- ಆರೋಗ್ಯ ಕ್ಷೇತ್ರದಲ್ಲಿ ಬಿಸಿ ನೀರು ಸೇರಿದಂತೆ ಬಿಸಿಯಾದ ಪದಾರ್ಥಗಳಿಗೆ ತನ್ನದೇಯಾದ ಪ್ರಾಮುಖ್ಯತೆ ಇದೆ
- ಬಿಸಿ ಇದ್ದಾಗಲೇ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಭಾವನೆ ಜನರಲ್ಲಿದೆ
- ಕುಡಿಯುವುದರಿಂದ ಜೀರ್ಣಕ್ರಿಯೆ ವೇಗವಾಗುತ್ತದೆ ಎನ್ನುವ ನಂಬಿಕೆಯಿದೆ
- ನಾವು ಕುಡಿಯುವ ನೀರು ನಿಜವಾಗಿಯೂ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆಯೆ?
Cold water vs warm water : ಆರೋಗ್ಯ ಕ್ಷೇತ್ರದಲ್ಲಿ ಬಿಸಿ ನೀರು ಸೇರಿದಂತೆ ಬಿಸಿಯಾದ ಪದಾರ್ಥಗಳಿಗೆ ತನ್ನದೇಯಾದ ಪ್ರಾಮುಖ್ಯತೆ ಇದೆ. ತಿನ್ನುವ ಹಾಗೂ ಕುಡಿಯುವ ಪದಾರ್ಥಗಳನ್ನು ಬಿಸಿ ಇದ್ದಾಗಲೇ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಭಾವನೆ ಜನರಲ್ಲಿದೆ. ಅದೇ ರೀತಿ ಬಿಸಿನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ವೇಗವಾಗುತ್ತದೆ ಎನ್ನುವ ನಂಬಿಕೆಯಿದೆ. ಆದರೆ, ಇದು ಎಷ್ಟರ ಮಟ್ಟಿಗೆ ಸರಿ ಎನ್ನುವುದನ್ನು ನಾವೀಗ ತಿಳಿಯೋಣ.
ನಾವು ಕುಡಿಯುವ ನೀರು ನಿಜವಾಗಿಯೂ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆಯೆ ಎಂದು ಕೇಳಿದರೆ, ಖಂಡಿತ ಹೌದು. ನಾವು ಯಾವ ತಾಪಮಾನದಲ್ಲಿರುವ ನೀರನ್ನು ಕುಡಿಯುತ್ತಿದ್ದೇವೆ ಎನ್ನುವ ಆಧಾರದಲ್ಲಿ ಜೀರ್ಣಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗುತ್ತದೆ.
ಸಾಮಾನ್ಯವಾಗಿ ತಣ್ಣೀರನ್ನು ಕುಡಿಯುವುದರಿಂದ ನಮ್ಮ ಜೀರ್ಣಕ್ರಿಯೆಯು ನಿಧಾನವಾಗುತ್ತದೆ. ಆದರೆ, ಕಾದಾರಿದ ಅಥವಾ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಎಂದು ಹೇಳಲಾತ್ತದೆ. ದಿನದ ಆರಂಭವನ್ನು ಒಂದು ಲೋಟ ಕಾದಾರಿದ ನೀರನ್ನು ಕಡಿಯುವ ಮೂಲಕ ಆರಂಭಿಸಿದರೆ ಹೊಟ್ಟೆ ಉಬ್ಬುವಿಕೆ, ಹೊಟ್ಟೆ ಭಾರ ಮತ್ತು ಅಜೀರ್ಣತೆ ಉಂಟಾಗುವುದಿಲ್ಲ ಎನ್ನುವುದು ವೈದ್ಯರ ಸಲಹೆಯಾಗಿದೆ.
ಹಾಗಾದರೆ ತಣ್ಣೀರು ಆರೋಗ್ಯಕ್ಕೆ ಒಳ್ಳೆಯದಲ್ಲವೇ?
ತಣ್ಣೀರಿನ ಸೇವನೆಯು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ ಎಂದ ಮಾತ್ರಕ್ಕೆ ತಣ್ಣೀರಿನ ಸೇವನೇಯೇ ಮಾರಕ ಎಂದು ಯಾವ ವೈಧ್ಯಕೀಯ ಸಂಶೋಧನೆಗಳು ಈವರೆಗೆ ಹೇಳಿಲ್ಲ. ಆದರೆ, ತಣ್ಣೀರನ್ನು ಕುಡಿದಾಗ ಜೀರ್ಣಕ್ರಿಯೆಗೆ ಸಹಾಯಕವಾಗುವ ಕಿಣ್ವಗಳ ಶಕ್ತಿ ಕಡಿಮೆಯಾಗಿ, ಕೊಬ್ಬಿನಾಂಶ ಗಟ್ಟಿಯಾಗುವುದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ. ನಿಧಾನವಾದ ಜೀರ್ಣಕ್ರಿಯೆ ಯಾವುದೇ ರೀತಿಯ ಕಾಯಿಲೆ ಅಲ್ಲ ಆದ್ದರಿಂದ ಭಯಪಡುವ ಅವಶ್ಯಕತೆಯಿಲ್ಲ.
ತಣ್ಣೀರಿನ ಉಪಯೋಗಗಳು
ವ್ಯಾಯಾಮ ಮಾಡಿದ ನಂತರ ಮತ್ತು ಉಷ್ಣ ವಾತಾವರಣದ ಸಮಯದಲ್ಲಿ ತಣ್ಣೀರನ್ನು ಕುಡಿಯುದರಿಂದ ದೇಹದ ತಾಪ ಸಮತೋಲದಲ್ಲಿ ಇರುತ್ತದೆ ಮತ್ತು ನಿರ್ಜಲಿಕರಣ ಸಮಸ್ಯೆಯನ್ನು ಇದು ತಪ್ಪಿಸುತ್ತದೆ ಎಂದು ಹೇಳಲಾಗುತ್ತದೆ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಲ್ಲಿ ಲಭ್ಯವಿರುವ ಸಂಪನ್ಮೂಲಗಳ ಆಧಾರದ ಮೇಲೆ ಒದಗಿಸಲಾಗಿದೆ. ಆರೋಗ್ಯ ಸಂಬಂಧಿತ ಯಾವುದೇ ಸಮಸ್ಯೆಗಳನ್ನು ತಡೆಗಟ್ಟಲು ಆಯುರ್ವೇದ ಅಥವಾ ಅಲೋಪತಿ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ, (ಏಜೆನ್ಸೀಸ್).