Drinking Beer: ಇಂದಿನ ದಿನಗಳಲ್ಲಿ ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಸಾಮಾನ್ಯವಾಗಿದೆ. ಈ ನೋವನ್ನು ತ್ವರಿತವಾಗಿ ತೊಡೆದುಹಾಕಲು, ಅನೇಕ ಜನರು ವಿವಿಧ ಮನೆಮದ್ದುಗಳನ್ನು ಅವಲಂಬಿಸಿರುತ್ತಾರೆ. ಸಾಮಾನ್ಯವಾಗಿ ಬಿಯರ್ ಕುಡಿದರೆ ಕಲ್ಲುಗಳು ಕರುಗುತ್ತವೆ ಎಂದು ಕೆಲವೊಂದಿಷ್ಟು ಜನರು ಹೇಳುತ್ತಾರೆ. ಈ ಪಾನೀಯ ಕುಡಿಯುವುದರಿಂದ ಮೂತ್ರದ ಒತ್ತಡ ಹೆಚ್ಚಾಗುತ್ತದೆ ಮತ್ತು ಅದರೊಂದಿಗೆ ಕಲ್ಲುಗಳು ಹೊರಬರುತ್ತವೆ ಎಂಬ ಕಲ್ಪನೆ ಇದೆ. ಆದರೆ, ವಾಸ್ತವದಲ್ಲಿ ಈ ನಂಬಿಕೆ ಎಷ್ಟು ನಿಜ? ಇದು ದೇಹಕ್ಕೆ ಅಪಾಯಕಾರಿಯೇ ಎಂಬುದನ್ನು ತಿಳಿಯೋಣ ಬನ್ನಿ...
ಬಿಯರ್ ನಿಜವಾಗಿಯೂ ಸಹಾಯ ಮಾಡುತ್ತದೆಯೇ?
ಬಿಯರ್ ಕುಡಿದ ನಂತರ ಸ್ವಲ್ಪ ಸಮಯದವರೆಗೆ ಮೂತ್ರದ ಪ್ರಮಾಣ ಹೆಚ್ಚಾಗುತ್ತದೆ. ಹಾಗಾಗಿ ಹೆಚ್ಚಿನವರು ಈ ಕಲ್ಪನೆಯಿಂದ ಹೊರಗೇ ಬಂದಿಲ್ಲ. ಆದರೆ, ವೈದ್ಯಕೀಯ ದೃಷ್ಟಿಕೋನದಿಂದ ಹೇಳುವುದಾದರೆ, ಮೂತ್ರ ಪಿಂಡದ ಕಲ್ಲುಗಳನ್ನು ಕರಗಿಸಲು ಬಿಯರ್ ಸುರಕ್ಷಿತ ಮಾರ್ಗವಲ್ಲ. ವಾಸ್ತವವಾಗಿ ಇದು ಸಮಸ್ಯೆಯ ವಿರುದ್ಧ ಇನ್ನಷ್ಟು ಗಂಭೀರ ಪರಿಣಾಮ ಬೀರುತ್ತದೆ.
ಬಿಯರ್ ನಿರ್ಜಲೀಕರಣವನ್ನು ಹೆಚ್ಚಿಸುತ್ತದೆ
ದೇಹದಲ್ಲಿನ ನೀರಿನ ಕೊರತೆಯಿಂದಾಗಿ ಮೂತ್ರಪಿಂಡದಲ್ಲಿ ಕಲ್ಲುಗಳು ಪ್ರಾರಂಭವಾಗುತ್ತದೆ. ಆದಾಗ್ಯೂ, ಬಿಯರ್ ಒಂದು 'ಮೂತ್ರವರ್ಧಕ' ಪಾನೀಯವಾಗಿದ್ದು, ಇದನ್ನು ಕುಡಿಯುವುದರಿಮದ ಇದು ದೇಹದಿಂದ ನೀರನ್ನು ತೆಗೆದುಹಾಕುತ್ತದೆ. ಪರಿಣಾಮವಾಗಿ ಹೊರಗಿನಿಂದ ದೇಹಕ್ಕೆ ನೀರು ಪ್ರವೇಶಿಸುತ್ತಿದೆ ಎಂದು ತೋರುತ್ತಿದ್ದರೂ, ವಾಸ್ತವದಲ್ಲಿ ದೇಹವು ಹೆಚ್ಚು ನಿರ್ಜಲೀಕರಣಗೊಳ್ಳುತ್ತದೆ. ಇದರ ಪರಿಣಾಮವಾಗಿ ಮೂತ್ರವು ದಪ್ಪವಾಗುವುದು, ಮೂತ್ರಪಿಂಡದಲ್ಲಿ ಕಲ್ಲುಗಳಾಗುವುದು ಕಂಡುಬರುತ್ತದೆ. ಹಾಗಾಗಿ ನೀವೇನಾದರೂ ಬಿಯರ್ ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳುವುದರಿಂದ ಹೊಸ ಮೂತ್ರಪಿಂಡದ ಕಲ್ಲುಗಳ ಅಪಾಯ ಹೆಚ್ಚಾಗುತ್ತದೆ.
ಯೂರಿಕ್ ಆಮ್ಲದ ಅಪಾಯಗಳು
ಬಿಯರ್‌ನಲ್ಲಿ ಬಹಳಷ್ಟು ಪ್ಯೂರಿನ್‌ಗಳಿವೆ. ಅವು ದೇಹದಲ್ಲಿ ವಿಭಜನೆಗೊಂಡಾಗ ಯೂರಿಕ್ ಆಮ್ಲವಾಗಿ ಪರಿವರ್ತನೆಗೊಳ್ಳುತ್ತವೆ. ಯೂರಿಕ್ ಆಮ್ಲ ಅಥವಾ ಗೌಟ್ ಸಮಸ್ಯೆ ಇದ್ದವರು ಬಿಯರ್ ಕುಡಿಯುವುದರಿಂದ ಮೂತ್ರಪಿಂಡದ ಕಲ್ಲು ರೂಪುಗೊಳ್ಳುವ ಸಾಧ್ಯತೆಗಳು ಹೆಚ್ಚಾಗುವ ನಿರೀಕ್ಷೆ ಹೆಚ್ಚಿರುತ್ತದೆ.
ಹಾಗಾದರೆ ತೀರ್ಪು ಏನು?
ಸ್ವಲ್ಪ ಪ್ರಮಾಣದಲ್ಲಿ ಬಿಯರ್ ಕುಡಿಯುವುದರಿಂದ ತಾತ್ಕಾಲಿಕವಾಗಿ ಮೂತ್ರದ ಒತ್ತಡವನ್ನು ಹೆಚ್ಚಿಸಬಹುದು. ಆದರೆ, ದೀರ್ಘಾವಧಿಯಲ್ಲಿ ಮೂತ್ರಪಿಂಡಗಳಿಗೆ ಹಾನಿಯಾಗಬಹುದು. ಆದಾಗ್ಯೂ, ನಿರ್ಜಲೀಕರಣ, ಹೆಚ್ಚಿದ ಯೂರಿಕ್ ಆಮ್ಲ ಮತ್ತು ಹೊಸ ಕಲ್ಲುಗಳ ರಚನೆಯ ಅಪಾಯ ಹೆಚ್ಚಾಗುವುದರಿಂದ ಬಿಯರ್ ಕುಡಿಯುವುದರಿಂದ ಮೂತ್ರಪಿಂಡದ ಕಲ್ಲುಗಳು ಕರಗುತ್ತವೆ ಎಂಬ ಕಲ್ಪನೆಯು ಅಪಾಯಕಾರಿಯಾಗುತ್ತದೆ.
ನಿಮ್ಮ ಮೂತ್ರಪಿಂಡಗಳನ್ನು ಆರೋಗ್ಯವಾಗಿಡಲು ಏನು ಮಾಡಬೇಕು?
ಮೂತ್ರಪಿಂಡದ ಕಲ್ಲುಗಳನ್ನು ತಡೆಗಟ್ಟಲು ಅತಿ ಹೆಚ್ಚಾಗಿ ನೀರನ್ನು ಕುಡಿಯಿರಿ. ಜೊತೆಗೆ ಸಮತೋಲಿತ ಆಹಾರ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುವುದು ಮುಖ್ಯವಾಗಿರುತ್ತದೆ.
ಬಿಯರ್ ಅಥವಾ ಯಾವುದೇ ಇತರ ಆಲ್ಕೋಹಾಲುಗಳು ಈ ಸಮಸ್ಯೆಗೆ ಪರಿಹಾರವಲ್ಲ. ಬದಲಾಗಿ, ಇದು ಇನ್ನಷ್ಟು ಆರೋಗ್ಯವನ್ನು ಹದಗೆಡಿಸುತ್ತದೆ. ಹಾಗಾಗಿ ನಿಮ್ಮದೇ ಆದ ನಿರ್ಧಾರವನ್ನು ತೆಗೆದುಕೊಳ್ಳುವ ಬದಲಿಗೆ ವೈದ್ಯರನ್ನು ಭೇಟಿ ಮಾಡುವುದು ಉತ್ತಮ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.