Yellow Nails ಸಾಂದರ್ಭಿಕ ಚಿತ್ರ 
ಆರೋಗ್ಯ

ಮಧುಮೇಹಿಗಳೇ ಹಳದಿ ಉಗುರುಗಳನ್ನು ನಿರ್ಲಕ್ಷಿಸಬೇಡಿ! ನಿಮ್ಮ ಬೆರಳುಗಳನ್ನೇ ಕತ್ತರಿಸಬೇಕಾಗುತ್ತದೆ..Yellow Nails

ಪ್ರಮುಖ ಮುಖ್ಯಾಂಶಗಳು

  • ಮಧುಮೇಹಿಗಳು ಹೆಚ್ಚಾಗಿ ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಕಷ್ಟಪಡುತ್ತಾರೆ.
  • ದೇಹದಲ್ಲಿ ಕಂಡುಬರುವ ಇತರ ಲಕ್ಷಣಗಳನ್ನು ಗುರುತಿಸುವಲ್ಲಿ ವಿಫಲರಾಗುತ್ತಾರೆ
  • ಹಳದಿ ಉಗುರುಗಳು ಅಧಿಕ ರಕ್ತದ ಸಕ್ಕರೆ ಮಟ್ಟ, ಕಳಪೆ ರಕ್ತ ಪರಿಚಲನೆಯನ್ನು ಸೂಚಿಸುತ್ತದೆ
  • ಒನಿಕೊಮೈಕೋಸಿಸ್‌ನಂತಹ ಶಿಲೀಂಧ್ರಗಳ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತವೆ
Yellow Nails: ಮಧುಮೇಹಿಗಳು ಹೆಚ್ಚಾಗಿ ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಆದಷ್ಟು ಕಷ್ಟಪಡುತ್ತಾರೆ. ಆದರೆ, ದೇಹದಲ್ಲಿ ಕಂಡುಬರುವ ಇತರ ಲಕ್ಷಣಗಳನ್ನು ಗುರುತಿಸುವಲ್ಲಿ ವಿಫಲರಾಗುತ್ತಾರೆ. ಅದೇ ರೀತಿಯಲ್ಲಿ ಮಧುಮೇಹಿಗಳು ಹೆಚ್ಚಾಗಿ ನಿರ್ಲಕ್ಷಿಸುವ ಒಂದು ಲಕ್ಷಣಗಳೆಂದರೆ, ಅವರ ಉಗುರಿನಲ್ಲಿ ಕಂಡುಬರುವ ಬದಲಾವಣೆಗಳು.
ನಿರ್ದಿಷ್ಟವಾಗಿ ಹೇಳುವುದಾದರೆ, ಹಳದಿ ಉಗುರುಗಳು ಅಧಿಕ ರಕ್ತದ ಸಕ್ಕರೆ ಮಟ್ಟ, ಕಳಪೆ ರಕ್ತ ಪರಿಚಲನೆ ಮತ್ತು ಶಿಲೀಂಧ್ರಗಳ ಸೋಂಕಿನ ಸಂಕೇತವನ್ನು ಸೂಚಿಸುತ್ತವೆ. ಈ ಸೂಚನೆಯು ರೋಗಿಗಳು ಜಾಗೃತಿ ಮತ್ತು ಆರೈಕೆಯನ್ನು ಕಾಪಾಡಿಕೊಳ್ಳುವ ಹಂತವಾಗಿದೆ. ಹಾಗಾಗಿ ಮಧುಮೇಹಿಗಳು ಗಮನ ಹರಿಸಬೇಕಾದ ವಿಧಾನಗಳನ್ನು ನೋಡೋಣ ಬನ್ನಿ....
ಮಧುಮೇಹವು ರೋಗನಿರೋಧಕ ಶಕ್ತಿಯನ್ನು ಕುಗ್ಗಿಸಿ, ಪಾದಗಳಿಗೆ ರಕ್ತದ ಹರಿವನ್ನು ನಿಧಾನಗೊಳಿಸುತ್ತದೆ. ಇದು ಒನಿಕೊಮೈಕೋಸಿಸ್‌ನಂತಹ ಶಿಲೀಂಧ್ರಗಳ ಸೋಂಕಿನ ಅಪಾಯವನ್ನು ಹೆಚ್ಚಿಸಿ, ಉಗುರುಗಳು ದಪ್ಪವಾಗಲು ಪ್ರಾರಂಭಿಸುತ್ತವೆ. ಈ ರೀತಿಯ ಸಮಸ್ಯೆಗಳು ಕಳಪೆ ರಕ್ತ ಪರಿಚಲನೆ ಅಥವಾ ಸೋಂಕಿನಿಂದ ಉಂಟಾಗುತ್ತದೆ.

ಉಗುರುಗಳು ಹಳದಿ ಬಣ್ಣಕ್ಕೆ ತಿರುಗಲು ಕಾರಣ

ದೇಹದಲ್ಲಿ ಕಬ್ಬಿಣದ ಕೊರತೆಯು ಉಗುರುಗಳು ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತವೆ. ಈ ಲಕ್ಷಣಗಳು ಮಧುಮೇಹ ಚಿಕಿತ್ಸೆಯಲ್ಲಿ ಉಗುರುಗಳ ಪಾತ್ರವನ್ನು ಮತ್ತು ಅವುಗಳನ್ನು ಆರೈಕೆ ಮಾಡಿಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ತೋರಿಸುತ್ತದೆ. ಉಗುರುಗಳಲ್ಲಿ ಬ್ಯಾಕ್ಟೀರಿಯಾಗಳು ಕಂಡುಬಂದಲ್ಲಿ ಉಗುರುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಅದಕ್ಕೆ ಆಂಟಿಫಂಗಲ್ ಕ್ರೀಮ್‌ಗಳು, ನೈಲ್​ ಪಾಲಿಸ್​ ಹಚ್ಚುವುದರಿಂದ ಇದು ಸೋಂಕನ್ನು ನಿಯಂತ್ರಸಿ ಉಗುರು ಬೆಳೆಯಲು ಸಹಾಯ ಮಾಡುತ್ತದೆ.

ಸೋಂಕು ತಡೆಯುವ ಕ್ರಮ

ಉಗುರಿನಲ್ಲಿ ಉಂಟಾದ ಸೋಂಕನ್ನು ತಡೆಯಲು ಶಿಲೀಂಧ್ರನಾಶಕ ಪುಡಿಗಳು ಮತ್ತು ಸ್ಪ್ರೇಗಳನ್ನು ನಿಯಮಿತವಾಗಿ ಬಳಸುವುದರಿಂದ ಸೋಂಕು ಪುನಃ ಬರದಂತೆ ತಡೆಯಲು ಸಹಾಯವಾಗುತ್ತದೆ. ಹಾಗೆಯೇ ಅಧಿಕ ಪೌಷ್ಟಿಕಾಂಶ, ಪ್ರೋಟೀನ್, ಸತು, ಕಬ್ಬಿಣ ಮತ್ತು ಬಯೋಟಿನ್ ಇರುವಂತಹ ಆಹಾರಗಳನ್ನು ಸೇವಿಸಬೇಕು. ಹಾಗೆಯೇ ಹೆಚ್ಚು ನೀರು ಕುಡಿಯುವುದು, ಕೃತಕ ಉಗುರು ಬಣ್ಣಗಳನ್ನು ಬಳಸುವುದನ್ನು ತಪ್ಪಿಸುವುದರಿಂದ ಉಗುರು ಸೋಂಕನ್ನು ತಡೆಯಬಹುದು (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.