Blood Sugar : ಸಾಮಾನ್ಯವಾಗಿ ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಎಂದ ತಕ್ಷಣ ನಮಗೆ ನೆನಪಾಗುವುದು ಸಿಹಿತಿಂಡಿಗಳು. ಆದರೆ, ವೈದ್ಯರ ಪ್ರಕಾರ ದೇಹದಲ್ಲಿನ ಗ್ಲೂಕೋಸ್ ಮಟ್ಟ ಹೆಚ್ಚಾಗಲು ಕೇವಲ ಸಕ್ಕರೆಯಷ್ಟೇ ಹೊಣೆಯಲ್ಲ. ನಾವು ಪ್ರತಿದಿನ ಮಾಡುವ ಕೆಲವು ಸಣ್ಣಪುಟ್ಟ ತಪ್ಪುಗಳು ಮತ್ತು ನಮ್ಮ ಜೀವನಶೈಲಿಯ ಅಭ್ಯಾಸಗಳೇ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಅಪಾಯಕಾರಿ ಹಂತಕ್ಕೆ ಕೊಂಡೊಯ್ಯಬಲ್ಲವು.
ಕಾರ್ಬೋಹೈಡ್ರೇಟ್ ಆಹಾರಗಳು
ನಾವು ಮೊದಲಿಗೆ ಗಮನಿಸಬೇಕಾದದ್ದು ಕಾರ್ಬೋಹೈಡ್ರೇಟ್ಗಳಲ್ಲಿ ಸಮೃದ್ದವಾಗಿರುವ ಆಹಾರಗಳು. ಆದಾಗ್ಯೂ, ಬಿಳಿ ಅಕ್ಕಿ, ಹಿಟ್ಟು ಮತ್ತು ಬ್ರೆಡ್‌ನಂತಹ ಆಹಾರಗಳು ಸಿಹಿಯನ್ನು ನೀಡದೇ ಇದ್ದರೂ ಸಹ ಅವು ಬೇಗನೇ ದೇಹದಲ್ಲಿ ಗ್ಲೂಕೋಸ್ ಆಗಿ ಪರಿವರ್ತನೆ ಹೊಂದುತ್ತವೆ. ಇದು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಪ್ರಾರಂಭಿಸುತ್ತದೆ.
ಒತ್ತಡ ನಿಯಂತ್ರಣ
ಯಾವುದೇ ಮನುಷ್ಯನಲ್ಲಿ ಒತ್ತಡ ಹೆಚ್ಚಾದಾಗ ದೇಹದಲ್ಲಿ ಕಾರ್ಟಿಸೋಲ್ನಂತಹ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತವೆ. ಇದು ಇನ್ಸುಲಿನ್ ಕಾರ್ಯದ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡುವುದರ ಜೊತೆಗೆ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಆದರಿಂದ ಆದಷ್ಟು ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಇದರಿಂದ ಮಾನಸಿಕ ಆರೋಗ್ಯವೂ ಸುಧಾರಿಸುತ್ತದೆ.
ಸಾಕಷ್ಟು ನಿದ್ರೆ
ಪ್ರತಿಯೊಬ್ಬ ಮನುಷ್ಯನಿಗೂ ನಿದ್ರೆ ಅವಶ್ಯಕ. ಯಾವ ವ್ಯಕ್ತಿ ನಿದ್ರೆ ಕೊರತೆಯಿಂದ ಇರುತ್ತಾನೋ ಆತನು ಇನ್ಸುಲಿನ್ ಕೊರತೆಯನ್ನು ಉಂಟುಮಾಡುತ್ತದೆ. ಇದು ದೇಹವು ಗ್ಲೂಕೋಸ್ ಅನ್ನು ಸರಿಯಾಗಿ ಬಳಸಲು ಸಾಧ್ಯವಾಗದೇ ರಕ್ತದಲ್ಲಿ ಗ್ಲೂಕೋಸ್ ಮಟ್ಟ ಏರಿಕೆಗೆ ಕಾರಣವಾಗಬಹುದು. ಹಾಗಾಗಿ ಪ್ರತಿನಿತ್ಯ 7-8 ಗಂಟೆಗಳ ನಿದ್ರೆ ಪಡೆಯುವುದನ್ನು ಉತ್ತಮ ಎಂದು ಹೇಳುತ್ತಾರೆ.
ದೈಹಿಕ ವ್ಯಾಯಾಮದ ಕೊರತೆ
ದೈಹಿಕ ವ್ಯಾಯಾಮದ ಕೊರತೆಯು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ದೇಹವು ಸಕ್ರಿಯವಾಗಿಲ್ಲದಿದ್ದರೆ, ಗ್ಲೂಕೋಸ್ ಬಳಕೆ ಕಡಿಮೆಯಾಗುತ್ತದೆ. ಇದು ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗಿ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಹಾಗಾಗಿ ಪ್ರತಿನಿತ್ಯ ಕನಿಷ್ಟ 30 ನಿಮಿಷಗಳ ಕಾಲ ದೈಹಿಕ ವ್ಯಾಯಾಮ ನಡೆಯುವುದು, ಓಡುವುದು, ಈಜುವುದನ್ನು ಮಾಡಿ. ಇದು ದೇಹದಲ್ಲಿ ಸಕ್ಕರೆ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಹೆಚ್ಚುವರಿಯಾಗಿ, ಕೆಲವು ಔಷಧಿಗಳು, ಹಾರ್ಮೋನುಗಳ ಬದಲಾವಣೆಗಳು ಮತ್ತು ಕೆಲವು ವೈದ್ಯಕೀಯ ಪರಿಸ್ಥಿತಿಗಳು ಕೂಡಾ ರಕ್ತದಲ್ಲಿನ ಸಕ್ಕರೆಯ ಮೇಲೆ ಪರಿಣಾಮ ಬೀರುತ್ತದೆ. ಆದರಿಂದ ದೇಹದಲ್ಲಿ ಸಕ್ಕರೆ ನಿಯಂತ್ರಿಸಲು ಸಿಹಿತಿಂಡಿಗಳನ್ನು ತಿನ್ನುವುದನ್ನು ಬಿಡುವುದು ಮಾತ್ರವಲ್ಲ. ಸಮತೋಲಿತ ಆಹಾರ, ಮಾನಸಿಕ ಆರೋಗ್ಯ ಮತ್ತು ಉತ್ತಮ ನಿದ್ರೆಯೂ ಕೂಡಾ ಮುಖ್ಯ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.