- ಮುಟ್ಟು ಎಂಬುದು ಪ್ರಕೃತಿಯ ಸಹಜ ಪ್ರಕ್ರಿಯೆಯಾದರೂ, ಆ ದಿನಗಳಲ್ಲಿ ಹೆಣ್ಣು ಅನುಭವಿಸುವ ನೋವು ಹೇಳಲು ಅಸಾದ್ಯ
- ಈ ಸಮಯದಲ್ಲಾಗುವ ಹೊಟ್ಟೆ ಸೆಳೆತ, ಸೊಂಟದ ನೋವು ಮತ್ತು ಸುಸ್ತು ಅವಳ ತಾಳ್ಮೆಯನ್ನು ಪರೀಕ್ಷಿಸುತ್ತವೆ
- ಮುಟ್ಟಿನ ವಾಸನೆಯನ್ನು ಹೋಗಲಾಡಿಸಲು ಇಂದಿನ ದಿನಗಳಲ್ಲಿ ಮಹಿಳೆಯರು ಪರಿಮಳಯುಕ್ತ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಾರೆ
- ಮುಟ್ಟಿನ ಸಮಯದಲ್ಲಿ ದೇಹದೊಂದಿಗೆ ಏನು ಸಂಪರ್ಕಕ್ಕೆ ಬರುತ್ತದೆ ಎಂಬುದರ ಬಗ್ಗೆ ಆದಷ್ಟು ಜಾಗರೂಕತೆಯಿಂದ ಇರಬೇಕು
Sanitary pads: ಮುಟ್ಟು ಎಂಬುದು ಪ್ರಕೃತಿಯ ಸಹಜ ಪ್ರಕ್ರಿಯೆಯಾದರೂ, ಆ ದಿನಗಳಲ್ಲಿ ಹೆಣ್ಣು ಅನುಭವಿಸುವ ದೈಹಿಕ ನೋವು ಮತ್ತು ಮಾನಸಿಕ ಒತ್ತಡ ಅಕ್ಷರಗಳಲ್ಲಿ ವರ್ಣಿಸಲು ಅಸಾಧ್ಯ. ಹೊಟ್ಟೆ ಸೆಳೆತ, ಸೊಂಟದ ನೋವು ಮತ್ತು ಸುಸ್ತು ಅವಳ ತಾಳ್ಮೆಯನ್ನು ಪರೀಕ್ಷಿಸುತ್ತವೆ. ಆದಾಗ್ಯೂ, ಮುಟ್ಟಿನ ವಾಸನೆಯನ್ನು ಹೋಗಲಾಡಿಸಲು ಇಂದಿನ ದಿನಗಳಲ್ಲಿ ಮಹಿಳೆಯರು ಪರಿಮಳಯುಕ್ತ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಾರೆ. ಈ ಉತ್ಪನ್ನಗಳನ್ನು ಬಳಸುವುದರಿಂದ ದೇಹಕ್ಕೆ ಹೆಚ್ಚು ಹಾನಿ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ.
ವೈದ್ಯರು ಸೂಚಿಸುವಂತೆ, ಮುಟ್ಟಿನ ಸಮಯದಲ್ಲಿ ದೇಹದೊಂದಿಗೆ ಏನು ಸಂಪರ್ಕಕ್ಕೆ ಬರುತ್ತದೆ ಎಂಬುದರ ಬಗ್ಗೆ ಆದಷ್ಟು ಜಾಗರೂಕತೆಯಿಂದ ಇರಬೇಕು. ಇದು ನಿಜವಾದ ಆರೋಗ್ಯ ಅಪಾಯಗಳನ್ನು ಸಾಮಾನ್ಯ ಭಯಗಳಿಂದ ಬೇರ್ಪಡಿಸುವ ಅವಶ್ಯಕತೆಯಿದೆ ಎಂದು ಹೇಳುತ್ತಾರೆ.
ಪರಿಮಳಯುಕ್ತ ಸ್ಯಾನಿಟರಿ ಪ್ಯಾಡ್‌ಗಳು ಕ್ಯಾನ್ಸರ್‌ಗೆ ಕಾರಣವಾಗುತ್ತವೆಯೇ?
ಮುಟ್ಟಿನ ಉತ್ಪನ್ನಗಳ ಬಗ್ಗೆ ಸಾಮಾನ್ಯ ಕಾಳಜಿಗಳಲ್ಲಿ ಒಂದು ಕ್ಯಾನ್ಸರ್ ಅಪಾಯ ಇದೆ. ಆದರೆ, ನಾವು ಎಥೇಚ್ಛವಾಗಿ ಬಳಸುವಂತಹ ಬಿಸಾಡಬಹುದಾದ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುವುದರಿಂದ ಕ್ಯಾನ್ಸರ್ ಬರುತ್ತದೆ ಎಂಬುದಕ್ಕೆ ಯಾವುದೇ ನೇರ ಸಾಕ್ಷಿಗಳಿಲ್ಲ. ಹಾಗೆಯೇ ಮುಟ್ಟಿನ ಉತ್ಪನ್ನಗಳನ್ನು ಬಳಸುವುದಕ್ಕೂ ಕ್ಯಾನ್ಸರ್ ಅಪಾಯ ಹೆಚ್ಚಾಗುವುದಕ್ಕೂ ಯಾವುದೇ ಸಂಬಂಧವಿಲ್ಲ. ದೀರ್ಘಕಾಲದವರೆಗೆ ಮುಟ್ಟಿನ ಉತ್ಪನ್ನಗಳನ್ನು ಬಳಸಿದಾಗ, ಇದು ಕಿರಿಕಿರಿ, ಸೋಂಕು, ಸೂಕ್ಷ್ಮತೆಯನ್ನು ಉಂಟು ಮಾಡುತ್ತದೆ.
ಸುಗಂಧ ಏಕೆ ಸಮಸ್ಯೆಯಾಗಬಹುದು?
ನಿಕಟ ನೈರ್ಮಲ್ಯದ ವಿಷಯಕ್ಕೆ ಬಂದಾಗ ಸುಗಂಧವು ಎಚ್ಚರಿಕೆಯ ಸಂಕೇತವನ್ನು ತೋರಿಸುತ್ತದೆ. ಈ ಸುಗಂಧ ದ್ರವ್ಯಗಳು ಅಲರ್ಜಿಯ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತವೆ. ಇದರಿಂದ ಮಹಿಳೆಯರು ಹೆಚ್ಚಾಗಿ ಯೋನಿಯ ತುರಿಕೆ, ಸುಡುವಿಕೆ, ಸೋಂಕುಗಳು, ಯೋನಿ pH ಬದಲಾವಣೆಯನ್ನು ಉಂಟು ಮಾಡುತ್ತದೆ. ಹಾಗಾಗಿ ನೀವೇನಾದರೂ, ಈ ರೀತಿಯ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ, ಸುವಾಸನೆಯ ಉತ್ಪನ್ನಗಳನ್ನು ಬಳಸುವುದನ್ನು ತ್ಯಜಿಸಬೇಕು.
ಮುಖ್ಯವಾಗಿ, ಮುಟ್ಟಿನ ವಾಸನೆಯು ನೈಸರ್ಗಿಕವಾಗಿರುವುದರಿಂದ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾವಣೆಯನ್ನು ತೋರಿಸುತ್ತದೆ. ಸುಗಂಧ ವಸ್ತುಗಳಿಂದ ಮರೆಮಾಚುವುದರಿಂದ ಆರೋಗ್ಯ ಸಮಸ್ಯೆಗಳು ದುಪ್ಪಟ್ಟಾಗುತ್ತವೆ ಎಂದು ಹೇಳಲಾಗುತ್ತದೆ.
ಡಯಾಕ್ಸಿನ್ ಮತ್ತು PFAS: ನೈರ್ಮಲ್ಯ ಉತ್ಪನ್ನಗಳ ಹಿಂದಿನ ಕರಾಳ ಸತ್ಯ
ಕೆಲವು ಅಧ್ಯಯನಗಳು ಪ್ಯಾಡ್‌ಗಳು ಮತ್ತು ಟ್ಯಾಂಪೂನ್‌ಗಳಲ್ಲಿ ಥಾಲೇಟ್‌ಗಳಂತಹ ರಾಸಾಯನಿಕ ಪದಾರ್ಥಗಳನ್ನು ಪತ್ತೆಹಚ್ಚಿವೆ. ಅದರಲ್ಲಿ ಥಾಲೇಟ್‌ಗಳನ್ನು ಹಾನಿಕಾರಕ ವಸ್ತು ಎಂದು ಹೇಳಲಾಗುತ್ತದೆ. ಆದರೆ, ಇವುಗಳ ಬಳಕೆಯು ನೇರವಾಗಿ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಸಾಬೀತಾಗಿಲ್ಲ.
TCDD ನಂತಹ ಡಯಾಕ್ಸಿನ್‌ಗಳು ಪರಿಸರದಲ್ಲಿ ದೀರ್ಘಕಾಲ ಉಳಿಯುವ ಅಪಾಯಕಾರಿ ರಾಸಾಯನಿಕಗಳು. ಇವು ಜೀವಕೋಶಗಳ ಮೇಲೆ ನೇರ ಪರಿಣಾಮ ಬೀರಿ, ದೀರ್ಘಕಾಲದ ಸಂಪರ್ಕದಿಂದ ಕ್ಯಾನ್ಸರ್‌ನಂತಹ ಭೀಕರ ಕಾಯಿಲೆಗಳಿಗೆ ದಾರಿ ಮಾಡಿಕೊಡಬಹುದು ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ.
ಮುಟ್ಟಿನ ನೈರ್ಮಲ್ಯಕ್ಕೆ ಸುರಕ್ಷಿತ ಪರ್ಯಾಯಗಳು
ಮುಟ್ಟಿನ ಸಮಸ್ಯೆಯಿಂದ ಉಂಟಾಗುವ ನೈರ್ಮಲ್ಯವನ್ನು ತಡೆಯಲು ಸುಗಂಧ ರಹಿತ, ಉಸಿರಾಡುವ ಉತ್ಪನ್ನಗಳನ್ನು ಆಯ್ಕೆ ಮಾಡುವ ಅಭ್ಯಾಸವನ್ನು ಮಾಡಿಕೊಳ್ಳಿ. ಇದು ನಿಕಟ ಆರೋಗ್ಯವನ್ನು ರಕ್ಷಿಸಲು ಸರಳ ಮಾರ್ಗಗಳಲ್ಲಿ ಒಂದಾಗಿದೆ.
ವಾಸನೆಯಿಲ್ಲದ, ಬಣ್ಣ-ಮುಕ್ತ ಸ್ಯಾನಿಟರಿ ಪ್ಯಾಡ್‌ಗಳು
ಸುಗಂಧ ದ್ರವ್ಯಗಳು ಮತ್ತು ಬಣ್ಣ ರಹಿತವಾದ ಪ್ಯಾಡ್‌ಗಳನ್ನು ಬಳಸುವುದರಿಂದ ಮುಟ್ಟಿನ ಸಮಯದಲ್ಲಿ ಉಂಟಾಗುವ ಕಿರಿಕಿರಿ, ಅಲರ್ಜಿಯಂತಹ ಅಪಾಯವನ್ನು ಕಡಿಮೆ ಮಾಡಬಹುದು.
ಹತ್ತಿ ಅಥವಾ ಸಾವಯವ ಪ್ಯಾಡ್‌ಗಳು
ಪ್ಲಾಸ್ಟಿಕ್ ಮಿಶ್ರಿತ ಪ್ಯಾಡ್‌ಗಳಿಗಿಂತ ಶೇ. 100 ರಷ್ಟು ಹತ್ತಿಯಿಂದ ಮಾಡಿದ ಪ್ಯಾಡ್‌ಗಳು ಗಾಳಿಯ ಆಟಕ್ಕೆ ಅವಕಾಶ ನೀಡುತ್ತವೆ. ಇದರಿಂದ ಚರ್ಮವು ಉಸಿರಾಡಲು ಸಾಧ್ಯವಾಗುತ್ತದೆ ಮತ್ತು ಮುಟ್ಟಿನ ದಿನಗಳಲ್ಲಿ ಕಾಡುವ ಅತಿಯಾದ ಉಷ್ಣತೆ ಕಡಿಮೆಯಾಗುತ್ತದೆ. ಆದಾಗ್ಯೂ, ಹತ್ತಿಯು ನೈಸರ್ಗಿಕವಾಗಿ ತೇವಾಂಶವನ್ನು ಹೀರಿಕೊಳ್ಳುವ ಗುಣ ಹೊಂದಿದ್ದು, ಇದು ಚರ್ಮವನ್ನು ಒಣಗಿಸಿಡುವುದರಿಂದ ಬ್ಯಾಕ್ಟೀರಿಯಾ ಸೋಂಕು ಅಥವಾ ಶಿಲೀಂಧ್ರಗಳ (Fungal infection) ಬೆಳವಣಿಗೆಯನ್ನು ತಡೆಯುತ್ತದೆ.
ಮುಟ್ಟಿನ ಕಪ್‌ಗಳು
ವೈದ್ಯಕೀಯವಾಗಿ ಸೂಚಿಸಿದ ಸಿಲಿಕೋನ್‌ನಿಂದ ತಯಾರಿಸಲ್ಪಟ್ಟ ಮುಟ್ಟಿನ ಕಪ್‌ಗಳು ಯಾವುದೇ ಸುಗಂಧ ದ್ರವ್ಯಗಳು ಅಥವಾ ಹೀರಿಕೊಳ್ಳುವ ರಾಸಾಯನಿಕಗಳನ್ನು ಹೊಂದಿರುವುದಿಲ್ಲ. ಇವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿದಾಗ ಅವು ಸುರಕ್ಷಿತ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ.
ಋತುಚಕ್ರದ ಒಳ ಉಡುಪು
ಈ ಉಡುಪುಗಳನ್ನು 'ಬ್ರೀದಬಲ್' ಬಟ್ಟೆಗಳಿಂದ ತಯಾರಿಸಲಾಗಿರುತ್ತದೆ. ಇದು ಚರ್ಮಕ್ಕೆ ಗಾಳಿಯಾಡಲು ಅವಕಾಶ ನೀಡುವುದರಿಂದ ಬ್ಯಾಕ್ಟೀರಿಯಾಗಳು ಬೆಳವಣಿಗೆಯಾಗದಂತೆ ತಡೆದು ಸೋಂಕಿನ ಅಪಾಯದಿಂದ ದೂರ ಇಡುತ್ತದೆ. ಇದರಲ್ಲಿರುವ ವಿಶೇಷ ಪದರಗಳು ತೇವಾಂಶವನ್ನು ತಕ್ಷಣವೇ ಹೀರಿಕೊಳ್ಳುವುದರಿಂದ ಮುಟ್ಟಿನ ಸಮಯದಲ್ಲಿ ಕಾಡುವ 'ಒದ್ದೆ'ಯಾದ ಅನುಭವವನ್ನು ನೀಡುವುದಿಲ್ಲ.
ವಾಸನೆಯಿಲ್ಲದ ಟ್ಯಾಂಪೂನ್‌ಗಳು
ಟ್ಯಾಂಪೂನ್‌ಗಳಲ್ಲಿ ಕೃತಕ ಸುಗಂಧ ದ್ರವ್ಯಗಳನ್ನು ಬಳಸಲಾಗುತ್ತದೆ. ಇವು ಯೋನಿಯ ನೈಸರ್ಗಿಕ pH ಸಮತೋಲನವನ್ನು ಏರುಪೇರು ಮಾಡಬಹುದು ಮತ್ತು ಸೋಂಕಿಗೆ ಕಾರಣವಾಗಬಹುದು. ಆದರಿಂದ ಯಾವುದೇ ರಾಸಾಯನಿಕ ಟ್ಯಾಂಪೂಗಳನ್ನು ಆಯ್ಕೆ ಮಾಡಿಕೊಳ್ಳದೇ ರಾಸಾಯನಿಕ ಟ್ಯಾಂಪೂಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಇದನ್ನು 4-6 ಗಂಟೆಗಳಿಗೆ ಒಂದರಂತೆ ಬದಲಾಯಿಸುವುದರಿಂದ ಸೋಂಕಿನಿಂದ ರಕ್ಷಿಸಿಕೊಳ್ಳಬಹುದು.
ಮುಟ್ಟಿನ ವಾಸನೆಯು ನೈಸರ್ಗಿಕವಾಗಿದ್ದು ಅದನ್ನು ಸುಗಂಧದಿಂದ ಮರೆಮಾಚುವ ಅಗತ್ಯವಿಲ್ಲ. "ಸುಗಂಧ ರಹಿತ, ಉಸಿರಾಡುವ ಮುಟ್ಟಿನ ಉತ್ಪನ್ನಗಳು ಆರಾಮವನ್ನು ಕಾಪಾಡಿಕೊಳ್ಳುವುದರ ಜೊತೆಗೆ ನಿಕಟ ಆರೋಗ್ಯಕ್ಕೆ ಉತ್ತಮ ಬೆಂಬಲವನ್ನು ನೀಡುತ್ತವೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.