Vitamin D: ವಿಟಮಿನ್ ಡಿ ನಮ್ಮ ಆರೋಗ್ಯಕ್ಕೆ ತುಂಬಾ ಅವಶ್ಯಕ. ಸಾಮಾನ್ಯವಾಗಿ ಸೂರ್ಯನ ಬೆಳಕಿನಿಂದ ಮಾತ್ರ ವಿಟಮಿನ್ ಡಿ ಪಡೆಯುತ್ತೇವೆ ಎಂದು ಭಾವಿಸುತ್ತೇವೆ. ಆದಾಗ್ಯೂ, ಹೆಚ್ಚಿನ ಒತ್ತಡ, ಕೆಲಸ ಸಂದರ್ಭಗಳಲ್ಲಿ ಹೆಚ್ಚಾಗಿ ಸೂರ್ಯನ ಬೆಳಕಿನಲ್ಲಿ ಕಳೆಯುವ ಸಮಯವನ್ನು ಕಡಿಮೆ ಮಾಡುತ್ತೇವೆ. ಈ ಕಾರಣಕ್ಕಾಗಿ ಹಲವಾರು ಜನರು ವಿಟಮಿನ್ ಡಿ ಪೂರಕಗಳನ್ನು ತೆಗೆದುಕೊಳ್ಳುತ್ತಾರೆ.
ನಿಮಗೆ ಗೊತ್ತಾ? ಕೆಲವು ಸಾಮಾನ್ಯ ಆಹಾರಗಳು ಗಮನಾರ್ಹ ಪ್ರಮಾಣದ ವಿಟಮಿನ್ ಡಿಯನ್ನು ಒದಗಿಸುತ್ತವೆ. ಈ ಆಹಾರಗಳು ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು ಮತ್ತು ಖನಿಜಗಳನ್ನು ಸಹ ಒಳಗೊಂಡಿದ್ದು, ದೇಹಕ್ಕೆ ಬೇಕಾದ ವಿಟಮಿನ್ಗಳನ್ನು ಪೂರೈಕೆ ಮಾಡುತ್ತದೆ.
ಕೊಬ್ಬಿನ ಮೀನು
ಕೊಬ್ಬಿನ ಮೀನುಗಳನ್ನು ವಿಟಮಿನ್ ಡಿ ಯ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. 100 ಗ್ರಾಂ ಕೊಬ್ಬಿನ ಮೀನು ಸರಿಸುಮಾರು 400ರಿಂದ 600 ವಿಟಮಿನ್ ಡಿಯನ್ನು ಒದಗಿಸುತ್ತದೆ. ಇದು ಕಡಿಮೆ ಪ್ರಮಾಣದಲ್ಲಿ ಸಮಾನವಾಗಿರುತ್ತದೆ. ಈ ಮೀನುಗಳು ಒಮೆಗಾ-3 ಕೊಬ್ಬಿನಾಮ್ಲಗಳನ್ನು ಸಹ ಹೊಂದಿರುತ್ತದೆ. ಇದರ ಸೇವನೆಯು ಮೂಳೆಗಳನ್ನು ಬಲಪಡಿಸುವುದರ ಜೊತೆಗೆ ಉರಿಯೂತವನ್ನು ಕಡಿಮೆ ಮಾಡುತ್ತದೆ. ದೇಹಕ್ಕೆ ಬೇಕಾದ ವಿಟಮಿನ್ ಡಿ ಪೂರೈಕೆಯನ್ನು ಮಾಡುತ್ತದೆ.
ಮೊಟ್ಟೆಯ ಹಳದಿ ಲೋಳೆ
ಮೊಟ್ಟೆಯಲ್ಲಿರುವ ಹಳದಿ ಲೋಳೆಯು ವಿಟಮಿನ್ ಡಿಯನ್ನು ಹೊಂದಿರುತ್ತದೆ. ಒಂದು ಸಂಪೂರ್ಣ ಮೊಟ್ಟೆಯಲ್ಲಿ ಸುಮಾರು 40–50 IU ವಿಟಮಿನ್ ಡಿ ಇರುತ್ತದೆ. ಮೊಟ್ಟೆಯ ಹಳದಿ ಲೋಳೆಯಲ್ಲಿರುವ ಆರೋಗ್ಯಕರ ಕೊಬ್ಬುಗಳು ವಿಟಮಿನ್ ಡಿ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ.
ಅಣಬೆಗಳು
ನಮ್ಮ ಚರ್ಮವನ್ನು ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ಉತ್ಪಾದನೆಯನ್ನು ಹೇಗೆ ಹೆಚ್ಚಿಸುತ್ತವೆಯೋ, ಅದೇ ರೀತಿ ಸೂರ್ಯನ ಕಿರಣಗಳನ್ನು ಪಡೆದು ಬೆಳದ ಅಣಬೆಗಳಲ್ಲಿ ವಿಟಮಿನ್ ಡಿ ಹೇರಳವಾಗಿರುತ್ತದೆ. ಒಂದು ತುಂಡು ಅಣಬೆಗಳಲ್ಲಿ 200–400 IU ವಿಟಮಿನ್ ಡಿ ಅನ್ನು ಒದಗಿಸುತ್ತದೆ. ಇದು ಸಸ್ಯಹಾರಿಗಳು ಸೂಕ್ತವಾಗಿದೆ.
ಬಲವರ್ಧಿತ ಹಾಲು ಮತ್ತು ಮೊಸರು
ಪ್ರತಿನಿತ್ಯ ಹಾಲು ಮತ್ತು ಮೊಸರನ್ನು ಸೇವಿಸುವುದರಿಂದ ದೇಹಕ್ಕೆ ನೇರವಾಗಿ ವಿಟಮಿನ್ ಡಿ ಸಿಗುತ್ತದೆ. ಪ್ರತಿ ಕಪ್ನಲ್ಲಿ ಸುಮಾರು 100–120 IU ವಿಟಮಿನ್ ಡಿ ಅನ್ನು ಹೊಂದಿರುತ್ತದೆ. ಪ್ರತಿದಿನ ಇದನ್ನು ಸೇವಿಸಿದಾಗ ಪ್ರಯೋಜನಗಳು ಹೆಚ್ಚಾಗುವುದರ ಜೊತೆಗೆ ದೇಹಕ್ಕೆ ಬೇಕಾದ ಪೂರೈಕೆಗಳು ಕೂಡಾ ಸಿಗಲಾರಂಭಿಸುತ್ತವೆ.
ಈ ಸುದ್ದಿ ಸಾಮಾನ್ಯ ಮಾಹಿತಿಗಾಗಿ ಮಾತ್ರ. ವಿಟಮಿನ್ ಡಿ ಅವಶ್ಯಕತೆಗಳು ವಯಸ್ಸು, ಆರೋಗ್ಯ ಮತ್ತು ವೈದ್ಯಕೀಯ ಸ್ಥಿತಿಗಳನ್ನು ಅವಲಂಬಿಸಿ ಬದಲಾಗುತ್ತವೆ. ಹಾಗಾಗಿ ನಿಮಗೆ ವಿಟಿಮಿನ್ ಡಿ ಕೊರತೆ ಹೆಚ್ಚಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.