಇದು ನಿಮ್ಮ ಮೂತ್ರಪಿಂಡಗಳ ಮೇಲೂ ಪರಿಣಾಮ ಬೀರಬಹುದು.

4. ವ್ಯಾಯಾಮದ ನಂತರ ನೀರು: ಬೆಳಗ್ಗೆ ವ್ಯಾಯಾಮ ಮಾಡುವುದು ದೇಹಕ್ಕೆ ಒಳ್ಳೆಯದು. ಆದಾಗ್ಯೂ, ನಿರ್ಜಲೀಕರಣವನ್ನು ತಪ್ಪಿಸಲು ವ್ಯಾಯಾಮದ ನಂತರ ನೀವು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ಇದು ದೇಹದ ಜಲಸಂಚಯನ ಸಮತೋಲನವನ್ನು ಕಾಪಾಡಿಕೊಳ್ಳಲು ಹೆಚ್ಚು ಸಹಕಾರಿ.

5. ಬೆಳಗಿನ ತಿಂಡಿ ಮರೆಯಬೇಡಿ: ಅನೇಕರು ತಮ್ಮ ವೇಗದ ಜೀವನಶೈಲಿಯಿಂದಾಗಿ ಬೆಳಗ್ಗಿನ ಉಪಹಾರವನ್ನೇ ಬಿಟ್ಟುಬಿಡುತ್ತಾರೆ. ದೇಹವು ಅಗತ್ಯವಿರುವ ಪೋಷಕಾಂಶಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಆರೋಗ್ಯಕರ ತಿಂಡಿ ಸೇವಿಸುವುದು ಕಿಡ್ನಿ ಆರೋಗ್ಯಕಂತು ತುಂಬಾನೇ ಮುಖ್ಯವಾಗಿದೆ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.