Throat 
ಆರೋಗ್ಯ

ಬೆಳಿಗ್ಗೆ ಎದ್ದ ಬಳಿಕ ಗಂಟಲು ಒಣಗಿದಂತೆ ಭಾಸವಾಗುತ್ತದೆಯೇ! ಇದಕ್ಕೆ ಈ 5 ಸಮಸ್ಯೆಗಳೇ ಕಾರಣ.. | Throat

ಬೆಂಗಳೂರು: ಬೆಳಿಗ್ಗೆ ಎಚ್ಚರವಾದಾಗ ಒಣ ಅಥವಾ ಗಂಟಲು(Throat) ನೋವು ಅನುಭವಿಸುವುದು ಕೇವಲ ಅಹಿತಕರ ಆರಂಭವಲ್ಲ. ಇದು ಒಳಗೆ ಏನೋ ಸರಿಯಿಲ್ಲ ಎಂಬ ದೇಹದ ಸಂಕೇತವೂ ಆಗಿರಬಹುದು. ಇದು ನಮ್ಮ ನಿದ್ರೆಯ ಅಭ್ಯಾಸ, ಕೋಣೆಯ ಗಾಳಿಯ ಗುಣಮಟ್ಟ ಅಥವಾ ನಮ್ಮ ದೇಹದ ಆಂತರಿಕ ಸಮತೋಲನದಿಂದಾಗಿರಬಹುದು. ಎನು ಎಂಬುದು ತಿಳಿಯೋಣ.
ಇದಕ್ಕೆ ಮುಖ್ಯ ಕಾರಣಗಳು 
1.ಪ್ರಮುಖ ಕಾರಣಗಳುಬಾಯಿ ತೆರೆದು ಉಸಿರಾಡುವುದು (Mouth Breathing)
ರಾತ್ರಿ ಮಲಗಿರುವಾಗ ಮೂಗು ಕಟ್ಟಿದ್ದರೆ ಅಥವಾ ಅಲರ್ಜಿ ಸಮಸ್ಯೆ ಇದ್ದರೆ ಬಾಯಿ ತೆರೆದು ಉಸಿರಾಡುತ್ತೀರಿ. ಇದರಿಂದ ಗಂಟಲು ಮತ್ತು ಬಾಯಿ ಒಣಗಿ ಹೋಗುತ್ತದೆ.
2.ಡಿಹೈಡ್ರೇಷನ್ (ನೀರಿನ ಕೊರತೆ)
ರಾತ್ರಿ ಮಲಗುವ ಮೊದಲು ಸಾಕಷ್ಟು ನೀರು ಕುಡಿಯದಿದ್ದರೆ ಅಥವಾ ಊಟದಲ್ಲಿ ಉಪ್ಪು/ಕಾರ ಹೆಚ್ಚಿದ್ದರೆ ದೇಹದಲ್ಲಿ ನೀರಿನ ಕೊರತೆ ಉಂಟಾಗಿ ಗಂಟಲು ಒಣಗುತ್ತದೆ.
3.ಒಣ ಗಾಳಿ (Dry Air)
ಎಸಿ ರೂಮ್‌ನಲ್ಲಿ ಮಲಗುವುದು, ಫ್ಯಾನ್ ನೇರವಾಗಿ ಮುಖಕ್ಕೆ ಬೀಸುವುದು, ಚಳಿಗಾಲದಲ್ಲಿ ಹೀಟರ್ ಬಳಸುವುದು. ಇದೆಲ್ಲ ಗಾಳಿಯ ತೇವಾಂಶ ಕಡಿಮೆ ಮಾಡಿ ಗಂಟಲನ್ನು ಒಣಗಿಸುತ್ತದೆ.
4.ಗ್ಯಾಸ್ಟ್ರಿಕ್ ಸಮಸ್ಯೆ
ರಾತ್ರಿ ಊಟ ಮಾಡಿ ತಕ್ಷಣ ಮಲಗಿದರೆ ಹೊಟ್ಟೆಯ ಆಮ್ಲ ಮೇಲೆ ಬಂದು ಗಂಟಲನ್ನು ಸುಡುತ್ತದೆ ಮತ್ತು ಒಣಗಿಸುತ್ತದೆ.
5.ಔಷಧಿಗಳ ಸೈಡ್ ಎಫೆಕ್ಟ್
ಅಲರ್ಜಿ, ಬಿಪಿ, ಖಿನ್ನತೆಗೆ ತೆಗೆದುಕೊಳ್ಳುವ ಕೆಲವು ಔಷಧಿಗಳು ಲಾಲಾರಸ (saliva) ಕಡಿಮೆ ಮಾಡುತ್ತವೆ. ಗೊರಕೆ ಹೊಡೆಯುವವರಲ್ಲಿ ಬಾಯಿ ತೆರೆದೇ ಇರುತ್ತದೆ. ಒಣ ಗಂಟಲು ಆಗುತ್ತದೆ.
ಏನು ಮಾಡಬೇಕು?
1.ಮಲಗುವ ಮೊದಲು 1 ಗ್ಲಾಸ್ ನೀರು ಕುಡಿಯಿರಿ (ಬೆಚ್ಚಗಿನ ನೀರು ಇನ್ನೂ ಒಳ್ಳೆಯದು).
2.ರೂಮ್‌ನಲ್ಲಿ ಹ್ಯೂಮಿಡಿಫೈಯರ್ ಬಳಸಿ ಅಥವಾ ನೀರಿನ ಬೌಲ್ ಇಟ್ಟು ಮಲಗಿ.
3.ಮಲಗುವ 2-3 ಗಂಟೆ ಮೊದಲು ಊಟ ಮುಗಿಸಿ, ತಲೆ ಸ್ವಲ್ಪ ಎತ್ತರದಲ್ಲಿ ಇರಲಿ.
4.ಮೂಗು ಕಟ್ಟಿದ್ದರೆ ಸ್ಟೀಮ್ ತೆಗೆದುಕೊಳ್ಳಿ ಅಥವಾ ಸ್ಯಾಲೈನ್ ಸ್ಪ್ರೇ ಬಳಸಿ.
5.ಗೊರಕೆ/ಅಡೆತಡೆ ಉಸಿರಾಟದ ಶಂಕೆ ಇದ್ದರೆ ENT ಡಾಕ್ಟರ್ ಭೇಟಿ ಮಾಡಿ.ಈ ಚಿಕ್ಕ ಬದಲಾವಣೆಗಳಿಂದ 80 ರಿಂದ 90 ಜನರಲ್ಲಿ ಬೆಳಿಗ್ಗೆ ಒಣ ಗಂಟಲು ಸಂಪೂರ್ಣ ಮಾಯವಾಗುತ್ತದೆ(ಏಜೆನ್ಸೀಸ್​).