ಸಾಂದರ್ಭಿಕ ಚಿತ್ರ 
ಆರೋಗ್ಯ

ಬಿಸ್ಕತ್ತು ಪ್ರಿಯರೇ ಎಚ್ಚರ! ಅತಿಯಾದ ಸೇವನೆಯಿಂದ ನಿಮ್ಮ ದೇಹಕ್ಕೆ ಕಾಡಲಿವೆ ಈ ಗಂಭೀರ ಸಮಸ್ಯೆಗಳು..Eat biscuits

ಪ್ರಮುಖ ಮುಖ್ಯಾಂಶಗಳು

  • ನಾವೆಲ್ಲರೂ ಸಂಜೆಯ ಚಹಾದೊಂದಿಗೆ ಒಂದು ಅಥವಾ ಎರಡು ಬಿಸ್ಕತ್ತುಗಳನ್ನು ತಿನ್ನಲು ಇಷ್ಟಪಡುತ್ತೇವೆ
  • ಕೆಲವೊಬ್ಬರು ಒಂದೇ ಬಾರಿಗೆ ಒಂದು ಪ್ಯಾಕ್​ ಬಿಸ್ಕತ್​ಗಳನ್ನು ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ
  • ಬಿಸ್ಕತ್ತುಗಳನ್ನು ಸಂಸ್ಕರಿಸಿದ ಮೈದಾ ಹಿಟ್ಟು ಮತ್ತು ಸಕ್ಕರೆಯಿಂದ ಮಾಡಲಾಗುತ್ತದೆ. ಇದರಲ್ಲಿ ಯಾವುದೇ ನಾರಿನಾಂಶ ಇರುವುದಿಲ್ಲ
  • ಅತಿಯಾದ ಸೇವನೆ ಹೊಟ್ಟೆಯ ಸುತ್ತ ಬೊಜ್ಜು ಬೆಳೆಯಲು ಮತ್ತು ದೇಹದ ತೂಕ ಅಸಹಜವಾಗಿ ಹೆಚ್ಚಾಗಲು ಕಾರಣವಾಗುತ್ತದೆ
Eat biscuits: ನಾವೆಲ್ಲರೂ ಸಂಜೆಯ ಚಹಾದೊಂದಿಗೆ ಒಂದು ಅಥವಾ ಎರಡು ಬಿಸ್ಕತ್ತುಗಳನ್ನು ತಿನ್ನಲು ಇಷ್ಟಪಡುತ್ತೇವೆ. ಆದರೆ, ಕೆಲವೊಬ್ಬರು ಒಂದೇ ಬಾರಿಗೆ ಒಂದು ಪ್ಯಾಕ್​ ಅಥವಾ ಹಲವಾರು ಬಿಸ್ಕತ್​ಗಳನ್ನು ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದು ನೋಡಲು ಸಾಮಾನ್ಯವೆನಿಸಿದರೂ, ವೈದ್ಯಕೀಯ ಲೋಕದಲ್ಲಿ 'ರುಚಿಕರ ವಿಷ' ಎಂದು ಬಣ್ಣಿಸಿದ್ದಾರೆ. ನೀವೇನಾದರೂ ಬಿಸ್ಕತ್​ ಪ್ರೇಮಿಗಳಾಗಿದ್ದರೆ, ಅತಿಯಾದ ಬಿಸ್ಕತ್​ ಸೇವನೆಯಿಂದ ಉಂಟಾಗುವ ಸಮಸ್ಯೆ ಬಗ್ಗೆ ತಿಳಿಯಲೇಬೇಕು. ಇಲ್ಲದಿದ್ದರೆ, ಅಪಾಯ ಕಟ್ಟಿಟ್ಟ ಬುತ್ತಿ...

1. ಅಧಿಕ ತೂಕ ಮತ್ತು ಬೊಜ್ಜು

ಬಿಸ್ಕತ್ತುಗಳನ್ನು ಸಂಸ್ಕರಿಸಿದ ಮೈದಾ ಹಿಟ್ಟು ಮತ್ತು ಸಕ್ಕರೆಯಿಂದ ಮಾಡಲಾಗುತ್ತದೆ. ಇದರಲ್ಲಿ ಯಾವುದೇ ನಾರಿನಾಂಶ ಇರುವುದಿಲ್ಲ. ಹಾಗಾಗಿ ನೀವೇನಾದರೂ ಪ್ರತಿದಿನ ಹಲವಾರು ಬಿಸ್ಕೇಟ್​ಗಳನ್ನು ತಿನ್ನುತ್ತಿದ್ದರೆ, ದೇಹದಲ್ಲಿ ಕ್ಯಾಲೋರಿಗಳ ಪ್ರಮಾಣ ಹೆಚ್ಚಾಗುತ್ತದೆ. ಇದು ಹೊಟ್ಟೆಯ ಸುತ್ತ ಬೊಜ್ಜು ಬೆಳೆಯಲು ಮತ್ತು ದೇಹದ ತೂಕ ಅಸಹಜವಾಗಿ ಹೆಚ್ಚಾಗಲು ಕಾರಣವಾಗುತ್ತದೆ.

2. ರಕ್ತದಲ್ಲಿನ ಸಕ್ಕರೆಯ ಏರಿಕೆ

ಹೆಚ್ಚಿನ ಬಿಸ್ಕತ್ತುಗಳು ಸಿಹಿಯಾಗಿರುತ್ತವೆ ಮತ್ತು ಅವುಗಳಲ್ಲಿ 'ಹೈ ಫ್ರಕ್ಟೋಸ್ ಕಾರ್ನ್ ಸಿರಪ್' ಬಳಸಲಾಗುತ್ತದೆ. ಇದನ್ನು ಚಹಾದೊಂದಿಗೆ ಸೇರಿಸಿದಾಗ ಇನ್ನಷ್ಟು ಗ್ಲೂಕೋಸ್​ ಮಟ್ಟ ಹೆಚ್ಚಾಗುತ್ತದೆ. ದೀರ್ಘಕಾಲದವರೆಗೆ ಈ ರೀತಿಯ ಪದ್ಧತಿಯನ್ನು ಅಳವಡಿಸಿಕೊಂಡಾಗ ಮಧುಮೇಹಿ 2 ಅಪಾಯವನ್ನು ಎದುರಿಸಬೇಕಾಗುತ್ತದೆ.

3. ಜೀರ್ಣಕ್ರಿಯೆಯ ಸಮಸ್ಯೆಗಳು

ಹೆಚ್ಚಿನ ಬಿಸ್ಕತ್ತುಗಳನ್ನು ಮೈದಾ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಈ ಬಿಸ್ಕತ್ತುಗಳು ಕರುಳಿನ ಗೋಡೆಗಳಿಗೆ ಅಂಟಿಕೊಳ್ಳುತ್ತವೆ. ಇದರಲ್ಲಿ ನಾರಿನಂಶ ಶೂನ್ಯವಾಗಿರುವುದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಸತತವಾಗಿ ಬಿಸ್ಕತ್ತು ತಿನ್ನುವವರಲ್ಲಿ ಮಲಬದ್ಧತೆ, ಗ್ಯಾಸ್ಟ್ರಿಕ್ ಮತ್ತು ಹೊಟ್ಟೆ ಉಬ್ಬರದಂತಹ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ.

4. ಹೃದಯದ ಆರೋಗ್ಯಕ್ಕೆ ಅಪಾಯ

ಬಿಸ್ಕತ್ತುಗಳ ರುಚಿಯನ್ನು ಹೆಚ್ಚಿಸಲು ಮತ್ತು ಅವುಗಳನ್ನು ಹೆಚ್ಚು ಕಾಲ ತಾಜಾವಾಗಿಡಲು ಅವುಗಳಲ್ಲಿ 'ಟ್ರಾನ್ಸ್ ಫ್ಯಾಟ್' (Trans Fats) ಅಥವಾ ಹೈಡ್ರೋಜಿನೇಟೆಡ್ ಎಣ್ಣೆಯನ್ನು ಬಳಸಲಾಗುತ್ತದೆ. ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್​ ಮಟ್ಟವನ್ನು ಹೆಚ್ಚಿಸಿ, ಹೃದಯದ ಧಮನಿಗಳಲ್ಲಿ ಅಡೆತಡೆ ಉಂಟು ಮಾಡುತ್ತದೆ. ಇದರಿಂದ ಹೃದಯಾಘಾತ ಸಂಭವಿಸಬಹುದು.

5. ಚರ್ಮದ ಸಮಸ್ಯೆ ಮತ್ತು ಅಕಾಲಿಕ ವಯಸ್ಸಾದ ಲಕ್ಷಣ

ಬಿಸ್ಕತ್ತುಗಳಲ್ಲಿರುವ ಸಂಸ್ಕರಿಸಿದ ಸಕ್ಕರೆಯು ಚರ್ಮದ ಮೇಲಿನ ಕೊಲಾಜೆನ್ ಅನ್ನು ಹಾನಿಗೊಳಿಸುತ್ತದೆ. ಇದು ಮುಖದ ಮೇಲೆ ವಯಸ್ಸಾದ ರೀತಿಯಲ್ಲಿ ಸುಕ್ಕುಗಳನ್ನು ಮೂಡಿಸುತ್ತದೆ. ಮತ್ತು ಚರ್ಮ ಕಾಂತಿಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಅಲ್ಲದೆ, ಬಿಸ್ಕತ್ತುಗಳಲ್ಲಿರುವ ರಾಸಾಯನಿಕಗಳು ಹಾರ್ಮೋನ್ ಏರುಪೇರು ಉಂಟುಮಾಡಿ ಮೊಡವೆಗಳಿಗೂ ಕಾರಣವಾಗಬಹುದು (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.