Kidney Stone 
ಆರೋಗ್ಯ

ಬೇಸಿಗೆಯಲ್ಲಿ ಮೂತ್ರಪಿಂಡ ಜೋಪಾನ!; ಹೆಚ್ಚು ನೀರು ಕುಡಿಯದಿದ್ರೆ ಕಾಡುತ್ತೆ ಕಿಡ್ನಿ ಸ್ಟೋನ್​.. Kidney Stone

ಪ್ರಮುಖ ಮುಖ್ಯಾಂಶಗಳು

  • ಬೇಸಿಗೆಯಲ್ಲಿ ಹೆಚ್ಚು ನೀರು ಕುಡಿಯದಿದ್ದರೆ ಕಿಡ್ನಿ ಸ್ಟೋನ್ ಕಾಡೋದು ಖಚಿತ
  • ದಿನಕ್ಕೆ 2ರಿಂದ ಮೂರು ಲೀಟರ್ ನೀರು ಕುಡಿಯುವುದು ಅಗತ್ಯ
  • ದೇಹಕ್ಕೆ ಅಗತ್ಯವಿರುವುದಕ್ಕಿಂತ ಹೆಚ್ಚು ನೀರು ಕುಡಿಯದಿದ್ದರೆ ಬೇಡದ ಖನಿಜ ಸಂಗ್ರಹವಾಗಿ ಕಿಡ್ನಿಸ್ಟೋನ್​ ಸಮಸ್ಯೆ ಕಾಡುತ್ತದೆ
Kidney Stone: ಬೇಸಿಗೆ ತಾಪ ಹೆಚ್ಚಾಗುತ್ತಿದೆ..ಇದರಿಂದಾಗಿ ಹೆಚ್ಚಿನ ಜನರು ನಿರ್ಜಲೀಕರಣದಿಂದ ಬಳಲುತ್ತಿದ್ದು, ಜೀರ್ಣಾಂಗದಲ್ಲಿ ಕಾಡುತ್ತಿರುವ ಸಮಸ್ಯೆ ಬಗ್ಗೆ ವೈದ್ಯರ ಮೊರೆ ಹೋಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಬೇಸಿಗೆ ಸಮಯದಲ್ಲಿ ಎಷ್ಟು ಸಾಧ್ಯವೋ ಅಷ್ಟು ದೇಹವನ್ನು ತಂಪಾಗಿಡಬೇಕು. ಹೆಚ್ಚೆಚ್ಚು ನೀರು ಕುಡಿಯಬೇಕು ಇದು ಪ್ರತಿ ಬಾರಿಯು ವೈದ್ಯರು ನೀಡುವ ಸಲಹೆ. ಆದರೆ, ಕೆಲವರು ಇದನ್ನು ನಿರ್ಲಕ್ಷ್ಯಿಸುತ್ತಾರೆ. ಇಂತಹ ಬೇಜವಾಬ್ದಾರಿ ನಡೆಗಳು ಮೂತ್ರಪಿಂಡಕ್ಕೆ ಎಷ್ಟು ಅಪಾಯವನ್ನುಂಟು ಮಾಡುತ್ತದೆ ಎನ್ನುವುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ತಾಪಮಾನ ಹೆಚ್ಚಾದಾಗ ದೇಹ ತಂಪಾಗಿಸಲು ನೀರನ್ನು ಕುಡಿಯದೇ ಹೋದಲ್ಲಿ ಕಿಡ್ನಿ ಸ್ಟೋನ್​ನಂತಹ ಸಮಸ್ಯೆಯಿಂದ ಬಳಲೋದು ಗ್ಯಾರಂಟಿ ಎಂದು ಫೋರ್ಟೀಸ್​ ಆಸ್ಪತ್ರೆಯ ವೈದ್ಯರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

ದೇಹದಲ್ಲಿ ನೀರಿನ ಅಬಾಧತೆ ಕಿಡ್ನಿ ಸ್ಟೋನ್​ಗೆ ಹೇಗೆ ಪ್ರಚೋದಿಸುತ್ತದೆ?

ಬೇಸಿಗೆಯಲ್ಲಿ ಹೆಚ್ಚು ಬೆವರುವ ಕಾರಣ ಇದು ಮೂತ್ರ ಹೊರಹೋಗುವ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ದೇಹದಲ್ಲಿರುವ ಅನವಶ್ಯಕತೆಯ ಖನಿಜಗಳು ಮೂತ್ರಪಿಂಡದಲ್ಲೇ ಶೇಖರಣೆಯಾಗುತ್ತದೆ. ಇದು ಅತಿಯಾದ ತಾಪಮಾನಕ್ಕೆ ಒಳಗಾದ ಕೇವಲ ಮೂರು ದಿನಗಳಲ್ಲಿ ಇವು ಗಟ್ಟಿಯಾಗಬಹುದು ಎನ್ನಲಾಗಿದೆ.
ಉತ್ತರ ಭಾರತದ ಹಲವು ಪ್ರದೇಶವನ್ನು ಮೂತ್ರಪಿಂಡದ ಕಲ್ಲುಗಳ ವಲಯ ಎಂದು ಗುರತಿಸಿ ಕರೆಯಲಾಗುತ್ತದೆ. ಸುದೀರ್ಘವಾಗಿ ಬಿಸಿಲಿಗೆ ಮೈ ಒಡ್ಡಿಕೊಳ್ಳೋದ್ರಿಂದಾಗಿ ಸೋಂಕು ಕಾಡುತ್ತದೆ.
ದೇಹದಲ್ಲಿರುವ ತ್ಯಾಜ್ಯ ವಸ್ತು ಹೊರ ಹೋಗಲು ಮಾನವನ ದೇಹಕ್ಕೆ ಸಮತೋಲಿತ ನೀರಿನ ಅಗತ್ಯ ಇದೆ. ಅದರಲ್ಲೂ ಬಿಸಿ ವಾತಾವರಣದಲ್ಲಿ ಹೆಚ್ಚು ನೀರು ಕುಡಿಯದಿದ್ದರೆ ಮೂತ್ರವು ಗಾಢ ಬಣ್ಣಕ್ಕೆ ತಿರುಗುತ್ತದೆ. ದೇಹಕ್ಕೆ ಬೇಡವಾದ ಖನಿಜಗಳು ಹೊರಹೋಗುವ ಬದಲು ಒಳಗೆ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ.
ದಿನಕಳೆದಂತೆ ಸಂಗ್ರಹವಾದ ಖನಿಜ ಹರಳುಗಳಾಗಿ ರೂಪಾಂತರಗೊಂಡು ನೋಯುವಂತೆ ಮಾಡುತ್ತದೆ. ಈ ನೋವು ಹೆಚ್ಚಾಗಿ ಇದು ಬೆನ್ನು, ಪಕ್ಕೆಲುಬು ಅಥವಾ ಹೊಟ್ಟೆಯ ಕೆಳಭಾಗದ ಮೇಲೆ ಪರಿಣಾಮ ಬೀರುತ್ತದೆ.

ಕಿಡ್ನಿ ಸ್ಟೋನ್​ ಸಮಸ್ಯೆಯಿಂದ ಪಾರಾಗಲು ಹೀಗೆ ಮಾಡಿ

ನಿತ್ಯವೂ 2ರಿಂದ ಮೂರು ಲೀಟರ್​ ನೀರು ಕುಡಿಯಿರಿ. ದಿನಕ್ಕೆ 10-12 ಗ್ಲಾಸ್​ ನೀರು ಕುಡಿಯುವ ಅಭ್ಯಾಸವಿಟ್ಟುಕೊಳ್ಳಿ. ಅಕಸ್ಮಾತ್​ ನೀವು ಹೊರಗಡೆಯಿದ್ದರೆ ನಿಮ್ಮ ಮೂತ್ರವನ್ನು ವೀಕ್ಷಿಸಿ ಅದು ಗಾಢ ಯೆಲ್ಲೋ ಬಣ್ಣವಿದ್ದರೆ ಇದಕ್ಕಿಂತ ಹೆಚ್ಚು ನೀರು ಕುಡಿಯೋದನ್ನು ಈ ಬೇಸಿಗೆಯಲ್ಲಿ ಅಭ್ಯಾಸ ಮಾಡಿಕೊಳ್ಳಿ

ನಿಂಬೆಹಣ್ಣಿನ ರಸದೊಂದಿಗೆ ನೀರು ಕುಡಿಯಿರಿ

ನಿಂಬೆಯಲ್ಲಿರುವ ಸಿಟ್ರಿಕ್​ ಆಮ್ಲವು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು. ಹೀಗಾಗಿ, ನೀರಿನ ಜೊತೆ ಕೊಂಚ ನಿಂಬೆ ರಸವನ್ನು ಹಿಂಡಿಕೊಳ್ಳಿ. ಇದು ದೇಹದಲ್ಲಿ ಕಲ್ಲು ರಚನೆಯಾಗುವುದನ್ನು ತಡೆಹಿಡಿಯುತ್ತದೆ.

ಆಹಾರದ ಕ್ರಮದ ಬಗ್ಗೆ ನಿಗಾ ಇರಲಿ

ಉಪ್ಪು, ಮಾಂಸ ಮತ್ತು ಪಾಲಕ್, ಚಾಕೊಲೇಟ್‌ನಂತಹ ಆಹಾರ ತಿನ್ನೋದನ್ನು ಕಡಿಮೆ ಮಾಡಿ. ಪ್ಯಾಕ್ ಮಾಡಿದ ಜ್ಯೂಸ್‌ಗಳು, ಸೋಡಾಗಳು ಮತ್ತು ಎನರ್ಜಿ ಡ್ರಿಂಕ್ಸ್ ಕಲ್ಲುಗಳ ಅಪಾಯವನ್ನು ಹೆಚ್ಚಿಸಬಹುದು. ಅತಿಯಾಗಿ ಬೆವರುವಂತೆ ಮಾಡುವ ಯೋಗಗಳನ್ನು ಮಾಡೋದನ್ನು ಈ ಬೇಸಿಗೆಯಲ್ಲಿ ತಪ್ಪಿಸೋದು ಒಳ್ಳೆಯದು.
ಫಾಸ್ಟ್​ ಫುಡ್​ನಲ್ಲಲಿ ಉಪ್ಪು ಮತ್ತತು ಕೊಬ್ಬಿನಾಂಶವಿರುತ್ತದೆ. ಇದು ಕಿಡ್ನಿಯಲ್ಲಿನ ಸ್ಟೋನ್​ ಹೆಚ್ಚಿಸುತ್ತದೆ. ಹೀಗಾಗಿ ಅವುಗಳನ್ನು ಆದಷ್ಟು ತಿನ್ನೋದನ್ನು ಅವಾಯ್ಡ್ ಮಾಡಿ ಇನ್ನು ಆರೋಗ್ಯದ ತೂ ಕ ಕಾಪಾಡಿಕೊಳ್ಳಿ ದೇಹದಲ್ಲಿ ಹೆಚ್ಚು ಸಂಗ್ರಹವಾಗುವ ಬೊಜ್ಜು ಸಹ ಅಪಾಯನ್ನು ಉಂಟು ಮಾಡುತ್ತದೆ. ಸಣ್ಣ ಕಲ್ಲು 10ಮಿ.ಮೀಗಿಂತ ಕಡಿಮೆ ಇದ್ದರೆ ಚಿಕಿತ್ಸೆ ಕೊಡಬಹುದು ಇಲ್ಲವಾದಲ್ಲಿ ಶಸ್ತ್ರ ಚಿಕಿತ್ಸೆಯ ಅಗತ್ಯ ಖಂಡಿತಾ ಹೆಚ್ಚಿರುತ್ತದೆ. ಹೀಗಾಗಿ ವೈದ್ಯರನ್ನು ಸಂಪರ್ಕಿಸಿ.
ಮೂತ್ರಪಿಂಡದ ಕಲ್ಲು ನೋವನ್ನಷ್ಟೇ ಉಂಟು ಮಾಡೋದಿಲ್ಲ. ಇದು ನಿಮ್ಮ ಮೂತ್ರ ನಾಳದಲ್ಲಿ ಸೋಂಕು ಉಂಟಾಗುವಂತೆ ಮಾಡುತ್ತದೆ. ಕಿಡ್ನಿಯನ್ನು ಶಾಶ್ವತವಾಗಿ ಹಾನಿ ಮಾಡುವಂತೆ ಮಾಡುತ್ತದೆ. ಬೆನ್ನಿನ ಬದಿಯಲ್ಲಿ ತೀಕ್ಷ್ಣವಾದ ನೋವು ಕಾಣಿಸಿಕೊಂಡಾಗ, ಮೂತ್ರ ವಿಸರ್ಜನೆಯ ತೊಂದರೆಯಾದರೆ ನಿರ್ಲಕ್ಷ್ಯಿಸದೆ ವೈದ್ಯರನ್ನು ಸಂಪರ್ಕಿಸಿ, (ಏಜೆನ್ಸೀಸ್​).